ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಕೇಂದ್ರ ಬಜೆಟ್‌ನಲ್ಲಿ ₹7564 ಕೋಟಿ ಮೀಸಲು. ಬೆಂಗಳೂರಿನ ಸಬರ್ಬನ್ ರೈಲ್ವೆಗೆ ₹350 ಕೋಟಿ ಮೀಸಲು, ಕವಚ್ 4ಓ ಯೋಜನೆ ಜಾರಿ.
Budget 2025: ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಹಿಂದಿನ ಬಜೆಟ್‌ಗಿಂತ 5 ಕೋಟಿ ಹೆಚ್ಚು ನೀಡಿದ ನಿರ್ಮಲಾ!

ಈ ಸಲದ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಧ್ಯಮ ವರ್ಗದ ಜನರಿಗೆ ತೆರಿಗೆ ಕಟ್ಟುವಲ್ಲಿ ಸ್ವಲ್ಪ ವಿನಾಯಿತಿ ನೀಡಿದ್ದು, 12 ಲಕ್ಷ ರೂ. ಆದಾಯದವರೆಗೆ ತೆರಿಗೆ ವಿನಾಯತಿ ಘೋಷಿಸಿ ಶ್ರೀ ಸಾಮಾನ್ಯನ ನೆರವಿಗೆ ಧಾವಿಸಿದ್ದಾರೆ. ಯಾರು ಎಷ್ಟು ತೆರಿಗೆ ಜೊತೆ ಸೇವಿಂಗ್ಸ್ ಮಾಡಬಹುದು ಎನ್ನಲು ಇಲ್ಲಿದೆ ಲೆಕ್ಕಚಾರ, ಹೊಸ ಆದಾಯ ತೆರಿಗೆ ಉಳಿತಾಯದಂತೆ 12 ಲಕ್ಷದರೆಗೆ ಆದಾಯ ಇರೋರು ತೆರಿಗೆ ವಿನಾಯಿತಿ ಹೊಂದಿರುತ್ತಾರೆ. ಅಲ್ಲದೇ ವಿವಿಧ ಟ್ಯಾಕ್ಸ್ ಸ್ಲ್ಯಾಬ್ ಘೋಷಿಸಿದ್ದು, ಹಲವು ಆದಾಯ ಸ್ತರದವರು ಬೇರೆ ಬೇರೆ ಮಿತಿಯಲ್ಲಿ ಬರೋದ್ರಿಂದ ಕಡಿಮೆ ಆದಾಯ ಇರೋರಿಗೆ ಈ ಟ್ಯಾಕ್ಸ್ ಹೆಚ್ಚಿನ ಲಾಭ ತರಲಿದೆ ಎಂಬ ಲೆಕ್ಚಚಾರ ಇದೆ. ಅಲ್ಲದೇ ಗುಜರಾತ್ ಹಾಗೂ ಬಿಹಾರಕ್ಕೆ ವಿಶೇಷ ಕೊಡುಗೆ ಘೋಷಿಸಿದ ಮೋದಿ ಸರಕಾರ, ಕೃಷಿ, ಶಿಕ್ಷಣ ಕ್ಷೇತ್ರಗಳಿಗೂ ಹೆಚ್ಚಿನ ಒತ್ತು ನೀಡಿದ್ದಾರೆ.
ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಕೇಂದ್ರ ಬಜೆಟ್‌ನಲ್ಲಿ ₹7564 ಕೋಟಿ ಮೀಸಲು. ಬೆಂಗಳೂರಿನ ಸಬರ್ಬನ್ ರೈಲ್ವೆಗೆ ₹350 ಕೋಟಿ ಮೀಸಲು, ಕವಚ್ 4ಓ ಯೋಜನೆ ಜಾರಿ.
Budget 2025: ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಹಿಂದಿನ ಬಜೆಟ್‌ಗಿಂತ 5 ಕೋಟಿ ಹೆಚ್ಚು ನೀಡಿದ ನಿರ್ಮಲಾ!
ನಿರ್ಮಲಾ ಸೀತಾರಾಮನ್ 2025-26ರ ಸಾಲಿನ ಬಜೆಟ್ ಮಂಡಿಸಿದ್ದಾರೆ. ಮಹತ್ವದ ಆದಾಯ ತೆರಿಗೆ ವಿನಾಯಿತಿ ಸೇರಿದಂತೆ ಕಲ ಘೋಷಣೆ ಮಾಡಿದ್ದಾರೆ. ಈ ಬಾರಿಯ ಬಜೆಟ್ ಮಂಡನೆ ಬಳಿಕ 3 ಪ್ರಮುಖ ಬದಲಾವಣೆಗಳು ಆಗಲಿದೆ. ಏನಿದು?
