Asianet Suvarna News Asianet Suvarna News

ಚೀನಾದ ಪ್ರಮುಖ ಉತ್ಪಾದನಾ ಕೇಂದ್ರದಲ್ಲಿ ಲಾಕ್ ಡೌನ್; ಜಾಗತಿಕ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ

*ದಕ್ಷಿಣ ಚೀನಾದ ಪ್ರಮುಖ ಉತ್ಪಾದನಾ ಕೇಂದ್ರವಾದ ಗುವಾಂಗ್ ಝೌನಲ್ಲಿ ಲಾಕ್ ಡೌನ್
*ತೀವ್ರ ಆರ್ಥಿಕ ಒತ್ತಡ ಸೃಷ್ಟಿ, ಜಾಗತಿಕ 
*50 ಲಕ್ಷ ಜನಸಂಖ್ಯೆ ಹೊಂದಿರುವ ಜಿಲ್ಲೆಗಳ ನಿವಾಸಿಗಳಿಗೆ ಭಾನುವಾರದ ತನಕ ಮನೆಯಲ್ಲೇ ಇರಲು ಆದೇಶ

Lockdown imposed in Chinas economic powerhouse Guangzhou
Author
First Published Nov 10, 2022, 11:30 AM IST

ಬೀಜಿಂಗ್ (ನ.10): ಕೋವಿಡ್ -19 ಪ್ರಕರಣಗಳ ಉಲ್ಬಣದಿಂದ ದಕ್ಷಿಣ ಚೀನಾದ ಪ್ರಮುಖ ಉತ್ಪಾದನಾ ಕೇಂದ್ರವಾದ ಗುವಾಂಗ್ ಝೌನಲ್ಲಿ ಲಾಕ್ ಡೌನ್ ಹೇರಲಾಗಿದೆ. ಇದ್ರಿಂದ ಆರ್ಥಿಕ ಒತ್ತಡ ಸೃಷ್ಟಿಯಾಗಿದ್ದು, ಅದು ಜಾಗತಿಕ ಪೂರೈಕೆ ಸರಪಳಿ ಮೇಲೆ ಪರಿಣಾಮ ಬೀರಿರುವ ಜೊತೆಗೆ ಜಗತ್ತಿನ ಎರಡನೇ ಅತೀದೊಡ್ಡ ಆರ್ಥಿಕತೆಯಾದ ಚೀನಾದ ಬೆಳವಣಿಗೆ ತೀವ್ರ ಗತಿಯಲ್ಲಿ ನಿಧಾನಗೊಳ್ಳಲು ಕಾರಣವಾಗಿದೆ. ಸುಮಾರು 50 ಲಕ್ಷ ಜನಸಂಖ್ಯೆ ಹೊಂದಿರುವ ಜಿಲ್ಲೆಗಳ ನಿವಾಸಿಗಳಿಗೆ ಕನಿಷ್ಠ ಭಾನುವಾರದ ತನಕ ಮನೆಯಲ್ಲೇ ಇರಲು ಆದೇಶಿಸಲಾಗಿದೆ. ಪ್ರತಿ ಕುಟುಂಬದ ಒಬ್ಬ ವ್ಯಕ್ತಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ದಿನದಲ್ಲಿ ಒಂದು ಬಾರಿಯಷ್ಟೇ ಹೊರಗೆ ಹೋಗಲು ಅವಕಾಶ ನೀಡಲಾಗಿದೆ ಎಂದು ಚೀನಾ ಸ್ಥಳೀಯ ಪ್ರಾಧಿಕಾರ ಬುಧವಾರ ಮಾಹಿತಿ ನೀಡಿದೆ. ಸುಮಾರು 1.3 ಕೋಟಿ ಜನಸಂಖ್ಯೆ ಹೊಂದಿರುವ ನಗರದಲ್ಲಿಕಳೆದ 24 ಗಂಟೆಗಳಲ್ಲಿ  2,500ಕ್ಕೂ ಅಧಿಕ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಈ ಆದೇಶವನ್ನು ಸ್ಥಳೀಯ ಆಡಳಿತ ನೀಡಿದೆ.  ಗುವಾಂಗ್ ಝೌನಲ್ಲಿ ಸಾರ್ವಜನಿಕ ಸಾರಿಗೆಯನ್ನು ರದ್ದುಗೊಳಿಸಲಾಗಿದೆ ಹಾಗೂ ಶಾಲೆಗಳಿಗೆ ರಜೆ ನೀಡಲಾಗಿದೆ. ಹಾಗೆಯೇ ಬೀಜಿಂಗ್ ಹಾಗೂ ಇತರ ಪ್ರಮುಖ ನಗರಗಳಿಗೆ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.

ಕೋವಿಡ್ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ತಗ್ಗಿದ್ದು, ಯಾವುದೇ ಹೊಸ ಸಾವಿನ ಪ್ರಕರಣ ದಾಖಲಾಗದಿದ್ದರೂ ಚೀನಾ ಕಠಿಣ 'ಶೂನ್ಯ ಕೋವಿಡ್' (Zero covid) ನೀತಿಯನ್ನು ಇನ್ನೂ ಉಳಿಸಿಕೊಂಡಿದೆ. ಕೋವಿಡ್ ಪ್ರಕರಣಗಳು ಹೆಚ್ಚಾದ ಬೆನ್ನಲ್ಲೇ ದೇಶದ ಗಡಿಗಳನ್ನು ಮುಚ್ಚಲಾಗಿದೆ. ಹಾಗೆಯೇ ದೇಶದೊಳಗಿನ ಆಂತರಿಕ ಸಂಚಾರಹಾಗೂ ವ್ಯಾಪಾರ ನಿಯಮಗಳು ಬದಲಾಗುತ್ತಿರುವ ಕ್ವಾರಂಟೈನ್ ನಿಯಮಗಳಿಗೆ ಒಳಪಟ್ಟಿವೆ. 

