ಸಿಂಗಲ್ ಬಿಎಚ್ ಕೆಯಿಂದ ಸಾವಿರ ಕೋಟಿ ಐಷಾರಾಮಿ ಬಂಗಲೆ;ಡಿಮಾರ್ಟ್ ಸ್ಥಾಪಕನ ಬದುಕು ಬದಲಾಗಿದ್ದು ಹೇಗೆ?

ಡಿಮಾರ್ಟ್ ಸ್ಥಾಪಕ ರಾಧಾಕಿಶನ್ ದಮನಿ ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು. ದಿನವೊಂದಕ್ಕೆ 1.6 ಕೋಟಿ ರೂ. ಲಾಭ ಗಳಿಸುತ್ತಿರುವ ದಮನಿ ಬದುಕು ಸುಖದ ಸುಪ್ಪತ್ತಿಗೆಯಾಗಿರಲಿಲ್ಲ. ಈ ಹಿಂದೆ ಅವರು ಸಿಂಗಲ್ ಬಿಎಚ್ ಕೆ ಅಪಾರ್ಟ್ ಮೆಂಟ್ ನಲ್ಲಿ ತಮ್ಮ ಇಡೀ ಕುಟುಂಬದ ಜೊತೆಗೆ ವಾಸಿಸುತ್ತಿದ್ದರು. ಕಾಲೇಜು ಶಿಕ್ಷಣವನ್ನು ಕೂಡ ಪೂರ್ಣಗೊಳಿಸದ ದಮನಿ ಕಠಿಣ ಪರಿಶ್ರಮ ಹಾಗೂ ಜಾಣತನದ ಹೂಡಿಕೆಯಿಂದಲೇ ಇಂದು ಅಪಾರ ಸಂಪತ್ತು ಗಳಿಸಿದ್ದಾರೆ. 
 

Meet Radhakishan Damani whose DMart made Rs 16 crore per day profit had started from 1 BHK flat anu

Business Desk:ಡಿ ಮಾರ್ಟ್ ಇಂದು ದೇಶಾದ್ಯಂತ ಮನೆ ಮಾತಾಗಿದೆ. ದಿನಸಿ ಸಾಮಾನುಗಳಿಂದ ಹಿಡಿದು ಅಗತ್ಯ ಗೃಹ ಬಳಕೆಯ ವಸ್ತುಗಳನ್ನು ಯೋಗ್ಯ ಬೆಲೆಗೆ ನೀಡುವ ಮೂಲಕ ಡಿಮಾರ್ಟ್ ದೊಡ್ಡ ಪ್ರಮಾಣದಲ್ಲಿ ಗ್ರಾಹಕರನ್ನು ಹೊಂದಿದೆ. ದಿನಕ್ಕೆ 1.6 ಕೋಟಿ ರೂ.ಲಾಭ ಗಳಿಸುತ್ತಿರುವ ಈ ಸಂಸ್ಥೆಯ ಸಂಸ್ಥಾಪಕ ರಾಧಾಕಿಶನ್ ದಮನಿ  ಇತ್ತೀಚೆಗೆ ಫೋರ್ಬ್ಸ್ ಶ್ರೀಮಂತ ಭಾರತೀಯರು 2023 ಪಟ್ಟಿಯಲ್ಲಿಎಂಟನೇ ಸ್ಥಾನದಲ್ಲಿದ್ದಾರೆ. ಬಲಿಷ್ಠ ರಿಟೇಲ್ ಮಳಿಗೆಯ ನೆಟ್ ವರ್ಕ್ ಹಾಗೂ ಜಾಣತನದ ಹೂಡಿಕೆಗಳ ಮೂಲಕ ದಮನಿ ಸಾಕಷ್ಟು ಸಂಪತ್ತು ಗಳಿಸಿದ್ದಾರೆ. ಕಳೆದ ಆರ್ಥಿಕ ಸಾಲಿನಲ್ಲಿ ಡಿ ಮಾರ್ಟ್ ರಿಟೇಲ್ ಮಳಿಗೆಗಳ ಮೂಲಕ ದಮನಿ ವಾರ್ಷಿಕ 589 ಕೋಟಿ ರೂ. ಲಾಭ ಗಳಿಸಿದ್ದರು. ಅಂದರೆ ದಿನಕ್ಕೆ 1.6 ಕೋಟಿ ರೂ. ಲಾಭ. ಈ ಲಾಭವೇ ದಮನಿ ಅವರನ್ನು 2023ನೇ ಸಾಲಿನ ಭಾರತದ ಶ್ರೀಮಂತರ ಪಟ್ಟಿಯಲ್ಲಿ 8ನೇ ಸ್ಥಾನ ಪಡೆಯುವಂತೆ ಮಾಡಿದ್ದು. ದಮನಿ ಅವರ ಒಟ್ಟು ಸಂಪತ್ತು 1.25ಲಕ್ಷ ಕೋಟಿ ರೂ. ಇನ್ನು ಕಳೆದ ವರ್ಷ ದಮನಿ ಮುಂಬೈನ ಮಲಬಾರ್ ಹಿಲ್ಸ್  ನಾರಾಯಣ್ ದಾಬೋಲ್ಕರ್ ರಸ್ತೆಯಲ್ಲಿ 1000 ಕೋಟಿ ರೂ. ಮೌಲ್ಯದ ಐಷಾರಾಮಿ ಮನೆ ಖರೀದಿಸಿದ್ದರು. ಈ ಮೂಲಕ ಭಾರೀ ಸುದ್ದಿಯಾಗಿದ್ದರೂ ಕೂಡ. ಆದರೆ, ಇಷ್ಟೆಲ್ಲ ಸಂಪತ್ತು, ಐಷಾರಾಮಿ ಬಂಗಲೆ ಹೊಂದಿರುವ ದಮನಿ ಈ ಹಿಂದೆ ಸಾಕಷ್ಟು ಹೋರಾಟದ ಜೀವನ ನಡೆಸಿದ್ದರು. ಕಠಿಣ ಪರಿಶ್ರಮ ಹಾಗೂ ಜಾಣತನದ ಹೂಡಿಕೆಯಿಂದಲೇ ದಮನಿ ಇಂದು ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ.

