ಎಲಾನ್ ಮಸ್ಕ್‌ಗೆ ಸ್ಪರ್ಧೆ ನೀಡುವಂಥಾ 1300 ಕೋಟಿಯ ಬೃಹತ್ ಕಂಪೆನಿ ಆರಂಭಿಸಿದ ಇಸ್ರೋ ಮಾಜಿ ಉದ್ಯೋಗಿ!
ಎಲೋನ್ ಮಸ್ಕ್ ಎಲೆಕ್ಟ್ರಿಕ್ ಕಾರ್ ಬ್ರ್ಯಾಂಡ್ ಟೆಸ್ಲಾ ಮತ್ತು ರಾಕೆಟ್ ಕಂಪನಿ ಸ್ಪೇಸ್‌ಎಕ್ಸ್ ಮೂಲಕ ಕೋಟಿ ಕೋಟಿ ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ಯಶಸ್ವೀ ಉದ್ಯಮಿಯೆಂದು ಗುರುತಿಸಲ್ಪಟ್ಟಿದ್ದಾರೆ. ಈ ಬಿಸಿನೆಸ್‌ಗೆ ಐಐಟಿಯ ಹಳೆಯ ವಿದ್ಯಾರ್ಥಿ ಮತ್ತು ಇಸ್ರೋದ ಮಾಜಿ ಉದ್ಯೋಗಿ ಪವನ್ ಕುಮಾರ್ ಚಂದನಾ ಸೆಡ್ಡು ಹೊಡೆಯಲು ಸಜ್ಜಾಗಿದ್ದಾರೆ.
ಎಲಾನ್ ಮಸ್ಕ್, ಜಗತ್ತಿನ ಅತಿ ದೊಡ್ಡ ಉದ್ಯಮಿ. ಇವಿಷ್ಟೇ ಅಲ್ಲದೆ ಒಬ್ಬ ಖ್ಯಾತ ಇಂಜಿನಿಯರ್, ಕೈಗಾರಿಕಾ ತಜ್ಞ. ಖಾಸಗಿ ಬಾಹ್ಯಾಕಾಶ ನೌಕೆ ಸ್ಪೇಸ್-ಎಕ್ಸ್‌ನ ಸಂಸ್ಥಾಪಕ, ಕಾರ್ಯ ನಿರ್ವಾಹಕ ಅಧ್ಯಕ್ಷ. ಖ್ಯಾತ ಕಾರು ಕಂಪೆನಿ ಟೆಸ್ಲಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಹೂಡಿಕೆದಾರ. ಆದರೆ ಉದ್ಯಮದಲ್ಲಿ ಎಲಾನ್ ಮಸ್ಕ್‌ಗೆ ಸೆಡ್ಡು ಹೊಡೆಯೋಕೆ ಈ ಐಐಟಿಯನ್ ನಿರ್ಧರಿಸಿದ್ದಾರೆ
ಎಲೋನ್ ಮಸ್ಕ್ ಎಲೆಕ್ಟ್ರಿಕ್ ಕಾರ್ ಬ್ರ್ಯಾಂಡ್ ಟೆಸ್ಲಾ ಮತ್ತು ರಾಕೆಟ್ ಕಂಪನಿ ಸ್ಪೇಸ್‌ಎಕ್ಸ್ ಮೂಲಕ ಕೋಟಿ ಕೋಟಿ ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ಯಶಸ್ವೀ ಉದ್ಯಮಿಯೆಂದು ಗುರುತಿಸಲ್ಪಟ್ಟಿದ್ದಾರೆ. ಇದೇ ರೀತಿ ಐಐಟಿಯ ಹಳೆಯ ವಿದ್ಯಾರ್ಥಿ ಮತ್ತು ಇಸ್ರೋದ ಮಾಜಿ ಉದ್ಯೋಗಿ ಪವನ್ ಕುಮಾರ್ ಚಂದನಾ ಉದ್ಯಮ ನಡೆಸಿ ಟೆಸ್ಲಾಗೆ ಸೆಡ್ಡು ಹೊಡೆಯಲು ಸಜ್ಜಾಗಿದ್ದಾರೆ.
