ಮುಂಬೈ(ಜೂ.01): ಪುಟ್ಟ ಮಕ್ಕಳಿಂದ ಹಿರಿಯರವರೆಗೆ ಹೀಗೆ ಬಹುತೇಕ ಎಲ್ಲರಿಗೂ ಮ್ಯಾಗಿ ನೂಡಲ್ಸ್ ಅಂದ್ರೆ ಬಹಳ ಇಷ್ಟ. ವಿವಿಧ ಫ್ಲೇವರ್‌ಗಳಲ್ಲಿ ಬರುವ ಐದೇ ನಿಮಿಷದಲ್ಲಿ ತಯಾರಾಗುವ ಮ್ಯಾಗಿಗೆ ಶಾಪ್‌ಗಳಲ್ಲೂ ಭಾರೀ ಡಿಮ್ಯಾಂಡ್‌ ಆದರೀಗ ಮ್ಯಾಗಿ ನೂಡಲ್ಸ್ ಕಿಟ್‌ಕ್ಯಾಟ್‌ ಮತ್ತು ನೆಸ್ಕ್ಯಾಫ್‌ಗಳನ್ನು ತಯಾರಿಸುವ Nestle ಕಂಪನಿಯ, ಆಂತರಿಕ ವರದಿ ಬಹಿರಂಗಗೊಂಡಿದ್ದು ಈ ಕಂಪನಿಯ ಆಹಾರ ಪ್ರಿಯರಿಗೆ ಶಾಕ್ ನೀಡಿದೆ.

ಹೌದು ನೆಸ್ಲೆಯು ಆಂತರಿಕ ವರದಿಯಲ್ಲಿ ತಾನು ತಯಾರಿಸುವ ಶೇ 70 ಕ್ಕೂ ಅಧಿಕ ಆಹಾರ ಮತ್ತು ಪಾನೀಯಗಳು  ಆರೋಗ್ಯದ ವ್ಯಾಖ್ಯಾನಕ್ಕನುಗುಣವಾಗಿ ತಯಾರಾಗುತ್ತಿಲ್ಲ ಎಂಬ ಅಂಶ ಉಲ್ಲೇಖಿಸಿದೆ. ವಿಶ್ವದ ಅತಿದೊಡ್ಡ ಆಹಾರ ಉತ್ಪಾದಕ ಕಂಪನಿಯು "ನಾವು ಎಷ್ಟು ನವೀಕರಿಸಿದರೂ" ಕೆಲ ಆಹಾರ ಉತ್ಪನ್ನಗಳು "ಎಂದಿಗೂ ಆರೋಗ್ಯಕರವಾಗಿರಲು ಸಾಧ್ಯವಿಲ್ಲ" ಎಂಬುವುದನ್ನೂ ಒಪ್ಪಿಕೊಂಡಿವೆ.

ಇನ್ನು ಈ ಬಗ್ಗೆ ಬ್ರಿಟನ್‌ನ ಪತ್ರಿಕೆಯೊಂದು ವರದಿ ಪ್ರಕಟಿಸಿದ್ದು, ಇದರಲ್ಲಿ 2021ರ ಆರಂಭದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಪ್ರೆಸೆಂಟೇಷನ್‌ನಲ್ಲಿ ಸಾಕುಪ್ರಾಣಿಗಳ ಆಹಾರ ಮತ್ತು ಸ್ಪೆಷಲೈಸ್ಡ್‌ ಮೆಡಿಕಲ್ ನ್ಯೂಟ್ರಿಶನ್ ಹೊರತುಪಡಿಸಿ ನೆಸ್ಲೆ ತಯಾರಿಸುವ ಕೇವಲ ಶೇ. 37ರಷ್ಟು ಉತ್ಪನ್ನಗಳು ಮಾತ್ರ 3.5 ಹಾಗೂ ಅದಕ್ಕಿಂತ ಹೆಚ್ಚಿನ ರೇಟಿಂಗ್ ಪಡೆಯುವಲ್ಲಿ ಯಶಸ್ವಿಯಾಗಿವೆ. 

ಈ 3.5-ಸ್ಟಾರ್ ರೇಟಿಂಗ್‌ನ್ನು ಕಂಪನಿಯು "ಆರೋಗ್ಯದ ಮಾನ್ಯತೆ ಪಡೆದ ವ್ಯಾಖ್ಯಾನ" ಎಂದು ಪರಿಗಣಿಸಿದೆ. ಇಲ್ಲಿ 5 ಸ್ಟಾರ್‌ ಸ್ಕೇಲ್‌ನಲ್ಲಿ ಈ ಆಹಾರಗಳಿಗೆ ರೇಟಿಂಗ್ ನೀಡಲಾಗುತ್ತದೆ. ಇದನ್ನೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನದಂಡವಾಗಿ ಬಳಸಲಾಗುತ್ತದೆ.