Health

ಧೂಮಪಾನ ತ್ಯಜಿಸಿ

ಅನೇಕರು ಧೂಮಪಾನ ಬಿಡ್ಬೇಕು ಅಂತ ಬಯಸ್ತಾರೆ, ಆದರೆ ಇಸಿಯಾಗಿ ಬೆಳೆಸಿಕೊಂಡ ಚಟವನ್ನು ಅಷ್ಟು ಸುಲಭವಾಗಿ ಬಿಡಲಾಗದು. ಆದ್ರೆ ನಟ ಶಾರುಖ್ ಖಾನ್ ಅವರ ಈ ಟಿಪ್ಸ್ ಫಾಲೋ ಮಾಡುವ ಮೂಲಕ ನೀವು ಈ ಚಟದಿಂದ ದೂರಾಗಬಹುದು.

ಚೈನ್ ಸ್ಮೋಕರ್ ಆಗಿದ್ದ ಶಾರುಖ್

ಏಕೆಂದರೆ ನಟ ಶಾರುಖ್ ಖಾನ್ ಅವರು ಕೂಡ ಹಿಂದೊಮ್ಮೆ ಚೈನ್ ಸ್ಮೋಕರ್ ಆಗಿದ್ದವರು. ಆದರೆ ಅವರು ತಮ್ಮ 59ನೇ ಹುಟ್ಟುಹಬ್ಬಕ್ಕೆ ಧೂಮಪಾನ ತ್ಯಜಿಸಲು ಬಯಸಿ ಯಶಸ್ವಿಯಾದ್ರು.

ಧೂಮಪಾನ ತ್ಯಜಿಸಿದಾಗ ಲಕ್ಷಣಗಳು

ಚಟ ಬಿಡುವುದು ಅಷ್ಟು ಸುಲಭ ಅಲ್ಲ, ಸ್ಮೋಕಿಂಗ್ ತ್ಯಜಿಸುವುದರಿಂದ ನಿಮಗೆ ಆರಂಭದಲ್ಲಿ ಅಜೀರ್ಣ, ತೂಕ ಹೆಚ್ಚಳ, ಆತಂಕ ಕೆಮ್ಮು ಇರಬಹುದು. ಆದರೆ 2 ರಿಂದ 6 ವಾರಗಳಲ್ಲಿ ಈ ಲಕ್ಷಣಗಳು ಕ್ರಮೇಣ ಕಡಿಮೆಯಾಗುತ್ತವೆ.

48 ಗಂಟೆಗಳಲ್ಲಿ ಮೊದಲ ಧನಾತ್ಮಕ ಲಕ್ಷಣ

ಧೂಮಪಾನ ತ್ಯಜಿಸಿದಾಗ ದೇಹವು ನಿಧಾನವಾಗಿ ಚೇತರಿಸಿಕೊಳ್ಳಲು ಆರಂಭಿಸುತ್ತದೆ, ಹೃದಯ ಬಡಿತ ಸಾಮಾನ್ಯವಾಗುತ್ತದೆ, ರಕ್ತದೊತ್ತಡ ಸಾಮಾನ್ಯವಾಗುತ್ತದೆ ಮತ್ತು ಧೂಮಪಾನ ತ್ಯಜಿಸಿದ 48 ಗಂಟೆಗಳಲ್ಲಿ ನಿಮಗಿದರ ಅನುಭವ ಆಗುತ್ತದೆ.

ಸಿಗರೇಟ್ ಬದಲಿಗೆ ಇವುಗಳನ್ನು ಬಳಸಿ

ನೀವು ಸಿಗರೇಟ್ ತ್ಯಜಿಸಿದ್ದರೆ, ಚೂಯಿಂಗ್ ಗಮ್ ಅಥವಾ ಆರಂಭದಲ್ಲಿ ನಿಕೋಟಿನ್ ಚೂಯಿಂಗ್ ಗಮ್ ಅನ್ನು ಬಳಸಬಹುದು. ಇದಲ್ಲದೆ, ಫಿಡ್ಜೆಟ್ ಸ್ಪಿನ್ನರ್ ಜೊತೆಯಲ್ಲಿರಿಸಿಕೊಳ್ಳಿ

ಹೆಚ್ಚು ನೀರು ಕುಡಿಯಿರಿ

ಮೊದಲಿಗೆ ಜೀವನಶೈಲಿ ಬದಲಾಯಿಸಿ. ಧೂಮಪಾನ ತ್ಯಜಿಸಿದ ನಂತರ ಹೆಚ್ಚು ನೀರು ಕುಡಿಯಿರಿ ಮತ್ತು ಸಾಕಷ್ಟು ವಿಶ್ರಾಂತಿ ಪಡೆಯಿರಿ. ನಿಮಗೆ ಸಿಗರೇಟ್ ತೆಗೆದುಕೊಳ್ಳುವ ಬಯಕೆ ಉಂಟಾಗದಂತೆ ಕೆಲಸದಲ್ಲಿ ನಿರತರಾಗಿರಿ.

