ಫೆಬ್ರವರಿ ಅಂತ್ಯವಾಗಿ ಮಾರ್ಚ್ ತಿಂಗಳು ಆರಂಭವಾಗಲಿದ್ದು, ಹಲವು ಬದಲಾವಣೆಗಳು ಜಾರಿಗೆ ಬರಲಿವೆ. ಎಲ್‌ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆ, ಯುಪಿಐನಲ್ಲಿ ವಿಮಾ ಪ್ರೀಮಿಯಂ ಪಾವತಿ ಸುಲಭ, ಮ್ಯೂಚುವಲ್ ಫಂಡ್ ಖಾತೆ ನಾಮಿನಿ ನಿಯಮ ಬದಲಾವಣೆ, ಸ್ಥಿರ ಠೇವಣಿಗಳ ಬಡ್ಡಿದರಗಳಲ್ಲಿ ಬದಲಾವಣೆ ಸಾಧ್ಯತೆ ಇದೆ. ಮಾರ್ಚ್‌ನಲ್ಲಿ 14 ದಿನ ಬ್ಯಾಂಕ್ ರಜೆಗಳಿದ್ದು, ಸಿಎನ್‌ಜಿ, ಪಿಎನ್‌ಜಿ ಮತ್ತು ಎಟಿಎಫ್ ಬೆಲೆಗಳೂ ಪರಿಷ್ಕರಣೆಯಾಗಲಿವೆ.

ಇಂದು ಫೆಬ್ರವರಿ ತಿಂಗಳ ಕೊನೆ ದಿನ. ನಾಳೆಯಿಂದ ಮಾರ್ಚ್ (March) ತಿಂಗಳು ಶುರುವಾಗ್ತಾ ಇದೆ. ಹೊಸ ತಿಂಗಳು ಶುರುವಾಗ್ತಿದ್ದಂರೆ ಒಂದಿಷ್ಟು ಸೇವೆಯಲ್ಲಿ ಬದಲಾವಣೆ ಆಗುತ್ತೆ, ಮಾರ್ಚ್ ಒಂದರಿಂದ ಜನಸಾಮಾನ್ಯರಿಗೆ ಸಂಬಂಧಿಸಿದ ಅನೇಕ ವಿಷ್ಯಗಳಲ್ಲಿ ಬದಲಾವಣೆ ಆಗ್ತಿದೆ. ಜನಸಾಮಾನ್ಯರು ಬಳಸುವ ದೈನಂದಿನ ವಸ್ತುಗಳು, ಎಲ್ ಪಿಜಿ ಸಿಲಿಂಡರ್ (LPG cylinder) ಸೇರಿದಂತೆ ಇನ್ಶುರೆನ್ಸ್ ಸೇವೆವರೆಗೆ ಅನೇಕ ಸೇವೆಯಲ್ಲಿ ಬದಲಾವಣೆಯನ್ನು ಕಾಣ್ಬಹುದು. 

ಎಲ್ ಪಿಜಿ ಸಿಲಿಂಡರ್ ಬೆಲೆ : ಮಾರ್ಚ್ ತಿಂಗಳ ಮೊದಲ ದಿನ ಆಗುವ ಮೊದಲ ಬದಲಾವಣೆ ಎಲ್ ಪಿಜಿ ಬೆಲೆ. ಪ್ರತಿ ತಿಂಗಳ ಮೊದಲ ದಿನ ಆಯಿಲ್ ಮಾರ್ಕೆಟಿಂಗ್ ಕಂಪನಿ , ಎಲ್ ಪಿಜಿ ದರವನ್ನು ಬದಲಾವಣೆ ಮಾಡುತ್ತದೆ. ಫೆಬ್ರವರಿ 1 ರಂದು, ಬಜೆಟ್‌ ದಿನ ಕಂಪನಿಗಳು 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನು 7 ರೂಪಾಯಿಗಳಷ್ಟು ಕಡಿಮೆ ಮಾಡಿದ್ದವು. 14 ಕೆಜಿ ಗೃಹಬಳಕೆಯ ಅನಿಲ ಸಿಲಿಂಡರ್‌ಗಳ ಬೆಲೆಗಳು ದೇಶದಲ್ಲಿ ದೀರ್ಘಕಾಲದಿಂದ ಸ್ಥಿರವಾಗಿದ್ದು, ಮಾರ್ಚ್ ನಲ್ಲಿ ಬೆಲೆ ಇಳಿಕೆ ನಿರೀಕ್ಷೆ ಮಾಡ್ತಿರುವ ಜನಸಾಮಾನ್ಯರಿಗೆ ಕಂಪನಿ ಖುಷಿ ಸುದ್ದಿ ನೀಡುತ್ತಾ ಕಾದುನೋಡ್ಬೇಕಿದೆ.

