Insurance Renewal:ನಿಮ್ಮಬ್ಯಾಂಕ್ ಖಾತೆಯಲ್ಲಿ 342ರೂ. ಕನಿಷ್ಠ ಬ್ಯಾಲೆನ್ಸ್ ಇದೆಯಾ? ಇಲ್ಲವಾದ್ರೆ ಕೈ ತಪ್ಪುತ್ತದೆ 4ಲಕ್ಷ ರೂ.
*ಪಿಎಂಜೆಜೆಬಿವೈ ಹಾಗೂ ಪಿಎಂಎಸ್ ಬಿವೈ ನವೀಕರಣಕ್ಕೆ ಮೇ 31 ಅಂತಿಮ ಗಡುವು
*ಎರಡೂ ಯೋಜನೆಗಳ ಪ್ರೀಮಿಯಂ ಆಟೋ ಡೆಬಿಟ್
*ಖಾತೆಯಲ್ಲಿ 342 ರೂ. ಇದ್ರೆ ಮಾತ್ರ ಪ್ರೀಮಿಯಂ ಪಾವತಿ
*ಪ್ರೀಮಿಯಂ ಪಾವತಿಯಾದ್ರೆ ಮಾತ್ರ ಯೋಜನೆಗಳ ನವೀಕರಣ ಸಾಧ್ಯ
Business Desk:ನಿಮ್ಮ ಬ್ಯಾಂಕ್ ಖಾತೆಯ (Bank account) ಬ್ಯಾಲೆನ್ಸ್ (Balance) ಚೆಕ್ ಮಾಡಿದ್ದೀರಾ? ನಿಮ್ಮ ಖಾತೆಯಲ್ಲಿ ಬ್ಯಾಲೆನ್ಸ್ ಕಡಿಮೆಯಿದ್ದರೆ ಅಥವಾ ಬ್ಯಾಲೆನ್ಸ್ ಶೂನ್ಯವಾಗಿದ್ರೆ ಈ ತಿಂಗಳ ಅಂತ್ಯದೊಳಗೆ ಕನಿಷ್ಠ 342 ರೂ. ಜಮೆ ಮಾಡಿ. ಏಕೆ ಅಂತೀರಾ? ನಿಮ್ಮ ಖಾತೆಯಲ್ಲಿ 342 ರೂ.ಗಿಂತ ಕಡಿಮೆ ಮೊತ್ತವಿದ್ರೆ 4 ಲಕ್ಷ ರೂ. ನಷ್ಟ ಅನುಭವಿಸುವ ಸಾಧ್ಯತೆಯಿದೆ. ಹೌದು, ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಹಾಗೂ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ನವೀಕರಣಕ್ಕೆ ನಿಮ್ಮ ಖಾತೆಯಲ್ಲಿ ಕನಿಷ್ಠ 342 ರೂ. ಇರೋದು ಅವಶ್ಯ.
ನವೀಕರಣಕ್ಕೆ ಮೇ 31 ಗಡುವು
ಈ ಎರಡೂ ಯೋಜನೆಗಳ ಪ್ರೀಮಿಯಂ (Premium) ಪಾವತಿ (Payment) ಮೇ 31ರೊಳಗೆ ಆಗುತ್ತದೆ. ಹೀಗಾಗಿ ಖಾತೆಯಲ್ಲಿ ಕನಿಷ್ಠ 342 ರೂ. ಇರಲೇಬೇಕು. ಈ ಯೋಜನೆಗಳ ಪ್ರೀಮಿಯಂ ಆಟೋ ಡೆಬಿಟ್ (Auto debit) ಆಗುವ ಕಾರಣ ಒಂದು ವೇಳೆ ನಿಮ್ಮ ಖಾತೆಯಲ್ಲಿ ಈ ಎರಡೂ ಯೋಜನೆಗಳ ಪ್ರೀಮಿಯಂ ಪಾವತಿಗೆ ಒಟ್ಟು 342 ರೂ. ಬ್ಯಾಲೆನ್ಸ್ ಇರದಿದ್ರೆ ಪ್ರೀಮಿಯಂ (Premium) ಪಾವತಿಯಾಗುವುದಿಲ್ಲ. ಪ್ರೀಮಿಯಂ ಪಾವತಿಯಾದ್ರೆ ಮಾತ್ರ ಈ ಯೋಜನೆಗಳು ಮುಂದಿನ ವರ್ಷಕ್ಕೆ ನವೀಕರಣಗೊಳ್ಳುತ್ತವೆ (Renewal).ಯೋಜನೆಗಳು ನವೀಕರಣಗೊಳ್ಳದಿದ್ರೆ (Renewal) ನಿಮಗೆ 4 ಲಕ್ಷ ರೂ. ಕೈತಪ್ಪುವ ಸಾಧ್ಯತೆಯಿದೆ.
