ಮಹಾ ಕುಂಭ ಮೇಳದಲ್ಲಿ ಬ್ಯುಸಿನೆಸ್, ಕಡಿಮೆ ಬಂಡವಾಳ ಲಕ್ಷಾಂತರ ಸಂಪಾದನೆ !
ಮಹಾ ಕುಂಭ ಮೇಳ ಧಾರ್ಮಿಕ ಆಚರಣೆಯೊಂದೇ ಅಲ್ಲ ವ್ಯಾಪಾರಿಗಳಿಗೆ ಹೊಟ್ಟೆ ತುಂಬಿಸಿಕೊಳ್ಳಲು ಸಹಕಾರಿಯಾಗಿದೆ. ಸಣ್ಣಪುಟ್ಟ ವ್ಯಾಪಾರಿಗಳಿಂದ ಹಿಡಿದು ದೊಡ್ಡ ವ್ಯಾಪಾರಸ್ಥರು ಹಣ ಬಾಚಿಕೊಳ್ತಿದ್ದಾರೆ. ಮಹಾ ಕುಂಭ ಮೇಳದಲ್ಲಿ ಕೆಲ ಬ್ಯುಸಿನೆಸ್ ವಿಚಿತ್ರವಾಗಿದ್ರೂ ಲಕ್ಷ ಸಂಪಾದನೆಗೆ ಸಹಕಾರಿಯಾಗಿದೆ.
ಪ್ರಯಾಗ್ ರಾಜ್ (Prayag Raj) ನಲ್ಲಿ ಜನ ಸಾಗರ. ಕುಂಭ ಮೇಳದ ಸಡಗರ. ಸನಾತನ ಧರ್ಮ (Sanatana Dharma)ದ ಸಂಸ್ಕೃತಿ ಸಾರುವ ಈ ಕಾರ್ಯಕ್ರಮವನ್ನು ಇಡೀ ದೇಶ ಸಂಭ್ರಮಿಸುತ್ತಿದೆ. ಮಹಾ ಕುಂಭ ಮೇಳ (Maha Kumbh Mela)ಕ್ಕೆ ಭಕ್ತರು ಸಾಲು ಸಾಲಾಗಿ ಬರ್ತಿದ್ದಾರೆ. ಸುಮಾರು 45 ದಿನಗಳ ಕಾಲ ನಡೆಯಲಿರುವ ಈ ಮಹಾ ಕುಂಭ ಮೇಳಕ್ಕೆ 45 ಕೋಟಿಗೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದೆ. ದೇಶ, ವಿದೇಶಗಳಿಂದ ಭಕ್ತರು ಇಲ್ಲಿಗೆ ಬರ್ತಿರೋದ್ರಿಂದ ವ್ಯಾಪಾರಸ್ಥರಿಗೆ ಭರ್ಜರಿ ವ್ಯಾಪಾರವಾಗ್ತಿದೆ.
ದೊಡ್ಡ ಹೊಟೇಲ್, ಹಣ್ಣು, ಬಟ್ಟೆ ಮಾತ್ರವಲ್ಲ ಸಣ್ಣ ಪುಟ್ಟ ವ್ಯಾಪಾರಿಗಳಿಗೂ ಹಣ ಗಳಿಸಲು ಇದು ಉತ್ತಮ ಅವಕಾಶ ಎನ್ನಬಹುದು. ಭಕ್ತರ ಜೊತೆ ಪ್ರಯಾಗ್ ರಾಜ್ ಗೆ ಕಂಟೆಂಟ್ ಕ್ರಿಯೇಟರ್ ದಂಡೇ ಹೋಗಿದೆ. ಅವರು ಅಲ್ಲಿನ ಆಸಕ್ತಿಕರ ವಿಷ್ಯಗಳನ್ನು ಜನರಿಗೆ ತಿಳಿಸ್ತಿದ್ದಾರೆ. ಮಹಾ ಕುಂಭ ಮೇಳದಲ್ಲಿ ಹೇಗೆಲ್ಲ ಬ್ಯುಸಿನೆಸ್ ಮಾಡ್ಬಹುದು ಎಂಬ ಕೆಲ ವಿಡಿಯೋಗಳು ಈಗ ವೈರಲ್ ಆಗಿದ್ದು, ಜನರು ಅವರ ಗಳಿಕೆ ಕೇಳಿ ಅಚ್ಚರಿಗೊಳಗಾಗಿದ್ದಾರೆ.
