ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದೀರಾ? ಹಾಗಿದ್ರೆ ಕನ್ನಡ ಕಲಿಯಿರಿ: Zoho CEO ಶ್ರೀಧರ್‌ ವೆಂಬು

ತಮ್ಮ ಸುತ್ತಮುತ್ತಲ ಪ್ರದೇಶವನ್ನು ಗೌರವಿಸಲು, ಸಮುದಾಯದ ಜೊತೆ ಏಕೀಕರಣ ಸಾಧಿಸುವ ಮಾರ್ಗವಾಗಿ ಇತರೇ ರಾಜ್ಯಗಳಿಂದ ಚೆನ್ನೈಗೆ ಬರುವ ತಮ್ಮ ಉದ್ಯೋಗಿಗಳಿಗೆ ತಮಿಳು ಕಲಿಯುವಂತೆ ನಾನು ಪ್ರೋತ್ಸಾಹ ಮಾಡುತ್ತೇನೆ ಎಂದು ಶ್ರೀಧರ್‌ ವೆಂಬು ಹೇಳಿದ್ದಾರೆ.

Zoho CEO Sridhar Vembu If Bengaluru is your home now you should learn Kannada san

ಬೆಂಗಳೂರು (ನ.16): ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂದು ಉದ್ಯೋಗ ಮಾಡುವ ಬೇರೆ ರಾಜ್ಯಗಳ ಜನರು ಕಡ್ಡಾಯವಾಗಿ ಕನ್ನಡ ಕಲಿಯಬೇಕು ಎನ್ನುವ ಮಾತಿಗೆ ಕೋಟ್ಯಧಿಪತಿ ಹಾಗೂ ಝೋಹೋ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಶ್ರೀಧರ್‌ ವೆಂಬು ಬೆಂಬಲಿಸಿದ್ದಾರೆ. ಪತ್ರಕರ್ತ ಚಂದ್ರ ಆರ್‌ ಶ್ರೀಕಾಂತ್‌ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ಬಳಿಕ ಈ ಚರ್ಚೆ ಆರಂಭವಾಗಿದೆ. ನಮ್ಮ ಜನರು ವಿದೇಶಕ್ಕೆ ಪ್ರಯಾಣ ಮಾಡುವಾಗ ಯುರೋಪಿಯನ್‌ ಭಾಷೆಗಳನ್ನು ಕಲಿಯಲು ಯಾವುದೇ ಹಿಂಜರಿಕೆ ವ್ಯಕ್ತಪಡಿಸುವುದಿಲ್ಲ. ಆದರೆ, ಭಾರತದ ಒಳಗಿನ ಸ್ಥಳೀಯ ಭಾಷೆಗಳನ್ನು ಅದರಲ್ಲೂ ವಿಶೇಷವಾಗಿ ಕನ್ನಡ ಕಲಿಯುವ ವಿಚಾರ ಬಂದಾಗ ಅದನ್ನು ಬಲವಾಗಿ ವಿರೋಧಿಸುತ್ತಾರೆ. ಇದು ಯಾಕೆ ಅನ್ನೋದೇ ಅರ್ಥವಾಗುತ್ತಿಲ್ಲ ಎಂದಿದ್ದಾರೆ. ಇನ್ನು ಶ್ರೀಧರ್‌ ವೆಂಬು ಅವರಿಗೆ ಸ್ವತಃ ಕನ್ನಡ ಮಾತನಾಡಲು ಬರೋದಿಲ್ಲ. ಆದರೆ, ಕಳೆದ ದಶಕದಲ್ಲಿ ಭಾಷೆಯನ್ನು ಕಲಿಯುವ ತಮ್ಮ ಪ್ರಯಾಣವನ್ನು ಹಂಚಿಕೊಂಡರು, ಸೀಮಿತ ಪ್ರಯತ್ನವನ್ನು ಸ್ಥಳೀಯ ನಿವಾಸಿಗಳು ಮೆಚ್ಚಿದ್ದಾರೆ.

'ಉದ್ಯೋಗ ನಿಮಿತ್ತ ಬೆಂಗಳೂರಿಗೆ ಬಂದು, ಈಗ ಬೆಂಗಳೂರು ನಿಮ್ಮ ಮನೆ ಆಗಿದ್ದಲ್ಲಿ. ಖಂಡಿತವಾಗಿ ನೀವು ಕನ್ನಡ ಕಲಿಯಬೇಕು ಹಾಗೂ ನಿಮ್ಮ ಮಕ್ಕಳಿಗೂ ಕನ್ನಡ ಕಲಿಸಬೇಕು. ಬೆಂಗಳೂರಿನಲ್ಲಿ ಇಷ್ಟು ವರ್ಷ ಬದುಕಿದ್ದು ಈಗಲೂ ಕನ್ನಡ ಕಲಿತಿಲ್ಲ ಎಂದಾದರೆ ಅದು ಆ ನಗರಕ್ಕೆ ತೋರುತ್ತಿರುವ ಅಗೌರವ..' ಎಂದು ಅವರು ಟ್ವೀಟ್‌ನಲ್ಲಿ ಬರೆದಿದ್ದಾರೆ. ಇದೇ ವೇಳೆ ಚೆನ್ನೈನಲ್ಲಿರುವ ತಮ್ಮ ಕಂಪನಿಗೆ ಉದ್ಯೋಗಕ್ಕೆ ಬರುವ ಪರರಾಜ್ಯದ ಉದ್ಯೋಗಿಗಳಿಗೆ ಮೊದಲು ತಮಿಳು ಕಲಿಯುವಂತೆ ಹೇಳುತ್ತೇನೆ. ಇದು ತಮ್ಮ ಸುತ್ತಮುತ್ತಲ ಪ್ರದೇಶವನ್ನು ಗೌರವಿಸಲು, ಸಮುದಾಯದ ಜೊತೆ ಏಕೀಕರಣ ಸಾಧಿಸಲು ಉತ್ತಮ ಮಾರ್ಗ ಎಂದಿದ್ದಾರೆ.

