ಕೇವಲ 5ಲಕ್ಷ ಬಂಡವಾಳದಿಂದ ಫಾರ್ಮಾ ಕಂಪನಿ ಸ್ಥಾಪಿಸಿದ ಪ್ರಾಧ್ಯಾಪಕ ಇಂದು 17,499 ಕೋಟಿ ಸಂಪತ್ತಿನ ಒಡೆಯ!
ಸಾಧಾರಣ ಕುಟುಂಬದ ಹಿನ್ನೆಲೆ ಹೊಂದಿರುವ ಪ್ರಾಧ್ಯಾಪಕರೊಬ್ಬರು ಫಾರ್ಮಾ ಕಂಪನಿ ಪ್ರಾರಂಭಿಸಿ ಯಶಸ್ಸು ಗಳಿಸುತ್ತಾರೆ. ಕೇವಲ 5ಲಕ್ಷ ರೂ. ಬಂಡವಾಳದೊಂದಿಗೆ ಪ್ರಾರಂಭವಾದ ಈ ಕಂಪನಿಯ ಮೌಲ್ಯ ಇಂದು 45,000 ಕೋಟಿ ರೂ.
Business Desk: ಭಾರತದ ಔಷಧ ಉತ್ಪಾದನಾ ವಲಯದಲ್ಲಿ ಬಸುದಿಯೋ ಸಿಂಗ್ ಅವರಿಗೆ ದೊಡ್ಡ ಹೆಸರಿದೆ. 83 ವರ್ಷದ ಈ ಉದ್ಯಮಿ ಪ್ರಸ್ತುತ ಅಲ್ಕೆಮ್ ಲ್ಯಾಬೊರೇಟರೀಸ್ ಕಾರ್ಯನಿರ್ವಾಹಕ ಮುಖ್ಯಸ್ಥರಾಗಿದ್ದಾರೆ. ಅಲ್ಕೆಮ್ ಲ್ಯಾಬೊರೇಟರೀಸ್ ಬರುಕಟ್ಟೆ ಬಂಡವಾಳ ಪ್ರಸ್ತುತ 45000 ಕೋಟಿ ರೂ. ಫೋರ್ಬ್ಸ್ ಪ್ರಕಾರ ಬಸುದಿಯೋ ಸಿಂಗ್ ಅವರ ನಿವ್ವಳ ಆದಾಯ 17,499 ಕೋಟಿ ರೂ. ಇಷ್ಟೊಂದು ದೊಪಡ್ಡ ಕಂಪನಿ, ಪ್ರಸಿದ್ಧಿ, ಕೋಟ್ಯಂತರ ರೂಪಾಯಿ ಆಸ್ತಿಯನ್ನು ಬಸುದಿಯೋ ಸಿಂಗ್ ಇಂದು ಹೊಂದಿದ್ದಾರೆ. ಆದರೆ, ಈ ಯಶಸ್ಸಿನ ಹಾದಿ ಸುಲಭದ್ದಾಗಿರಲಿಲ್ಲ. ಹಾಗೆಯೇ ಈ ಯಶಸ್ಸು ಅನಾಯಾಸವಾಗಿ ಅವರಿಗೆ ಧಕ್ಕಿದ್ದು ಕೂಡ ಅಲ್ಲ. ಬಿಹಾರದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಸಿಂಗ್ ಫಾರ್ಮಾ ಕಂಪನಿ ಸ್ಥಾಪಿಸಿದ್ದು ಹಾಗೂ ಅದನ್ನು ಯಶಸ್ವಿಯಾಗಿ ಮುನ್ನಡೆಸಿದ್ದು ಉದ್ಯಮ ರಂಗದ ಅನೇಕರಿಗೆ ಪ್ರೇರಣೆ ನೀಡುವಂಥದ್ದು ಕೂಡ. ಪ್ರಾಧ್ಯಾಪಕಾರಗಿ ಕಾರ್ಯನಿರ್ವಹಿಸುತ್ತಿದ್ದ ಬಸುದಿಯೋ ಸಿಂಗ್, ಸಂಬಂಧಿ ಸಂಪ್ರದ ಸಿಂಗ್ ಅವರ ಉದ್ಯಮ ಪಯಣದಲ್ಲಿ ಜೊತೆಯಾಗಿದ್ದು ಮತ್ತು ಮುಂದೆ ಅಸಾಧಾರಣ ಯಶಸ್ಸು ಸಾಧಿಸಿದ್ದು ನಿಜಕ್ಕೂ ರೋಚಕ ಕಥೆ.