ಮಹಾ ಕುಂಭ ಮೇಳದ ಬಗ್ಗೆ ಅತಿ ಹೆಚ್ಚು ಸರ್ಚ್ ಮಾಡಿದ್ದು ಮುಸ್ಲಿಂ ರಾಷ್ಟ್ರಗಳು ! ಟಾಪ್ ಒಂದರಲ್ಲಿದೆ ಶತ್ರು ದೇಶ
ತಿಲಕವಿಟ್ಟು ಲಕ್ಷ ಸಂಪಾದಿಸಿ : ಭಕ್ತಾದಿಗಳಿಗೆ ತಿಲಕವಿಟ್ಟು ಹೇಗೆ ಸಂಪಾದನೆ ಮಾಡ್ಬಹುದು ಎಂಬ ಗುಟ್ಟನ್ನು ವ್ಯಾಪಾರಿಯೊಬ್ಬ ಹೇಳಿದ್ದಾನೆ. ಭಕ್ತಾಧಿಗಳಿಗೆ ತಿಲಕವಿಟ್ಟು ನೀವು 45 ದಿನಗಳಲ್ಲಿ 4 ಲಕ್ಷಕ್ಕಿಂತ ಹೆಚ್ಚು ಹಣವನ್ನು ಸಂಪಾದನೆ ಮಾಡ್ಬಹುದು ಎಂಬುದು ಆತನ ವಾದ. ಪವಿತ್ರ ಸ್ನಾನದ ನಂತ್ರ ಕುಂಭ ಮೇಳಕ್ಕೆ ಬಂದ ಭಕ್ತರು ತಿಲಕವಿಟ್ಟುಕೊಳ್ತಾರೆ. ಅದನ್ನೇ ಈತ ಬ್ಯುಸಿನೆಸ್ ಮಾಡಿಕೊಂಡಿದ್ದಾನೆ. ಒಬ್ಬರಿಗೆ ತಿಲಕವಿಡಲು 10 ರೂಪಾಯಿ ತೆಗೆದುಕೊಳ್ತಾನೆ. ಪ್ರತಿ ದಿನ ನೀವು ಸಾವಿರಿಂದ ಎರಡು ಸಾವಿರ ಮಂದಿಗೆ ತಿಲಕವಿಟ್ರೆ 10 ರಿಂದ 20 ಸಾವಿರ ರೂಪಾಯಿ ಗಳಿಸಬಹುದು ಎಂಬುದು ಆತನ ಲೆಕ್ಕಾಚಾರ. ಅತೀ ಕಡಿಮೆ ಖರ್ಚಿನಲ್ಲಿ ಮಾಡಬಹುದಾದದ ಬ್ಯುಸಿನೆಸ್ ಇದು. ಆದ್ರೆ ಪ್ರಯತ್ನ ಅತ್ಯಗತ್ಯ. ತಿಲಕವಿಟ್ಟುಕೊಳ್ಳುವಂತೆ ಭಕ್ತರ ಮನವೊಲಿಸುವುದು ನಿಮ್ಮ ಕೈನಲ್ಲಿದೆ.
