ಜನರಿಂದ ಸಂಗ್ರಹಿಸಿದ ಸೆಸ್ ಬಳಸದ ಕೇಂದ್ರ ಸರ್ಕಾರ! ಒಟ್ಟು 1,78,594 ಕೋಟಿ ರೂ. ಸೆಸ್ ಸಂಗ್ರಹ! ಕೇವಲ 1,00,871 ಕೋಟಿ ರೂ. ಮಾತ್ರ ಬಳಕೆ! ಸದ್ಬಳಕೆಯಾಗದಿದ್ದರೆ ಜನರಿಗೆ ಅನಗತ್ಯ ಹೊರೆ! ಆದಾಯವನ್ನು ಹೆಚ್ಚಿಸಿಕೊಳ್ಳಲು ಸೆಸ್ ಒಂದು ವಿಧಾನ

ನವದೆಹಲಿ(ಅ.7): ಶಿಕ್ಷಣ ಸೆಸ್, ಕೃಷಿ ಸೆಸ್, ಸ್ವಚ್ಛ ಭಾರತ ಸೆಸ್, ಹೀಗೆ ಜನರಿಂದ ಹತ್ತು ಹಲವು ಸೆಸ್ ಗಳನ್ನು ಸಂಗ್ರಹಿಸಿದ ಕೇಂದ್ರ ಸರ್ಕಾರ, ಅದನ್ನು ಸಂಪೂರ್ಣ ಬಳಕೆ ಮಾಡಿಕೊಳ್ಳದೆ ಹಾಗೆ ಉಳಿಸಿಕೊಂಡಿದೆ.

Add Asianetnews Kannada as a Preferred SourcegooglePreferred

ಹಣಕಾಸು ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, 2016-17ನೇ ಸಾಲಿನಲ್ಲಿ ಒಟ್ಟು 1,78,594 ಕೋಟಿ ರೂ. ಸೆಸ್ ಸಂಗ್ರಹಿಸಲಾಗಿದ್ದು, ಈ ಪೈಕಿ 1,00,871 ಕೋಟಿ ರೂ. ಮಾತ್ರ ಬಳಕೆ ಮಾಡಿಕೊಳ್ಳಲಾಗಿದೆ.

ಸೆಸ್ ಬಳಕೆಯಾಗದಿರುವುದಕ್ಕೆ ಸರ್ಕಾರ ಹಲವು ಕಾರಣಗಳನ್ನು ನೀಡಬಹುದು. ಆದರೆ ಜನರಿಂದ ಹೆಚ್ಚಿನ ಹಣ ಸಂಗ್ರಹಿಸಲು ಸರ್ಕಾರಕ್ಕೆ ಸೆಸ್ ಒಂದು ಸಾಧನವಾಗಿದ್ದು, ಅದು ಬಳಕೆಯಾಗದಿದ್ದರೆ ಜನರಿಗೆ ಅನಗತ್ಯ ಹೊರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆದಾಯವನ್ನು ಹೆಚ್ಚಿಸಿಕೊಳ್ಳಲು ಸೆಸ್ ಒಂದು ವಿಧಾನವಾಗಿದೆ. ಸರ್ಕಾರ ಕೋಟ್ಯಾಧೀಶ ಉದ್ಯಮಿಗಳಿಗೆ ಲಕ್ಷಾಂತರ ಕೋಟಿ ತೆರಿಗೆ ವಿನಾಯ್ತಿ ನೀಡುತ್ತದೆ. ಮತ್ತೊಂದು ಕಡೆ ಸಾಮಾನ್ಯ ಜನರ ಮೇಲೆ ಹೆಚ್ಚುವರಿ ