ಭಾರತದ ರೈತ ಕುಟುಂಬದಲ್ಲಿ ಹುಟ್ಟಿದ ಈತ ಇಂದು ಅಮೆರಿಕದ ಎರಡು ಕಂಪನಿಗಳ ಮಾಲೀಕ; ಈತನ ಆಸ್ತಿ ಎಷ್ಟು ಗೊತ್ತಾ?

ಭಾರತೀಯ ಮೂಲದ ಉದ್ಯಮಿ ಅಜಿತ್ ಸಿಂಗ್ ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ಎರಡು ಯುನಿಕಾರ್ನ್ ಕಂಪನಿಗಳನ್ನು ಸ್ಥಾಪಿಸಿದ್ದಾರೆ. ಇವರ ಒಟ್ಟು ಸಂಪತ್ತು 8300 ಕೋಟಿ ರೂ.

Meet IIT alumnus son of a farmer built two companies worth Rs 8300 crore anu

Business Desk: ಸಾಧಿಸುವ ಛಲವಿದ್ದರೆ ಬದುಕಿನಲ್ಲಿ ನಾವು ಎಷ್ಟು ಎತ್ತರಕ್ಕೆ ಬೇಕಾದರೂ ಏರಬಹುದು ಎಂಬುದಕ್ಕೆ ರೈತ ಕುಟುಂಬದಲ್ಲಿ ಹುಟ್ಟಿದ ಅಜಿತ್ ಸಿಂಗ್ ಸಾಕ್ಷಿ. ಉತ್ತರ ಪ್ರದೇಶದ ರೈತ ಕುಟುಂಬಕ್ಕೆ ಸೇರಿದ ಅಜಿತ್ ಸಿಂಗ್ ಇಂದು ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ಎರಡು ಯುನಿಕಾರ್ನ್ ಕಂಪನಿಗಳನ್ನು ಸ್ಥಾಪಿಸಿದ್ದಾರೆ. ನುಟ್ಯಾನಿಕ್ಸ್ ಎಂಬ 6 ಬಿಲಿಯನ್ ಡಾಲರ್ ಮೌಲ್ಯದ ಕ್ಲೌಡ್ ಕಂಪ್ಯೂಟಿಂಗ್ ಕಂಪನಿ ಹಾಗೂ 4 ಬಿಲಿಯನ್ ಡಾಲರ್ ಮೊತ್ತದ ಉದ್ಯಮ ಇಂಟೆಲಿಜೆನ್ಸ್ ಅನಾಲಿಟಿಕ್ಸ್ ಸಂಸ್ಥೆ ಥೌಟ್ ಸ್ಪಾಟ್ ಸ್ಥಾಪಿಸುವ ಮೂಲಕ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಈ ಎರಡು ಕಂಪನಿಗಳು  2016ರ ನಸ್ದಾಕ್ ಟೆಕ್ ಐಪಿಒನಲ್ಲಿ ಗಮನಾರ್ಹ ನಿರ್ವಹಣೆ ತೋರಿವೆ. ಐಐಟಿ ಕಾನ್ಪುರದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿರುವ ಅಜಿತ್ ಸಿಂಗ್ ಅವರು ಅನೇಕ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದ ಬಳಿಕ ಸ್ವಂತ ಉದ್ಯಮಕ್ಕೆ ಕೈಹಾಕಿ ಯಶಸ್ಸು ಕಂಡಿದ್ದಾರೆ.

ಅಜಿತ್ ಸಿಂಗ್ ಅವರ ತಾತ ರೈತರಾಗಿದ್ದರು. ಪಶ್ಚಿಮ ಉತ್ತರ ಪ್ರದೇಶದಲ್ಲಿ ಇವರ ಕುಟುಂಬ ನೆಲೆಸಿತ್ತು. ಅಜಿತ್ ಅವರ ತಂದೆ ಕೃಷಿ ಇಲಾಖೆಯಲ್ಲಿ ಸಂಶೋಧನಾ ವಿಜ್ಞಾನಿಯಾಗಿದ್ದರು. ಹಾಗೆಯೇ ಕೆಮಿಸ್ಟ್ ಕೂಡ ಆಗಿದ್ದರು. ತಂದೆ ಕಾರ್ಯನಿರ್ವಹಿಸುತ್ತಿದ್ದ ಲ್ಯಾಬ್ ಗೆ ಆಗಾಗ ಭೇಟಿ ನೀಡುತ್ತಿದ್ದ ಅಜಿತ್ ಅವರಿಗೆ ಸಹಜವಾಗಿ ರಸಾಯನಶಾಸ್ತ್ರದಲ್ಲಿ ಆಸಕ್ತಿ ಬೆಳೆಯಿತು. ಐಐಟಿ ಕಾನ್ಪುರದಿಂದ ಕೆಮಿಕಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿದ ಅಜಿತ್, ಆ ಸಾಲಿನ ಟಾಪರ್ ಕೂಡ ಆಗಿದ್ದರು. ಆ ಬಳಿಕ ಕೋಲ್ಕತ್ತದಲ್ಲಿ ಎಂಬಿಎ ಪೂರ್ಣಗೊಳಿಸಿದ ಅಜಿತ್, ಅಮೆರಿಕಕ್ಕೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಆರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. 

ರಸ್ತೆಗಳಲ್ಲಿ ಪುಸ್ತಕ ಮಾರುತ್ತಿದ್ದ ವ್ಯಕ್ತಿ, ಈಗ ದುಬೈನಲ್ಲಿ ಅತೀ ಶ್ರೀಮಂತ ಭಾರತೀಯ, ಬೆರಗಾಗಿಸುತ್ತೆ ಒಟ್ಟು ಆಸ್ತಿ ಮೌಲ್ಯ!

