Lucky Man : ಬದಲಾಯ್ತು ಗಾರೆ ಕೆಲಸಗಾರನ ಅದೃಷ್ಟ.. ತಿಂಗಳಿಗೆ ಸಿಗುತ್ತೆ 10 ಲಕ್ಷ ರೂ.
ಬಡವನ ಕೈಗೆ ಬಂಗಾರದ ತಟ್ಟೆ, ಶ್ರೀಮಂತನ ಕೈಗೆ ತಗಡಿನ ಪ್ಲೇಟ್ ಬರೋಕೆ ಕೆಲ ನಿಮಿಷಗಳು ಸಾಕು. ಅದೃಷ್ಟ ಖುಲಾಯಿಸಿದ್ರೆ ನಮ್ಮೆಲ್ಲ ಕಷ್ಟ ಕಳೆದು ಜೀವನ ಹಸನಾಗಬಹುದು. ಅದಕ್ಕೆ ಯುಕೆಯ ಈ ವ್ಯಕ್ತಿ ನಿದರ್ಶನ.

ಹಣ, ಶ್ರೀಮಂತಿಕೆ, ಐಷಾರಾಮಿ ವಿಷ್ಯದಲ್ಲಿ ಪರಿಶ್ರಮದ ಜೊತೆ ಅದೃಷ್ಟವೂ ಇರ್ಬೇಕು. ಸಣ್ಣಪುಟ್ಟ ಕೆಲಸ ಮಾಡಿಕೊಂಡು ಹಂಗೋ ಹಿಂಗೋ ಜೀವನ ನಡೆಸುತ್ತಿದ್ದವರ ಬದುಕು ಕೂಡ ಅರೆ ಕ್ಷಣದಲ್ಲಿ ಬದಲಾಗೋದಿದೆ. ಕೈತುಂಬ ಹಣ, ಒಳ್ಳೆಯ ಬದುಕು ಪಡೆದುಕೊಂಡವರಿದ್ದಾರೆ. ಮತ್ತೆ ಕೆಲವರು ಜೀವನ ಪರ್ಯಂತ ದುಡಿದ್ರೂ ಹಣ ಕೈನಲ್ಲಿ ನಿಲ್ಲೋದಿಲ್ಲ, ಶ್ರೀಮಂತಿಕೆ ಕನಸಿನ ಮಾತಾಗಿರುತ್ತದೆ. ಅದೃಷ್ಟದ ವ್ಯಕ್ತಿಗಳ ಪಟ್ಟಿಯಲ್ಲಿ ಈಗ ನಾವು ಹೇಳಲಿರುವ ವ್ಯಕ್ತಿ ಬರ್ತಾನೆ. ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದವನ ಬದುಕು ಬದಲಾಗಿದೆ. 50ನೇ ವಯಸ್ಸಿನಲ್ಲೇ ನಿವೃತ್ತಿ ಪಡೆಯುವ ನಿರ್ಧಾರಕ್ಕೆ ಬಂದ ವ್ಯಕ್ತಿ ದೊಡ್ಡ ಕನಸುಗಳನ್ನು ಬೆನ್ನು ಹತ್ತಿದ್ದಾನೆ. ಅಷ್ಟಕ್ಕೂ ಆತ ಯಾರು, ಮುಂದಿನ 30 ವರ್ಷಗಳವರೆಗೆ ಪ್ರತಿ ತಿಂಗಳು ಆತನಿಗೆ 10 ಲಕ್ಷ ಬರೋದು ಹೇಗೆ ಅಂತಾ ಹೇಳ್ತೇವೆ.
