Asianet Suvarna News Asianet Suvarna News

ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಗೆ ಕ್ಯುಆರ್ ಕೋಡ್, ಗ್ರಾಹಕರಿಗೇನು ಲಾಭ?

ಶೀಘ್ರದಲ್ಲಿ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಗಳು ಕ್ಯುಆರ್ ಕೋಡ್ ನೊಂದಿಗೆ ಬರಲಿವೆ. ಇದ್ರಿಂದ ಸಿಲಿಂಡರ್ ನಲ್ಲಿ 1-2ಕೆ.ಜಿ. ಕಡಿಮೆ ಅನಿಲವಿರುತ್ತದೆ ಎಂಬ ಗ್ರಾಹಕರ ದೂರುಗಳಿಗೆ ಬ್ರೇಕ್ ಬೀಳಲಿದೆ. ಏಕೆಂದ್ರೆ ಸಿಲಿಂಡರ್ ನಲ್ಲಿರುವ ಗ್ಯಾಸ್ ಮಾಹಿತಿಯನ್ನು ಕ್ಯುಆರ್ ಕೋಡ್ ತಿಳಿಸುತ್ತದೆ. ಕ್ಯುಆರ್ ಕೋಡ್  (QR code) ಅಳವಡಿಕೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಲು ಸರ್ಕಾರ ನಿರ್ಧರಿಸಿದೆ. 

LPG Gas Cylinders Will Come With QR Code Soon
Author
First Published Nov 17, 2022, 9:09 PM IST

ನವದೆಹಲಿ (ನ.17): ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ನಲ್ಲಿ 1-2ಕೆ.ಜಿ. ಕಡಿಮೆ ಅನಿಲವಿರುತ್ತದೆ ಎಂಬ ಗ್ರಾಹಕರ ದೂರುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಂಥ ಸಮಸ್ಯೆ ತಪ್ಪಿಸುವ ಉದ್ದೇಶದಿಂದ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಗಳಿಗೆ ಕ್ಯುಆರ್ ಕೋಡ್​ ಅಳವಡಿಸಲು ನಿರ್ಧರಿಸಿದೆ. ಅನಿಲ ಕಳ್ಳತನಕ್ಕೆ ಕಡಿವಾಣ ಹಾಕಲು ಶೀಘ್ರದಲ್ಲಿ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಗಳು ಕ್ಯುಆರ್ ಕೋಡ್​ನೊಂದಿಗೆ ಬರಲಿವೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಈಗಾಗಲೇ ಇರುವ ಸಿಲಿಂಡರ್ ಗಳಿಗೆ ಕ್ಯುಆರ್ ಕೋಡ್ ಅಂಟಿಸಲಾಗೋದು ಹಾಗೂ ಹೊಸ ಸಿಲಿಂಡರ್ ಗಳಿಗೆ ವೆಲ್ಡ್ ಮಾಡಿ ನೀಡಲಾಗುವುದು. ಇದನ್ನು ಸಕ್ರಿಯಗೊಳಿಸದ ತಕ್ಷಣ   ಕಳ್ಳತನ, ಟ್ರ್ಯಾಕಿಂಗ್, ಟ್ರೇಸಿಂಗ್ ಹಾಗೂ ಗ್ಯಾಸ್ ಸಿಲಿಂಡರ್ ಗಳ ಉತ್ತಮ ದಾಸ್ತಾನು ನಿರ್ವಹಣೆ ಸೇರಿದಂತೆ ಪ್ರಸಕ್ತವಿರುವ ಅನೇಕ ಸಮಸ್ಯೆಗಳನ್ನು ಪರಿಹರಿಸಲು ನೆರವು ನೀಡಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಈ ಕುರಿತು ಸಚಿವರು ವಿಡಿಯೋ ಸಹಿತ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಉತ್ತರ ಪ್ರದೇಶದಲ್ಲಿ 'ವಿಶ್ವ ಎಲ್ ಪಿಜಿ ವಾರ 2022' ಕಾರ್ಯಕ್ರಮದಲ್ಲಿ ಸಚಿವರು ಅಧಿಕಾರಿಗಳ ಜೊತೆಗೆ ಕ್ಯುಆರ್ ಕೋಡ್ ತಂತ್ರಜ್ಞಾನ ವಿಚಾರವಾಗಿ ಚರ್ಚಿಸುತ್ತಿರೋದು ಇದೆ. 