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ಸಲುವಾಗಿ ಮೊದಲಿಂದಲೂ ಸ್ಟಾರ್ಟ್ ಅಪ್‌ಗಳಿಗೆ ಆದ್ಯತೆ ನೀಡುತ್ತಿರುವ ಮೋದಿ ಸರಕಾರ, ಈ ಬಾರಿಯ 10 ಸಾವಿರ ಕೋಟಿ ರೂ. ಮೀಸಲಿಡುವುದಾಗಿ ಹೇಳಿದೆ.
ಗೃಹ ಸಚಿವ ಅಮಿತ್ ಶಾ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದ ಬಜೆಟ್‌ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಮಧ್ಯಮ ವರ್ಗದವರಿಗೇ ಮಣೆ ಹಾಕುತ್ತಾರೆಂದು ಹೇಳಿದ್ದಾರೆ.
ಹೆಚ್ಚು ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ರಾಷ್ಟ್ರೀಯ ಉತ್ಪದನಾ ಮಿಷನ್ ಸ್ಫಾಪಿಸಲು ಮುಂದಾಗಿದ್ದು, ಇದರಿಂದ ಸಣ್ಣ ಮತ್ತು ಅತೀ ಸೂಕ್ಷ್ಮ ಉದ್ಯಮಗಳಿಗೆ ನೆರವಾಗಲಿದೆ.
ಕೇಂದ್ರ ಸರ್ಕಾರದ ಜಲ್‌ಜೀವನ್ ಮಿಷನ್ ಯೋಜನೆಯನ್ನು 2028ರವರೆಗೆ ವಿಸ್ತರಿಸಲಾಗುವುದು. ರಾಜ್ಯಗಳಿಗೆ ಮೂಲಸೌಕರ್ಯಕ್ಕಾಗಿ 1.5 ಲಕ್ಷ ಕೋಟಿ ರೂ.ಗಳ ಬಡ್ಡಿರಹಿತ ಸಾಲ ಒದಗಿಸಲಾಗುವುದು. ನಗರಗಳ ಅಭಿವೃದ್ಧಿಗೆ 1 ಲಕ್ಷ ಕೋಟಿ ರೂ.ಗಳ ನಗರ ಸವಾಲು ನಿಧಿ ಸ್ಥಾಪನೆ.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕೃಷಿ ಶಿಕ್ಷಣ ಸೇರಿ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಿ ಬಜೆಟ್ ಮಂಡಿಸಿರುವ ನಿರ್ಮಲಾ ಸೀತರಾಮನ್ ಬಜೆಟ್ ಹೈಲೈಟ್ಸ್ ಇಲ್ಲಿವೆ.
ನಿಮ್ಮ ಇನ್ ಕಂ ಎಷ್ಟಿದ್ದರೆ ಎಷ್ಟು ತೆರಿಗೆ ಕಟ್ಟಬೇಕು?
12 ಲಕ್ಷ ಆದಾಯ ಇರೋರಿಗೆ ಯಾವುದೇ ಆದಾಯ ತೆರಿಗೆ ಕಟ್ಟೋದು ಬೇಡ. ಯಾರು, ಎಷ್ಟು ಟ್ಯಾಕ್ಸ್ ಕಟ್ಟಬೇಕು?
ಹೊಸ ತೆರಿಗೆ ಆರಿಸಿಕೊಳ್ಳೋರಿಗೆ ಸಿಹಿ ಸುದ್ದಿ ನೀಡಿದ ನಿರ್ಮಲಾ ಸೀತರಾಮನ್
ತೆರಿಗೆ ಮಿತಿ ಹೇಗಿದೆ?
ತೆರಿಗೆ ಹೊಸ ಸ್ಲ್ಯಾಬ್ ಜಾರಿಗೆ. 12 ಲಕ್ಷದವರೆಗೆ ಆದಾಯದವರೆಗೆ ತೆರಿಗೆ ಕಟ್ಟುವ ಅಗತ್ಯವಿಲ್ಲ. ಎಲ್ಲ ವರ್ಗದ ವೇತನ ಪಡೆಯುವವರೆಗೂ ತೆರಿಗೆ ಸ್ಲ್ಯಾಬಲ್ಲಿ ಬದಲಾವಣೆ. 12 ರಿಂದ 16 ಲಕ್ಷದವರೆಗೆ ಶೇ.15 ತೆರಿಗೆ.