ಪ್ರತಿ ತಿಂಗಳು 10 ಲಕ್ಷ ಪಡೆಯಲಿರುವ ವ್ಯಕ್ತಿ ಯಾರು? : ವ್ಯಕ್ತಿಯ ಹೆಸರು ಜಾನ್ ಸ್ಟೆಂಬ್ರಿಡ್ಜ್. ಜಾನ್ ಬ್ರಿಟನ್ (Britain) ನಿವಾಸಿ. ಮೊದಲು ಮೀನು ಹಿಡಿಯಲು ಬಳಸಲಾಗ್ತಿದ್ದ ರಾಡ್ ಗಳಿಗೆ ಟ್ರೋವೆಲ್‌ಗಳನ್ನು ಹಾಗೂ ಪ್ಲ್ಯಾಸ್ಟರಿಂಗ್ ಕೆಲಸವನ್ನು ಜಾನ್ ಮಾಡುತ್ತಿದ್ದ. ಈಗ ಜಾನ್ ಗೆ 51 ವರ್ಷ. ಜಾನ್ ಜಾಕ್‌ಪಾಟ್ (Jackpot) ಗೆದ್ದಿದ್ದಾನೆ. ರಾಷ್ಟ್ರೀಯ ಲಾಟರಿ (Lottery) ಸೆಟ್‌ನ ಉನ್ನತ ಬಹುಮಾನ ಜಾನ್ ಕೈ ಸೇರಿದೆ. ತೆರಿಗೆ ಕಟ್ಟದೆ ಜಾನ್ ಪ್ರತಿ ತಿಂಗಳು 10 ಲಕ್ಷ ರೂಪಾಯಿ ಪಡೆಯುತ್ತಿದ್ದಾನೆ. 30 ವರ್ಷಗಳ ಕಾಲ ಪ್ರತಿ ತಿಂಗಳು ಜಾನ್ ಗೆ ಈ ಹಣ ಸಿಗಲಿದೆ.
ಕಳೆದ ಆರ್ಥಿಕ ಸಾಲಿನಲ್ಲಿ ಭಾರತದ ಸ್ಟಾರ್ಟ್ ಅಪ್ ಗಳು ಉದ್ಯೋಗಿಗಳ ವೇತನದಲ್ಲಿ ಎಷ್ಟು ಹೆಚ್ಚಳ ಮಾಡಿವೆ ಗೊತ್ತಾ?
ಜಾನ್ ಇನ್ನು ಮುಂದೆ ಕೆಲಸ ಮಾಡೋದಿಲ್ಲವಂತೆ. ಮೀನುಗಾರಿಕೆ ಮಾಡುವ ಇಚ್ಛೆಯನ್ನು ಜಾನ್ ಹೊಂದಿದ್ದಾನೆ. ಯುರೋಪ್ ಸುತ್ತುವ ಆಸೆ ಹೊಂದಿರುವ ಜಾನ್,ಅಪರೂಪದ ಪ್ರಾಣಿಗಳ ಫೋಟೋ ತೆಗೆದು ಜೀವನ ಎಂಜಾಯ್ ಮಾಡುವ ಪ್ಲಾನ್ ನಲ್ಲಿದ್ದಾನೆ. ಜಾನ್, ತನಗೆ ಸಿಕ್ಕ ಲಾಟರಿ ಹಣದಲ್ಲಿ ಮೊದಲು ಐಷಾರಾಮಿ ಕ್ಯಾಂಪರ್ ವ್ಯಾನ್ ಖರೀದಿಸುವುದಾಗಿ ಹೇಳಿದ್ದಾನೆ. ಈ ವ್ಯಾನ್ ಕೈನಲ್ಲಿದ್ರೆ ಎಲ್ಲಿ ಬೇಕಾದ್ರೂ ಸುಲಭವಾಗಿ ಪ್ರಯಾಣ ಬೆಳೆಸಬಹುದು ಎನ್ನುತ್ತಾನೆ ಜಾನ್. ಪಕ್ಷಿಯ ಫೋಟೋ ತೆಗೆಯಲು ಜಾನ್ ಮನೆಯಿಂದ ಹೊರಗೆ ಹೋಗಿದ್ದನಂತೆ. ನಂತರ ಮನೆಗೆ ಹಿಂದಿರುಗುವ ವೇಳೆ ಸೂಪರ್ ಮಾರ್ಕೆಟ್ ನಲ್ಲಿ ಲಾಟರಿ ಟಿಕೆಟ್ ಖರೀದಿಸಿದ್ದನಂತೆ. ಸೂಪರ್ ಮಾರ್ಕೆಟ್ ನಲ್ಲಿ ಖರೀದಿ ಮಾಡಿದ್ದ ಲಾಟರಿಯೇ ಜಾನ್ ಜೀವನ ಬದಲಿಸಿದೆ.
