ದೇಶದ ಪ್ರತಿಷ್ಟಿತ ಐಟಿ ಸಂಸ್ಥೆ ಉನ್ನತ ಹುದ್ದೆಗೆ ಮತ್ತೊಬ್ಬ ಮಹಿಳೆ; ಅಪರ್ಣಾ ಐಯ್ಯರ್ ವಿಪ್ರೋ ನೂತನ ಸಿಎಫ್ ಒ
ಇಂದು ದೇಶದ ಅನೇಕ ಪ್ರತಿಷ್ಟಿತ ಸಂಸ್ಥೆಗಳ ಆಯಕಟ್ಟಿನ ಹುದ್ದೆಗಳಲ್ಲಿ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಅಂಥದ್ದೇ ಜವಾಬ್ದಾರಿಯುತ ಹುದ್ದೆಗೆ ಇನ್ನೊಬ್ಬ ಮಹಿಳೆ ನೇಮಕಗೊಂಡಿದ್ದಾರೆ. ವಿಪ್ರೋ ನೂತನ ಸಿಎಫ್ಒ ಆಗಿ ಅಪರ್ಣಾ ಐಯ್ಯರ್ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಅವರ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
Business Desk:ದೇಶದ ಪ್ರತಿಷ್ಟಿತ ಐಟಿ ಕಂಪನಿಗಳಲ್ಲೊಂದಾದ ವಿಪ್ರೋ ನೂತನ ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್ ಒ) ಅಪರ್ಣಾ ಐಯ್ಯರ್ ಗುರುವಾರ ನೇಮಕಗೊಂಡಿದ್ದಾರೆ. ಈ ಹಿಂದಿನ ಸಿಇಒ ಜತಿನ್ ಪ್ರವೀಣ್ ಚಂದ್ರ ದಲಾಲ್ ಇತ್ತೀಚೆಗಷ್ಟೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. 2015ರಲ್ಲಿ ಸಿಎಫ್ ಒ ಆಗಿ ನೇಮಕಗೊಂಡಿದ್ದ ಜತಿನ್, ವಿಪ್ರೋ ಸಂಸ್ಥೆಯಲ್ಲಿ ಸುಮಾರು 21 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಅಪರ್ಣಾ ವಿಪ್ರೋ ಎಕ್ಸಿಕ್ಯುಟಿವ್ ಬೋರ್ಡ್ ಗೆ ಸೇರಲಿದ್ದು, ಸಿಇಒ ಥೆರೆ ಡೆಲಪೋರ್ಟೆ ಅವರಿಗೆ ವರದಿ ಮಾಡಿಕೊಳ್ಳಲಿದ್ದಾರೆ. ಅಪರ್ಣಾ 2013ರಲ್ಲಿ ವಿಪ್ರೋ ಸಂಸ್ಥೆಗೆ ಮರುಸೇರ್ಪಡೆಗೊಂಡಿದ್ದರು. 2002ನೇ ಸಾಲಿನ ಚಾರ್ಟೆಡ್ ಅಕೌಂಟೆಂಟ್ (ಸಿಎ) ಬ್ಯಾಚ್ ಐಯ್ಯರ್, ಚಿನ್ನದ ಪದಕ ವಿಜೇತೆ ಕೂಡ ಹೌದು. 2003ರಲ್ಲಿ ವಿಪ್ರೋ ಸಂಸ್ಥೆಯಲ್ಲಿ ಹಿರಿಯ ಇಂಟರ್ ನಲ್ ಅಡಿಟರ್ ಆಗಿ ಕಾರ್ಯಾರಂಭ ಮಾಡಿದ್ದರು. ಅಪರ್ಣಾ ಅವರಲ್ಲಿನ ನಾಯಕತ್ವ ಗುಣ ಈ 20 ವರ್ಷಗಳಲ್ಲಿ ವಿಪ್ರೋ ಸಂಸ್ಥೆಯಲ್ಲಿ ಅವರು ಉನ್ನತ ಹುದ್ದೆ ಅಲಂಕರಿಸಲು ಕಾರಣವಾಗಿದೆ ಎಂದು ಹೇಳಲಾಗಿದೆ.
