ಕಿರಿಯ ವಯಸ್ಸಿನಲ್ಲೇ 29,199 ಕೋಟಿ ಮೌಲ್ಯದ ಫಿನ್ ಕಾರ್ಪ್ ಸಂಸ್ಥೆ ಎಂಡಿ; ಯಾರು ಈ ಅಭಯ ಭೂತದ?

ಸೈರಸ್ ಪೂನಾವಾಲಾ ಭಾರತದ ಶ್ರೀಮಂತ ಫಾರ್ಮಾ ಉದ್ಯಮಿ. ಇವರ ಪೂನಾವಾಲಾ ಫಿನ್ ಕಾರ್ಪ್ ಕಂಪನಿ ಎಂಡಿ ಆಗಿರುವ ಅಭಯ ಭೂತದ ಅವರ ವಯಸ್ಸು 38 ಅಷ್ಟೇ. ಚಾರ್ಟೆಡ್ ಅಕೌಂಟೆಂಟ್ ಆಗಿರುವ ಅಭಯ ಈ ಹುದ್ದೆಗೇರಿದ್ದು ಹೇಗೆ? ಅವರ ಸಾಧನೆಗಳೇನು? ಇಲ್ಲಿದೆ ಮಾಹಿತಿ. 
 

Meet the CA who heads Rs 29199 crore company of Indias richest pharma billionaire anu

Business Desk: ಬ್ಯಾಂಕಿಂಗೇತರ ಹಣಕಾಸು ಕಂಪನಿಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. ಹೆಸರಾಂತ ಕಂಪನಿಗಳು ಈ ಕ್ಷೇತ್ರದಲ್ಲಿ ತೊಡಗಿಕೊಳ್ಳುತ್ತಿರೋದು ಕೂಡ ಇದಕ್ಕೆ ಕಾರಣ. ಸಾವಿರಾರು ಕೋಟಿ ವ್ಯವಹಾರ ನಡೆಸುವ ಈ ಕಂಪನಿಗಳನ್ನು ಸಂಭಾಳಿಸಲು ಹಣಕಾಸು ಕ್ಷೇತ್ರದಲ್ಲಿ ಸಾಕಷ್ಟು ಜ್ಞಾನ ಹಾಗೂ ಅನುಭವ ಹೊಂದಿರುವ ವ್ಯಕ್ತಿಗಳು ಅಗತ್ಯ. ಇಂಥ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ (ಎಂಡಿ)ಹುದ್ದೆಗೇರುವುದು ಅಷ್ಟು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಅದು ಕಿರಿಯ ವಯಸ್ಸಿನಲ್ಲಿ ಇಷ್ಟು ಜವಾಬ್ದಾರಿಯುತ ಸ್ಥಾನ ಸಿಗೋದು ಇನ್ನೂ ಕಷ್ಟ. ಹೀಗಿರುವಾಗ ಸೈರಸ್ ಪೂನಾವಾಲಾ ಸಮೂಹದ ಫಿನ್ ಕಾರ್ಪ್ ಸಂಸ್ಥೆ ಪೂನಾವಾಲಾ ಫಿನ್ ಕಾರ್ಪ್ ಲಿಮಿಟೆಡ್ (ಪಿಎಫ್ ಎಲ್) ಎಂಡಿ ಅಭಯ ಭೂತದ ಅವರ ಬಗ್ಗೆ ತಿಳಿಯಬೇಲೇಕು. ಅಭಯ ಅವರ ವಯಸ್ಸು 38 ಅಷ್ಟೇ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವರು ದೊಡ್ಡ ಫಿನ್ ಕಾರ್ಪ್ ಸಂಸ್ಥೆಯೊಂದನ್ನು ಮುನ್ನಡೆಸುತ್ತಿದ್ದಾರೆ. ಚಾರ್ಟೆಡ್ ಅಕೌಂಟೆಂಟ್ ಆಗಿರುವ ಅಭಯ ಭೂತದ ಕಮರ್ಷಿಯಲ್ ಹಾಗೂ ರಿಟೇಲ್ ಸಾಲಕ್ಕೆ ಸಂಬಂಧಿಸಿ 15 ವರ್ಷಗಳ ಅನುಭವ ಹೊಂದಿದ್ದಾರೆ. 

