Asianet Suvarna News Asianet Suvarna News

ಐಐಟಿ, ಐಐಎಂನಲ್ಲಿ ಓದಿಲ್ಲ, ಆದ್ರೂ ಈಕೆ ಸ್ಥಾಪಿಸಿರುವ ಎಜುಟೆಕ್ ಸ್ಟಾರ್ಟ್ ಅಪ್ ಮೌಲ್ಯ 300 ಕೋಟಿ ರೂ.!

ಉದ್ಯಮದಲ್ಲಿ ಯಶಸ್ಸು ಸಾಧಿಸಲು ಐಐಟಿ, ಐಐಎಂನಲ್ಲೇ ಓದಿರಬೇಕೆಂದೇನೂ ಇಲ್ಲ. ವಿಶಿಷ್ಟ ಆಲೋಚನೆ, ಬದ್ಧತೆಯಿದ್ದರೆ ಸಾಕು, ಯಶಸ್ಸು ಸಿಕ್ಕೇಸಿಗುತ್ತದೆ ಎಂಬುದಕ್ಕೆ ಪ್ರೇರಣಾ ಜುಂಜುನ್ವಾಲಾ ಅವರೇ ಸಾಕ್ಷಿ. 

Meet educator turned entrepreneur who is running Rs 330 crore startup not from IIT IIM anu
Author
First Published Oct 19, 2023, 3:57 PM IST

Business Desk: ಭಾರತದ ಅನೇಕ ಮಹಿಳೆಯರು ಉದ್ಯಮ ರಂಗದಲ್ಲಿ ಯಶಸ್ಸು ಕಂಡಿದ್ದಾರೆ. ಕೆಲವರು ವಿದೇಶಗಳಲ್ಲಿ ಕೂಡ ತಮ್ಮದೇ ಉದ್ಯಮ ಸ್ಥಾಪಿಸಿ ಜನಪ್ರಿಯತೆ ಗಳಿಸಿದ್ದಾರೆ. ಅಂಥವರಲ್ಲಿ ಪ್ರೇರಣಾ ಜುಂಜುನ್ವಾಲಾ ಕೂಡ ಒಬ್ಬರು. ಹಾಗಂತ ಇವರು ರಾಕೇಶ್ ಜುಂಜುನ್ವಾಲಾ ಅವರ ಸಂಬಂಧಿ ಎಂದು ಭಾವಿಸಬೇಡಿ. ಅವರಿಗೂ ಇವರಿಗೂ ಯಾವುದೇ ಸಂಬಂಧವಿಲ್ಲ. ಸಿಂಗಾಪುರದಲ್ಲಿ ಈಕೆ ಸ್ಥಾಪಿಸಿರುವ ಪ್ರೀ-ಸ್ಕೂಲ್ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದೆ. ಲಿಟ್ಲ ಪಡ್ಡಿಂಗ್ ಟನ್ ಪ್ರೀಸ್ಕೂಲ್ ಎಂಬ ಶಾಲೆಯನ್ನು ಮೊದಲು ಈಕೆ ಪ್ರಾರಂಭಿಸಿದರು. ಆ ಬಳಿಕ  ಕ್ರಿಯೇಟಿವ್ ಗೆಲಿಲಿಯೋ ಎಂಬ ಎಜುಟೆಕ್ ಸಂಸ್ಥೆ ಪ್ರಾರಂಭಿಸಿದರು. ಮೂರರಿಂದ ಹತ್ತು ವರ್ಷದ ನಡುವಿನ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ಉದ್ದೇಶದಿಂದ ಪ್ರೇರಣಾ ಈ ಸಂಸ್ಥೆ ಸ್ಥಾಪಿಸಿದ್ದರು. ಮೂರರಿಂದ ಎಂಟು ವರ್ಷದ ತನಕದ ಮಕ್ಕಳಲ್ಲಿ ಓದುವ ಅಭ್ಯಾಸವನ್ನು ಹೆಚ್ಚಿಸುವ ಉದ್ದೇಶದಿಂದ ಇವರು  ಅಪ್ಲಿಕೇಷನ್ ಕೂಡ ಅಭಿವೃದ್ಧಿಪಡಿಸಿದ್ದು, ಸಾಕಷ್ಟು ಜನಪ್ರಿಯತೆ ಗಳಿಸಿದೆ.