ಮುಂಬೈ ನರ್ಸೆ ಮೊಂಜೆ ಕಾಲೇಜಿನಿಂದ 2001ರಲ್ಲಿ ಕಾಮರ್ಸ್ ನಲ್ಲಿ ಪದವಿ ಪೂರ್ಣಗೊಳಿಸಿದ ಅಪರ್ಣಾ ಅದೇ ಸಮಯದಲ್ಲಿ ಚಾರ್ಟೆಡ್ ಅಕೌಂಟೆನ್ಸಿ ಪರೀಕ್ಷೆಗೆ ಕೂಡ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. 2002ನೇ ಸಾಲಿನಲ್ಲಿ ಸಿಎ ತೇರ್ಗಡೆಗೊಮಡ ಅಪರ್ಣಾ ತಮ್ಮ ಅತ್ಯುತ್ತಮ ನಿರ್ವಹಣೆಗಾಗಿ ಚಿನ್ನದ ಪದಕ ಕೂಡ ಗಳಿಸಿದ್ದರು. ತಮ್ಮ ಪ್ರಾರಂಭಿಕ ವೃತ್ತಿ ಜೀವನವನ್ನು ವಿಪ್ರೋ ಮೂಲಕವೇ ಪ್ರಾರಂಭಿಸಿದ ಅಪರ್ಣಾ, 2013ರಲ್ಲಿ ಮರಳಿ ವಿಪ್ರೋಗೆ ಸೇರ್ಪಡೆಗೊಂಡಿದ್ದರು.
ಬೆಂಗಳೂರು ಐಐಎಂ ಹಳೇ ವಿದ್ಯಾರ್ಥಿನಿ ಈಗ 54 ಸಾವಿರ ಕೋಟಿ ಬೆಲೆಬಾಳೋ ಕಂಪನಿ ಎಂಡಿ;ಈಕೆ ವೇತನ ಎಷ್ಟು ಕೋಟಿ ಗೊತ್ತಾ?
ಅಪರ್ಣಾ ಐಯ್ಯರ್ ಅನೇಕ ಹಣಕಾಸು ಹುದ್ದೆಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇತ್ತೀಚೆಗೆ ಅವರು ವಿಪ್ರೋ ಫುಲ್ ಸ್ಟ್ರೀಡ್ ಕ್ಲೌಡ್ ಹಿರಿಯ ಉಪಾಧ್ಯಕ್ಷೆ ಹಾಗೂ ಸಿಎಫ್ ಒ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇಂಟರ್ನಲ್ ಅಡಿಟ್, ಬ್ಯುಸಿನೆಸ್ ಫೈನಾನ್ಸ್, ಫೈನಾನ್ಸ್ ಪ್ಲಾನಿಂಗ್ ಹಾಗೂ ಅನಾಲೀಸಿಸ್, ಕಾರ್ಪೋರೇಟ್ ಟ್ರೆಷರ್ ಹಾಗೂ ಇನ್ವೆಸ್ಟರ್ ರಿಲೇಷನ್ಸ್ ಸೇರಿದಂತೆ ಅನೇಕ ಹುದ್ದೆಗಳನ್ನು ಅಪರ್ಣಾ ನಿರ್ವಹಿಸಿದ್ದರು.