ಬಿಎ ಪದವಿ ಪಡೆದ ಬಳಿಕ ಪಟ್ನಾ ವಿಶ್ವ ವಿದ್ಯಾಲಯದಿಂದ ರಾಜ್ಯ ಶಾಸ್ತ್ರದಲ್ಲಿಎಂಎ ಪೂರ್ಣಗೊಳಿಸಿದ ಬಸುದಿಯೋ ತಮ್ಮ ಸಹೋದರ ಸಂಬಂಧಿ ಜೊತೆಗೆ 1962ರಲ್ಲಿ ಸ್ವಗ್ರಾಮದಲ್ಲಿ ಫಾರ್ಮ್ ಡಿಸ್ಟ್ರಿಬ್ಯೂಷನ್ ಉದ್ಯಮಕ್ಕೆ ಕೈಹಾಕುತ್ತಾರೆ. ಇಬ್ಬರಿಗೂ ಈ ಉದ್ಯಮದಲ್ಲಿ ಯಶಸ್ಸು ಸಿಗುತ್ತದೆ. ಇದರಿಂದ ಪ್ರೇರಣೆ ಪಡೆದ ಇವರಿಬ್ಬರು ಸ್ವಂತ ಫಾರ್ಮಾ ಕಂಪನಿ ತೆರೆಯುವ ನಿರ್ಧಾರ ಕೈಗೊಳ್ಳುತ್ತಾರೆ. ಇದಕ್ಕಾಗಿ ಇವರಿಬ್ಬರು ಮುಂಬೈಗೆ ತೆರಳುತ್ತಾರೆ. ಅಲ್ಲಿ ಕೇವಲ 5ಲಕ್ಷ ರೂ.ನೊಂದಿಗೆ ಫಾರ್ಮಾ ಕಂಪನಿ ಪ್ರಾರಂಭಿಸುತ್ತಾರೆ. ಎಲ್ಲ ಸಂಪನ್ಮೂಲಗಳು ಹಾಗೂ ಕಂಪನಿ ಸ್ಥಾಪನೆಗೆ ಪರವಾನಗಿ ಪಡೆದ ಬಳಿಕ 1973ರಲ್ಲಿ ಆಲ್ಕೆಮ್ ಲ್ಯಾಬೊರೇಟರೀಸ್ ಪ್ರಾರಂಭಿಸುತ್ತಾರೆ.
ಬರೀ 20ನೇ ವಯಸ್ಸಿಗೆ 770 ಮಿಲಿಯನ್ ಡಾಲರ್ ವಹಿವಾಟು ನಡೆಸೋ ಉದ್ಯಮ ಕಟ್ಟಿದ ಯುವಕ;ಈತನ ಯಶಸ್ಸಿನ ಗುಟ್ಟೇನು?
ಆಲ್ಕೆಮ್ ಲ್ಯಾಬೊರೇಟರೀಸ್ ಪ್ರಾರಮಭಿಸಿದರೂ ಇವರಿಬ್ಬರು ತಮ್ಮ ಹಿಂದಿನ ಡಿಸ್ಟ್ರಿಬ್ಯೂಷನ್ ಉದ್ಯಮವನ್ನು ನಿಲ್ಲಿಸಲಿಲ್ಲ. ಸ್ವಂತ ಉತ್ಪಾದನಾ ಘಟಕ ಹೊಂದಿದ್ದ ಆಲ್ಕೆಮ್ ಲ್ಯಾಬೊರೇಟರೀಸ್ 1984ರಲ್ಲಿ 10 ಕೋಟಿ ರೂ. ಆದಾಯ ಗಳಿಸಲು ಪ್ರಾರಂಭಿಸಿತು.
