ಉದ್ಯಮ ಪ್ರಾರಂಭಿಸಲು ಕಾಲೇಜ್ ಪ್ರಾಜೆಕ್ಟ್ ಸ್ಫೂರ್ತಿ;6 ವರ್ಷಗಳ ಹಿಂದೆ ಸ್ಥಾಪಿಸಿದ ಕಂಪನಿ ಮೌಲ್ಯ ಈಗ 30 ಸಾವಿರ ಕೋಟಿ
ಕಾಲೇಜಿನಲ್ಲಿ ಮಾಡಿದ ಪ್ರಾಜೆಕ್ಟ್ ನಿಂದ ಸ್ಫೂರ್ತಿ ಪಡೆದು ಐಐಎಂ ಹಳೆಯ ವಿದ್ಯಾರ್ಥಿ ಸ್ಥಾಪಿಸಿದ ಸ್ಟಾರ್ಟ್ ಅಪ್ ಇಂದು 30,000 ಕೋಟಿ ರೂ. ಮೌಲ್ಯ ಹೊಂದಿದೆ. 6 ವರ್ಷದ ಫಾರ್ಮ ಈಸೀ ಎಂಬ ಈ ಕಂಪನಿ 25 ವರ್ಷಗಳಷ್ಟು ಹಳೆಯದಾದ ಥೈರೋಕೇರ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿದೆ.
Business Desk:ಉದ್ಯಮ ಕುಟುಂಬದ ಹಿನ್ನೆಲೆಯುಳ್ಳವರು ಸಾಮಾನ್ಯವಾಗಿ ಅದೇ ದಾರಿಯಲ್ಲಿ ಮುನ್ನಡೆಯಲು ಬಯಸುತ್ತಾರೆ. ಫಾರ್ಮಈಸೀ ಕಂಪನಿ ಸ್ಥಾಪಕ ಸಿದ್ಧಾರ್ಥ ಶಾ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ (ಐಐಎಂ) ಪದವಿ ಪಡೆದಿರುವ ಸಿದ್ಧಾರ್ಥ್ ಪ್ಲೇಸ್ ಮೆಂಟ್ ಹಾಗೂ ಅಧಿಕ ವೇತನದ ಉದ್ಯೋಗಕ್ಕಾಗಿ ಹುಡುಕಾಟ ನಡೆಸಲಿಲ್ಲ. ಬದಲಿಗೆ ಎಂಬಿಎ ಮಾಡುತ್ತಿರುವಾಗಲೇ ಉದ್ಯಮ ಸ್ಥಾಪಿಸುವ ಸಂಬಂಧ ಯೋಜನೆ ರೂಪಿಸಲು ಪ್ರಾರಂಭಿಸಿದ್ದರು. ಮುಂದೆ ಇದೇ ಸ್ಟಾರ್ಟ್ ಅಪ್ ಪ್ರಾರಂಭಿಸಲು ಅವರಿಗೆ ನೆರವು ನೀಡಿತು. ಸಿದ್ಧಾರ್ಥ್ ಸ್ಥಾಪಿಸಿದ ಫಾರ್ಮ ಈಸೀ ಎಂಬ ಕಂಪನಿ ಸ್ಥಾಪನೆಗೊಂಡ ಕೆಲವೇ ವರ್ಷಗಳಲ್ಲಿ ಭಾರೀ ಯಶಸ್ಸು ಗಳಿಸುವ ಮೂಲಕ ಎಲ್ಲರ ಗಮನ ಸೆಳೆದಿದೆ. ಕೋವಿಡ್ -19 ಪೆಂಡಾಮಿಕ್ ಸಂದರ್ಭದಲ್ಲಿ
ಫಾರ್ಮಈಸೀ ಮೌಲ್ಯದಲ್ಲಿ ಭಾರೀ ಹೆಚ್ಚಳವಾಗಿದ್ದು, 5.5 ಬಿಲಿಯನ್ ಡಾಲರ್ ಇತ್ತು. ಅಷ್ಟೇ ಅಲ್ಲ, ಈ ಸ್ಟಾರ್ಟ್ ಅಪ್ ಲಿಸ್ಟೆಡ್ ಕಂಪನಿಯ ಬಹುತೇಕ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಭಾರತದ ಕಾರ್ಪೋರೇಟ್ ಜಗತ್ತಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ ಕೂಡ.