ಪ್ರೇರಣಾ ಜುಂಜುನ್ವಾಲಾ ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಇದರ ಹೊರತಾಗಿ ಉದ್ಯಮಕ್ಕೆ ಸಂಬಂಧಿಸಿ ಅವರು ಯಾವುದೇ ಕೋರ್ಸ್ ಮಾಡಿಲ್ಲ. ಸಾಮಾನ್ಯವಾಗಿ ಬಹುತೇಕ ಯಶಸ್ವಿ ಸ್ಟಾರ್ಟ್ ಅಪ್ ಗಳ ಸ್ಥಾಪಕರು ಐಐಟಿ, ಐಐಎಂ ಅಥವಾ ಇತರ ಜನಪ್ರಿಯ ಬ್ಯುಸಿನೆಸ್ ಸ್ಕೂಲ್ ನಲ್ಲಿ ಓದಿರುತ್ತಾರೆ. ಆದರೆ, ಪ್ರೇರಣಾ ಅವರು ಇಂಥ ಯಾವುದೇ ಶಿಕ್ಷಣ ಪಡೆದಿಲ್ಲ.

ತನ್ನನ್ನು ಕೆಲಸದಿಂದ ಕಿತ್ತುಹಾಕಿದ ಏರ್‌ ಏಷ್ಯಾ ಸಿಇಒಗಿಂತ ನನಗೇ ಹೆಚ್ಚು ಸಂಬಳ: ಯೂಟ್ಯೂಬರ್‌

ಪ್ರೇರಣಾ ಜುಂಜುನ್ವಾಲಾ ಟೂಂಡೆಮಿ (Toondemy) ಹಾಗೂ ಲಿಟ್ಲ ಸಿಂಗಂ (Little Singham) ಎಂಬ ಎರಡು ಅಪ್ಲಿಕೇಷನ್ ಗಳನ್ನು ಕೂಡ ಅಭಿವೃದ್ಧಿಪಡಿಸಿದ್ದಾರೆ. ಈ ಎರಡು ಶಿಕ್ಷಣ ಸಂಬಂಧಿ ಆಪ್ ಗಳು ಒಂದು ಕೋಟಿಗಿಂತಲೂ ಹೆಚ್ಚು ಬಾರಿ ಡೌನ್ ಲೋಡ್ ಆಗಿವೆ. ಭಾರತದ ಪ್ಲೇಸ್ಟೋರ್ ನಲ್ಲಿ ಟಾಪ್ 20ರಲ್ಲಿರುವ ಆಪ್ ಗಳಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಆಪ್ ಇದೊಂದೇ ಆಗಿದೆ ಎಂಬುದು ಈ ಆಪ್ ಜನಪ್ರಿಯತೆಗೆ ಸಾಕ್ಷಿ.
ಇನ್ನು ಪ್ರೇರಣಾ ಅವರ ಲಿಂಕ್ಡ್ ಇನ್ ಪ್ರೊಫೈಲ್ ಮಾಹಿತಿ ಅನ್ವಯ ಈ ಸಾಫ್ಟ್ ವೇರ್ ಯುವಜನಾಂಗಕ್ಕೆ ಕಲಿಕೆಗೆ ಸಂಬಂಧಿಸಿ ಮಾರ್ಗದರ್ಶನ, ವಿವರಣೆಯುಳ್ಳ ವಿಡಿಯೋಗಳನ್ನು ಒಳಗೊಂಡಿದೆ. 