ಬಿಗಿಯಾದ ನಿಯಮಗಳು ಚೀನಾದಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ಸ್ಥಳೀಯ ಕಮ್ಯುನಿಸ್ಟ್ ಪಕ್ಷದ ಅಧಿಕಾರಿಗಳ ನಡುವೆ ಘರ್ಷಣೆಗಳನ್ನು ಕೂಡ ಹೆಚ್ಚಿಸಿವೆ. ಕಮ್ಯೂನಿಷ್ಟ್ ಪಕ್ಷದ ಅಧಿಕಾರಿಗಳಿಗೆ ಅವರ ವ್ಯಾಪ್ತಿಯ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ನಿಗದಿತ ಮಟ್ಟಕ್ಕಿಂತ ಹೆಚ್ಚಾದರೆ ಶಿಕ್ಷೆ ವಿಧಿಸೋದಾಗಿ ಸರ್ಕಾರ ಎಚ್ಚರಿಸಿದೆ. 

2.5 ವರ್ಷ ಬಳಿಕ ದೇಶದಲ್ಲಿ ಶೂನ್ಯ ಕೊರೋನಾ ಸಾವು..!

ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ( Xi Jinping) ನೇತೃತ್ವದ ಪಕ್ಷವು ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ಸಂಸ್ಥೆಯ (WHO) ನಿಯಮಗಳನ್ನು ಅನುಷ್ಠಾನಗೊಳಿಸುವ ಸಲಹೆಗಳನ್ನು ಧಿಕ್ಕರಿಸಿದೆ. ಹಾಗೆಯೇ ವಿದೇಶಿ ಲಸಿಕೆಗಳನ್ನು (foreign vaccines) ಆಮದು (Import) ಮಾಡಿಕೊಳ್ಳಲು ನಿರಾಕರಿಸಿದೆ.  ವೈರಸ್‌ ಮೂಲದ ಬಗ್ಗೆ ಹೆಚ್ಚಿನ ಮಾಹಿತಿ ಬಿಡುಗಡೆಗೊಳಿಸುವಂತೆ ಮಾಡಿರುವ ವಿನಂತಿಗಳನ್ನು ಧಿಕ್ಕರಿಸಿದೆ. ಕೊರೋನಾ ವೈರಸ್ ಮೊಟ್ಟ ಮೊದಲ ಬಾರಿಗೆ  ಚೀನಾದ ವುಹಾನ್ (Wuhan) ನಗರದಲ್ಲಿ  2019ರ ಕೊನೆಯ ಭಾಗದಲ್ಲಿ ಪತ್ತೆಯಾಗಿತ್ತು. 

ಚೀನಾದಲ್ಲಿ ಕೋವಿಡ್‌ ನಿಯಂತ್ರಣದ ಹೆಸರಿನಲ್ಲಿ ಪ್ರಜೆಗಳಿಗೆ ಹಿಂಸೆ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಕೆಲ ದಿನಗಳ ಹಿಂದಷ್ಟೇ ಚೀನಾದ ಕೋವಿಡ್ ಐಸೋಲೇಷನ್ ಸೆಂಟರ್‌ಗಳ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚೀನಾದ ಕಪಟ ಮುಖವನ್ನು ಬಯಲಿಗೆಳೆದಿತ್ತು. 

Corona Crisis: ಕರ್ನಾಟಕದಲ್ಲಿ 83 ಮಂದಿಗೆ ಕೋವಿಡ್‌: ಒಬ್ಬ ಸೋಂಕಿತೆ ಸಾವು

ದೇಶದಲ್ಲಿ ಶೂನ್ಯ ಕೋವಿಡ್ (Zero covid) ಗುರಿ ತಲುಪಲು ಮುಂದಾಗಿರುವ ಚೀನಾ (China) ಇದಕ್ಕಾಗಿ ಇನ್ನಿಲ್ಲದ ಸಾಹಸ ಮಾಡಿ ಪ್ರಜೆಗಳನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಇತ್ತೀಚೆಗೆ ಚೀನಾದೆಂದು ಹೇಳಲಾದ ಆದರೆ ಖಚಿತವಾಗದ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ (Viral video) ಆಗಿದ್ದು, ಇದರಲ್ಲಿ ಕೋವಿಡ್ ರೋಗಿಯೋರ್ವನನ್ನು ಕ್ರೇನ್ (Crane) ಮೂಲಕ ಸ್ಥಳಾಂತರಿಸುವ ದೃಶ್ಯ ಸೆರೆ ಆಗಿದೆ. ಈ ಕಠಿಣ ಲಾಕ್‌ಡೌನ್ ಬಗ್ಗೆ ಜಾಗತಿಕ ಮಟ್ಟದಲ್ಲಿ ಚೀನಾ ವಿರುದ್ಧ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ. 

Follow Us:
Download App:
  • android
  • ios