Econimic Crisis ಪಾಕಿಸ್ತಾನದಲ್ಲಿ ಹದಗೆಟ್ಟ ಆರ್ಥಿಕ ಪರಿಸ್ಥಿತಿ, ಕಾರು ಆಮದು ನಿಷೇಧ!
ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ
ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY)ಕೇಂದ್ರ ಸರ್ಕಾರದ (Central government) ಸುರಕ್ಷಾ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ನೀವು ವಾರ್ಷಿಕ ಕೇವಲ 330 ರೂ. ಪ್ರೀಮಿಯಂ (Premium) ಪಾವತಿಸಿದ್ರೆ ಸಾಕು, 2 ಲಕ್ಷ ರೂ. ತನಕ ವಿಮೆ (Insurance) ಕವರೇಜ್ ಲಭಿಸುತ್ತದೆ. 18ರಿಂದ 50 ವರ್ಷದೊಳಗಿನವರು ಈ ಯೋಜನೆಯ ಫಲಾನುಭವಿಯಾಗಬಹುದು. ಈ ಯೋಜನೆಯನ್ನು ಪ್ರತಿವರ್ಷ ನವೀಕರಣಗೊಳಿಸೋದು ಕಡ್ಡಾಯ. ಜೂನ್ ನಿಂದ ಮೇ ತನಕ ಈ ಯೋಜನೆ ಸಿಂಧುತ್ವ (Validity) ಹೊಂದಿರುತ್ತದೆ. ಹೀಗಾಗಿ ಮೇ 31ರೊಳಗೆ 330 ರೂ. ಪ್ರೀಮಿಯಂ ಪಾವತಿಸಿ ಈ ಯೋಜನೆಯನ್ನು ನವೀಕರಿಸಬೇಕು.
ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ
ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಕೂಡ ಕೇಂದ್ರ ಸರ್ಕಾರದ ವಿಮಾ (Insurance) ಯೋಜನೆಯಾಗಿದೆ. ಈ ಯೋಜನೆಯ ಫಲಾನುಭವಿ ಅಪಘಾತದಲ್ಲಿ (accident) ಮೃತಪಟ್ಟರೆ ಅಥವಾ ಅಂಗವೈಕಲ್ಯಕ್ಕೆ ತುತ್ತಾದ್ರೆ ಆತನ ಕುಟುಂಬಕ್ಕೆ ಆರ್ಥಿಕ ನೆರವು ಸಿಗುತ್ತದೆ. 18ರಿಂದ 70 ವರ್ಷ ವಯಸ್ಸಿನವರು ಈ ಯೋಜನೆಗೆ ಸೇರ್ಪಡೆಗೊಳ್ಳಬಹುದು. ಆಕಸ್ಮಿಕವಾಗಿ ಮರಣ ಹೊಂದಿದ್ರೆ 2ಲಕ್ಷ ರೂ., ಭಾಗಶಃ ಅಂಗವೈಕಲ್ಯ ಹೊಂದಿದರೆ 1ಲಕ್ಷ ರೂ. ಆರ್ಥಿಕ ನೆರವನ್ನು ಆ ವ್ಯಕ್ತಿಯ ಕುಟುಂಬಕ್ಕೆ ಸರ್ಕಾರ ಈ ಯೋಜನೆಯ ಮೂಲಕ ನೀಡುತ್ತದೆ. ಈ ಯೋಜನೆಗೆ ವಾರ್ಷಿಕ 12ರೂ. ಪ್ರೀಮಿಯಂ ಅನ್ನು ಮೇ 31ರೊಳಗೆ ಪಾವತಿಸಬೇಕು.
ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ದಾಖಲೆ, ಎಫ್‌ಡಿಐ 83.57 ಬಿಲಿಯನ್ ಡಾಲರ್!
ಸ್ವಯಂ ಡೆಬಿಟ್ ಸೌಲಭ್ಯ
ನೀವು ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಹಾಗೂ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಚಂದಾದಾರರಾಗಿದ್ದರೆ, ಈ ಎರಡೂ ಯೋಜನೆಗಳಿಗೆ ಪ್ರೀಮಿಯಂ ಅನ್ನು ನೀವು ಖುದ್ದಾಗಿ ಪಾವತಿಸಬೇಕಾದ ಅಗತ್ಯವಿಲ್ಲ. ಬದಲಿಗೆ ನಿಮ್ಮ ಬ್ಯಾಂಕ್ ಖಾತೆಯಿಂದ ಪ್ರೀಮಿಯಂ ಮೊತ್ತ ಆಟೋ ಡೆಬಿಟ್ (Auto debit) ಆಗುತ್ತದೆ. ಈ ಎರಡೂ ಯೋಜನೆಗಳ ಪ್ರೀಮಿಯಂ ಮೇ 31ರೊಳಗೆ ಭರಿಸಬೇಕಾದ ಕಾರಣ ಖಾತೆಯಲ್ಲಿ ಕನಿಷ್ಠ 342 ರೂ. ಬ್ಯಾಲೆನ್ಸ್ (Balance) ಇರೋದು ಅಗತ್ಯ.