ವ್ಯಾಯಾಮಕ್ಕೆ ಆದ್ಯತೆ ನೀಡಿ

ಸಿಗರೇಟ್‌ನಿಂದ ದೇಹಕ್ಕಾದ ಹಾನಿಯನ್ನು ಕಡಿಮೆ ಮಾಡಲು ನೀವು ನಿಯಮಿತ ವ್ಯಾಯಾಮಗಳಾದ ಯೋಗ, ಕಾರ್ಡಿಯೋ, ಸ್ನಾಯು ತರಬೇತಿ, ಓಟ, ಈಜು ಮುಂತಾದವುಗಳನ್ನು ಮಾಡಬಹುದು.

ಆಹಾರಕ್ರಮದ ಬಗ್ಗೆ ವಿಶೇಷ ಗಮನವಿರಲಿ

ಧೂಮಪಾನ ತ್ಯಜಿಸಿದ ನಂತರ ನೀವು ದಿನಕ್ಕೆ ಕನಿಷ್ಠ ಎರಡು ಬಾರಿ ಹಣ್ಣುಗಳು, ಹಸಿರು ತರಕಾರಿಗಳು, ಹೆಚ್ಚಿನ ಪ್ರೋಟೀನ್ ಆಹಾರವನ್ನು ಸೇವಿಸಬೇಕು.

ಕುಟುಂಬದ ಬೆಂಬಲ

ನಿಕೋಟಿನ್ ಪ್ಯಾಚ್ ಮತ್ತು ಗಮ್ ಧೂಮಪಾನ ತ್ಯಜಿಸಲು ಸಹಾಯ ಮಾಡುವುದಿಲ್ಲ. ಇದಕ್ಕಾಗಿ ನಿಮಗೆ ಪ್ರೇರಣೆ, ಕುಟುಂಬದ ಬೆಂಬಲ ಮತ್ತು ಸರಿಯಾದ ರೀತಿಯ ಸಮಾಲೋಚನೆ ಅಗತ್ಯವಿದೆ, ಆಗ ಮಾತ್ರ ನೀವು ಧೂಮಪಾನವನ್ನು ತ್ಯಜಿಸಲು ಸಾಧ್ಯ.

ಧೃಡಸಂಕಲ್ಪ

ಅದೆಲ್ಲದಕ್ಕಿಂತ ಹೆಚ್ಚಾಗಿ ನಿಮ್ಮಲ್ಲಿ ಧೃಡ ಸಂಕಲ್ಪ ಇರಬೇಕು. ಮನಸ್ಸು ಮತ್ತೆ ಮತ್ತೆ ಅತ್ತ ವಾಲದಂತೆ ಮನಸ್ಸನ್ನು ಧೃಢ ಸಂಕಲ್ಪದಿಂದ ನಿಯಂತ್ರಿಸಿಕೊಂಡರೆ ಮಾತ್ರ ಇದು ಸಾಧ್ಯ. 

Image credits: freepik

ಚಳಿಗಾಲ ಮುಖ ಫಳ ಫಳ ಹೊಳಿಬೇಕಾ: ಈ ಟೋಮ್ಯಾಟೋ ಫೇಸ್‌ಪ್ಯಾಕ್‌ ಹಾಕಿ

ಯೂರಿಕ್ ಆಸಿಡ್ ಕಡಿಮೆ ಮಾಡಲು ಡ್ರೈಪ್ರೂಟ್ಸ್‌ ತಪ್ಪದೇ ತಿನ್ನಿ, ಈ ಕಾಯಿಲೆ ತಪ್ಪಿಸಿ

ಈ ಸಮಸ್ಯೆ ಇರೋರು ದಿನಾ ಬ್ಲ್ಯಾಕ್ ಕಾಫಿ ಕುಡಿಯೋದು ಒಳ್ಳೆಯದಲ್ಲ!

ಇದು ನೆಲ್ಲಿಕಾಯಿ ಸೀಸನ್: ನಿತ್ಯವೂ ಒಂದು ನೆಲ್ಲಿಕಾಯಿ ತಿನ್ನಿ ಮ್ಯಾಜಿಕ್ ನೋಡಿ