ವಿಪ್ರೋ (Wipro) ಸಿಇಒ ಥಿಯೆರಿ ಡೆಲಾಪೋರ್ಟ್ (Thierry Delaporte) ಕೂಡ ಅಪರ್ಣಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 'ಅಪರ್ಣಾ ಅತ್ಯುತ್ತಮ ನಾಯಕತ್ವ ಗುಣಗಳನ್ನು ಹೊಂದಿದ್ದು, ಸಂಸ್ಥೆಗೆ ಪ್ರಯೋಜನವಾಗುವಂತೆ ಉತ್ತಮ ಫಲಿತಾಂಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ' ಎಂದು ಡೆಲಾಪೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, 21 ವರ್ಷಗಳ ಅನುಭವದಲ್ಲಿ ಅಪರ್ಣಾ ತನ್ನ ಮುಂದಾಲೋಚನೆ ಹಾಗೂ ಧೈರ್ಯದ ನಿರ್ಧಾರಗಳಿಂದ ಸಂಸ್ಥೆಯ ಏಳ್ಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಡೆಲಾಪೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಪರ್ಣಾ ಸೆ.22ರಿಂದಲೇ ವಿಪ್ರೋ ಸಿಎಫ್ ಒ ಹುದ್ದೆ ಅಲಂಕರಿಸಲಿದ್ದು, ಸಿಇಒ ಥಿಯೆರಿ ಡೆಲಾಪೋರ್ಟ್ ಅವರಿಗೆ ನೇರವಾಗಿ ವರದಿ ಮಾಡಿಕೊಳ್ಳಲಿದ್ದಾರೆ. ಹಾಗೆಯೇ ವಿಪ್ರೋ ಎಕ್ಸಿಕ್ಯುಟಿವ್ ಬೋರ್ಡ್ ಗೆ ಕೂಡ ಸೇರ್ಪಡೆಗೊಳ್ಳಲಿದ್ದಾರೆ.
ಈಕೆ ಐಎಎಸ್ ಅಧಿಕಾರಿಯ ಪುತ್ರಿ, ಮೈಕ್ರೋಸಾಫ್ಟ್ ಇಂಜಿನಿಯರ್ ವಿವಾಹವಾಗಿರುವ ಇವರು ಇಂದು 6200 ಕೋಟಿ ರೂ. ಒಡತಿ!
ಥಿಯೆರಿ ಡೆಲಾಫೋರ್ಟ್ ವಿಪ್ರೋದ ಸಿಇಒ (CEO) ಹಾಗೂ ಎಂಡಿಯಾಗಿ (MD) 2020ರ ಜುಲೈ 6ರಂದು ಅಧಿಕಾರ ಸ್ವೀಕರಿಸಿದ್ದರು. ಐಟಿ ಸೇವಾ ಕ್ಷೇತ್ರದಲ್ಲಿ 27 ವರ್ಷಗಳ ಅನುಭವ ಹೊಂದಿದ್ದಾರೆ. ವಿಪ್ರೋಗೆ ಸೇರ್ಪಡೆಗೊಳ್ಳುವ ಮುನ್ನ ಕ್ಯಾಪ್ಜೆಮಿನಿಯಲ್ಲಿ 1995ರಿಂದಲೂ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. 2017 ರ ಸೆಪ್ಟೆಂಬರ್ ನಿಂದ 2020ರ ಮೇ ತನಕ ಚೀಫ್ ಆಪರೇಟಿಂಗ್ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ, ಕ್ಯಾಪ್ಜೆಮಿನಿ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. 022ರ ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ಸಾಲಿನಲ್ಲಿ ಡೆಲಾಪೋರ್ಟ್ (Delaporte) ಅವರಿಗೆ ವಾರ್ಷಿಕ 79.8 ಕೋಟಿ ರೂ.(10.51 ಮಿಲಿಯನ್ ಡಾಲರ್) ವೇತನ ಪ್ಯಾಕೇಜ್ ನೀಡಲಾಗಿದೆ ಈ ಮೂಲಕ ಅತೀಹೆಚ್ಚು ವೇತನ ಪಡೆಯೋ ಭಾರತದ ಸಿಇಒ ಎಂದು ಡೆಲಾಫೋರ್ಟ್ ಗುರುತಿಸಿಕೊಂಡಿದ್ದಾರೆ.