ಖಾಲಿ ಖಾಲಿ ಭಾನುವಾರ: ಮೋದಿ ವಿರುದ್ಧ ಸಿಂಗ್ ದಶಾವತಾರ!
ಮೋದಿ ಸರ್ಕಾರದ ವಿರುದ್ಧ ಮನಮೋಹನ್ ಸಿಂಗ್ ವಾಗ್ದಾಳಿ| ‘ಆರ್ಥಿಕ ಕುಸಿತಕ್ಕೆ ಮೋದಿ ಸರ್ಕಾರದ ಕೆಟ್ಟ ನಿರ್ವಹಣೆ ಕಾರಣ’|‘ರಾಜಕೀಯ ಹಗೆತನ ಬಿಟ್ಟು ಬಿಕ್ಕಟ್ಟಿನಿಂದ ಹೊರಬರಲು ಪ್ರಯತ್ನಿಸಲಿ’|ದೇಶದ ಆರ್ಥಿಕ ಸ್ಥಿತಿಗತಿ ತೀವ್ರ ಚಿಂತಾಜನಕ ಎಂದ ಮಾಜಿ ಪ್ರಧಾನಿ|
ನವದೆಹಲಿ(ಸೆ.01): ದೇಶದ ಆರ್ಥಿಕ ಕುಸಿತಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಕೆಟ್ಟ ನಿರ್ವಹಣೆಯೇ ಕಾರಣ ಎಂದು ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
ಆರ್ಥಿಕ ಕುಸಿತಕ್ಕೆ ಮೋದಿ ಸರ್ಕಾರದ ಕಳಪೆ ನಿರ್ವಹಣೆ ಕಾರಣವಾಗಿದ್ದು, ರಾಜಕೀಯ ಹಗೆತನವನ್ನು ಬದಿಗಿಟ್ಟು ಈ ಬಿಕ್ಕಟ್ಟಿನಿಂದ ಹೊರಬರುವ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ಮಾಡಬೇಕಿದೆ ಎಂದು ಡಾ. ಸಿಂ.ಗ್ ಅಭಿಪ್ರಾಯಪಟ್ಟಿದ್ದಾರೆ.
ದೇಶದ ಆರ್ಥಿಕ ಸ್ಥಿತಿಗತಿ ತೀವ್ರ ಚಿಂತಾಜನಕವಾಗಿದ್ದು, ತ್ರೈಮಾಸಿಕ ಜಿಡಿಪಿ ಬೆಳವಣಿಗೆಯ ದರ ಶೇ.5 ರಷ್ಟಕ್ಕೆ ಕುಸಿದಿರುವುದು ಅಪಾಯದ ಮುನ್ಸೂಚನೆ ಎಂದು ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.