Asianet Suvarna News Asianet Suvarna News

ನಟನೆ ತ್ಯಜಿಸಿ ಎಂಬಿಎ ಮಾಡಿದ ಈ ಬಾಲಿವುಡ್ ನಟಿ ಈಗ 16 ಟ್ರಿಲಿಯನ್ ಡಾಲರ್ ಮೌಲ್ಯದ ಕಂಪನಿ ಉನ್ನತಾಧಿಕಾರಿ!

'ಘರ್ ಸೆ ನಿಕಲ್ತೆ ಹೆ' ಎಂಬ ಹಿಂದೆ ಹಾಡು ನೆನಪಿರೋರಿಗೆ ಈ ನಟಿ ಕೂಡ ಚಿರಪರಿಚಿತರು. ಈ ಹಾಡಿನಲ್ಲಿ ಕಾಣಿಸಿಕೊಂಡಿರುವ ನಟಿ ಮಯೂರಿ ಕಾಂಗೋ ಈಗ ಕಾರ್ಪೋರೇಟ್ ಜಗತ್ತಿನಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ನಟನೆ ತೊರೆದು ವಿವಾಹವಾಗಿ ಅಮೆರಿಕಕ್ಕೆ ಹಾರಿ ಎಂಬಿಎ ಪದವಿ ಪಡೆದ ಈ ನಟಿ ಅನೇಕ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದ್ದು, ಈಗ ಗೂಗಲ್ ಇಂಡಿಯಾದ ಇಂಡಸ್ಟ್ರಿಯಲ್ ಹೆಡ್ ಆಗಿದ್ದಾರೆ. 

Meet IIT dropout actress who quit Bollywood did MBA joined 16 trillion dollar firm helmed by another IITian anu
Author
First Published Oct 5, 2023, 3:37 PM IST | Last Updated Oct 5, 2023, 3:37 PM IST

Business Desk: 90ರ ದಶಕದ ಜನಪ್ರಿಯ ಹಾಡು 'ಘರ್ ಸೆ ನಿಕಲ್ತೆ ಹೆ' ನೋಡಿರೋರಿಗೆ ನಟಿ ಮಯೂರಿ ಕಾಂಗೋ ಪರಿಚಯವಿರುತ್ತದೆ. ಏಕೆಂದರೆ ಈ ಹಾಡಿನಲ್ಲಿ ಅವರಿದ್ದಾರೆ. ಬಾಲಿವುಡ್ ನ ಹಲವು ಚಿತ್ರಗಳು, ಧಾರಾವಾಹಿಗಳಲ್ಲಿ ನಟಿಸಿದ್ದ ಮಯೂರಿ ಕಾಂಗೋ ಈಗ ಗೂಗಲ್ ಇಂಡಿಯಾದಲ್ಲಿ ಇಂಡಸ್ಟ್ರಿಯಲ್ ಹೆಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿತ್ರರಂಗದಿಂದ ಕಾರ್ಪೋರೇಟ್ ಜಗತ್ತಿಗೆ ಪಯಣ ಬೆಳೆಸಿದ ಮಯೂರಿ ಕಾಂಗೋ ಅವರ ಕಥೆ ನಿಜಕ್ಕೂ ಆಸಕ್ತಿದಾಯಕವಾಗಿದೆ. 1996ರಲ್ಲಿ ತೆರೆಕಂಡ 'ಪಾಪಾ ಕೆಹ್ತೆ ಹೈ' ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ ಮಯೂರಿ ಇದಕ್ಕೂ ಮುನ್ನ 1995ರಲ್ಲಿ 'ನಸೇಮ್' ಎಂಬ ಚಿತ್ರದಲ್ಲಿ ನಟಿಸಿದ್ದರು. 'ಹೋಗಿ ಪ್ಯಾರ್ ಕಿ ಜೀತ್' ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದ ಮಯೂರಿ ಅವರ ಕೊನೆಯ ಚಿತ್ರ 'ವಂಶಿ' 2000ರಲ್ಲಿ ತೆರೆ ಕಂಡಿತ್ತು. ಇನ್ನು ಆಕೆ ನರ್ಗೀಸ್, ಥೋಡ ಘಮ್ ಥೋಡಿ ಖುಷಿ, ಡಾಲರ್ ಬಾಬು ಹಾಗೂ ಕಿಟ್ಟಿ ಪಾರ್ಟಿ ಟೆವಿ ಶೋಗಳಲ್ಲಿ ಕೂಡ ನಟಿಸಿದ್ದಾರೆ. ಮಯೂರಿ ಕುರಿತ ಇನ್ನೊಂದು ಆಸಕ್ತಿಕರ ಸಂಗತಿ ಕೂಡ ಇದೆ. ಅದೇನೆಂದರೆ ಐಐಟಿಯಲ್ಲಿ ಮಯೂರಿಗೆ ಇಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡಲು ಸೀಟು ಸಿಕ್ಕಿತ್ತು. ಆದರೆ, ನಟನೆಯಲ್ಲಿ ಆಸಕ್ತಿಯಿದ್ದ ಕಾರಣಕ್ಕೆ ಆಕೆ ಐಐಟಿಗೆ ಸೇರ್ಪಡೆಗೊಂಡಿರಲಿಲ್ಲ.