ಪ್ರೇರಣಾ ಯಾವುದೇ ವೃತ್ತಿಪರ ಉದ್ಯಮ ತರಬೇತಿಯಿಲ್ಲದೆ ಈ ಉದ್ಯಮಗಳನ್ನು ಪ್ರಾರಂಭಿಸಿದ್ದರು. ಈ ಉದ್ಯಮ ಕಳೆದ ವರ್ಷ ಸುಮಾರು 60 ಕೋಟಿ ರೂ. ಹೂಡಿಕೆ ಪಡೆದಿತ್ತು. ಇನ್ನು ಪ್ರೇರಣಾ ಅವರ ಸ್ಟಾರ್ಟ್ ಅಪ್ ಮೌಲ್ಯ ಕಳೆದ ವರ್ಷ 330 ಕೋಟಿ ರೂ. ಆಗಿತ್ತು. 

ಶಿಕ್ಷಣದ ಪ್ರಾರಂಭಿಕ ಹಂತದಲ್ಲೇ ಮಕ್ಕಳಿಗೆ ಆಧುನಿಕ ಹಾಗೂ ಜಾಗತಿಕ ಮಟ್ಟದ ಶಿಕ್ಷಣ ನೀಡುವ ಉದ್ದೇಶದಿದ ಸಿಂಗಾಪುರಕ್ಕೆ ತೆರಳಿದ್ದರು.  ಮಕ್ಕಳ ಭವಿಷ್ಯ ಅವರು ವಿವಿಧ ವಿಷಯಗಳಲ್ಲಿ ಗಳಿಸುವ ಅಂಕಗಳ ಮೇಲೆ ಮಾತ್ರ ನಿಂತಿಲ್ಲ, ಬದಲಿಗೆ ಅವರ ಸಾಮಾಜಿಕ, ಬೌದ್ಧಿಕ ಹಾಗೂ ನಾಯಕತ್ವ ಕೌಶಲ್ಯಗಳನ್ನು ಕೂಡ ಅವಲಂಬಿಸಿದೆ. 

ಅಪ್ಪನ ಉದ್ಯಮಕ್ಕೆ ಹೊಸ ಆಯಾಮ ನೀಡಿದ ಮಗಳು; 2475 ಕೋಟಿ ಮೌಲ್ಯದ ಕಂಪನಿಗೆ ಅಕ್ಷಾಲಿ ಸಾರಥ್ಯ

ಪ್ರೇರಣಾ ಅವರು ಎಕಾನಾಮಿಕ್ ಟೈಮ್ಸ್ ಕೊಡಮಾಡುವ 'ವಿಮೆನ್ ಇನ್ ಟೆಕ್' ಬ್ಯುಸಿನೆಸ್ ಲೀಡರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಹಾಗೆಯೇ 'ಕ್ರಿಯೇಟಿವ್ ಎಂಟರ್ ಪ್ರೈನರ್ ಆಫ್ ದಿ ಇಯರ್' ಪ್ರಶಸ್ತಿಗೆ ಕೂಡ ಭಾಜನರಾಗಿದ್ದಾರೆ. ಇನ್ನು ಲಿಟ್ಲ ಪಡ್ಡಿಂಗ್ ಟನ್ ಸಿಂಗಾಪುರದಲ್ಲಿ 'ಬೆಸ್ಟ್ ಪ್ರೀ-ಸ್ಕೂಲ್' ಪ್ರಶಸ್ತಿಗೆ ಕೂಡ ಭಾಜನವಾಗಿದೆ. ಗೆಲಿಲಿಯೋ ಮಕ್ಕಳಿಗೆ ಜನಪ್ರಿಯ ಕಥೆಗಳು, ನೀತಿಕಥೆಗಳು, ಸಾಮಾನ್ಯ ಜ್ಞಾನ ಸೇರಿದಂತೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಾದ ಎಲ್ಲ ಅಂಶಗಳನ್ನು ಒಳಗೊಂಡಿದೆ. ಈ ಅಪ್ಲಿಕೇಷನ್ ಅನ್ನು 20 ಸ್ಥಳೀಯ ಭಾಷೆಗಳಲ್ಲಿ ಕೂಡ ಅಭಿವೃದ್ಧಿಪಡಿಸುವ ಯೋಚನೆಯನ್ನು ಪ್ರೇರಣಾ ಹೊಂದಿದ್ದಾರೆ. 

Follow Us:
Download App:
  • android
  • ios