ಐಐಟಿ ಸ್ನೇಹಿತ ಮತ್ತು ಮಾಜಿ ಇಸ್ರೋ ಸಹೋದ್ಯೋಗಿ ನಾಗಾ ಭಾರತ್ ಡಾಕಾ ಅವರೊಂದಿಗೆ ಭಾರತದ ಮೊದಲ ಖಾಸಗಿ ಬಾಹ್ಯಾಕಾಶ ಕಂಪನಿ ಸ್ಕೈರೂಟ್ ಏರೋಸ್ಪೇಸ್ ಅನ್ನು ಸಹ-ಸ್ಥಾಪಿಸಿದ್ದಾರೆ.
ಕಂಪನಿಯು ಭಾರತದ ಮೊದಲ ಖಾಸಗಿ ರಾಕೆಟ್ ವಿಕ್ರಮ್-ಎಸ್ ಅನ್ನು ನಿರ್ಮಿಸಿದೆ. ಲಾಂಚ್‌ಪ್ಯಾಡ್, ಶ್ರೇಣಿಯ ಸಂವಹನಗಳು ಮತ್ತು ಟ್ರ್ಯಾಕಿಂಗ್ ಬೆಂಬಲದಂತಹ ಉಡಾವಣಾ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಇದು ಭವಿಷ್ಯದಲ್ಲಿ ಎಲೋನ್ ಮಸ್ಕ್ ಉದ್ಯಮವನ್ನು ಸಹ ಮೀರಿಸಬಹದು ಎಂದೇ ಹೇಳಲಾಗುತ್ತಿದೆ.
ವಿಕ್ರಮ್-ಎಸ್ ರಾಕೆಟ್ ಅನ್ನು ಶ್ರೀಹರಿಕೋಟಾದಿಂದ ನವೆಂಬರ್ 18, 2022 ರಂದು ಮೂರು ಸಣ್ಣ ಉಪಗ್ರಹಗಳನ್ನು ಹೊತ್ತೊಯ್ದಿದೆ. ಕೆಲವು ಆಮದು ಮಾಡಿದ ಸಂವೇದಕಗಳನ್ನು ಹೊರತುಪಡಿಸಿ ವಿಕ್ರಮ್-ಎಸ್ ರಾಕೆಟ್‌ನಲ್ಲಿರುವ ಎಲ್ಲಾ ವ್ಯವಸ್ಥೆಗಳನ್ನು ಆಂತರಿಕವಾಗಿ ವಿನ್ಯಾಸಗೊಳಿಸಲಾಗಿದೆ. ಪವನ್ ಕುಮಾರ್ ಮತ್ತು ನಾಗಾ ಭರತ್ ವಿಕ್ರಮ್-1 ಮತ್ತು ವಿಕ್ರಮ್-2 ರಾಕೆಟ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ.
ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಡಾ ವಿಕ್ರಮ್ ಸಾರಾಭಾಯ್ ಅವರಿಗೆ ಗೌರವಾರ್ಥವಾಗಿ ರಾಕೆಟ್‌ಗಳಿಗೆ 'ವಿಕ್ರಮ್' ಎಂದು ಹೆಸರಿಸಲಾಗಿದೆ.
ಪವನ್ ಕುಮಾರ್ ಚಂದನ್, ಇಸ್ರೋ ವಿಜ್ಞಾನಿಯಾಗಿ 6 ವರ್ಷಗಳ ಕಾಲ ಕೆಲಸ ಮಾಡಿದ ನಂತರ ಹೈದರಾಬಾದ್ ಮೂಲದ ಖಾಸಗಿ ಬಾಹ್ಯಾಕಾಶ ಕಂಪನಿಯನ್ನು ಸ್ಥಾಪಿಸಿದರು.
ಸ್ಕೈರೂಟ್ ಇಲ್ಲಿಯ ವರೆಗೆ 95 ಮಿಲಿಯನ್ ಸಂಗ್ರಹಿಸಿದೆ. 2022ರಲ್ಲಿ ಸಂಸ್ಥೆಯು ಸುಮಾರು 1,304 ಕೋಟಿ ರೂ. (ಸುಮಾರು 165 ಮಿಲಿಯನ್) ಮೌಲ್ಯವನ್ನು ಹೊಂದಿತ್ತು. Skyroot ಭಾರತೀಯ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಮುಖ ಸಂಸ್ಥೆಯೆಂದು ಗುರುತಿಸಿಕೊಂಡಿದ್ದು, 2040ರ ವೇಳೆಗೆ ಇದರ ಮಾರುಕಟ್ಟೆ ಮೌಲ್ಯ 100 ಬಿಲಿಯನ್ ಆಗಬಹುದು ಎಂದು ಅಂದಾಜಿಸಲಾಗಿದೆ.