ಮಹಾರಾಷ್ಟ್ರದ ಲತುರ್ ಮೂಲದ ಅಭಯ ಭೂತದ ಸಿಂಬಯೋಸಿಸ್ ಇಂಟರ್ ನ್ಯಾಷನಲ್ ವಿಶ್ವವಿದ್ಯಾಲಯದಿಂದ ಕಾಮರ್ಸ್ ನಲ್ಲಿ ಪದವಿ ಪಡೆದಿದ್ದಾರೆ. 2009ರಲ್ಲಿ ಭೂತದ ಚಾರ್ಟೆಡ್ ಅಕೌಂಟೆಂಟ್ ಆದರು. ಪ್ರಸ್ತುತ ಅವರು ಪೂನಾವಾಲಾ ಫಿನ್ ಕಾರ್ಪ್ ಸಂಸ್ಥೆ ಮುಖ್ಯಸ್ಥರಾಗಿದ್ದಾರೆ. ಪೂನಾವಾಲಾ ಫಿನ್ ಕಾರ್ಪ್ ಸಂಸ್ಥೆ 29,199 ಕೋಟಿ ರೂ. ಮಾರುಕಟ್ಟೆ ಬಂಡವಾಳ ಹೊಂದಿದೆ. ಇನ್ನು ಈ ಕಂಪನಿ ಷೇರಿನ ಬೆಲೆ ಸುಮಾರು 379.20 ರೂ. ಆಸುಪಾಸಿನಲ್ಲಿದೆ.

ಮುಂಬೈನ ವಠಾರ ಜೀವನದಿಂದ ದುಬೈಗೆ ಹಾರಿ ಸಾಮ್ರಾಜ್ಯ ಕಟ್ಟಿದ ಭಾರತೀಯ ಸಹೋದರರು, ಈಗ ಏಷ್ಯಾದ ಶ್ರೀಮಂತರು!

ಪೂನಾವಾಲಾ ಫಿನ್ ಕಾರ್ಪ್ ಕಂಪನಿ ಕನ್ಸೂಮರ್ ಹಾಗೂ ಎಂಎಸ್ ಎಂಇ ಫೈನಾನ್ಷಿಂಗ್ ನಲ್ಲಿ ತೊಡಗಿವೆ. ಈ ಕಂಪನಿ ಸೈರಸ್ ಪೂನಾವಾಲಾ ಸಮೂಹದ ಅಂಗಸಂಸ್ಥೆಯಾಗಿದ್ದು, ಪುಣೆಯಲ್ಲಿ ಮುಖ್ಯ ಕಚೇರಿಯನ್ನು ಹೊಂದಿದೆ. ಸೈರಸ್ ಪೂನಾವಾಲಾ ಸಮೂಹದ ಮುಖ್ಯಸ್ಥ ಸೈರಸ್ ಪೂನಾವಾಲಾ ಭಾರತದ ಶ್ರೀಮಂತ ಫಾರ್ಮಾ ಉದ್ಯಮಿಯಾಗಿದ್ದು, ಫೋರ್ಬ್ಸ್ ಮಾಹಿತಿ ಪ್ರಕಾರ ಇವರ ನಿವ್ವಳ ಸಂಪತ್ತು 
1,71,880 ಕೋಟಿ ರೂ. 