ಯುಪಿಐನಲ್ಲಿ ಬದಲಾವಣೆ : ಎರಡನೇಯದು ವಿಮಾ ಪ್ರೀಮಿಯಂ ಪಾವತಿ ವ್ಯವಸ್ಥೆಗೆ ಸಂಬಂಧಿಸಿದ್ದಾಗಿದೆ. ಮಾರ್ಚ್ 1, 2025 ರಿಂದ ಏಕೀಕೃತ ಪಾವತಿ ಇಂಟರ್ಫೇಸ್ (UPI) ನಲ್ಲಿ ಬದಲಾವಣೆ ಬರಲಿದೆ. ಇದು ವಿಮಾ ಪ್ರೀಮಿಯಂ ಪಾವತಿಯನ್ನು ಸುಲಭಗೊಳಿಸಲಿದೆ. ಯುಪಿಐ ವ್ಯವಸ್ಥೆಗೆ ಇನ್ಶುರೆನ್ಸ್-ಎಎಸ್‌ಬಿ ಎಂಬ ಹೊಸ ವೈಶಿಷ್ಟ್ಯವನ್ನು ಸೇರಿಸಲಾಗುತ್ತಿದೆ. ಇದರ ಮೂಲಕ, ಜೀವ ಮತ್ತು ಆರೋಗ್ಯ ವಿಮಾ ಪಾಲಿಸಿದಾರರು ತಮ್ಮ ಪ್ರೀಮಿಯಂ ಪಾವತಿಗಾಗಿ ಮುಂಚಿತವಾಗಿ ಹಣವನ್ನು ಬ್ಲಾಕ್ ಮಾಡಲು ಸಾಧ್ಯವಾಗುತ್ತದೆ. ಖಾತೆದಾರರು ಒಪ್ಪಿಗೆ ನೀಡ್ತಿದ್ದಂತೆ ಹಣ ವರ್ಗಾವಣೆ ಆಗಲಿದೆ. ಆರ್‌ಡಿಎಐ ಫೆಬ್ರವರಿ 18 ರಂದು ಸುತ್ತೋಲೆಯನ್ನು ಹೊರಡಿಸಿದ್ದು, ವಿಮಾ ಪಾವತಿಗಳಲ್ಲಿನ ವಿಳಂಬವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.

ಅಮೆರಿಕದ ವಸ್ತುಗಳ ಮೇಲೆ ಮತ್ತಷ್ಟು ಸುಂಕ ಕಡಿತ: ಕಾರಣ ಏನು?

