ಅತಿ ಹೆಚ್ಚು ಬೇಡಿಕೆ ಇರೋ ಈ ಬ್ಯುಸಿನೆಸ್ ಶುರು ಮಾಡಿ ಸಂಪಾದನೆ ಆರಂಭಿಸಿ
ಬ್ಯುಸಿನೆಸ್ ಶುರು ಮಾಡ್ಬೇಕು ಎನ್ನುವ ಕನಸನ್ನು ಅನೇಕರು ಹೊಂದಿದ್ದಾರೆ. ಆದ್ರೆ ಯಾವ ಬ್ಯುಸಿನೆಸ್ ಎಂಬ ಪ್ರಶ್ನೆ ಜನರನ್ನು ಕಾಡ್ತಿದೆ. ಅತೀ ಹೆಚ್ಚು ಬೇಡಿಕೆ ಇರುವ ಪೆಟ್ರೋಲ್ ಪಂಪ್ ಬ್ಯುಸಿನೆಸ್ ಶುರು ಮಾಡಿ ನೀವು ಮೊದಲ ದಿನದಿಂದಲೇ ಗಳಿಕೆ ಆರಂಭಿಸಬಹುದು.
ದೇಶದಲ್ಲಿ ವಾಹನಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡು ಬಂದಿದೆ. ಮನೆಯಲ್ಲಿ ಒಂದು, ಎರಡು ವಾಹನ ಸಾಮಾನ್ಯ ಎನ್ನುವಂತಾಗಿದೆ. ಹೀಗಿರುವಾಗ ಪೆಟ್ರೋಲ್ (Petrol), ಡೀಸೆಲ್ (diesel) ಗೂ ಬೇಡಿಕೆ ಹೆಚ್ಚಾಗುತ್ತಿದೆ. ಸ್ವಂತ ಬ್ಯುಸಿನೆಸ್ ಶುರು ಮಾಡ್ಬೇಕು ಎನ್ನುವವರು ಪೆಟ್ರೋಲ್ ಪಂಪ್ (Petrol Pump) ತೆರೆದು ತಮ್ಮ ಗಳಿಕೆ ಆರಂಭಿಸಬಹುದು. ಪೆಟ್ರೋಲ್ ಪಂಪ್ ಶುರು ಮಾಡಲು ನಿಮ್ಮ ಬಳಿ 15 ಲಕ್ಷ ರೂಪಾಯಿ ಇದ್ರೆ ಸಾಕು.
ಪೆಟ್ರೋಲಿಯಂ ಕಂಪನಿಗಳು (Petroleum Companies) ಪೆಟ್ರೋಲ್ ಪಂಪ್‌ಗಳನ್ನು ತೆರೆಯುವ ಕೆಲಸವನ್ನು ಮಾಡುತ್ತವೆ. ಇದಕ್ಕಾಗಿ ಕಂಪನಿಗಳು ಪರವಾನಗಿ ನೀಡುತ್ತವೆ. ತೈಲ ಕಂಪನಿ ಹೊಸ ಪ್ರದೇಶದಲ್ಲಿ ಪೆಟ್ರೋಲ್ ಪಂಪ್ ತೆರೆಯುವ ಜಾಹೀರಾತು ಪ್ರಕಟಿಸುತ್ತದೆ. ಪೆಟ್ರೋಲ್ ಪಂಪ್‌ಗಳನ್ನು ತೆರೆಯಲು ಪರವಾನಗಿಗಳನ್ನು ದೇಶದಲ್ಲಿ BPCL, HPCL, IOCl, ರಿಲಯನ್ಸ್, ಎಸ್ಸಾರ್ ಆಯಿಲ್‌ನಂತಹ ಸಾರ್ವಜನಿಕ ಮತ್ತು ಖಾಸಗಿ ತೈಲ ಕಂಪನಿಗಳು ನೀಡುತ್ತವೆ.
ಗೌತಮ್ ಅದಾನಿ ವಿರುದ್ಧ ಭ್ರಷ್ಟಾಚಾರ ಆರೋಪ; ಹೂಡಿಕೆದಾರರಲ್ಲಿ ಆತಂಕ!
ಪೆಟ್ರೋಲ್ ಪಂಪ್ ಯಾರು ತೆರೆಯಬಹುದು? : ಪೆಟ್ರೋಲ್ ಪಂಪ್ ತೆರೆಯಲು ನಿಮಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯಸ್ಸು 60 ವರ್ಷಗಳು. ಸಾಮಾನ್ಯ ವರ್ಗದ ಅರ್ಜಿದಾರರು 12 ನೇ ತರಗತಿ ತೇರ್ಗಡೆಯಾಗಿರಬೇಕು. SC / ST / OBC ವರ್ಗದ ಅಭ್ಯರ್ಥಿಗಳು ಕನಿಷ್ಠ 10 ನೇ ತೇರ್ಗಡೆಯಾಗಿರಬೇಕು. ಭಾರತೀಯ ಪ್ರಜೆಗೆ ಮಾತ್ರ ಪೆಟ್ರೋಲ್ ಪಂಪ್ ತೆರೆಯುವ ಅವಕಾಶವಿದೆ. ನಗರ ಪ್ರದೇಶದಲ್ಲಿ ಪೆಟ್ರೋಲ್ ಪಂಪ್ ತೆರೆಯಲು ಅರ್ಜಿದಾರರು ಪದವೀಧರರಾಗಿರುವುದು ಕಡ್ಡಾಯವಾಗಿದೆ. ಪೆಟ್ರೋಲ್ ಪಂಪ್ ತೆರೆಯಲು 1200 ಚದರ ಮೀಟರ್‌ನಿಂದ 1600 ಚದರ ಮೀಟರ್ ಭೂಮಿ ಹೊಂದಿರಬೇಕು. ಸ್ವಂತ ಭೂಮಿ ಇಲ್ಲವೆ ಬಾಡಿಗೆ ಭೂಮಿಯಲ್ಲಿ ನೀವು ಪೆಟ್ರೋಲ್ ಪಂಪ್ ವ್ಯವಹಾರ ಶುರು ಮಾಡಬಹುದಾಗಿದೆ.
