LIC IPO: ನಾಳೆ ಎಲ್ಐಸಿ ಐಪಿಒ; ಗಾತ್ರ, ಬೆಲೆ, ಡಿಸ್ಕೌಂಟ್ , ಆನ್ ಲೈನ್ ಷೇರು ಖರೀದಿಯ ಸಂಪೂರ್ಣ ಮಾಹಿತಿ ಇಲ್ಲಿದೆ

ನಾಳೆ ನಡೆಯಲಿರುವ ಎಲ್ಐಸಿ ಐಪಿಒ ದೇಶಾದ್ಯಂತ ಸಾಕಷ್ಟು ಕುತೂಹಲ ಮೂಡಿಸಿದೆ. ಇದನ್ನು ಭಾರತದ ಅತೀದೊಡ್ಡ ಐಪಿಒ ಎಂದು ಕರೆಯಲಾಗಿದ್ದು,ಇದರಲ್ಲಿ ಪಾಲ್ಗೊಳ್ಳುವವರು ಕೆಲವು ವಿಷಯಗಳ ಮಾಹಿತಿ ಹೊಂದಿರುವುದು ಅಗತ್ಯ.ಷೇರಿನ ಬೆಲೆ, ಡಿಸ್ಕೌಂಟ್ ಸೇರಿದಂತೆ ಆನ್ ಲೈನ್ ಮೂಲಕ ಐಪಿಒನಲ್ಲಿ ಪಾಲ್ಗೊಳ್ಳುವುದು ಹೇಗೆ ಎಂಬ ಪೂರ್ಣ ಮಾಹಿತಿ ಇಲ್ಲಿದೆ.  
 

LIC IPO to open for subscription on May 4 know all about IPO size discount price and how to apply

Business Desk:ಭಾರತೀಯ ಜೀವ ವಿಮಾ ನಿಗಮದ (LIC) ಬಹುನಿರೀಕ್ಷಿತ ಐಪಿಒ (IPO) ನಾಳೆ (ಮೇ 4) ಪ್ರಾರಂಭವಾಗಲಿದೆ. ಇದು ಭಾರತದ ಅತೀದೊಡ್ಡ ಐಪಿಒ ಆಗುವ ನಿರೀಕ್ಷೆಯಿದ್ದು, ಕೇಂದ್ರ ಸರ್ಕಾರ  21,000 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದೆ. 

ಷೇರಿನ ಬೆಲೆ ಎಷ್ಟು?:ಎಲ್ಐಸಿಯ (LIC) ಪ್ರತಿ ಇಕ್ವಿಟಿ ಷೇರಿಗೆ (equity share) 902ರೂ. ನಿಂದ 949ರೂ. ಬೆಲೆ ನಿಗದಿಪಡಿಸಲಾಗಿದೆ. ಐಪಿಒ ನಡೆಯುವ ದಿನಾಂಕ
ಎಲ್ಐಸಿ ಐಪಿಒ ಮೇ 4 ಕ್ಕೆ ಪ್ರಾರಂಭವಾಗಿ ಮೇ 9ರ ತನಕ ನಡೆಯಲಿದೆ.ಆಂಕರ್ ಹೂಡಿಕೆದಾರರಿಗೆ (anchor investor) ಮೇ 2ಕ್ಕೆ ಪ್ರಾರಂಭವಾಗಿದೆ.
ಯಾರಿಗೆ ಸಿಗುತ್ತೆ ಡಿಸ್ಕೌಂಟ್?: ಎಲ್ ಐಸಿ ಪಾಲಿಸಿದಾರರಿಗೆ (Policyholders) ಪ್ರತಿ ಷೇರಿನ ಮೇಲೆ  60ರೂ. ಡಿಸ್ಕೌಂಟ್ (Discount)ನೀಡಲಾಗಿದೆ. ಎಲ್ಐಸಿಯಲ್ಲಿ 30 ಕೋಟಿ ಪಾಲಿಸಿದಾರರಿದ್ದಾರೆ.  ಇನ್ನು ಎಲ್ಐಸಿ ಸಿಬ್ಬಂದಿ (employees) ಹಾಗೂ ರಿಟೇಲ್ ಹೂಡಿಕೆದಾರರಿಗೆ (Retail Investors) ಪ್ರತಿ ಷೇರಿನ ಮೇಲೆ 45ರೂ. ಡಿಸ್ಕೌಂಟ್ ನೀಡಲಾಗಿದೆ. 
ಎಲ್ಐಸಿ ಪಾಲಿಸಿದಾರರಿಗೆ ಷೇರು ಮೀಸಲು: ಎಲ್ಐಸಿ ಪಾಲಿಸಿದಾರರು ಹಾಗೂ ಉದ್ಯೋಗಿಗಳಿಗೆ ಐಪಿಒನಲ್ಲಿ ಪಾಲ್ಗೊಳ್ಳುವಂತೆ ಉತ್ತೇಜನ ನೀಡಲು ಸರ್ಕಾರ ಷೇರುಗಳನ್ನು ಮೀಸಲಿಟ್ಟಿದೆ.  ಎಲ್ಐಸಿ ಪಾಲಿಸಿದಾರರಿಗೆ ಶೇ.10ರಷ್ಟು ಷೇರುಗಳನ್ನು ಮೀಸಲಿಟ್ಟಿದೆ. ಇನ್ನು ಎಲ್ಐಸಿ ಉದ್ಯೋಗಿಗಳಿಗೆ ಶೇ.5ರಷ್ಟು ಷೇರುಗಳನ್ನು ಮೀಸಲಿಡಲಾಗಿದೆ. ರಿಟೇಲ್ ಹೂಡಿಕೆದಾರರಿಗೆ ಶೇ.35ರಷ್ಟು ಷೇರುಗಳನ್ನು ಮೀಸಲಿಡಲಾಗಿದೆ. 