ಅಭಯ ಭೂತದ ತಮ್ಮ ವೃತ್ತಿಜೀವನವನ್ನು ಬ್ಯಾಂಕ್ ಆಫ್ ಇಂಡಿಯಾದ ಎಸ್ ಎಂಇ ಅಧಿಕಾರಿಯಾಗಿ 2010ರಲ್ಲಿ ಪ್ರಾರಂಭಿಸಿದರು. ಅಲ್ಲಿಂದ ನಂತರ ಅವರು ಅನೇಕ ಉದ್ಯಮಗಳನ್ನು ಮುನ್ನಡೆಸಿದರು. ಅಲ್ಲದೆ, ಹಲವಾರು ಪ್ರಶಸ್ತಿಗಳನ್ನು ಕೂಡ ಗಳಿಸಿದರು. 2016ರಲ್ಲಿ ಅಭಯ ಟಿಎಬಿ ಕ್ಯಾಪಿಟಲ್ ಲಿಮಿಟೆಡ್ ಸ್ಥಾಪಿಸಿದರು. ಈ ಸಂಸ್ಥೆ ಎಂಎಸ್ ಎಂಇ ಹಾಗೂ ಕನ್ಸೂಮರ್ ಲೆಂಡಿಂಗ್ ಸೇರಿದಂತೆ ರಿಟೇಲ್ ಸಾಲಗಳ ಮೇಲೆ ಕೇಂದ್ರೀಕೃತವಾದ ಡಿಜಿಟಲ್ ಸಾಲ ನೀಡುವ ಎನ್ ಬಿಎಫ್ ಸಿ ಆಗಿದೆ. 

ಹಣಕಾಸು ಸೇವೆಗಳಲ್ಲಿ ತಂತ್ರಜ್ಞಾನ ಬಳಸುವ ಬಗ್ಗೆ ಭೂತದ ಹೆಚ್ಚಿನ ಒಲವು ಹೊಂದಿದ್ದರು. ಪೂನಾವಾಲಾ ಸಮೂಹದ ಫಿನ್ ಟೆಕ್ ಉದ್ಯಮ ಸ್ಥಾಪನೆಯಲ್ಲಿ ಇವರು ಬಹುಮುಖ್ಯ ಪಾತ್ರ ವಹಿಸಿದ್ದರು. 2021ರ ಸೆಪ್ಟೆಂಬರ್ ನಲ್ಲಿ ಆಂತರಿಕ ವ್ಯಾಪಾರ ನಿಯಮಗಳ ಉಲ್ಲಂಘನೆಗಾಗಿ ಸೆಬಿ ಅಭಯ ಭೂತದ  ವಿರುದ್ಧ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಅವರು ಆ ಸ್ಥಾನದಿಂದ ಕೆಳಗಿಳಿದಿದ್ದರು. ಆದರೆ, ನಂತರದಲ್ಲಿ ಪೂನಾವಾಲಾ ಫಿನ್‌ಕಾರ್ಪ್‌ನ ಮಂಡಳಿಯು ಅವರನ್ನು ಎಂಡಿ ಹುದ್ದೆಗೆ ಮರುನೇಮಕ ಮಾಇತ್ತು. ಅಲ್ಲದೆ, ಅವರ ವಿರುದ್ಧದ ಆರೋಪಗಳಿಗೆ ಯಾವುದೇ ಸಾಕ್ಷಿಗಳಿಲ್ಲ ಎಂದು ತಿಳಿಸಿತ್ತು. 

ತಾಯಿಯಿಂದ ಪಡೆದ 2000 ರೂ. ನಿಂದ ವ್ಯಾಪಾರ ಪ್ರಾರಂಭ: ಹೇರ್‌ ಆಯಿಲ್‌ ಮಾರಾಟ ಮಾಡಿ 1651 ಕೋಟಿ ಗಳಿಸಿದ ಯಶಸ್ವಿ ಉದ್ಯಮಿ!

ಪ್ರಸ್ತುತ ಅಭಯ ಭೂತದ ಅವರ ನೇತೃತ್ವದಲ್ಲಿ ಪೂನಾವಾಲಾ ಫಿನ್‌ಕಾರ್ಪ್‌ ಕಂಪನಿ ಹೊಸ ಉದ್ಯಮ ಸಾಧ್ಯತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಹಾಗೆಯೇ ಉದ್ಯಮ ಗುರಿಗಳನ್ನು ನಿಗದಿಪಡಿಸುವ ಕಾರ್ಯವನ್ನು ಕೂಡ ಮಾಡುತ್ತಿದೆ. ಡಿಜಿಟಲೈಸೇಷನ್, ಅಪಾಯ ನಿರ್ವಹಣೆ ಹಾಗೂ ಕಾರ್ಪೋರೇಟ್ ಗವರ್ನೆನ್ಸಿಗೆ ಅಭಯ ಅವರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. 

Latest Videos
Follow Us:
Download App:
  • android
  • ios