ಮಯೂರಿ ಕಾಂಗೋ ಅವರಿಗೆ ಮೊದಲ ಬ್ರೇಕ್ ನೀಡಿದ್ದು 1995ರಲ್ಲಿ ಬಿಡುಗಡೆಯಾದ ಸೈಯದ್ ಅಖರ್ ಅವರ 'ನಸೀಮ್' ಚಿತ್ರ. ಈ ಚಿತ್ರದಲ್ಲಿ ಮಯೂರಿ ಅವರ ನಟನೆ ನೋಡಿ ಮೆಚ್ಚಿಕೊಂಡ ಮಹೇಶ್ ಭಟ್, 'ಪಾಪಾ ಕೆಹ್ತೆ ಹೈ' ಚಿತ್ರದಲ್ಲಿ ಅವಕಾಶ ನೀಡುತ್ತಾರೆ. ಆಗ ಆಕೆ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆ ಬಳಿಕ ಅವರಿಗೆ ಇತರ ಅನೇಕ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು.ಇನ್ನು ತೆಲುಗಿನಲ್ಲಿ ಮಹೇಶ್ ಬಾಬು ಹಾಗೂ ನಮ್ರತಾ ಶಿರೋಡ್ಕರ್ ಅವರ ಜೊತೆಗೆ ಸಹನಟಿಯಾಗಿ ಮಯೂರಿ 'ವಂಶಿ' ಚಿತ್ರದಲ್ಲಿ ನಟಿಸಿದ್ದರು. 

ಯಶಸ್ವಿ ಮಹಿಳಾ ಉದ್ಯಮಿ ಇಶಿತಾ ಸಾಲ್ಗಾಂವಕರ್ ಅಂಬಾನಿ ಕುಟುಂಬದ ಕುಡಿ; ಈಕೆ ಮುಖೇಶ್ ಅಂಬಾನಿಗೆ ಏನಾಗಬೇಕು?

2003ರಲ್ಲಿ ನಟನೆಗೆ ಗುಡ್ ಬೈ ಹೇಳಿದ ಮಯೂರಿ, ಔರಂಗಬಾದ್ ನಲ್ಲಿ ಎನ್ ಆರ್ ಐ ಆದಿತ್ಯ ದಿಲ್ಲೋನ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ವಿವಾಹದ ಬಳಿಕ ಪತಿ ಜೊತೆಗೆ ಅಮೆರಿಕಕ್ಕೆ ತೆರಳಿದ ಮಯೂರಿ,ಮಾರ್ಕೆಟಿಂಗ್ ಹಾಗೂ ಫೈನಾನ್ಸ್ ನಲ್ಲಿ ಎಂಬಿಎ ಪೂರ್ಣಗೊಳಿಸಿದರು. ಆ ಬಳಿಕ ಅಮೆರಿಕದಲ್ಲಿ 2004 ಹಾಗೂ 2012ರ ನಡುವೆ ಉದ್ಯೋಗದಲ್ಲಿದ್ದರು. 2013ರಲ್ಲಿ ಮರಳಿ ಭಾರತಕ್ಕೆ ಬಂದರು. ಅವರಿಗೆ ಕಿಯಾನ್ ಎಂಬ ಹೆಸರಿನ ಒಬ್ಬ ಮಗನಿದ್ದಾನೆ.