ಟೀ ಕೆಟಲ್ : ಮಹಾ ಕುಂಭ ಮೇಳದಲ್ಲಿ ಹಣ ಗಳಿಸುವ ಇನ್ನೊಂದು ವಿಧಾನ ಟೀ ಕೆಟಲ್. ಪ್ರಯಾಗರಾಜ್ ಮಹಾಕುಂಭದಲ್ಲಿ ಚಳಿ ಇರುವುದರಿಂದ ಜನರು ಟೀ ಬಯಸ್ತಾರೆ. ಪ್ರತಿ ಕಪ್ ಗೆ ಹತ್ತು ರೂಪಾಯಿಯಂತೆ ದಿನಕ್ಕೆ 500 ಕಪ್ ಟೀ ಮಾರಾಟ ಮಾಡಿದ್ರೂ ಪ್ರತಿ ದಿನ 5 ಸಾವಿರ ರೂಪಾಯಿ ಗಳಿಸಬಹುದು. ಈ ರೀತಿ 40 ದಿನಗಳ ಕಾಲ ಈ ಕೆಲಸ ಮಾಡಿದರೆ ಉತ್ತಮ ಆದಾಯ ಸಿಗುತ್ತೆ. ಈಗಾಗಲೇ ಈ ಕೆಲಸದಲ್ಲಿ ಅನೇಕರು ಬ್ಯುಸಿಯಾಗಿದ್ದಾರೆ.
Maha Kumbh 2025: ಪ್ರಯಾಗ್‌ರಾಜ್ ತೀರ್ಥಸ್ನಾನದ ವೇಳೆ ನದಿಯಲ್ಲೇ ಹೃದಯಾಘಾತ, ಎನ್‌ಸಿಪಿ ನಾಯಕ ನಿಧನ
ಇತರೆ ಬ್ಯುಸಿನೆಸ್ : ಮಹಾ ಕುಂಭ ಮೇಳ ಭಕ್ತಿ ಜೊತೆ ವ್ಯಾಪಾರಕ್ಕೆ ದೊಡ್ಡ ಅವಕಾಶವನ್ನು ನೀಡಿದೆ. ಸಣ್ಣಪುಟ್ಟ ವ್ಯಾಪಾರಿಗಳು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾರೆ. ಬೇಲ್ ಪುರಿ ಮಾರಾಟಗಾರನೊಬ್ಬ ಪ್ಲೇಟ್ ಗೆ 20, 30, 50 ರೂಪಾಯಿಯಂತೆ ದಿನಕ್ಕೆ 500 ಪ್ಲೇಟ್ ಮಾರಾಟ ಮಾಡೋದಲ್ಲದೆ ಟೀ ಕೂಡ ಮಾರಾಟ ಮಾಡಿ ಹಣ ಮಾಡ್ತಿದ್ದಾನೆ. ಮಹಾ ಕುಂಭ ಮೇಳೆ ಲಕ್ಷ ಗಳಿಸಲು ಒಳ್ಳೆ ಅವಕಾಶ ಎನ್ನುತ್ತಿದ್ದಾನೆ ಆತ. ಇಷ್ಟೇ ಅಲ್ಲ ಚುರ್ ಮುರಿ, ಮಸಾಲೆ ಕಡಲೆ ಸೇರಿದಂತೆ ಆಹಾರ ಮಾರಾಟ ಮಾಡುವ ಅನೇಕ ವ್ಯಾಪಾರಸ್ಥರು ಲಾಬವಾಗ್ತಿದೆ. ಬುದ್ಧಿವಂತಿಕೆ ಹಾಗೂ ಮುಜುಗರ ಬಿಟ್ರೆ ವ್ಯಕ್ತಿ ಎಲ್ಲಿ ಬೇಕಾದ್ರೂ ಹಣ ಸಂಪಾದನೆ ಮಾಡ್ಬಹುದು. ವಿಡಿಯೋ ನೋಡಿದ ಜನರು ಬ್ಯುಸಿನೆಸ್ ಐಡಿಯಾವನ್ನು ಮೆಚ್ಚಿಕೊಂಡಿದ್ದಾರೆ.