ಸ್ತ್ರೀಶಕ್ತಿಗೆ ಬಲ ತುಂಬಿದ ಗಾರ್ಮೆಂಟ್ಸ್ ಉದ್ಯಮ: ಮಗಳ ಕನಸಿಗೆ ನೀರೆರೆದು ಪೋಷಿಸಿದ ಕುಟುಂಬ!
ಜಾನ್ ತನಗಾಗಿ ಒಂದು ಮನೆ ಕೂಡ ಖರೀದಿ ಮಾಡುವ ಪ್ಲಾನ್ ನಲ್ಲಿದ್ದಾನೆ. ಆದರೆ ಇನ್ನೂ ಅದಕ್ಕೆ ಸೂಕ್ತ ಸ್ಥಳ ಸಿಕ್ಕಿಲ್ಲ ಎನ್ನುತ್ತಾನೆ ಜಾನ್. ಗಾರೆ ಕೆಲಸವನ್ನು ಮಾಡ್ತಾ ಜೀವನ ಸವೆಸುವ ಅಗತ್ಯ ನನಗಿಲ್ಲ. ಪ್ಲಾಸ್ಟರ್ ಧೂಳಿನಿಂದ ಮುಚ್ಚಿದ ಮನೆಗಳಿಗೆ ಹೋಗಬೇಕಾಗಿಲ್ಲ, ಹಣ ಮತ್ತು ನಮ್ಮ ಕುಟುಂಬದ ಬಗ್ಗೆ ಹೆಚ್ಚು ಚಿಂತೆ ಮಾಡಬೇಕಾಗಿಲ್ಲ. ನೆಮ್ಮದಿ ಬದುಕು ನನ್ನದಾಗಲಿದೆ ಎನ್ನುತ್ತಾನೆ ಜಾನ್.
ಸಂಬಂಧಿಕರು, ಕುಟುಂಬದವರಿಗೆ ಸಹಾಯ ಮಾಡುವ ಮನಸ್ಸು ಮಾಡಿರುವ ಜಾನ್, ನನ್ನ ಬಳಿ ಸಾಕಷ್ಟು ಹಣವಿರುವ ಕಾರಣ, ನಾನು ಅವರ ನೆರವಿಗೆ ನಿಲ್ಲುತ್ತೇನೆ ಎನ್ನುತ್ತಾನೆ. ರಾಷ್ಟ್ರೀಯ ಲಾಟರಿಯಲ್ಲಿ ನಾನು ವಿಜೇತನಾಗ್ತೆನೆ ಎಂಬ ಭರವಸೆ ಇರಲಿಲ್ಲ. ಆದ್ರೆ ಇದು ನನ್ನ ಇಡೀ ಬದುಕಿನ ದಾರಿ ಬದಲಿಸಿದೆ. ನೆಮ್ಮದಿ ಜೀವನಕ್ಕೆ ನಾಂದಿ ಹಾಡಿದೆ ಎನ್ನುತ್ತಾನೆ ಜಾನ್. ಸಮುದ್ರದ ನಕ್ಷತ್ರಗಳು ಮತ್ತು ಕಾಡುಗಳಲ್ಲಿ ಪ್ರಾಣಿಗಳ ಫೋಟೋ ಸೆರೆ ಹಿಡಿಯುವುದೆಂದ್ರೆ ಜಾನ್ ಗೆ ಬಹಳ ಇಷ್ಟವಾಗಿದ್ದು, ಅದೇ ನನ್ನ ಮುಂದಿನ ಗುರಿ ಎನ್ನುತ್ತಾನೆ.