ರಸ್ತೆಗಳಲ್ಲಿ ಪುಸ್ತಕ ಮಾರುತ್ತಿದ್ದ ವ್ಯಕ್ತಿ, ಈಗ ದುಬೈನಲ್ಲಿ ಅತೀ ಶ್ರೀಮಂತ ಭಾರತೀಯ, ಬೆರಗಾಗಿಸುತ್ತೆ ಒಟ್ಟು ಆಸ್ತಿ ಮೌಲ್ಯ!
ಪ್ರಪಂಚದಲ್ಲಿ ಇವತ್ತಿಗೆ ಕೋಟ್ಯಾಧಿಪತಿಗಳಾಗಿರುವವರು ಯಾರೂ ಏಕಾಏಕಿ ಶ್ರೀಮಂತರಾದವರಲ್ಲ. ಎಲ್ಲರ ಯಶಸ್ಸಿನ ಹಿಂದೆಯೂ ಅವಿರತ ಶ್ರಮವಿರುತ್ತದೆ. ದುಬೈನಲ್ಲಿರುವ ಶ್ರೀಮಂತ ಭಾರತೀಯ ಕೂಡಾ ಒಂದು ಕಾಲದಲ್ಲಿ ಜೀವನ ನಡೆಸೋಕೆ ರಸ್ತೆ ಬದಿಯಲ್ಲಿ ಬುಕ್ ಮಾರುತ್ತಿದ್ದರು. ಪ್ರಸ್ತುತ ಅವರ ಆಸ್ತಿ ಮೌಲ್ಯ ಎಷ್ಟೆಂದು ಗೊತ್ತಾದ್ರೆ ಅಚ್ಚರಿಯಾಗೋದು ಖಂಡಿತ.
ಪ್ರಪಂಚದಲ್ಲಿ ಇವತ್ತಿಗೆ ಕೋಟ್ಯಾಧಿಪತಿಗಳಾಗಿರುವವರು ಯಾರೂ ಏಕಾಏಕಿ ಶ್ರೀಮಂತರಾದವರಲ್ಲ. ಎಲ್ಲರ ಯಶಸ್ಸಿನ ಹಿಂದೆಯೂ ಅವಿರತ ಶ್ರಮವಿರುತ್ತದೆ. ಬಲವಾದ ಆರ್ಥಿಕ ಹಿನ್ನೆಲೆ ಇಲ್ಲದಿದ್ದರೂ, ಸಾಕಷ್ಟು ಸಂಕಷ್ಟಗಳನ್ನು ಎದುರಿಸಿ ಸಕ್ಸಸ್ ಆದ ಹಲವಾರು ಉದ್ಯಮಿಗಳಿದ್ದಾರೆ. ಅಂತಹ ವ್ಯಕ್ತಿಗಳಲ್ಲಿ ಒಬ್ಬರು ರಿಜ್ವಾನ್ ಸಜನ್, ಡ್ಯಾನ್ಯೂಬ್ ಗ್ರೂಪ್ ಸಂಸ್ಥಾಪಕ ಮತ್ತು ಅಧ್ಯಕ್ಷರು. ದುಬೈನಲ್ಲಿರುವ ಶ್ರೀಮಂತ ಭಾರತೀಯ ಕೂಡಾ ಒಂದು ಕಾಲದಲ್ಲಿ ಜೀವನ ನಡೆಸೋಕೆ ರಸ್ತೆ ಬದಿಯಲ್ಲಿ ಬುಕ್ ಮಾರುತ್ತಿದ್ದರು. ಪ್ರಸ್ತುತ ಅವರ ಆಸ್ತಿ ಮೌಲ್ಯ ಎಷ್ಟೆಂದು ಗೊತ್ತಾದ್ರೆ ಅಚ್ಚರಿಯಾಗೋದು ಖಂಡಿತ.
ರಿಜ್ವಾನ್, ಯುಎಇ ಮೂಲದ ಅನಿವಾಸಿ ಭಾರತೀಯ ಉದ್ಯಮಿಯಾಗಿದ್ದು, ಬುಕ್ ಮಾರಾಟಗಾರರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಈಗ ದುಬೈನ ಶ್ರೀಮಂತ ಭಾರತೀಯರಲ್ಲಿ ಒಬ್ಬರಾಗಿದ್ದಾರೆ. ಅವರ ಡ್ಯಾನ್ಯೂಬ್ ಗ್ರೂಪ್ ಬಿಲಿಯನ್-ಡಾಲರ್ ಸಮೂಹ ಸಂಸ್ಥೆಯಾಗಿದೆ. ಯುಎಇ, ಓಮನ್, ಬಹ್ರೇನ್, ಸೌದಿ ಅರೇಬಿಯಾ, ಕತಾರ್ ಮತ್ತು ಭಾರತ ಸೇರಿದಂತೆ ವಿಶ್ವದಾದ್ಯಂತ ವೈವಿಧ್ಯಮಯ ಶಾಖೆಗಳನ್ನು ಹೊಂದಿರುವ ಅತಿದೊಡ್ಡ ಕಟ್ಟಡ ಸಾಮಗ್ರಿಗಳ ಕಂಪನಿಗಳಲ್ಲಿ ಒಂದಾಗಿದೆ.