ರಾಧಾಕಿಶನ್ ದಮನಿ  ಈಗ 1000 ಕೋಟಿ ರೂ. ಮೌಲ್ಯದ ಐಷಾರಾಮಿ ಮನೆ ಖರೀದಿಸಿರಬಹುದು. ಆದರೆ, ಈ ಹಿಂದೆ ಅವರು ತಮ್ಮ ಇಡೀ ಕುಟುಂಬದ ಜೊತೆಗೆ ಮುಂಬೈನಲ್ಲಿ ಒಂದು ಕೋಣೆಯ ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿದ್ದರು. ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡಲು ಅರ್ಧದಲ್ಲೇ ಕಾಲೇಜು ಶಿಕ್ಷಣ ಮೊಟಕುಗೊಳಿಸಿ ಸ್ಟಾಕ್ ಮಾರ್ಕೆಟ್ ಬ್ರೋಕರ್ ಹಾಗೂ ಹೂಡಿಕೆದಾರನ್ನಾಗಿ ಕೆಲಸ ಪ್ರಾರಂಭಿಸಿದರು. ನಿಧಾನವಾಗಿ ತನ್ನ ಹೂಡಿಕೆಯನ್ನು ವಿಸ್ತರಿಸುತ್ತ ಬಂದ ದಮನಿ, ಎಚ್ ಡಿಎಫ್ ಸಿ ಬ್ಯಾಂಕಿನ ಅತೀದೊಡ್ಡ ಷೇರುದಾರರಾದರು. ಎಚ್ ಡಿಎಫ್ ಸಿ ಭಾರತದ ಖಾಸಗಿ ವಲಯದ ಅತೀದೊಡ್ಡ ಬ್ಯಾಂಕ್ ಆಗಿದೆ. ಡಿಮಾರ್ಟ್ ಮಾಲೀಕರಾಗಿ ಗುರುತಿಸಿಕೊಂಡಿರುವ ದಮನಿ, ಷೇರು ಮಾರುಕಟ್ಟೆಯ ಜನಪ್ರಿಯ ಹೂಡಿಕೆದಾರರಲ್ಲಿ ಕೂಡ ಒಬ್ಬರು. ಉದ್ಯಮಿಯಾಗಿ ಗುರುತಿಸಿಕೊಳ್ಳುವ ಮುನ್ನವೇ ಅವರು ಹೂಡಿಕೆದಾರನ್ನಾಗಿ ಜನಪ್ರಿಯತೆ ಗಳಿಸಿದ್ದರು. 