ಮ್ಯೂಚುವಲ್ ಫಂಡ್ ಖಾತೆ ನಾಮಿನಿ ನಿಯಮದಲ್ಲಿ ಬದಲಾವಣೆ : ಮಾರ್ಚ್ ಒಂದರಿಂದ ಮ್ಯೂಚುವಲ್ ಫಂಡ್ ಮತ್ತು ಡಿಮ್ಯಾಟ್ ಖಾತೆಗಳಲ್ಲಿ ನಾಮಿನಿಯನ್ನು ಸೇರಿಸುವುದಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಆಗಿದೆ. ಹೊಸ ನಿಯಮದ ಪ್ರಕಾರ, ಒಬ್ಬ ಹೂಡಿಕೆದಾರರು ಡಿಮ್ಯಾಟ್ ಅಥವಾ ಮ್ಯೂಚುವಲ್ ಫಂಡ್ ನಲ್ಲಿ ಗರಿಷ್ಠ 10 ನಾಮಿನಿಗಳನ್ನು ಸೇರಿಸಬಹುದು. ಫೋನ್ ಸಂಖ್ಯೆ, ಇಮೇಲ್, ವಿಳಾಸ, ಆಧಾರ್ ಸಂಖ್ಯೆ, ಪ್ಯಾನ್ ಸಂಖ್ಯೆ, ಚಾಲನಾ ಪರವಾನಗಿ ಸೇರಿದಂತೆ ನಾಮಿನಿಯ ಸಂಪೂರ್ಣ ವಿವರಗಳನ್ನು ಒದಗಿಸುವುದು ಇಲ್ಲಿ ಅಗತ್ಯವಾಗಿರುತ್ತದೆ.

ಎಫ್ ಡಿ (FD) ಬಡ್ಡಿದರಗಳಲ್ಲಿನ ಬದಲಾವಣೆ : ಮಾರ್ಚ್‌ನಲ್ಲಿ ಬ್ಯಾಂಕ್ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಬದಲಾಯಿಸುವ ಸಾಧ್ಯತೆ ಇದೆ. 5 ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳು ಬದಲಾಗಬಹುದು ಎಂಬ ನಿರೀಕ್ಷೆ ಇದೆ. 

ಬ್ಯಾಂಕ್ ರಜೆ : ಮಾರ್ಚ್ ತಿಂಗಳಲ್ಲಿ ಬ್ಯಾಂಕ್ ಗೆ ಹೋಗುವ ಮುನ್ನ ರಜೆಯನ್ನು ಚೆಕ್ ಮಾಡ್ಕೊಳ್ಳಿ. ಆರ್ ಬಿಐ ಬಿಡುಗಡೆ ಮಾಡಿದ ಬ್ಯಾಂಕ್ ರಜೆ ಪಟ್ಟಿ ಪ್ರಕಾರ, ಮಾರ್ಚ್ ನಲ್ಲಿ 14 ದಿನ ಬ್ಯಾಂಕ್ ಬಂದ್ ಇರಲಿದೆ. ಹೋಳಿ, ಈದ್-ಉಲ್-ಫಿತರ್ ಸೇರಿದಂತೆ ಅನೇಕ ಹಬ್ಬಗಳ ಕಾರಣ ಬ್ಯಾಂಕ್ ಬಾಗಿಲು ಮುಚ್ಚಲಿದೆ. 

ಪತಿಗಾಗಿ ಗೂಗಲ್ ಜಾಬ್ ಬಿಟ್ಟವಳನ್ನೇ ಗಂಡ ದೂರ ಮಾಡ್ದ, ಧೈರ್ಯಗೆಡದ ಮಹಿಳೆ ಸಂಬಳ ಈಗ

ಸಿಎನ್‌ಜಿ-ಪಿಎನ್‌ಜಿ ಮತ್ತು ಎಟಿಎಫ್ ಬೆಲೆ : ಪ್ರತಿ ತಿಂಗಳ ಆರಂಭದಲ್ಲಿ ಸಿಎನ್‌ಜಿ, ಪಿಎನ್‌ಜಿ ಮತ್ತು ಎಟಿಎಫ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಇದಾದ ನಂತರ ಹೊಸ ದರ ಬಿಡುಗಡೆಯಾಗುತ್ತದೆ. ತೈಲ ಕಂಪನಿಗಳು ತಿಂಗಳ ಆರಂಭದಲ್ಲಿ ವಾಯುಯಾನ ಇಂಧನ ಅಂದರೆ ಏರ್ ಟರ್ಬೈನ್ ಇಂಧನ (ATF) ದರಗಳನ್ನು ಪರಿಷ್ಕರಿಸುತ್ತವೆ. ಅದ್ರ ಹೊಸ ದರ ನಾಳೆ ಹೊರಬೀಳಲಿದೆ.