Asianet Suvarna News Asianet Suvarna News

ವಾಟ್ಸಾಪ್‌ ಗ್ರೂಪ್‌ನಲ್ಲಿ ನಡೆಸ್ತಿದ್ದ ಬಿಸಿನೆಸ್‌ಗೆ 1600 ಕೋಟಿ ಹೂಡಿಕೆ ಮಾಡಿದ ಮುಕೇಶ್ ಅಂಬಾನಿ, ಬಂದ ಲಾಭವೆಷ್ಟು?

ಕೆಲವು ಯಶಸ್ವಿ ಭಾರತೀಯ ಸ್ಟಾರ್ಟ್‌ಅಪ್‌ಗಳು ಮುಕೇಶ್ ಅಂಬಾನಿಯನ್ನು ಪ್ರಮುಖ ಹೂಡಿಕೆದಾರರಾಗಿ ಹೊಂದಿವೆ. ಹೀಗೆ ವಾಟ್ಸಾಪ್‌ ಗ್ರೂಪ್‌ನಲ್ಲಿ ನಡೆಯುತ್ತಿದ್ದ ಕಂಪೆನಿಗೆ ಬಿಲಿಯನೇರ್ ಮುಕೇಶ್ ಅಂಬಾನಿ ಹೂಡಿಕೆ ಮಾಡಿದ್ದರು. ಅದ್ರಿಂದ ಗಳಿಸಿದ ಲಾಭವೆಷ್ಟು ಗೊತ್ತಾ?

Man turned WhatsApp group into Rs 6400 crore firm, got Rs 1600 crore from Mukesh Ambani Vin
Author
First Published Nov 29, 2023, 1:43 PM IST

ಮುಕೇಶ್ ಅಂಬಾನಿ 7,77,109 ಕೋಟಿ ರೂ.ಗಿಂತ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿರುವ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಈ ಬಿಲಿಯನೇರ್ ಉದ್ಯಮಿ ಇತ್ತೀಚಿನ ವರ್ಷಗಳಲ್ಲಿ ಹಲವಾರು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಕೆಲವು ಯಶಸ್ವಿ ಭಾರತೀಯ ಸ್ಟಾರ್ಟ್‌ಅಪ್‌ಗಳು ಮುಕೇಶ್ ಅಂಬಾನಿಯನ್ನು ಪ್ರಮುಖ ಹೂಡಿಕೆದಾರರಾಗಿ ಹೊಂದಿವೆ. ಮುಕೇಶ್ ಕಂಪೆನಿ ಅತಿ ಹೆಚ್ಚು ಹೂಡಿಕೆ ಮಾಡಿದ ಕಂಪೆನಿಗಳಲ್ಲಿ ಡಂಜೊ ಸಹ ಒಂದಾಗಿದೆ. ಇದು ಕ್ವಿಕ್ ಡೆಲಿವರಿ ಅಪ್ಲಿಕೇಶನ್ ಆಗಿದೆ.

2014ರಲ್ಲಿ ಕಬೀರ್ ಬಿಸ್ವಾಸ್ ಡಂಜೊವನ್ನು ಆರಂಭಿಸಿದರು. ಇದಕ್ಕಿಂತ ಮೊದಲು ಡಂಜೊ ಕೇವಲ ವಾಟ್ಸಾಪ್ ಗುಂಪಾಗಿತ್ತು ಆದರೆ ಗಮನಾರ್ಹ ಸುಧಾರಣೆ ಮತ್ತು ಬೆಳವಣಿಗೆಯೊಂದಿಗೆ, ಇದು ಮುಕೇಶ್ ಅಂಬಾನಿಯವರ ಗಮನವನ್ನು ಸೆಳೆಯಿತು. ಇದಕ್ಕಾಗಿ ಮುಕೇಶ್‌ ಅಂಬಾನಿ 1600 ಕೋಟಿ ರೂ.ಗಿಂತ ಹೆಚ್ಚು ಹೂಡಿಕೆ ಮಾಡಲು ಮುಂದಾದರು. 

ಷೇರು ಮಾರುಕಟ್ಟೆಯಲ್ಲೂ ಅಂಬಾನಿ ಹವಾ, ಐದೇ ದಿನದ ವಹಿವಾಟಿನಲ್ಲಿ ಹೂಡಿಕೆದಾರರಿಗೆ ಸಿಕ್ತು ಕೋಟಿ ಕೋಟಿ!

ವಾಟ್ಸಾಪ್‌ನಲ್ಲಿ ಡಂಜೊ ಆರಂಭಿಸಿದ ಕಬೀರ್ ಬಿಸ್ವಾಸ್
ಕಬೀರ್ ಬಿಸ್ವಾಸ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ಆಗಿದ್ದು, ಎಂಬಿಎ ಮಾಡಲು ನಿರ್ಧರಿಸುವ ಮೊದಲು ಸಿಲ್ವಾಸ್ಸಾದ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಕೆಲಸ ಮಾಡಿದ್ದರು. ಕೆಲವು ವ್ಯಾಪಾರ ಕೌಶಲ್ಯಗಳನ್ನು ಪಡೆದ ನಂತರ  ಏರ್‌ಟೆಲ್‌ನಲ್ಲಿ ಮಾರಾಟ ಮತ್ತು ಗ್ರಾಹಕ ಸೇವೆಯಲ್ಲಿ ತೊಡಗಿಸಿಕೊಂಡರು. ಆ ಬಳಿಕ ಬಿಸ್ವಾಸ್ Hoppr ಎಂಬ ಕಂಪೆನಿಯನ್ನು ಆರಂಭಿಸಿದರು. ಇದು ಅವರ ಉದ್ಯಮಶೀಲತೆಯ ಪ್ರಯಾಣವನ್ನು ಮುಂದುವರಿಸಲು ಅವರಿಗೆ ಪ್ರೋತ್ಸಾಹ ನೀಡಿತು. ಹಾಪರ್‌ನ ಪರಿವರ್ತನೆಯನ್ನು ಪೂರ್ಣಗೊಳಿಸಲು, ಬಿಸ್ವಾಸ್‌ ಬೆಂಗಳೂರಿಗೆ ಬಂದರು. ಇಲ್ಲಿ ಡಂಜೊವನ್ನು ಪ್ರಾರಂಭಿಸಲು ಅಂಕುರ್ ಅಗರ್ವಾಲ್, ದಲ್ವಿರ್ ಸೂರಿ ಮತ್ತು ಮುಕುಂದ್ ಝಾ ಅವರೊಂದಿಗೆ ಸೇರಿಕೊಂಡರು. 

