ವಕೀಲರು, ಬ್ಯೂಟಿಷಿಯನ್‌ಗಳು ತೆರಿಗೆ ವಂಚಿಸಿದ್ರೆ 1.5 ಪಟ್ಟು ದಂಡ

ವಕೀಲ ವೃತ್ತಿ, ಬ್ಯೂಟಿಶಿಯನ್‌, ಎಂಜಿನಿಯರ್‌ರಂತಹ ಕಸುಬು ಆಧಾರಿತ ಸ್ವಯಂ ಉದ್ಯೋಗದಲ್ಲಿ 2 ವರ್ಷಕ್ಕಿಂತ ಹೆಚ್ಚು ಕಾಲ ತೊಡಗಿಸಿಕೊಂಡಿರುವವರು ವರ್ಷಕ್ಕೆ 2,500 ರು. ತೆರಿಗೆ ಪಾವತಿಸಬೇಕು. ಉದ್ದೇಶಪೂರ್ವಕವಾಗಿ ತೆರಿಗೆ ಪಾವತಿಸದೆ ವಂಚಿಸಿದರೆ ಒಂದೂವರೆಪಟ್ಟು ದಂಡ ಪಾವತಿಸಬೇಕು

Lawyers and Beauticians cheating with tax if which confirmed then they should pay 1.5 extra fine akb

ಬೆಂಗಳೂರು: ವಕೀಲ ವೃತ್ತಿ, ಬ್ಯೂಟಿಶಿಯನ್‌, ಎಂಜಿನಿಯರ್‌ರಂತಹ ಕಸುಬು ಆಧಾರಿತ ಸ್ವಯಂ ಉದ್ಯೋಗದಲ್ಲಿ 2 ವರ್ಷಕ್ಕಿಂತ ಹೆಚ್ಚು ಕಾಲ ತೊಡಗಿಸಿಕೊಂಡಿರುವವರು ವರ್ಷಕ್ಕೆ 2,500 ರು. ತೆರಿಗೆ ಪಾವತಿಸಬೇಕು. ಉದ್ದೇಶಪೂರ್ವಕವಾಗಿ ತೆರಿಗೆ ಪಾವತಿಸದೆ ವಂಚಿಸಿದರೆ ಒಂದೂವರೆಪಟ್ಟು ದಂಡ ಪಾವತಿಸಬೇಕು ಎಂಬುದು ಸೇರಿದಂತೆ ಹಲವು ತಿದ್ದುಪಡಿಗಳನ್ನು ಒಳಗೊಂಡ ‘ಕರ್ನಾಟಕ ವೃತ್ತಿಗಳ, ಕಸುಬುಗಳ, ಆ ಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ (ತಿದ್ದುಪಡಿ) ವಿಧೇಯಕಕ್ಕೆ - 2023’ ಗುರುವಾರ ಅಂಗೀಕಾರ ದೊರೆತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basacaraja bommai) ಅವರು ಮಂಡಿಸಿದ ವಿಧೇಯಕದ ಪ್ರಕಾರ, ಈಗಾಗಲೇ 25 ಸಾವಿರ ಮತ್ತು ಹಚ್ಚಿನ ವೇತನ ಪಡೆಯುವ ವ್ಯಕ್ತಿಗಳು ತಿಂಗಳಿಗೆ 200 ರು. ವೃತ್ತಿ ತೆರಿಗೆ (ಪ್ರೊಫೆಷನಲ್‌ ಟ್ಯಾಕ್ಸ್‌), ಜಿಎಸ್‌ಟಿ (GST) ಅಡಿ ನೋಂದಾಯಿತರಾದ ವ್ಯಕ್ತಿಗಳು ವರ್ಷಕ್ಕೆ 2,500 ರು., 5ಕ್ಕಿಂತ ಹೆಚ್ಚು ಜನರನ್ನು ಉದ್ಯೋಗದಲ್ಲಿಟ್ಟುಕೊಂಡಿರುವ ಉದ್ದಿಮೆಗಳ ಮಾಲೀಕರು (Businessmen) ವರ್ಷಕ್ಕೆ 2,500 ರು. ತೆರಿಗೆ ಪಾವತಿಸಬೇಕು.

ಮನೆ ಖರೀದಿಯಲ್ಲಿ ಪತ್ನಿ ಪಾಲುದಾರಳೇ? ಹಾಗಿದ್ರೆ ಆಸ್ತಿ ಆದಾಯ ತೆರಿಗೆಯಲ್ಲೂ ಆಕೆಗೆ ಪಾಲಿದೆ!

ಜತೆಗೆ, ಕಾನೂನು ವೃತ್ತಿನಿರತರು (ಲಾಯರ್‌), ಸಮಾಲೋಚಕರು, ಡ್ರೈಕ್ಲೀನ​ರ್‍ಸ್, ಜಾಹೀರಾತು ಏಜೆನ್ಸಿ, ಕೇಬಲ್‌ ಆಪರೇಟರ್‌ಗಳು, ಕಂಪ್ಯೂಟರ್‌ ತರಬೇತಿ ಸಂಸ್ಥೆ, ಜ್ಯೋತಿಷಿಗಳು, ಇಂಟೀರಿಯರ್‌ ಡಿಸೈನರ್‌(Interior Designer), ಏಜೆಂಟರು, ಸಿಎಗಳು (CA), ಎಂಜಿನಿಯರ್‌, ದಲ್ಲಾಳಿಗಳು, ಬ್ಯೂಟಿಪಾರ್ಲರ್‌ರಂತಹ ಕಸುಬು ಆಧಾರಿತ ಉದ್ಯೋಗಗಳಲ್ಲಿ ಎರಡು ವರ್ಷಕ್ಕಿಂತ ಹೆಚ್ಚು ಕಾಲ ತೊಡಗಿಸಿಕೊಂಡಿರುವ ಸ್ವಯಂ ಉದ್ಯೋಗಿಗಳು ವರ್ಷಕ್ಕೆ 2,500 ರು. ತೆರಿಗೆ ಪಾವತಿಸಬೇಕು ಎಂಬ ನಿಯಮ ಮೊದಲಿನಿಂದಲೂ ಇದೆ. ಉದ್ದೇಶಪೂರ್ವಕವಾಗಿ ಈ ವಿಷಯವನ್ನು ಮರೆ ಮಾಚುವುದು ಅಥವಾ ತೆರಿಗೆ ವಂಚಿಸುವುದು ಮಾಡಿದರೆ ಒಂದೂವರೆ ಪಟ್ಟು ತೆರಿಗೆ ಸಂಗ್ರಹಿಸಬೇಕು ಎಂದು ತಿದ್ದುಪಡಿಯಲ್ಲಿ ಹೇಳಲಾಗಿದೆ.

ಕಷ್ಟದಲ್ಲೂ ₹15000 ಕೋಟಿ ತೆರಿಗೆ ಸಂಗ್ರಹಿಸಿ ಪ್ರಗತಿ: ಸಿಎಂ ಬಸವರಾಜ ಬೊಮ್ಮಾಯಿ

Latest Videos
Follow Us:
Download App:
  • android
  • ios