ಹಿರಿಯ ನಾಗರಿಕರಿಗೆ 1 ಲಕ್ಷದವರೆಗೂ ಟಿಡಿಸಿ ಮಿತಿ ಹೆಚ್ಚಳ. ಆದಾಯ ತೆರಿಗೆ ಕಾಯ್ದೆಯ ಅರ್ಧದಷ್ಟು ಬದಲಾವಣೆಗೆ ನಿರ್ಧಾರ. ಮುಂದಿನ ವಾರ ಹೊಸ ಕಾಯ್ದೆ ಮಂಡನೆ. ಟಿಸಿಎಸ್ ಮಿತಿ 50 ಸಾವಿರದಿಂದ 1 ಲಕ್ಷ ರೂ.ಗೆ ಹೆಚ್ಚಳ. ಮಧ್ಯಮ ವರ್ಗಕ್ಕೆ ಅನುಕೂರವಾಗುಂತೆ ಟ್ಯಾಕ್ಸ್ ಹೇರಲು ನಿರ್ಧರಿಸುವುದಾಗಿ ನಿರ್ಮಲಾ ಘೋಷಣೆ. 90 ಲಕ್ಷ ತೆರಿಗೆದಾರರು ಸ್ವಯಂ ತೆರಿಗೆ ಕಟ್ಟಿದ್ದಾರೆ. ಬಾಡಿಗೆ ತೆರಿಗೆ ವಿನಾಯಿತಿ 2.4 ಲಕ್ಷದಿಂದ 6 ಲಕ್ಷಕ್ಕೇರಿಕೆ.
ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿ, ಅಲ್ಲಿಯ ಸೌಂದರ್ಯದ ಬಗ್ಗೆ ಜಗತ್ತಿಗೆ ಸಾರಿದ ಬಳಿಕ, ಈ ಸಾರಿಯೂ ಬಜೆಟ್‌ನಲ್ಲಿ ನಿರ್ಮಲಾ ಸೀತರಾಮನ್ ಸಮುದ್ರ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿಲು ನಿರ್ಧರಿಸಿದ್ದಲ್ಲದೆ, ಸಮುದ್ರ ಆಹಾರಗಳ ರಫ್ತಿಗೂ ಒತ್ತು ನೀಡುವುದಾಗಿ ಘೋಷಿಸಿದ್ದಾರೆ.
ಮೊಬೈಲ್ ಫೋನ್ ಅಗ್ಗ, ಎಲ್‌ಇಡಿ ಟಿವಿ ಬೆಲೆ ಇಳಿಕೆ. ದೇಸಿ ಉತ್ಪಾದನೆ ಹೆಚ್ಚಿಸಲು ಆದತ್ಯತೆ ಇವಿ ವಾಹನಗಳ ಬೆಲೆಯೂ ಇಳಿಕೆ ಸಾಧ್ಯತೆ. ಮೊಬೈಲ್ ಬ್ಯಾಟರಿ ಉತ್ಪಾದನೆಗೆ ಆದ್ಯತೆ. ಮಧ್ಯಮ ವರ್ಗದವರಿಗೆ ನೆರವಾಗುವಂತೆ ಆದಯ ತೆರಿಗೆಯಲ್ಲಿ ಬದಲಾವಣೆಗೆ ಶಿಫಾರಸು. ಜನರಿಗೆ ಅರ್ಥವಾಗುವಂತೆ ತೆರಿಗೆ ಕಾಯ್ದೆ ಜಾರಿಗೆ ಆದ್ಯತೆ.
ಭಾರತದಲ್ಲಿ ಸುಮಾರು 7.5 ಕೋಟಿ ಮಂದಿಗೆ ಮಧ್ಯಮ ವರ್ಗದ ಕೈಗಾರಿಗಳು ಉದ್ಯೋಗ ನೀಡಿವೆ. ಇವರಿಗೆ ನೆರವಾಗಲು ಸಣ್ಣ ಹಾಗೂ ಅತೀ ಸೂಕ್ಷ್ಮಿ ಉದ್ಯಮಗಳಿಗೆ ಸಾಲ ನೀಡಲು ಅವಕಾಶ. 5 ಕೋಟಿ ರೂ.ನಿಂದ 10 ಕೋಟಿ ರೂ.ವರೆಗೆ ಉದ್ಯಮ ಆರಂಭಿಸಲು ಸಾಲ. ಅಲ್ಲದೇ ಅವಧಿ ಸಾಲ ಸುಮಾರು 20 ಕೋಟಿ ರೂ. ನೀಡಲು ಅವಕಾಶ. ಅಲ್ಲದೇ ಮೊದಲ ಬಾರಿಗೆ ಉದ್ಯಮ ಆರಂಭಿಸುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಹಿಳೆಯರಿಗೆ 2 ಕೋಟಿ ರೂ. ಸಾಲ ನೀಡುವುದಾಗಿ ಘೋಷಿಸಿದ ನಿರ್ಮಲಾ ಸೀತರಾಮನ್.
