ಪರಿಶ್ರಮ, ಸಾಧಿಸಬೇಕೆಂಬ ಛಲವಿದ್ರೆ ಭಿಕ್ಷುಕ ಕೂಡ ಲಕ್ಷಾಧಿಪತಿಯಾಗಬಲ್ಲ. ಕೆಲಸದ ಜೊತೆ ಅದೃಷ್ಟ ಕೈ ಹಿಡಿದ್ರೆ ಆತ ಎಲ್ಲಿಂದ ಎಲ್ಲಿಗೋ ಹೋಗಬಲ್ಲ. ಇದಕ್ಕೆ ಮಹಾರಾಷ್ಟ್ರದ ದಾದಾಸಾಹೇಬ್ ಭಗತ್ ಉತ್ತಮ ನಿದರ್ಶನ. 

ಜೀವನದಲ್ಲಿ ಸಕ್ಸಸ್ ಸಿಗ್ಬೇಕೆಂದು ಎಲ್ಲರೂ ಬಯಸುತ್ತಾರೆ. ಅನೇಕ ಮಂದಿ ಅದಕ್ಕೆಂದೇ ಬೆವರು ಸುರಿಸಿ ದುಡಿಯುತ್ತಾರೆ. ಕಷ್ಟಪಟ್ಟು ದುಡಿದು ಜೀವನದಲ್ಲಿ ಯಶಸ್ಸನ್ನು ಕಂಡವರು ನಮ್ಮ ಸುತ್ತ ಬಹಳಷ್ಟು ಮಂದಿ ಇದ್ದಾರೆ. ಜೀವನದಲ್ಲಿ ಯಶಸ್ಸು ಸಿಕ್ಕಾಗ ಬದುಕು ಸಾರ್ಥಕ ಎನಿಸುತ್ತದೆ. ಹಾಗೇ ನಮ್ಮ ಬದುಕು ಹಲವರಿಗೆ ದಾರಿ ದೀಪವಾಗುತ್ತದೆ.

ಅದೃಷ್ಟ (Good Luck) ಯಾವಾಗ ಯಾರ ಕೈ ಹಿಡಿಯತ್ತೋ ಗೊತ್ತಾಗೊಲ್ಲ. ನಮ್ಮ ಪರಿಶ್ರಮದ ಜೊತೆ ಅದೃಷ್ಟವೂ ನಮ್ಮ ಕೈ ಹಿಡಿದಾಗ ಯಶಸ್ಸು (Success) ಕಟ್ಟಿಟ್ಟ ಬುತ್ತಿ. ನಮ್ಮ ದೇಶದ ಈಗಿನ ಕೆಲವು ಕೋಟ್ಯಾಧಿಪತಿಗಳೇ ಇದಕ್ಕೆ ಪ್ರತ್ಯಕ್ಷ ನಿದರ್ಶನ. ಇವರಂತೆಯೇ ಯಶಸ್ಸನ್ನು ಪಡೆದ ಇನ್ನೊಬ್ಬ ವ್ಯಕ್ತಿಯನ್ನು ಇಂದು ನಾವು ಪರಿಚಯಿಸಲಿದ್ದೇವೆ. ಅವರೇ ಮಹಾರಾಷ್ಟ್ರ (Maharashtra) ದ ದಾದಾಸಾಹೇಬ್ ಭಗತ್.

ಐಟಿಆರ್ ಸಲ್ಲಿಕೆ ಮಾಡೋರಿಗೆ ಈ ನಿಯಮ ತಿಳಿದಿರಲಿ;ಬ್ಯಾಂಕ್ ನಗದು ವಿತ್ ಡ್ರಾಗೂ ಶೇ.2ರಷ್ಟುTDS ಕಡಿತ

