Asianet Suvarna News Asianet Suvarna News

ವೇಯಿಟ್ ಲಾಸ್: ಆಲೋವೆರಾ, ನಿಂಬೆ, ಜೇನು ಸೇರಿ ಮಾಡುತ್ತೆ ಮ್ಯಾಜಿಕ್

ವೇಯಿಟ್ ಲಾಸ್‌ಗೆ ಅಲೋವೆರಾ | ನಿಂಬೆ, ಜೇನು ಮಾಡುತ್ತೆ ಮ್ಯಾಜಿಕ್ | ಇಲ್ಲಿವೆ ಡೀಟೆಲ್ಸ್

This Aloe Vera Juice With Lemon And Honey May Work Wonders For Weight Loss dpl
Author
Bangalore, First Published Oct 25, 2020, 5:00 PM IST

ನಮ್ಮ ಆರೋಗ್ಯಕ್ಕೆ ಗುಣ ನೀಡುವ ಬಹಳಷ್ಟು ಅಂಶಗಳು ಪ್ರಕೃತಿಯಲ್ಲಿದೆ. ಅವುಗಳಲ್ಲಿ ಒಂದು ಅಲೋವೆರಾ. ಅಲೋವೆರಾ ಔಷಧೀಯ ಗುಣಗಳ ಬಗ್ಗೆ ಗೊತ್ತಾಗಿನಿಂದಲೂ ಬಹಳಷ್ಟು ಜನರು ಮನೆಯಲ್ಲೊಂದು ಅಲೋವೆರ ಗಿಡಕ್ಕಾಗುವಷ್ಟು ಜಾಗ ಮೀಸಲಿಡುತ್ತಾರೆ. ಈ ಅದ್ಭುತ ಗಿಡದಿಂದ ಜೆಲ್, ಕ್ರೀಂ, ಜ್ಯೂಸ್ ಸೇರಿ ಬಹಳಷ್ಟು ಉತ್ಪನ್ನಗಳನ್ನು ತಯಾರಿಸುತ್ತಾರೆ.

ಅಲೊವೆರಾ ಸೇವಿಸೋದ್ರಿಂದ ತ್ವಚೆಗೂ ಉತ್ತಮ ಆರೋಗ್ಯ ಲಭಿಸುತ್ತದೆ. ಇದನ್ನು ನಮ್ಮ ಡಯೆಟ್‌ನಲ್ಲಿ ಸೇರಿಸಿಕೊಳ್ಳೋವಷ್ಟು ಉತ್ತಮ ಅಂಶಗಳನ್ನು ಹೊಂದಿದೆ ಈ ಗಿಡ. ಅಲೊವೆರಾ ಗುಣಗಳಲ್ಲಿ ವೇಯಿಟ್ ಲಾಸ್ ಪ್ರಮುಖ ಅಂಶ.

ನಿಮ್ಗೂ ಕೆಮ್ಮು ಬರ್ತಿದ್ಯಾ..? ಇದು ಮಾಲೀನ್ಯದಿಂದ ಬಂತಾ, ಕೊರೋನಾದಿಂದಲಾ..? ಪತ್ತೆ ಮಾಡೋದೇಗೆ

ಇದು ತೂಕ ಇಳಿಸೋದರ ಜೊತೆಗೆ ಮೆಟಬಾಲಿಸಂ ಹೆಚ್ಚಿಸಿ, ಫ್ಯಾಟ್ ಕರಗಿಸಲು ನೆರವಾಗುತ್ತದೆ. ಜೀರ್ಣ ಕ್ರಿಯೆಗೂ ನೆರವಾಗುತ್ತದೆ. ಅಲೊವೆರಾವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು. ಗರ್ಭಿಣಿಯರೂ ಇದನ್ನು ಸೇವಿಸುವುದಿಲ್ಲ.

This Aloe Vera Juice With Lemon And Honey May Work Wonders For Weight Loss dpl

ಯಾರದರೂ ಒಂದು ಪ್ಯಾಕ್ ಅಲೊವೆರಾ ಕೊಂಡು ಜ್ಯೂಸ್ ತೆಗೆದು ಬಳಸಬಹುದು. ಇದು ಕಹಿಯಾಗಿರುತ್ತದೆ. ಅದಕ್ಕಾಗಿ ಜೇನು ಬೆರೆಸಬಹುದು. ವೇಯಿಟ್‌ ಲಾಸ್‌ಗೆ ಸುಲಭವಾಗಿ ಮಾಡಬಹುದಾಗ ಅಲೊವೆರಾ ಜ್ಯೂಸ್ ರೆಸಿಪಿ ಇಲ್ಲಿದೆ. ಬೇಕಾದ ವಸ್ತುಗಳು: ಅಲೊವೆರಾ ಜೆಲ್ - 2 ಟೇಬಲ್ ಸ್ಪೂನ್, ನಿಂಬೆ 1, ಜೇನು 1 ಟೇಬಲ್ ಸ್ಪೂನ್, ಪುದೀನ ಸ್ವಲ್ಪ.

This Aloe Vera Juice With Lemon And Honey May Work Wonders For Weight Loss dpl

ನಿಮಗೆ ಹೆಸರು ಬೇಳೆ ಮೊಟ್ಟೆ, ಸಸ್ಯಾಧರಿತ ಮಾಂಸ ಗೊತ್ತಾ?

ಮಾಡುವ ವಿಧಾನ: ಇವೆಲ್ಲವನ್ನೂ ಮಿಕ್ಸ್ ಮಾಡಿ ಕುಡಿಯಬೇಕು. ತೂಕ ಕಳೆದುಕೊಳ್ಳಲು ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿ. ಆರೋಗ್ಯ ತಜ್ಞರ ಪ್ರಕಾರ ಅಲೊವೆರಾವನ್ನು ತುಳಸಿ, ನೆಲ್ಲಿಕಾಯಿ ಜೊತೆಯೂ ಸೇರಿಸಬಹುದು.

Follow Us:
Download App:
  • android
  • ios