ಆಮದು ಸುಂಕ ಸರಳೀಕರಣಗೊಳಿಸಿದ ಕೇಂದ್ರ ಸರಕಾರ, ಔಷಧ. 15 ಹಂತಗಳ ಪೈಕಿ 7 ಹಂತಗಳ ಆಮದು ಸುಂಕ ರದ್ದು. ಆರು ಅತ್ಯಾವಶ್ಯಕ ಔಷಧಗಳ ಮೇಲಿನ ಆಮದು ಸುಂಕ ರದ್ದು, ಕ್ಯಾನ್ಸರ್ ಸೇರಿ ಹಲವು ಗಂಭೀರ ಕಾಯಿಲೆಗಳ ಆಮದು ಸುಂಕಕ್ಕೂ ಕಡಿವಾಣ. ಹೊದ ಸಾರಿಯಂತೆ ಈ ವರ್ಷವೂ ಕ್ಯಾನ್ಸರ್ ಔಷಧದ ಕಡೆ ಹೆಚ್ಚಿನ ಗಮನ ಹರಿಸಿ ಕೇಂದ್ರ ಸರಕಾರ. ಕಚ್ಚಾ ವಸ್ತುಗಳ ಮೇಲಿನ ಆಂದು ಸುಂಕವೂ ಕಡಿತ.
ಕೃಷಿಕರಿಗೆ ನಿರ್ಮಲಾ ಹಲವು ಘೋಷಣೆಗಳನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದು, ಕೃಷಿಕರ ಅಭಿವೃದ್ಧಿಗೆ ಸರಕಾರ ಬದ್ಧರಾಗಿರುವುದಾಗಿ ಹೇಳಿದ್ದಾರೆ.
ಮೀನುಗಾರಿಗೆ ವಿಶೇಷ ಅನುದಾನ ನೀಡುವುದಾಗಿ ಘೋಷಿಸಿರುವ ವಿತ್ತ ಸಚಿವೆ ನಿರ್ಮಲಾ, ಜಾಗತಿಕ ಮಟ್ಟದಲ್ಲಿ ಮೀನು ಉತ್ಫಾದನೆಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ. ಸಮುದ್ರ ಆಹಾರ ಉತ್ಪಾದನೆಗೆ 60 ಸಾವಿರ ಕೋಟಿ ರೂ. ಮೀಸಲಿಡುವುದಾಗಿ ಘೋಷಣೆ.
1961ರ ಆದಾಯ ತೆರಿಗೆ ರದ್ದುಗೊಳಿಸಿ, ಮುಂದಿನ ವಾರ ಹೊಸ ಆದಾಯ ತೆರಿಗೆ ಕಾಯ್ದೆ ಮಂಡಿಸುವುದಾಗಿ ಘೋಷಿಸಿದ ನಿರ್ಮಲಾ ಸೀತರಾಮನ್. ಮಧ್ಯಮ ವರ್ಗದ ಆದಾಯ ತೆರಿಗೆ ಮಿತಿಗೆ ಸಂಬಂಧಿಸಿದಂತೆ ಮತ್ತಷ್ಟು ನರೀಕ್ಷೆಗಳ ಮಹಾಪೂರ. ಹೊಸ ಕಾಯ್ದೆ ಹೇಗಿರಬಹುದೆಂಬ ಹೆಚ್ಚಿದ ನಿರೀಕ್ಷೆ.
ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ಆದ್ಯತೆ ನೀಡಲಾಗಿದ್ದು, ಪ್ರಧಾನಮಂತ್ರಿ ಧನಧಾನ್ಯ ಯೋಜನೆ ಘೋಷಣೆಯಾಗಿದೆ. ದ್ವಿದಳ ಧಾನ್ಯಗಳ ಸ್ವಾವಲಂಬನೆಗೆ ಒತ್ತು ನೀಡಲಾಗುವುದು. ಬಿಹಾರದಲ್ಲಿ ಮಖಾನಾ ಮಂಡಳಿ ಸ್ಥಾಪನೆಯಾಗಲಿದೆ.
ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