ಹೊಸ ದಾಖಲೆ ಬರೆದ ಫಾರ್ಮ ಈಸೀ
2023ನೇ ಸಾಲಿನಲ್ಲಿ ಫಾರ್ಮಈಸೀ ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ. ಇದರ ಮೌಲ್ಯದಲ್ಲಿ ಶೇ.90ರಷ್ಟು ಇಳಿಕೆಯಾಗಿದೆ ಎಂದು ಹೇಳಲಾಗಿದೆ. ಆದರೆ, ಈ ಸ್ಟಾರ್ಟ್ ಅಪ್ ಡಯೋಗ್ನನೆಸ್ಟಿಕ್ ಚೈನ್ ಥೈರೋಕೇರ್ (Thyrocare) ಸಂಸ್ಥೆಯನ್ನು 4,546 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಳ್ಳುವ ಮೂಲಕ ಸಾಕಷ್ಟು ಸುದ್ದಿ ಮಾಡಿದೆ. ಸಿದ್ಧಾರ್ಥ್ ಶಾ ಈ ಕಾರಣಕ್ಕಾಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ ಕೂಡ. ಥೈರೋಕೇರ್ ಸಂಸ್ಥೆ 25 ವರ್ಷಗಳಷ್ಟು ಹಳೆಯದಾದ ಕಂಪನಿ. ಆದರೆ, ಫಾರ್ಮ ಈಸೀ ಇ-ಫಾರ್ಮಸಿ ಕೇವಲ 6 ವರ್ಷಗಳ ವಯಸ್ಸಿನದ್ದು. ಹೀಗಿದ್ದರೂ ಫಾರ್ಮ ಈಸೀ ಥೈರೋಕೇರ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತು. ಈ ರೀತಿ ಹೊಸ ಸಂಸ್ಥೆಯೊಂದು ತನಗಿಂತ ಸಾಕಷ್ಟು ಹಳೆಯ ಸಂಸ್ಥೆಯೊಂದನ್ನು ಸ್ವಾಧೀನಪಡಿಸಿಕೊಂಡಿರೋದು ಭಾರತದ ಕಾರ್ಪೋರೇಟ್ ಜಗತ್ತಿನಲ್ಲಿ ಇದೇ ಮೊದಲು ಎಂದು ಹೇಳಲಾಗಿದೆ. ಥೈರೋಕೇರ್ ಸ್ವಾಧೀನಪಡಿಸಿಕೊಂಡ ಕಾರಣ ಫಾರ್ಮಈಸೀ ಮೌಲ್ಯ ದುಪ್ಪಟ್ಟಾಗಿದ್ದು, 30,000 ಕೋಟಿ ರೂ.ಗೆ ತಲುಪಿದೆ.
12ನೇ ತರಗತಿ ಅನುತ್ತೀರ್ಣನಾದ ವಿದ್ಯಾರ್ಥಿ ಇಂದು ಭಾರತದ ಶ್ರೀಮಂತ ಉದ್ಯಮಿ; 1,30,000 ಕೋಟಿ ಮೌಲ್ಯದ ಕಂಪನಿ ಒಡೆಯ!
ಉದ್ಯಮಕ್ಕೆ ಪ್ರೇರಣೆ ನೀಡಿದ ಕಾಲೇಜ್ ಪ್ರಾಜೆಕ್ಟ್
ಐಐಟಿ ಅಹ್ಮದಾಬಾದ್ ನಲ್ಲಿ ಇಂಜಿನಿಯರಿಂಗ್ ಪದವಿ ಪಡೆಯುವ ಮುನ್ನ ಸಿದ್ಧಾರ್ಥ ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ಕಾಲೇಜ್ ನಲ್ಲಿ ಮಾಡಿದ ಪ್ರಾಜೆಕ್ಟ್ ವೊಂದು ಸಿದ್ಧಾರ್ಥ್ ಅವರಿಗೆ ಸ್ಟಾರ್ಟ್ ಅಪ್ ಪ್ರಾರಂಭಿಸಲು ಪ್ರೇರಣೆಯಾಯಿತು. ಸಿದ್ಧಾರ್ಥ್ ಕಾಲೇಜ್ ನಲ್ಲಿ ಭಾರತದಲ್ಲಿ ಆನ್ ಲೈನ್ ಫಾರ್ಮಸಿಗೆ ಸಂಬಂಧಿಸಿ ಪ್ರಾಜೆಕ್ಟ್ ಸಿದ್ಧಪಡಿಸಿದ್ದರು. ಇದೇ ಅವರಿಗೆ ಫಾರ್ಮ ಈಸೀ ಸ್ಥಾಪಿಸಲು ಪ್ರೇರಣೆ ನೀಡಿತು. ಈ ಸಂಸ್ಥೆ ಪ್ರಾರಂಭಿಸುವ ಮುನ್ನ ಗೋಲ್ಡ್ ಮ್ಯಾನ್ ಸ್ಯಾಚ್ ನಲ್ಲಿ ಎರಡು ತಿಂಗಳ ಕಾಲ ಸಿದ್ಧಾರ್ಥ್ ಇಂಟರ್ನ್ ಶಿಪ್ ಮಾಡಿದ್ದರು.
