ಇದು ಭಾರತದ ಕಂಪನಿ, ಇಲ್ಲೇ ತೆರಿಗೆ ಕಟ್ಟುತ್ತಿದ್ದೇವೆ, ಗೊಂದಲಕ್ಕೆ ಸ್ಪಷ್ಟನೆ ಕೊಟ್ಟ ಝೋಹೋ ಸಂಸ್ಥಾಪಕ ಶ್ರೀಧರ್ ವೆಂಬು. ಝೋಹೋ ಎಲ್ಲಾ ಪ್ರಾಡಕ್ಟ್ ಭಾರತದಲ್ಲೇ ಅಭಿವೃದ್ಧಿ ಮಾಡಲಾಗಿದೆ. ಮುಖ್ಯ ಕಚೇರಿ, ತೆರಿಗೆಯನ್ನು ಇಲ್ಲೇ ಪಾವತಿಸುತ್ತಿದ್ದೇವೆ ಎಂದಿದ್ದಾರೆ.
ಚೆನ್ನೈ (ಸೆ.30) ಕಳೆದ ಕೆಲ ದಿನಗಳಿಂದ ಝೋಹೋ ಭಾರಿ ಸದ್ದು ಮಾಡುತ್ತಿದೆ. ಅಮೆರಿಕದಲ್ಲಿ ಹೆಚ್1 ಬೀ ವೀಸಾ ನಿಯಮ ಜಾರಿಯಾದ ಬಳಿ ಝೋಹೋ ಸಂಸ್ಥಾಪಕ ಶ್ರೀಧರ್ ವೆಂಬು ತೆಗೆದುಕೊಂಡ ನಿರ್ಧಾರಗಳು ಭಾರಿ ಚರ್ಚೆಯಾಗಿತ್ತು. ಇದೀಗ ಝೋಹೋ ಉತ್ಪನ್ನ ಕುರಿತು ಹಲವು ಪ್ರಶ್ನೆಗಳು ಎದ್ದಿದೆ. ಈ ಕುರಿತು ಸ್ವತಃ ಶ್ರೀಧರ್ ವೆಂಬು ಸ್ಪಷ್ಟನೆ ನೀಡಿದ್ದಾರೆ. ಝೋಹೋ ಭಾರತದ ಪ್ರಾಡಕ್ಟ್, ಮುಖ್ಯ ಕಚೇರಿ ಇಲ್ಲೇ ಇದೆ. ಭಾರತದಲ್ಲೇ ತೆರಿಗೆ ಕಟ್ಟುತ್ತಿದ್ದೇವೆ. ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ನಮಗೆ ಶಾಖೆಗಳಿವೆ. ಝೋಹೋ ಮೇಡ್ ಇನ್ ಇಂಡಿಯಾ ಉತ್ಪನ್ನ ಎಂದು ಝೋಹೋ ಸಂಸ್ಥಾಪಕ ಶ್ರೀಧರ್ ವೆಂಬು ಹೇಳಿದ್ದಾರೆ.
ಡೇಟಾ ಡೆವಲಪ್, ಸ್ಟೋರ್
ಝೋಹೋ ಡೇಟಾ ಡೆವಲಪ್, ಝೋಹೋ ಡೇಟಾ ಸ್ಟೋರ್, ಡೇಟಾ ಹೋಸ್ಟ್ ಎಲ್ಲಿ ಅನ್ನೋ ಪ್ರಶ್ನೆಗಳು ಎದ್ದಿತ್ತು. ಈ ಪ್ರಶ್ನೆಗಳ ಕುರಿತು ಶ್ರೀಧರ್ ವೆಂಬು ಸ್ಪಷ್ಟನೆ ನೀಡಿದ್ದಾರೆ. ಝೋಹೋ ಪ್ರಾಡಕ್ಟ್ ಅಭಿವೃದ್ಧಿ ಮಾಡಿರುವುದು ಭಾರತದಲ್ಲಿ, ಡೇಟಾ ಸ್ಟೋರ್ ಆಯಾ ದೇಶದ ನಿಯಮ ನೀತಿಗಳಿಗೆ ಅನುಗುಣವಾಗಿದೆ. ಯಾವುದೇ ಖಾಸಗೀತನಕ್ಕೆ ಧಕ್ಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೇಡ್ ಇನ್ ಇಂಡಿಯಾ, ಡೆವಲಪ್ಡ್ ಫಾರ್ ವರ್ಲ್ಡ್
ಶ್ರೀಧರ್ ವೆಂಬು ಜೋಹೋ ಕಂಪನಿ ಮೇಡ್ ಇನ್ ಇಂಡಿಯಾ ಕಂಪನಿಯಾಗಿದೆ. ಇದು ವಿಶ್ವಕ್ಕಾಗಿ ಅಬಿವೃದ್ಧಿಪಡಿಸಲಾಗಿದೆ ಎಂದಿದ್ದಾರೆ. ಭಾರತೀಯ ಗ್ರಾಹಕರ ಡೇಟಾ ಭಾರತದಲ್ಲಿ ಸ್ಟೋರ್ ಆಗಲಿದೆ. ಭಾರತದಲ್ಲಿ ಮುಂಬೈ, ದೆಹಲಿ ಹಾಗೂ ಚೆನ್ನೈನಲ್ಲಿ ಭಾರತೀಯರ ಡೇಟಾ ಸ್ಟೋರ್ ಆಗಲಿದೆ. ಇನ್ನು ಶೀಘ್ರದಲ್ಲೇ ಡೇಟಾ ಸ್ಟೋರ್ ಒಡಿಶಾದಲ್ಲಿ ತೆರೆದುಕೊಳ್ಳುತ್ತಿದೆ. ಇದೇ ವೇಳೆ ಜೋಹೋ ಅಮೆರಿಕ ಸೇರಿದಂತೆ ಒಟ್ಟು 18 ಡೇಟಾ ಸೆಂಟರ್ ಹೊಂದಿದೆ. ಇದರಲ್ಲಿ ಪ್ರಮುಖವಾಗಿ ಆಯಾ ದೇಶದಲ್ಲಿ ಡೇಟಾಗಳು ಆಯಾ ದೇಶದ ನಿಯಮ, ನೀತಿಗಳಿಗೆ ಅನುಸಾರವಾಗಿ ಅದೇ ದೇಶದಲ್ಲಿ ಸ್ಟೋರ್ ಮಾಡಲಾಗುತ್ತದೆ ಎಂದಿದ್ದಾರೆ.
ಹಾರ್ಡ್‌ವೇರ್ ಹಾಗೂ ಸಾಫ್ಟ್‌ವೇರ್‌ನಲ್ಲಿ ಸಂಪೂರ್ಣ ನಿಯಂತ್ರಣ
ಲಿನಕ್ಸ್ ಒಎಸ್, ಪೋಸ್ಟ್‌ಗ್ರಿಸ್ ಒಪನ್ ಸೋರ್ಸ್ ಟೆಕ್ನಾಲಜಿಗಳ ಮೂಲಕ ಝೋಹೋ ತನ್ನದೇ ಆದ ಸಾಫ್ಟ್‌ವೇರ್ ಬಳಸಿ ಹಾರ್ಡ್‌ವೇರ್ ಸರ್ವೀಸ್ ಮಾಡುತ್ತದೆ. AWS, ಅಝ್ಯೂರ್ ಸೇರಿದಂತೆ ಯಾವುದೇ ಕ್ಲೌಡ್ ಪ್ಲಾಟ್‌ಫಾರ್ಮ್‌ಗಳಲ್ಲಿ ಝೋಹೋ ಡೇಟಾ ಹೋಸ್ಟ್ ಮಾಡುವುದಿಲ್ಲ. ಝೋಹೋ ಮೆಸೇಜಿಂಗ್ ಆ್ಯಪ್ ಸಂಪೂರ್ಣವಾಗಿ ತನ್ನದೇ ಆದ ಮೇಸೇಜಿಂಗ್ ಆ್ಯಪ್ ಹೊಂದಿದೆ. ಫಾಸ್ಟರ್ ಟ್ರಾಫಿಕ್ ರೌಟಿಂಗ್‌ಗೆ ಮಾತ್ರ ಹೊರಗಿನ ಸರ್ವೀಸ್ ಬಳಕೆ ಮಾಡಲಾಗುತ್ತದೆ. ಹೀಗಾಗಿ ಝೋಹೋ ಡೇಟಾ ಮೇಲೆ ಸಂಪೂರ್ಣ ನಿಯಂತ್ರಣವಿದೆ.
ಅಮೆರಿಕದ ಆರಂಭಿಕ ದಿನದಲ್ಲಿ ಟೆಸ್ಟಿಂಗ್ ಕಾರಣಕ್ಕಾಗಿ ಅಡ್ರೆಸ್ ಹಾಕಲಾಗಿತ್ತು. ಬಳಿಕ ಅಪ್ಡೇಟ್ ಮಾಡಿಲ್ಲ. ಇದರನ್ನು ಹೊರತುಪಡಿಸಿದರೆ ಇನ್ಯಾವುದೇ ಸಮಸ್ಯೆ ಇಲ್ಲ ಎಂದು ಝೋಹೋ ಸಂಸ್ಥಾಪಕ ಶ್ರೀಧರ್ ವೆಂಬು ಹೇಳಿದ್ದಾರೆ.