ಅಂದು ಆಫೀಸ್ ಬಾಯ್ ಇಂದು ಸಿಇಓ: 29 ವರ್ಷದ ದಾದಾಸಾಹೇಬ್ ಭಗತ್ ಒಬ್ಬ ಒಳ್ಳೆಯ ತಂದೆಯ ಜೊತೆಗೆ ಸಕ್ಸಸ್ಫುಲ್ ಉದ್ಯಮಿ ಕೂಡ ಹೌದು. ಮಹಾರಾಷ್ಟ್ರದ ಒಂದು ಚಿಕ್ಕ ಹಳ್ಳಿಯವರಾದ ಇವರು ಬೆಳೆದು ಬಂದ ರೀತಿ ಅನೇಕರಿಗೆ ಸ್ಪೂರ್ತಿದಾಯಕವಾಗಿದೆ. 10 ವರ್ಷದ ಹಿಂದೆ ಐಟಿ ದಿಗ್ಗಜ ಇನ್ಪೋಸಿಸ್ ಕಂಪನಿಯಲ್ಲಿ ಒಬ್ಬ ಆಫೀಸ್ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಭರತ್ ಅವರು ಇಂದು ಯಶಸ್ವಿ ಸಿಇಓ ಎನಿಸಿಕೊಂಡಿದ್ದಾರೆ. ಇನ್ಫೋಸಿಸ್ ನಲ್ಲಿ ಕೆಲಸ ಮಾಡುತ್ತಿದ್ದ ಭರತ್ ಅವರಿಗೆ ತಾನು ಏನನ್ನಾದರೂ ಕಲಿಯಬೇಕು, ಏನನ್ನಾದರೂ ಸಾಧಿಸಬೇಕು ಎನ್ನುವ ಛಲಹುಟ್ಟಿತು. ಅವರ ಈ ಛಲವೇ ಇಂದು ಅವರನ್ನು ಒಂದು ಕಂಪನಿಯ ಸಿಇಓ ಆಗಿ ತಲೆಎತ್ತುವಂತೆ ಮಾಡಿದೆ.

ಸಾಧನೆಯ ಹಾದಿ ಆರಂಭವಾಗಿದ್ದು ಇನ್ಫೋಸಿಸ್ ನಿಂದ : ದಾದಾಸಾಹೇಬ್ ಭಗತ್ ಅವರು ಪ್ರಾಥಮಿಕ ಶಿಕ್ಷಣದ ನಂತರ ಐಟಿಐ ಡಿಪ್ಲೋಮಾ ಮಾಡಿದರು. ಡಿಪ್ಲೋಮಾ ವಿದ್ಯಾರ್ಥಿಯಾದ ಅವರು ಯಾವುದಾದರೂ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ಬದಲು ಇನ್ಫೋಸಿಸ್ ಗೆಸ್ಟ್ ಹೌಸ್ ನಲ್ಲಿ ರೂಮ್ ಸರ್ವೀಸ್ ಬಾಯ್ ಆಗಿ ಕೆಲಸ ಮಾಡಿದರು. 

ಭರತ್ ಅವರಿಗೆ ಕಾರ್ಪೊರೇಟ್ ಉದ್ಯೋಗದ ಮೇಲೆ ಹೆಚ್ಚು ಒಲವು ಇತ್ತಾದರೂ ಅದನ್ನು ಗಳಿಸಲು ಅವರು ಮತ್ತೆ ಹೆಚ್ಚಿನ ಶಿಕ್ಷಣ ಪಡೆಯಬೇಕಿತ್ತು. ಹಾಗಾಗಿ ಅವರು ಎನಿಮೇಶನ್ ಅಥವಾ ಡಿಸೈನ್ ಕೋರ್ಸ್ ಗಳನ್ನು ಹುಡುಕಲು ಆರಂಭಿಸಿದ್ರು. ಹಗಲಿನಲ್ಲಿ ನೌಕರಿ ಮಾಡುತ್ತ ರಾತ್ರಿಯ ಸಮಯದಲ್ಲಿ ಎನಿಮೇಶನ್ ಕೋರ್ಸ್ ಮಾಡಿದರು. ಎನಿಮೇಶನ್ ನೌಕರಿಯನ್ನು ಮಾಡಿದ ಭಗತ್ ಅವರು ನಂತರ ಮುಂಬೈಯತ್ತ ತಮ್ಮ ಪ್ರಯಾಣ ಬೆಳೆಸಿದ್ರು. ಅಲ್ಲಿ ಕೂಡ ಅವರು ನೌಕರಿ ಮಾಡುತ್ತಲೇ c++ ಮತ್ತು Python ಕಲಿತರು.