ಕನ್ನಡ ಕಲಿಕೆಯ ಈ ಕರೆಯು ಭಾರತದ ನಗರ ಕೇಂದ್ರಗಳಲ್ಲಿ, ವಿಶೇಷವಾಗಿ ಕರ್ನಾಟಕದಂತಹ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳ ಸುತ್ತ ದೀರ್ಘಕಾಲದ ಚರ್ಚೆಯನ್ನು ತಟ್ಟಿದೆ. ಬೆಂಗಳೂರು ಜಾಗತಿಕ ಟೆಕ್ ಹಬ್ ಆಗಿ ಹೊರಹೊಮ್ಮುವುದರೊಂದಿಗೆ, ಭಾರತದಾದ್ಯಂತ ಮತ್ತು ವಿದೇಶಗಳಿಂದ ಸ್ಥಳೀಯರಲ್ಲದ ಉದ್ಯೋಗಿಗಳ ಒಳಹರಿವು ನಗರದ ಭಾಷಾ ಭೂದೃಶ್ಯವನ್ನು ಬದಲಾಯಿಸಿದೆ. ಈ ವೃತ್ತಿಪರರಲ್ಲಿ ಹೆಚ್ಚಿನವರು ಪ್ರಾಥಮಿಕವಾಗಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಸಂವಹನ ನಡೆಸುತ್ತಾರೆ.

ಮೋದಿ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ, ಯುವಕರು 70 ಗಂಟೆ ಕೆಲಸ ಮಾಡಲಿ: ಇನ್ಫಿ ನಾರಾಯಣ ಮೂರ್ತಿ

ಕ್ಷಿಪ್ರ ನಗರೀಕರಣ ಮತ್ತು ವಲಸೆಯ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಅಸ್ಮಿತೆಯ ಬಗೆಗಿನ ಕಳವಳದಿಂದ ವಿಶೇಷವಾಗಿ ಸ್ಥಳೀಯರು ಪರ ರಾಜ್ಯದ ಉದ್ಯೋಗಿಗಳು ಕನ್ನಡದಲ್ಲಿಯೇ ವ್ಯವಹರಿಸಬೇಕು ಎಂದು ಒತ್ತಾಯಿಸಿದ್ದಾರೆ.  ಕೆಲವು ನಿವಾಸಿಗಳು ಕನ್ನಡವನ್ನು ಕಲಿಯುವುದು ರಾಜ್ಯ ಮತ್ತು ಅದರ ಸಂಸ್ಕೃತಿಯ ಕಡೆಗೆ ಗೌರವದ ಸೂಚಕವಾಗಿದೆ ಎಂದು ಹೇಳಿದ್ದರೆ, ಇನ್ನೂ ಕೆಲವರು ಬೆಂಗಳೂರಿನಾದ್ಯಂತ ವ್ಯಾಪಾರ ಮತ್ತು ಸಾಮಾಜಿಕ ಸಂದರ್ಭಗಳಲ್ಲಿ ಇಂಗ್ಲಿಷ್‌ನ ಪ್ರಾಬಲ್ಯವನ್ನು ಗಮನಿಸಿದರೆ ಕನ್ನಡ ಕಲಿಕೆಯ ಅಗತ್ಯ ಕಡಿಮೆ ಎಂದಿದ್ದಾರೆ. ವೆಂಬು ಅವರ ಟ್ವೀಟ್‌ನಲ್ಲಿನ ಕಾಮೆಂಟ್‌ಗಳು ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವರು ಸಾಂಸ್ಕೃತಿಕ ಗೌರವದ ಭಾವನೆಯನ್ನು ಪ್ರತಿಧ್ವನಿಸಿದರು, ಬಲವಾದ ಸಮುದಾಯ ಬಂಧಗಳನ್ನು ಬೆಳೆಸುವಲ್ಲಿ ಪ್ರಯೋಜನಗಳನ್ನು ಗಮನಿಸಿದ್ದಾರೆ.

ಬೆಂಗಳೂರು ಯುವತಿ ಗುಟ್ಟಾಗಿ ಮದುವೆಯಾದ 54 ವರ್ಷದ ಸ್ವಾಮೀಜಿ, ತಮಿಳುನಾಡು ಮಠದಿಂದ ಕಿಕ್‌ಔಟ್‌

Latest Videos
Follow Us:
Download App:
  • android
  • ios