ಲಕ್ಷಾಂತರ ರೂ. ವೇತನದ ಉದ್ಯೋಗ ತೊರೆದು ಕಂಪನಿ ಸ್ಥಾಪಿಸಿದ ದಂಪತಿಗೆ ರತನ್ ಟಾಟಾ ನೆರವು; ಇವರೀಗ 100 ಕೋಟಿ ಒಡೆಯರು

ಭಾರತಕ್ಕೆ ಮರಳಿದ ಬಳಿಕ ಪರ್ಫಾಮಿಕ್ಸ್ ಎಂಬ ಕಂಪನಿಯಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದರು. 2019ರಲ್ಲಿ ಆಕೆ ಗೂಗಲ್ ಇಂಡಿಯಾಕ್ಕೆ ಸೇರ್ಪಡೆಗೊಂಡರು ಹಾಗೂ ಪ್ರಸ್ತುತ ಇಂಡಸ್ಟ್ರಿಯಲ್ ಹೆಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗೂಗಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಯೂರಿ ತಮ್ಮ ಲಿಂಕ್ಡ್ ಇನ್ ಪ್ರೊಫೈಲ್ ನಲ್ಲಿ ಕೂಡ ಬರೆದುಕೊಂಡಿದ್ದಾರೆ. ಬರುಚ್ ಕಾಲೇಜ್ ಝಿಕ್ಲಿನ್ ಸ್ಕೂಲ್ ಆಫ್ ಬ್ಯುಸಿನೆಸ್ ನಲ್ಲಿ ಎಂಬಿಎ ಪೂರ್ಣಗೊಳಿಸಿರುವ ಮಯೂರಿ ಕಾಂಗೋ ತಾನೊಬ್ಬ ಉತ್ಸಾಹಿ  ಮಾರ್ಕೆಟರ್ ಎಂದು ತಮ್ಮ ಲಿಂಕ್ಡ್ ಇನ್ ಪ್ರೊಫೈಲ್ ನಲ್ಲಿ ಬರೆದುಕೊಂಡಿದ್ದಾರೆ. 'ಡಿಜಿಟಲ್ ಮಿಡಿಯಾ ಹಾಗೂ ಹೊಸ ಜಗತ್ತಿನಲ್ಲಿ ಮಾರ್ಕೆಟಿಂಗ್ ಗೆ ಸಂಬಂಧಿಸಿ ಅದು ಒಳಗೊಂಡಿರುವ ಎಲ್ಲ ಸಾಧ್ಯತೆಗಳನ್ನು ನಾನು ಪ್ರೀತಿಸುತ್ತೇನೆ. ನಾನು ಸದಾ ಹೊಸ ವಿಷಯಳನ್ನು ಕಲಿಯಲು ಹಾಗೂ ಹೊಸ ಸವಾಲುಗಳನ್ನು ಎದುರಿಸಲು ನೋಡುತ್ತಿರುತ್ತೇನೆ' ಎಂದು ಲಿಂಕ್ಡ್ ಇನ್ ನಲ್ಲಿ ಮಯೂರಿ ಬರೆದುಕೊಂಡಿದ್ದಾರೆ. ಅಂದಹಾಗೇ ಭಾರತೀಯ ಮೂಲದ ಐಐಟಿ ಪದವೀಧರ ಸುಂದರ್ ಪಿಚೈ ಅವರು ಗೂಗಲ್ ಸಂಸ್ಥೆ ಸಿಇಒ ಆಗಿದ್ದಾರೆ.

Latest Videos
Follow Us:
Download App:
  • android
  • ios