ಐಷಾರಾಮಿ ಜೀವನ ಅಂದ್ರೆ ಇದಪ್ಪಾ! 60 ಸಾವಿರ ರೂ. ಮೌಲ್ಯದ ಟವಲ್ ಖರೀದಿಸಿದ ಯೂಟ್ಯೂಬರ್

ಭಗತ್ ಅವರು ಉದ್ಯೋಗ ಆರಂಭಿಸಿದ್ದು ಹೇಗೆ?: ಎನಿಮೇಶನ್ ಮತ್ತು ಡಿಸೈನಿಂಗ್ ನಲ್ಲಿ ಹೆಚ್ಚು ಒಲವು ಹೊಂದಿದ್ದ ದಾದಾಸಾಹೇಬ್ ಭಗತ್ ಅವರು ಗ್ರಾಫಿಕ್ಸ್ ಕಂಪನಿಯನ್ನೇ ಕೆಲಸ ನಿರ್ವಹಿಸಿದರು. ಆಗ ಅವರಿಗೆ ಹೆಚ್ಚು ಮರುಬಳಕೆ ಮಾಡಬಹುದಾದ ಟೆಂಪ್ಲೆಟ್ ಗಳ ಲೈಬ್ರರಿಯ ಕೆಲಸ ಮಾಡಿದರೆ ಒಳ್ಳೆಯದು ಎನ್ನುವ ವಿಚಾರ ಬಂತು. ಅಲ್ಲಿಂದ ಅವರು ಡಿಸೈನ್ ಟೆಂಪ್ಲೆಟ್ ಗಳನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡಲು ಆರಂಭಿಸಿದರು. ಅಲ್ಲಿಂದಲೇ ಅವರ ಆನ್ ಲೈನ್ ಬ್ಯುಸಿನೆಸ್ ಶುರುವಾಗಿತ್ತು. ಬ್ಯುಸಿನೆಸ್ ಆರಂಭಿಸಿದ ಸಮಯದಲ್ಲೇ ಭಗತ್ ಅವರು ರಸ್ತೆ ಅಪಘಾತಕ್ಕೆ ಒಳಗಾದರು. ಆದರೂ ಛಲಬಿಡದೇ ಅವರು ಹಾಸಿಗೆಯ ಮೇಲೆ ಕುಳಿತೇ ಡಿಸೈನ್ ಲೈಬ್ರರಿಯನ್ನು ವಿಸ್ತರಿಸಿದರು. ಅವರ ಸತತ ಪರಿಶ್ರಮದಿಂದ 2015ರ ವೇಳೆಗೆ ಅವರ Ninthmotion ಕಂಪನಿ ತಲೆ ಎತ್ತಿ ನಿಂತಿತ್ತು. ಈಗ ಕಂಪನಿ ಬಿಬಿಸಿ ಸ್ಟುಡಿಯೋ, 9xm ನಂತಹ ಮ್ಯುಸಿಕ್ ಚ್ಯಾನೆಲ್ ಸೇರಿದಂತೆ ಸುಮಾರು 6000 ಗ್ರಾಹಕರಿಗೆ ತನ್ನ ಸೇವೆ ಸಲ್ಲಿಸುತ್ತಿದೆ. 

ಡೂಗ್ರಾಫಿಕ್ಸ್ ಜನನ : ತಿಂಗಳ ಸಂಶೋಧನೆ ಮತ್ತು ಅಭಿವೃದ್ಧಿಯ ನಂತರ, ಭಗತ್ ಆನ್‌ಲೈನ್ ಗ್ರಾಫಿಕ್ ಡಿಸೈನಿಂಗ್‌ಗಾಗಿ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದರು - ಕ್ಯಾನ್ವಾ. ಇದು ಭಗತ್ ಅವರ ಎರಡನೇ ಕಂಪನಿ ಡೂಗ್ರಾಫಿಕ್ಸ್ ಹುಟ್ಟಿಗೆ ಕಾರಣವಾಯಿತು.