ಪೆಟ್ರೋಲ್ ಪಂಪ್ ತೆರೆಯಲು ಎಷ್ಟು ಖರ್ಚಾಗುತ್ತದೆ? : ನೀವು ಯಾವ ಪ್ರದೇಶದಲ್ಲಿ ಪೆಟ್ರೋಲ್ ಪಂಪ್ ಶುರು ಮಾಡ್ತಿದ್ದೀರಿ ಎಂಬುದರ ಆಧಾರದ ಮೇಲೆ ವೆಚ್ಚ ನಿರ್ಧಾರವಾಗುತ್ತದೆ. ನೀವು ಗ್ರಾಮೀಣ ಪ್ರದೇಶದಲ್ಲಿ ಪೆಟ್ರೋಲ್ ಪಂಪ್ ಶುರು ಮಾಡ್ತಿದ್ದರೆ ನಿಮ್ಮ ಖಾತೆಯಲ್ಲಿ 12 ಲಕ್ಷ ಇರಬೇಕು. ಅದೇ ನೀವು ನಗರ- ಪಟ್ಟಣದಲ್ಲಿ ಶುರು ಮಾಡ್ತಿದ್ದರೆ ಖರ್ಚು 25 ಲಕ್ಷ.
ಪರವಾನಗಿ ಅಗತ್ಯ : ನಗರ ಪ್ರದೇಶದಲ್ಲಿರಲಿ ಇಲ್ಲ ಗ್ರಾಮೀಣ ಪ್ರದೇಶದಲ್ಲಿರಲಿ ನೀವು ಪೆಟ್ರೋಲ್ ಪಂಪ್ ತೆರೆಯುವ ಮುನ್ನ ಪರವಾನಗಿ ಪಡೆಯಬೇಕು. ವಿವಿಧ ಸರ್ಕಾರಿ ಮತ್ತು ಖಾಸಗಿ ಪೆಟ್ರೋಲಿಯಂ ಕಂಪನಿಗಳ ಮೂಲಕ ಪರವಾನಗಿ ಪಡೆಯಬೇಕಾಗುತ್ತದೆ. ತೈಲ ಮಾರುಕಟ್ಟೆ ಕಂಪನಿಗಳ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಪೆಟ್ರೋಲ್ ಪಂಪ್ ಡೀಲರ್‌ಶಿಪ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಪೆಟ್ರೋಲ್ ಪಂಪ್ ತೆರೆಯುವ ಬಗ್ಗೆ ನೀವು ಇಂಡಿಯನ್ ಆಯಿಲ್‌ನ ಸಂಬಂಧಪಟ್ಟ ಚಿಲ್ಲರೆ ವಿಭಾಗೀಯ ಕಚೇರಿ/ಫೀಲ್ಡ್ ಅಧಿಕಾರಿಯನ್ನು ಸಹ ಸಂಪರ್ಕಿಸಬಹುದು.
1 ಸಾವಿರ ಉದ್ಯೋಗಿಗಳಿಗೆ ವಿದೇಶ ಪ್ರವಾಸ ಭಾಗ್ಯ ಕಲ್ಪಿಸಿ, ಹೃದಯದ ಮಾತು ಬಿಚ್ಚಿಟ್ಟ ಕಂಪನಿ
ಪೆಟ್ರೋಲ್ ಪಂಪ್ ನಿಂದ ನಿಮ್ಮ ಗಳಿಕೆ ಎಷ್ಟು? : ಪೆಟ್ರೋಲ್ ಪಂಪ್ ಶುರು ಮಾಡಿದ್ರೆ ನಿಮಗೆ ಸಂಬಳ ಸಿಗೋದಿಲ್ಲ. ಕಮಿಷನ್ ರೀತಿಯಲ್ಲಿ ನೀವು ಹಣವನ್ನು ಪಡೆಯಬಹುದು. ನೀವು ಪ್ರತಿ ನಿತ್ಯ ಎಷ್ಟು ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟ ಮಾಡುತ್ತೀರಿ ಎಂಬ ಆಧಾರದ ಮೇಲೆ ನಿಮಗೆ ಕಮಿಷನ್ ಸಿಗುತ್ತದೆ. ಒಂದು ಲೀಟರ್ ಡೀಸೆಲ್ ಮೇಲೆ ನಿಮಗೆ 1.5 ರೂಪಾಯಿಂದ 2 ರೂಪಾಯಿವರೆಗೆ ಉಳಿತಾಯವಾಗುತ್ತದೆ. ಪೆಟ್ರೋಲ್ ನಲ್ಲಿ 2 ರಿಂದ 3 ರೂಪಾಯಿ ಲಾಭವಾಗುತ್ತದೆ. ನೀವು ಹೆಚ್ಚು ಪೆಟ್ರೋಲ್- ಡೀಸೆಲ್ ಮಾರಾಟ ಮಾಡಿದಂತೆ ನಿಮ್ಮ ಗಳಿಕೆ ಹೆಚ್ಚಾಗುತ್ತದೆ.