ಶೀಘ್ರದಲ್ಲಿ ಯುಪಿಐ ಮೂಲಕವೂ ಸಿಗಲಿದೆ ಸಾಲ: ಮಾಹಿತಿ ನೀಡಿದ RBI

ಹೂಡಿಕೆ ವಲಯದಲ್ಲಿ ಗುರುತಿಸಿಕೊಂಡಿದ್ದ ದಮನಿ 2000ನೇ ಸಾಲಿನಲ್ಲಿ ಉದ್ಯಮ ಕ್ಷೇತ್ರಕ್ಕೆ ಪ್ರವೇಶಿಸಿದರು.  ಮೊದಲ ಡಿಮಾರ್ಟ್ ಮಳಿಗೆಯನ್ನು 2002ರಲ್ಲಿ ಪ್ರಾರಂಭಿಸಿದರು. ಇದು ಆ ಬಳಿಕ ನಿಧಾನವಾಗಿ ಬಹುಕೋಟಿ ಉದ್ಯಮವಾಗಿ ಬೆಳೆಯಿತು. ಕಳೆದ ಆರ್ಥಿಕ ಸಾಲಿನಲ್ಲಿ ಡಿಮಾರ್ಟ್ ನಿವ್ವಳ ಆದಾಯ 10,300 ಕೋಟಿ ರೂ. ಆಗಿತ್ತು. ಇದರಲ್ಲಿ 589 ಕೋಟಿ ರೂ.ಲಾಭವಾಗಿತ್ತು. 

ನಿಷ್ಕ್ರಿಯ ಬ್ಯಾಂಕ್ ಖಾತೆಗಳ ಮಾಹಿತಿಗೆ ವೆಬ್ ಪೋರ್ಟಲ್ ರೂಪಿಸಲಿರುವ RBI ; ಕ್ಲೇಮ್ ಆಗದ ಹಣ ಎಷ್ಟು?

ದಕ್ಷಿಣ ಮುಂಬೈ ಮಲಬಾರ್ ಹಿಲ್ ನಲ್ಲಿ ದಮನಿ ಖರೀದಿಸಿರುವ ಬಂಗಲೆ, 1.5 ಎಕರೆ ಪ್ರದೇಶದಲ್ಲಿದೆ. ಒಟ್ಟು 60,000 ಚದರ ಅಡಿ ವಿಸ್ತೀರ್ಣ ಹೊಂದಿದ್ದು, 2 ಅಂತಸ್ತು ಹೊಂದಿದೆ. ರಾಧಾಕಿಶನ್ ದಮನಿ ಹಾಗೂ ಸಹೋದರ ಗೋಪಾಲಕೃಷ್ಣ ದಮನಿ ಜೊತೆಯಾಗಿ ಈ ಬಂಗಲೆ ಖರೀದಿಸಿದ್ದರು. ಇದು ದೇಶದಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ನಡೆದ ಅತೀ ದುಬಾರಿ ವ್ಯವಹಾರ ಎಂಬ ಹೆಗ್ಗಳಿಕೆ ಗಳಿಸಿತ್ತು. ಈ ಬಂಗಲೆ ಮಾರುಕಟ್ಟೆ ಬೆಲೆ 724 ಕೋಟಿ ರೂಪಾಯಿ. ಇನ್ನು 30.03 ಕೋಟಿ ರೂಪಾಯಿಯನ್ನು ಕೇವಲ ಸ್ಟಾಂಪ್ ಡ್ಯೂಟಿಗೆ  ನೀಡಲಾಗಿದೆ. 

Latest Videos
Follow Us:
Download App:
  • android
  • ios