LIC IPO:ಮೇ 4-9ರ ತನಕ ಎಲ್ಐಸಿ ಐಪಿಒ; ಪ್ರತಿ ಷೇರಿನ ಬೆಲೆ ಎಷ್ಟು ಗೊತ್ತಾ? ಪಾಲಿಸಿದಾರರಿಗೆ ಡಿಸ್ಕೌಂಟ್ ಆಫರ್!

ಹಂಚಿಕೆ ದಿನಾಂಕ (allotment date): ಷೇರುಗಳನ್ನು ಮೇ 12ಕ್ಕೆ  ಹಂಚಿಕೆ ಮಾಡಲಾಗುತ್ತದೆ. 
ಷೇರು ವರ್ಗಾವಣೆ: ಡಿಮ್ಯಾಟ್ (Demate) ಖಾತೆಗಳಿಗೆ ಮೇ 16ರಂದು ಷೇರುಗಳನ್ನು ವರ್ಗಾವಣೆ ಮಾಡಲಾಗುತ್ತದೆ. 
ಲಿಸ್ಟಿಂಗ್  (listing)ದಿನಾಂಕ:  ಮೇ 17ರಂದು  ವಿನಿಮಯ ಕೇಂದ್ರಗಳಾದ ಬಿಎಸ್ ಇ (BSE) ಹಾಗೂ ಎನ್ಎಸ್ಇಯಲ್ಲಿ (NSE) ಷೇರುಗಳ ಲಿಸ್ಟಿಂಗ್ ನಡೆಯಲಿದೆ. 
ಐಪಿಒ ಗಾತ್ರ (IPO size): ಎಲ್ಐಸಿಯಲ್ಲಿ ಕೇಂದ್ರ ಸರ್ಕಾರ ಶೇ.100ರಷ್ಟು ಷೇರುಗಳನ್ನು ಹೊಂದಿದೆ. ಇದರಲ್ಲಿ ಶೇ. 3.5ರಷ್ಟು ಅಥವಾ  22.13 ಕೋಟಿ ಷೇರುಗಳನ್ನು ಮಾತ್ರ ಮಾರಾಟ ಮಾಡಲು ನಿರ್ಧರಿಸಿದೆ. ಈ ಮೂಲಕ 21,008.48 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದೆ. 
ಬಿಡ್ ಮಿತಿ (application limit):  ಅರ್ಜಿದಾರ ಲಾಟ್ ಲೆಕ್ಕದಲ್ಲಿ ಬಿಡ್ ಮಾಡಬಹುದಾಗಿದೆ. ಒಂದು ಲಾಟ್ ನಲ್ಲಿ 15 ಎಲ್ ಐಸಿ ಷೇರುಗಳಿರುತ್ತವೆ. ಒಬ್ಬ ವ್ಯಕ್ತಿ ಕನಿಷ್ಠ ಒಂದು ಲಾಟ್ ಅಥವಾ 15 ಷೇರುಗಳಿಗೆ ಬಿಡ್ ಮಾಡಬಹುದು. ಇನ್ನು ಗರಿಷ್ಠ ಬಿಡ್ ಮಿತಿ 14 ಲಾಟ್ ಅಥವಾ 210 ಷೇರುಗಳು. 
ಹೂಡಿಕೆ ಮಿತಿ (investment limit): ಕನಿಷ್ಠ ಹೂಡಿಕೆ ಮಿತಿ 14,235 ರೂ. ( ₹949 x 15). ಇನ್ನು ಗರಿಷ್ಠ ಹೂಡಿಕೆ ಮಿತಿ ₹1,99,290 ರೂ. [( ₹949 x 15) x 14].
ಎಲ್ ಐಸಿ ಐಪಿಒ ರಿಜಿಸ್ಟ್ರಾರ್ (registrar): KFin Technologies Limited.