ಅಜಿತ್ ಸಿಂಗ್ ಅವರ ಕುಟುಂಬದಲ್ಲಿ ಮೊದಲ ಇಂಜಿನಿಯರ್ ಆಗಿದ್ದರು. ಹೀಗಾಗಿ ಅವರು ಉದ್ಯೋಗದಿಂದಲೇ ಬದುಕು ಕಟ್ಟಿಕೊಳ್ಳುವ ಇಚ್ಛೆ ಹೊಂದಿದ್ದರು. ಪ್ರಾರಂಭದಲ್ಲಿ ಅವರಿಗೆ ಉದ್ಯಮದಲ್ಲಿ ತೊಡಗುವ ಯಾವ ಇರಾದೆಯೂ ಇರಲಿಲ್ಲ. ಬೆಂಗಳೂರಿನ i2 ಟೆಕ್ನಾಲಜೀಸ್ ನಲ್ಲಿ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಸಿಂಗ್ , ಆ ಬಳಿಕ ಹನಿವೆಲ್ ಹಾಗೂ ಒರಾಕಲ್ ನಲ್ಲಿ ಕಾರ್ಯನಿರ್ವಹಿಸಿದರು. 

ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿದ ಬಳಿಕ ಅಮೆರಿಕಕ್ಕೆ ತೆರಳಿದ ಅಜಿತ್, ಅಲ್ಲಿ ಕೂಡ ಕೆಲವು ಕಾಲ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಆ ಬಳಿಕ 'ನುಟ್ಯಾನಿಕ್ಸ್' ಎಂಬ ಸ್ಟಾರ್ಟ್ ಅಪ್ ಪ್ರಾರಂಭಿಸುತ್ತಾರೆ. ಆ ನಂತರ ಥಾಟ್ ಸ್ಪಾಟ್ ಪ್ರಾರಂಭಿಸುತ್ತಾರೆ. ಈ ಎರಡೂ ಕಂಪನಿಗಳಲ್ಲಿ ವಿಶ್ವದಾದ್ಯಂತ 400 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ 300 ಉದ್ಯೋಗಿಗಳು ಭಾರತದ ಬೆಂಗಳೂರು, ಹೈದರಾಬಾದ್ ಹಾಗೂ ತಿರುವನಂತಪುರಂನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಅಜಿತ್ ಸಿಂಗ್ ಅವರು ಕಾರ್ಪೋರೇಟ್ ಜಗತ್ತಿನಲ್ಲಿ ಚಾಲ್ತಿಯಿರುವ ಕಂಪನಿಯ ಕೇಂದ್ರಸ್ಥಾನ ಎಂಬ ವಿಚಾರದಲ್ಲಿ ನಂಬಿಕೆ ಹೊಂದಿಲ್ಲ. ಹೀಗಾಗಿ ಅವರ ಕಂಪನಿಯ ಎಲ್ಲ ಕಾರ್ಯಗಳು ಕೇಂದ್ರಸ್ಥಾನವನ್ನೇ ಅವಲಂಬಿಸಿರಬೇಕು ಎಂಬ ನಿಯಮ ರೂಪಿಸಿಕೊಂಡಿಲ್ಲ. ಹೀಗಾಗಿ ಜತ್ತಿನೆಲ್ಲೆಡೆ ಇರುವ ಉದ್ಯೋಗಿಗಳಿಗೆ ಮುಕ್ತವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟಿದ್ದಾರೆ.

760ರೂ. ವೇತನ ಪಡೆಯುತ್ತಿದ್ದ ವ್ಯಕ್ತಿ ಈಗ ಪ್ರತಿಷ್ಟಿತ ಕಂಪನಿ ಮುಖ್ಯಸ್ಥ; ಕೊಡುಗೈ ದಾನಿಯಾಗಿರುವ ಈತ ಯಾರು ಗೊತ್ತಾ?

ಕಾರ್ಪೋರೇಟ್ ವಲಯದಲ್ಲಿ ಸಾಕಷ್ಟು ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಅಜಿತ್ ಸಿಂಗ್, ಕಂಪನಿಗೆ ಸಹಸಂಸ್ಥಾಪಕರು, ಹೂಡಿಕೆದಾರರು ಹಾಗೂ ತಂಡದ ಸದಸ್ಯರನ್ನು ಆಯ್ಕೆ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಿದ್ದರು. ಹೀಗಾಗಿ ಅವರಿಗೆ ಎರಡು ಸ್ಟಾರ್ಟ್ ಅಪ್ ಗಳನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿದೆ.

ಅಮೆರಿಕದಂತಹ ರಾಷ್ಟ್ರದಲ್ಲಿ ಸ್ಟಾರ್ಟ್ ಅಪ್ ಪ್ರಾರಂಭಿಸಿ ಯಶಸ್ಸು ಸಾಧಿಸೋದು ಸುಲಭದ ಕೆಲಸವಲ್ಲ. ಅಂಥದರಲ್ಲಿ ಎರಡು ಸ್ಟಾರ್ಟ್ ಅಪ್ ಗಳನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಅಜಿತ್ ಸಿಂಗ್ ಹಲವು ಭಾರತೀಯರಿಗೆ ಪ್ರೇರಣೆ ಎಂದರೆ ತಪ್ಪಿಲ್ಲ. 
 
 

Latest Videos
Follow Us:
Download App:
  • android
  • ios