ಹೆತ್ತವರ ಪೂರ್ಣ ಬೆಂಬಲ
ಸ್ಟಾರ್ಟ್ ಅಪ್ ಪ್ರಾರಂಭಿಸಿದ ಆರಂಭಿಕ ದಿನಗಳಲ್ಲಿ ಸಿದ್ಧಾರ್ಥ್ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು. ಈ ಸಮಯದಲ್ಲಿ ಅವರಿಗೆ ಅಪ್ಪ-ಅಮ್ಮ ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡಿದರು. ಇವರಿಬ್ಬರೂ ತಮ್ಮ ಆಸ್ತಿಯ ಬಹುಪಾಲನ್ನು ಮಗನ ಉದ್ಯಮ ಸ್ಥಾಪನೆಗೆ ನೆರವು ನೀಡಲು ಬಳಸಿದ್ದರು. ಸಿದ್ಧಾರ್ಥ್ ಅವರ ತಂದೆ ಡಾ.ಭಾಸ್ಕರ್ ಶಾ ಹೃದ್ರೋಗ ತಜ್ಞರಾಗಿದ್ದಾರೆ. ಹಾಗೆಯೇ ಅವರ ತಾಯಿ ಡಾ.ಜಾಸ್ಮಿನ್ ಶಾ ಕೂಡ ವೈದ್ಯೆ. ಸಿದ್ಧಾರ್ಥ್ 'ತನ್ನನ್ನು ದೇಶದ ಅತ್ಯಂತ ಅದೃಷ್ಟವಂತ ಮಗ' ಎಂದು ಕರೆಯುತ್ತಾರೆ.
ಕಿರಿಯ ವಯಸ್ಸಿನಲ್ಲೇ 29,199 ಕೋಟಿ ಮೌಲ್ಯದ ಫಿನ್ ಕಾರ್ಪ್ ಸಂಸ್ಥೆ ಎಂಡಿ; ಯಾರು ಈ ಅಭಯ ಭೂತದ?
ಸಿದ್ಧಾರ್ಥ್ ಗೆ ಕಾರು ಅಂದರೆ ಇಷ್ಟ. ಶಾಲಾ ದಿನಗಳಲ್ಲಿ ರಾಷ್ಟ್ರೀಯ ಗೋ-ಕಾರ್ಟ್ ನಲ್ಲಿ ಮೂರು ಬಾರಿ ಚಾಂಪಿಯನ್ ಆಗಿದ್ದಾರೆ. 2021ರಲ್ಲಿ ಮುಂಬೈ ಖಾರ್ ವೆಸ್ಟ್ ಪ್ರದೇಶದಲ್ಲಿ 3,963 ಚದರ ಅಡಿ ಅಪಾರ್ಟ್ ಮೆಂಟ್ ಅನ್ನು 40 ಕೋಟಿ ರೂ. ಗೆ ಖರೀದಿಸಿದರು. ಮುಂಬೈ ಡೆವಲಪರ್ಸ್ ವಾಧ್ವ ಗ್ರೂಪ್ ಅಭಿವೃದ್ಧಿಪಡಿಸಿದ ಅಪಾರ್ಟ್ ಮೆಂಟ್ 6ನೇ ಫ್ಲೋರ್ ನಲ್ಲಿ ಇದೆ. ಈ ಅಪಾರ್ಟ್ಮೆಂಟ್ ಸ್ಟ್ಯಾಂಪ್ ಡ್ಯೂಟಿಗೆ 1.5 ಕೋಟಿ ರೂ.