ಮದುವೆಗೂ ಸಾಲ ಪಡೆದಿದ್ದ ವ್ಯಕ್ತಿ ಈಗ 55 ಸಾವಿರ ಕೋಟಿ ಕಂಪನಿ ಒಡೆಯ!
ಸಾಜನ್ ಮೊದಲ ತಲೆಮಾರಿನ ಉದ್ಯಮಿಯಾಗಿದ್ದು, ಮುಂಬೈನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಅವರ ಆರಂಭಿಕ ದಿನಗಳಲ್ಲಿ, ಅವರು ಪುಸ್ತಕಗಳು ಮತ್ತು ಪಟಾಕಿಗಳನ್ನು ಮಾರಾಟ ಮಾಡುವ ಬೀದಿ ವ್ಯಾಪಾರಿಯಾಗಿ ಪ್ರಾರಂಭಿಸಿದರು. ಅವರು ತಮ್ಮ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲು ಹಾಲು ವಿತರಿಸುವ ಕೆಲಸವನ್ನೂ ಮಾಡಿದ್ದರು.
16 ವರ್ಷದವರಾಗಿದ್ದಾಗ ಅವರ ತಂದೆ ನಿಧನರಾದರು. ಸಜನ್ ನಂತರ 1981ರಲ್ಲಿ ಕುವೈತ್‌ನಲ್ಲಿ ತನ್ನ ಚಿಕ್ಕಪ್ಪನ ಕಟ್ಟಡ ಸಾಮಗ್ರಿಗಳ ಅಂಗಡಿಯಲ್ಲಿ ಕೆಲಸಕ್ಕೆ ಹೋದರು. ತರಬೇತಿ ಮಾರಾಟಗಾರನಾಗಿ ಪ್ರಾರಂಭಿಸಿ, ಸಜನ್ ವೃತ್ತಿಜೀವನದಲ್ಲಿ ಹಂತ ಹಂತವಾಗಿ ಗೆಲುವು ಸಾಧಿಸುತ್ತಾ ಹೋದರು. 1991ರಲ್ಲಿ ನಡೆದ ಕೊಲ್ಲಿ ಯುದ್ಧವು ಅವರನ್ನು ಮುಂಬೈಗೆ ಮರಳುವಂತೆ ಮಾಡಿತು. ಈ ಸಂದರ್ಭದಲ್ಲಿ ಅವರು ಮದುವೆಯಾದರು.
145 ಕೋಟಿ ಆಫರ್ ತಿರಸ್ಕರಿಸಿ, 6 ತಿಂಗಳ ಸಂಬಳ ಉಳಿಸಿ 8200 ಕೋಟಿ ರೂ. ಮೌಲ್ಯದ ಕಂಪೆನಿ ಕಟ್ಟಿದ ಮಹಿಳೆ!
1993 ರಲ್ಲಿ, ಅವರು ಡ್ಯಾನ್ಯೂಬ್ ಗ್ರೂಪ್‌ನ್ನು ಪ್ರಾರಂಭಿಸಿದರು. ಇದು ಈಗ ಕಟ್ಟಡ ಸಾಮಗ್ರಿಗಳು, ಗೃಹಾಲಂಕಾರಗಳು ಮತ್ತು ರಿಯಲ್ ಎಸ್ಟೇಟ್ ಅಭಿವೃದ್ಧಿಯಲ್ಲಿ ಆಸಕ್ತಿ ಹೊಂದಿರುವ ವೈವಿಧ್ಯಮಯ ವ್ಯಾಪಾರ ಸಮೂಹವಾಗಿದೆ. ಗ್ರೂಪ್ 2019ರಲ್ಲಿ USD 1.3 ಶತಕೋಟಿ ವಾರ್ಷಿಕ ವಹಿವಾಟು ಸಾಧಿಸಿದೆ. ಸಜನ್ ಅವರ ವೈಯಕ್ತಿಕ ನಿವ್ವಳ ಮೌಲ್ಯವು ಶತಕೋಟಿ ದಿರ್ಹಮ್‌ಗಳಷ್ಟಿದೆ. ಯುಎಇಯ ಆರ್ಥಿಕ ಸಚಿವಾಲಯದ ವೆಬ್‌ಸೈಟ್ ಪ್ರಕಾರ, ಸಜನ್ ನಿವ್ವಳ ಮೌಲ್ಯವು USD 2.5 ಬಿಲಿಯನ್ ಆಗಿದೆ. ಅಂದರೆ ಇದು ಸುಮಾರು 20,830 ಕೋಟಿ ರೂ.ಗೆ ಸಮವಾಗಿದೆ.