ಕೆಲವು ದಶಕಗಳ ಬಳಿಕ ಕಂಪನಿ 'ಟಕ್ಸಿಂ' (Taxim) ಎಂಬ ಔಷಧವನ್ನು ಬಿಡುಗಡೆಗೊಳಿಸಿತು. ಈ ಔಷಧವನ್ನು ಅನೇಕ ಬ್ಯಾಕ್ಟಿರೀಯಲ್ ಸೋಂಕುಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಈ ಒಂದು ಔಷಧ ಕಂಪನಿಗೆ ಟರ್ನಿಂಗ್ ಪಾಯಿಂಟ್ ಆಯ್ತು. ಭಾರತದಲ್ಲಿ ವಾರ್ಷಿಕ 100 ಕೋಟಿ ರೂ. ಮಾರಾಟವನ್ನು ಮೀರಿದ ಭಾರತದ ಮೊದಲ ಸೋಂಕುನಿರೋಧಕ ಡ್ರಗ್ಸ್ ಎಂಬ ಹೆಗ್ಗಳಿಕೆಗೆ ಕೂಡ 'ಟಕ್ಸಿಂ' ಪಾತ್ರವಾಯಿತು. 2008ರ ವೇಳೆಗೆ ಕಂಪನಿಗೆ 1,000 ಕೋಟಿ ರೂ. ಆದಾಯದ ಗಡಿಯನ್ನು ದಾಟಲು ಸಾಧ್ಯವಾಯಿತು.
ಎಲಾನ್ ಮಸ್ಕ್‌ಗೆ ಸ್ಪರ್ಧೆ ನೀಡುವಂಥಾ 1300 ಕೋಟಿಯ ಬೃಹತ್ ಕಂಪೆನಿ ಆರಂಭಿಸಿದ ಇಸ್ರೋ ಮಾಜಿ ಉದ್ಯೋಗಿ!
ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ಪ್ರಾರಂಭಿಸಿದ ಆಲ್ಕೆಮ್ ಲ್ಯಾಬೊರೇಟರೀಸ್ ಮುಂದಿನ ಕೆಲವು ವರ್ಷಗಳಲ್ಲಿ ಫಾರ್ಮಾಕೊರ್, ಅಸೆಂಡ್ ಲ್ಯಾಬೊರೇಟರೀಸ್, ಎಂಝೆನೆ ಬಯೋಸೈನ್ಸ್ ಸೇರಿದಂತೆ ಅನೇಕ ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡಿತು. 2015 ಹಾಗೂ 2019ರಲ್ಲಿ ಕಂಪನಿ ಯಶಸ್ವಿಯಾಗಿ ಐಪಿಒ ಪೂರ್ಣಗೊಳಿಸಿತ್ತು. ಹಾಗೆಯೇ ಈ ಕಂಪನಿ 1 ಬಿಲಿಯನ್ ಡಾಲರ್ ಆದಾಯದ ಮೈಲುಗಲ್ಲನ್ನು ಕೂಡ ದಾಟಿತ್ತು. ಕೋವಿಡ್ -19 ಪೆಂಡಾಮಿಕ್ ಅವಧಿಯಲ್ಲಿ ಟ್ರೇಡ್ ಜನರಿಕ್ಸ್ ಔಷಧಗಳಿಂದ ಈ ಕಂಪನಿ ಬೃಹತ್ ಪ್ರಮಾಣದಲ್ಲಿ ಲಾಭ ಗಳಿಸಿತ್ತು. ಈ ಟ್ರೇಡ್ ಜನರಿಕ್ಸ್ ಔಷಧಗಳನ್ನು ವೈದ್ಯರ ಶಿಫಾರಸ್ಸು ಇಲ್ಲದೆ ರಿಟೇಲರ್ಸ್ ಹಾಗೂ ಡಿಸ್ಟ್ರಿಬ್ಯೂಟರ್ಸ್ ಮೂಲಕ ನೇರವಾಗಿ ಮಾರಾಟ ಮಾಡಬಹುದು. ಹೀಗಾಗಿ ಕೋವಿಡ್ ಸಮಯದಲ್ಲಿ ಅಲ್ಕೆಮ್ ಲ್ಯಾಬೊರೇಟರೀಸ್ ಟ್ರೇಡ್ ಜನರಿಕ್ ಔಷಧಗಳ ಮಾರಾಟದಲ್ಲಿ ಹೆಚ್ಚಳವಾಗಿದ್ದು, ಉತ್ತಮ ಲಾಭ ಕೂಡ ಸಿಕ್ಕಿದೆ.