ಡಂಜೊ, ಬ್ಲಿಂಕಿಟ್ ಮತ್ತು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ಗಿಂತ ಮುಂಚೆಯೇ ದಿನಸಿ, ಅಗತ್ಯ ಸರಬರಾಜು ಮತ್ತು ಇತರ ಸರಕುಗಳನ್ನು ತಲುಪಿಸಲು ಬಳಸಲಾಗುತ್ತಿತ್ತು. ಈಗ ಮೆಟ್ರೋ ನಗರಗಳಲ್ಲಿ ಡಂಜೊ ಸಾಕಷ್ಟು ಜನಪ್ರಿಯವಾಗಿದೆ. ಅದರೆ ಆರಂಭದಲ್ಲಿ ಗ್ರಾಹಕರು ತಮ್ಮ ಆರ್ಡರ್‌ಗಳನ್ನು ವಾಟ್ಸಾಪ್ ಗ್ರೂಪ್‌ನಲ್ಲಿ ಆರ್ಡರ್ ಮಾಡುತ್ತಿದ್ದರು. ನಿರಂತರ ಬೆಳವಣಿಗೆ ಮತ್ತು ಹೂಡಿಕೆಯೊಂದಿಗೆ, ಸರಿಯಾದ Dunzo ಅಪ್ಲಿಕೇಶನ್‌ನ್ನು ರಚಿಸಲಾಯಿತು. ಹೆಚ್ಚಿನ ನಗರಗಳಿಗೆ ಇದನ್ನು  ವಿಸ್ತರಿಸಲಾಯಿತು. ಶೀಘ್ರದಲ್ಲೇ, ಇದು ಮುಕೇಶ್ ಅಂಬಾನಿಯವರ ಗಮನ ಸೆಳೆಯಿತು. 

1.4 ಲಕ್ಷ ಕೋಟಿ ರೂ ಆಸ್ತಿ ಒಡೆಯ ಆದಿತ್ಯ ಬಿರ್ಲಾ ಗ್ರೂಪ್ ಮುಖ್ಯಸ್ಥ ಬಳಸುವ ಕಾರು ಯಾವುದು?

ಬರೋಬ್ಬರಿ 1,800 ಕೋಟಿ ರೂ. ನಷ್ಟಕ್ಕೆ ಕಾರಣವಾದ ಡಂಜೊ
ರಿಲಯನ್ಸ್ ರೀಟೈಲ್, ಡಂಜೊದ ಮೇಲೆ USD 200 ಮಿಲಿಯನ್ ಹೂಡಿಕೆ ಮಾಡಿತು. ಹೂಡಿಕೆಯು ಡಂಜೊದ ಮೌಲ್ಯವನ್ನು USD 775 ಮಿಲಿಯನ್‌ಗೆ (ರೂ. 6400 ಕೋಟಿಗಿಂತ ಹೆಚ್ಚು) ಏರಿಸಿತು. ಆದರೆ ಡಂಜೊ ಸ್ಟಾರ್ಟಪ್ ಕಳೆದ ವರ್ಷದಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ.

ಇತ್ತೀಚಿಗೆ ಬರೋಬ್ಬರಿ 1,800 ಕೋಟಿ ರೂ. ನಷ್ಟಕ್ಕೆ ಕಾರಣವಾಗಿದೆ. ಇದು ಹಿಂದಿನ ವರ್ಷಕ್ಕಿಂತಲೂ ಹೆಚ್ಚಾಗಿದೆ. Dunzo ಪ್ರಸ್ತುತ ನಗದು ಕೊರತೆಯನ್ನು ಹೊಂದಿದೆ. ಸಹ-ಸಂಸ್ಥಾಪಕರು ಮತ್ತು ಅದರ ಹಣಕಾಸು ಮುಖ್ಯಸ್ಥರು ಸೇರಿದಂತೆ ಹಲವಾರು ಉನ್ನತ-ಮಟ್ಟದ ಕಾರ್ಯನಿರ್ವಾಹಕರು ಸಂಸ್ಥೆಯಿಂದ ನಿರ್ಗಮಿಸಿದ್ದಾರೆ. ಹಾಗೆಯೇ ಹಲವಾರು ಉದ್ಯೋಗಿಗಳ ವೇತನದಲ್ಲಿನ ವಿಳಂಬಗಳು ಮತ್ತು ಹಂತಗಳಲ್ಲಿ ಸಾಮೂಹಿಕ ವಜಾಗೊಳಿಸುವಿಕೆಯಿಂದ ಕಂಪೆನಿ ಸಂಪೂರ್ಣವಾಗಿ ನಷ್ಟದಲ್ಲಿದೆ.

Follow Us:
Download App:
  • android
  • ios