ಗೃಹ ಬಳಕೆ  (Domestic) ಎಲ್ ಪಿಜಿ ಸಿಲಿಂಡರ್ ಗಳಿಗೆ (LPG cylinder) ಕ್ಯುಆರ್ ಕೋಡ್  (QR code) ಬಳಸುವ ತಂತ್ರಜ್ಞಾನವನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಲು ಯೋಜಿಸಲಾಗಿದೆ. ಕ್ಯುಆರ್ ಕೋಡ್ (QR code) ಅನ್ನು ಹೊಸ ಸಿಲಿಂಡರ್ ಗಳಲ್ಲಿ ಮೆಟಲ್ ಸ್ಟಿಕರ್ (Metal Sticker) ಜೊತೆಗೆ ಅಳವಡಿಸಲಾಗುತ್ತದೆ. ಕ್ಯುಆರ್ ಕೋಡ್ ಇಲ್ಲದೆ ಗ್ಯಾಸ್ ಗೆ ಸಂಬಂಧಿಸಿದ ದೂರುಗಳನ್ನು (Complaints) ಪತ್ತೆ ಹಚ್ಚಲು ಸಾಧ್ಯವಾಗೋದಿಲ್ಲ. ಕ್ಯುಆರ್ ಕೋಡ್ (QR code) ಹೊಂದಿರುವ ಮೊದಲ ಬ್ಯಾಚ್ ಗೆ ಸೇರಿದ 14.2ಕೆಜಿ ಗೃಹ ಬಳಕೆಯ 20,000 ಎಲ್ ಪಿಜಿ ಸಿಲಿಂಡರ್ ಗಳು ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿವೆ ಎಂದು ಇತ್ತೀಚೆಗೆ ವರದಿಯಾಗಿತ್ತು. 

ಎಟಿಎಂನಿಂದ ಡ್ಯಾಮೇಜ್ ಆಗಿರುವ ನೋಟು ಸಿಕ್ಕಿದ್ಯಾ? ಡೋಂಟ್ ವರಿ, ಹೊಸ ನೋಟು ಪಡೆಯಲು ಹೀಗೆ ಮಾಡಿ

ಕ್ಯುಆರ್ ಕೋಡ್ (QR code) ಆಧಾರ್ ಕಾರ್ಡ್ (Aadhaar card) ಅನ್ನು ಅನೇಕ ವಿಧದಲ್ಲಿ ಹೋಲುತ್ತದೆ. ಈ ಕೋಡ್ ಮೂಲಕ ಗ್ಯಾಸ್ ಸಿಲಿಂಡರ್ ನಲ್ಲಿರುವ ಗ್ಯಾಸ್ ಅನ್ನು ಟ್ರ್ಯಾಕ್ (Track)ಮಾಡಬಹುದು. ಅಲ್ಲದೆ, ಗ್ಯಾಸ್ ಸಿಲಿಂಡರ್ ನಿಂದ ಗ್ಯಾಸ್ ಕಳುವನ್ನು ತಡೆಯಬಹುದು. ಇಷ್ಟೇ ಅಲ್ಲ, ಸಿಲಿಂಡರ್ ಗೆ ಎಷ್ಟು ಬಾರಿ ಗ್ಯಾಸ್ ರೀಫಿಲ್ ಮಾಡಲಾಗಿದೆ ಎಂಬ ಮಾಹಿತಿಯೂ ಸಿಗುತ್ತದೆ. ಇನ್ನು ರೀಫಿಲ್ಲಿಂಗ್ ಸ್ಟೇಷನ್ ನಿಂದ (Refilling Station) ನಿಮ್ಮ ಮನೆಗೆ ಗ್ಯಾಸ್ ತೆಗೆದುಕೊಂಡು ಹೋಗಲು ಎಷ್ಟು ಸಮಯ ಹಿಡಿಯಿತು ಎಂಬುದು ಕೂಡ ತಿಳಿಯುತ್ತದೆ. ಅಲ್ಲದೆ, ಕ್ಯುಆರ್ ಕೋಡ್ (QR code) ಇರುವ ಕಾರಣ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಅನ್ನು ಕಮರ್ಷಿಯಲ್ (Commercial) ಉದ್ದೇಶಕ್ಕೆ ಬಳಸಲು ಸಾಧ್ಯವಾಗೋದಿಲ್ಲ. 

1 ಲಕ್ಷ ಕೋಟಿ ರೂ. ಆಸ್ತಿ ಹಂಚಿಕೆಗೆ ಹಿಂದೂಜಾ ಸೋದರರ ನಿರ್ಧಾರ

ಗೃಹ ಬಳಕೆ ಅಡುಗೆ ಅನಿಲದ ದರ ಸಾವಿರದ ಗಡಿ ದಾಟಿದೆ. ಅಡುಗೆ ಅನಿಲ ದುಬಾರಿಯಾಗಿರುವ ಈ ಸಮಯದಲ್ಲಿ ಕಳ್ಳತನ ಸೇರಿದಂತೆ ಅನೇಕ ದೂರುಗಳು ಕೂಡ ಕೇಳಿಬಂದಿವೆ. ಗ್ಯಾಸ್ ಸಿಲಿಂಡರ್ ಕೆ.ಜಿ.ಯಲ್ಲಿ ಕಡಿಮೆಯಿರುವ ಬಗ್ಗೆ ಕೂಡ ಗ್ರಾಹಕರು (Customers) ನಿರಂತರ ದೂರುಗಳನ್ನು ನೀಡುತ್ತಿರುತ್ತಾರೆ. ಈ ಎಲ್ಲ ಕಾರಣಗಳನ್ನು ಗಮನಿಸಿದಾಗ ಕ್ಯುಆರ್ ಕೋಡ್ ಅಡುಗೆ ಅನಿಲಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪರಿಹಾರವಾಗುವ ನಿರೀಕ್ಷೆಯಿದೆ. 

Follow Us:
Download App:
  • android
  • ios