LIC IPO:ನಾಳೆಗೆ ಇಂದೇ ಸಿಕ್ಕಿತು ಶುಭ ಶಕುನ ; ಆ್ಯಂಕರ್ ಹೂಡಿಕೆದಾರರಿಂದ 5,627 ಕೋಟಿ ರೂ. ಸಂಗ್ರಹಿಸಿದ ಎಲ್ಐಸಿ
*123 ಆ್ಯಂಕರ್ ಹೂಡಿಕೆದಾರರಿಗೆ ಪ್ರತಿ ಷೇರಿಗೆ 949ರೂ.ನಂತೆ 5.93 ಕೋಟಿ ಇಕ್ವಿಟಿ ಷೇರುಗಳ ವಿತರಣೆ
*ಶೇ. 71ಕ್ಕೂ ಅಧಿಕ ಷೇರುಗಳನ್ನು 99 ಯೋಜನೆಗಳ ಮೂಲಕ ಖರೀದಿಸಿದ 15ಕ್ಕೂ ಹೆಚ್ಚು ದೇಶೀಯ ಮ್ಯೂಚ್ಯುವಲ್ ಫಂಡ್ ಗಳು
*1,006.89 ಕೋಟಿ ರೂ. ಹೂಡಿಕೆ ಮಾಡುವ ಮೂಲಕ ಅತೀದೊಡ್ಡ ಹೂಡಿಕೆದಾರನಾಗಿ ಮೂಡಿಬಂದ ಎಸ್ ಬಿಐ ಮ್ಯೂಚ್ಯುವಲ್ ಫಂಡ್
ಮುಂಬೈ (ಮೇ 3): ಭಾರತೀಯ ಜೀವ ವಿಮಾ ನಿಗಮದ (LIC)ಬಹುನಿರೀಕ್ಷಿತ ಐಪಿಒ ಮೇ 4 ರಿಂದ ಆರಂಭವಾಗಲಿದೆ. ಇದು ಭಾರತದ ಅತೀದೊಡ್ಡ ಐಪಿಒ ಎಂಬ ಹೆಗ್ಗಳಿಕೆ ಗಳಿಸಿದ್ದು, ಆ್ಯಂಕರ್ ಹೂಡಿಕೆದಾರರಿಗೆ ಸೋಮವಾರದಿಂದಲೇ (ಮೇ 2) ಆರಂಭಿಕ ಷೇರುಗಳನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆ್ಯಂಕರ್ ಹೂಡಿಕೆದಾರರಿಂದ 5,627 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದು ಎಲ್ಐಸಿ ಮಂಗಳವಾರ (ಮೇ 3) ಘೋಷಿಸಿದೆ
21,000 ಕೋಟಿ ರೂ. ಮೊತ್ತದ ಐಪಿಒಗೆ ಸಜ್ಜಾಗಿರುವ ಎಲ್ಐಸಿ, 123 ಆ್ಯಂಕರ್ ಹೂಡಿಕೆದಾರರಿಗೆ ಪ್ರತಿ ಷೇರಿಗೆ 949ರೂ.ನಂತೆ 5.93 ಕೋಟಿ ಇಕ್ವಿಟಿ ಷೇರುಗಳನ್ನು ವಿತರಿಸುವ ಮೂಲಕ 5,627 ಕೋಟಿ ರೂ. ಸಂಗ್ರಹಿಸಿದೆ. ಹಂಚಿಕೆಯಾದ 5.93 ಕೋಟಿ ಇಕ್ವಿಟಿ ಷೇರುಗಳಲ್ಲಿ ಶೇ. 71ಕ್ಕೂ ಅಧಿಕ ಷೇರುಗಳನ್ನು 99 ಯೋಜನೆಗಳ ಮೂಲಕ 15ಕ್ಕೂ ಹೆಚ್ಚು ದೇಶೀಯ ಮ್ಯೂಚ್ಯುವಲ್ ಫಂಡ್ ಗಳು ಖರೀದಿಸಿವೆ. ಅದರಲ್ಲೂ ಎಸ್ ಬಿಐ ಮ್ಯೂಚ್ಯುವಲ್ ಫಂಡ್ (SBI Mutual Fund) 1,006.89 ಕೋಟಿ ರೂ. ಹೂಡಿಕೆ ಮಾಡುವ ಮೂಲಕ ಆ್ಯಂಕರ್ ಬುಕ್ ಕೋಟಾದಲ್ಲಿ ಅತೀದೊಡ್ಡ ಹೂಡಿಕೆದಾರನಾಗಿ ಕಾಣಿಸಿಕೊಂಡಿದೆ. ಎಸ್ ಬಿಐ ಇಕ್ವಿಟಿ ಹೈಬ್ರಿಡ್ ಫಂಡ್ (SBI Equity Hybrid Fund) ಒಂದೇ 518.99 ಕೋಟಿ ರೂ. ಹೂಡಿಕೆ ಮಾಡಿದೆ.