LIC IPO: ಗ್ರಾಹಕರಿಗೆ ಎಸ್ ಬಿಐ ಆಫರ್! ಯೋನೋ ಅಪ್ಲಿಕೇಷನ್ ಮೂಲಕ ಡಿಮ್ಯಾಟ್ ಖಾತೆ ತೆರೆಯಲು ಅವಕಾಶ

ಐಪಿಒಗೆ ಅಪ್ಲೈ ಮಾಡೋದು ಹೇಗೆ?
ಎಲ್ಐಸಿ ಐಪಿಒಗೆ ಅಪ್ಲೈ ಮಾಡಲು ನೀವು ಡಿಮ್ಯಾಟ್ ಖಾತೆ ತೆರೆಯಬೇಕು ಹಾಗೂ ಕೆವೈಸಿ  (KYC) ಪೂರ್ಣಗೊಳಿಸಿರಬೇಕು. ಆ ಬಳಿಕ ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸುವ ಮೂಲಕ ಐಪಿಒಗೆ ಅಪ್ಲೈ ಮಾಡಿ. ಇದರ ಜೊತೆಗೆ ಗುರುತು ದೃಢೀಕರಣ ದಾಖಲೆ, ವಯಸ್ಸಿನ ದಾಖಲೆ ಹಾಗೂ ಬ್ಯಾಂಕ್ ವಿವರಗಳು ಸೇರಿದಂತೆ ಕೆಲವು ದಾಖಲೆಗಳನ್ನು ನೀವು ಹೊಂದಿರಬೇಕು. ಇನ್ನು ಎಲ್ಐಸಿ ಪಾಲಿಸಿದಾರರು ಅವರ ಪಾಲಿಸಿ ಹಾಗೂ  ಡಿಮ್ಯಾಟ್ ಖಾತೆಯನ್ನು ಪ್ಯಾನ್ (PAN) ಜೊತೆಗೆ ಲಿಂಕ್ ಮಾಡೋದು ಅಗತ್ಯ.
ಹಂತ 1: ನಿಮ್ಮ ನೆಟ್ ಬ್ಯಾಂಕಿಂಗ್ ಖಾತೆ ತೆರೆಯಿರಿ ಹಾಗೂ IPO/e-IPO ಆಯ್ಕೆಯನ್ನು ಆರಿಸಿ.
ಹಂತ 2: ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಲು ವೆಬ್ ಸೈಟ್ ನಲ್ಲಿ ಕೇಳಿರುವ ಬ್ಯಾಂಕ್ ವಿವರಗಳು ಹಾಗೂ ಇತರ ಮಾಹಿತಿಗಳನ್ನು ನಮೂದಿಸಿ.
ಹಂತ 3: Invest In IPO ಆಯ್ಕೆ ಆರಿಸಿ ಹಾಗೂ LIC ಆಯ್ಕೆ ಮಾಡಿ.
ಹಂತ 4: ಷೇರುಗಳ ಸಂಖ್ಯೆ ಹಾಗೂ ಬಿಡ್ ಬೆಲೆ ನಮೂದಿಸಿ. ಆ ಬಳಿಕ ಪ್ರಕ್ರಿಯೆ ಪೂರ್ಣಗೊಳಿಸಲು 'Apply Now'ಆಯ್ಕೆ ಮೇಲೆ ಕ್ಲಿಕ್ ಮಾಡಿ.


 

Latest Videos
Follow Us:
Download App:
  • android
  • ios