LIC IPO: ನಾಳೆ ಎಲ್ಐಸಿ ಐಪಿಒ; ಗಾತ್ರ, ಬೆಲೆ, ಡಿಸ್ಕೌಂಟ್ , ಆನ್ ಲೈನ್ ಷೇರು ಖರೀದಿಯ ಸಂಪೂರ್ಣ ಮಾಹಿತಿ ಇಲ್ಲಿದೆ
ಇನ್ನು ಐಸಿಐಸಿಐ ಪ್ರುಡೆನ್ಷಿಯಲ್ ಮ್ಯೂಚ್ಯುವಲ್ ಫಂಡ್ (ICICI Prudential Mutual Fund) ಎಲ್ಐಸಿ ಐಪಿಒನಲ್ಲಿ 725 ಕೋಟಿ ರೂ. ಹೂಡಿಕೆ ಮಾಡಿದೆ. ಎಚ್ ಡಿಎಫ್ ಸಿ ಮ್ಯೂಚ್ಯುವಲ್ ಫಂಡ್ ಗೆ (HDFC Mutual Fund) 525 ಕೋಟಿ ರೂ. ಮೌಲ್ಯದ ಷೇರುಗಳನ್ನು ಹಂಚಿಕೆ ಮಾಡಲಾಗಿದೆ. ಆದಿತ್ಯ ಬಿರ್ಲಾ ಸನ್ ಲೈಫ್ ಮ್ಯೂಚ್ಯುವಲ್ ಫಂಡ್ (Aditya Birla Sun Life MF), ಎಕ್ಸಿಸ್ ಮ್ಯೂಚ್ಯುವಲ್ ಫಂಡ್ (Axis Mutual Fund), ಕೋಟಕ್ ಮ್ಯೂಚ್ಯುವಲ್ ಫಂಡ್ ( Kotak MF), ಎಲ್ ಆ್ಯಂಡ್ ಟಿ ಮ್ಯೂಚ್ಯುವಲ್ ಫಂಡ್ (L&T MF) ಹಾಗೂ ನಿಪ್ಪನ್ ಇಂಡಿಯಾ ಮ್ಯೂಚ್ಯುವಲ್ ಫಂಡ್ (Nippon India MF) ಕೂಡ ಎಲ್ಐಸಿ ಆ್ಯಂಕರ್ ಭಾಗದ ಪ್ರಮುಖ ಇತರ ಹೂಡಿಕೆದಾರರಾಗಿದ್ದಾರೆ.
ವಿದೇಶಿ ಹೂಡಿಕೆದಾರರಲ್ಲಿ ಬಿಎನ್ ಪಿ ಇನ್ವೆಸ್ಟ್ ಮೆಂಟ್ಸ್ (BNP Investments) 449.99 ಕೋಟಿ ರೂ. ಮೌಲ್ಯದ ಷೇರುಗಳನ್ನು, ನಾರ್ವೆ ಸರ್ಕಾರಿ ಪಿಂಚಣಿ ನಿಧಿ ಗ್ಲೋಬಲ್ ಆಫ್ ನಾರ್ವೆ 224.99 ಕೋಟಿ ರೂ., ಸಿಂಗಾಪುರ ಸರ್ಕಾರ 151.67 ಕೋಟಿ ರೂ. ಹಾಗೂ ಸಿಂಗಾಪುರದ ಹಣಕಾಸು ಪ್ರಾಧಿಕಾರ 38.32 ಕೋಟಿ ರೂ. ಹೂಡಿಕೆ ಮಾಡಿವೆ. ಆ್ಯಂಕರ್ ಹೂಡಿಕೆದಾರರಿಗೆ ಮೀಸಲಿಟ್ಟ 5,627 ಕೋಟಿ ರೂ.ಗಿಂತಲೂ ಹೆಚ್ಚಿನ 7,000 ಕೋಟಿ ರೂ. ತನಕ ಹೂಡಿಕೆದಾರರು ಬಿಡ್ ಮಾಡಿದ್ದರು ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
LIC IPO: ಗ್ರಾಹಕರಿಗೆ ಎಸ್ ಬಿಐ ಆಫರ್! ಯೋನೋ ಅಪ್ಲಿಕೇಷನ್ ಮೂಲಕ ಡಿಮ್ಯಾಟ್ ಖಾತೆ ತೆರೆಯಲು ಅವಕಾಶ
ಎಲ್ಐಸಿ ಐಪಿಒ ಮೇ 4ರಿಂದ ಮೇ 9ರವರೆಗೆ ನಡೆಯಲಿದೆ. ಈ ಐಪಿಒ ಮೂಲಕ ಸರ್ಕಾರ ಶೇ.3.5 ಷೇರುಗಳನ್ನು ಮಾರಾಟ ಮಾಡಿ ಸುಮಾರು 21,000 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದೆ. ಎಲ್ಐಸಿಯ ಪ್ರತಿ ಷೇರಿಗೆ 902ರೂ.-949ರೂ. ಬೆಲೆ ನಿಗದಿಪಡಿಸಲಾಗಿದೆ. ಎಲ್ ಐಸಿ ಪಾಲಿಸಿದಾರರಿಗೆ (Policyholders) ಪ್ರತಿ ಷೇರಿನ ಮೇಲೆ 60ರೂ. ಡಿಸ್ಕೌಂಟ್ (Discount) ನೀಡಲಾಗಿದೆ. ಇನ್ನು ಎಲ್ಐಸಿ ಸಿಬ್ಬಂದಿ (employees) ಹಾಗೂ ರಿಟೇಲ್ ಹೂಡಿಕೆದಾರರಿಗೆ (Retail Investors) ಪ್ರತಿ ಷೇರಿನ ಮೇಲೆ 45ರೂ. ಡಿಸ್ಕೌಂಟ್ ನೀಡಲಾಗಿದೆ.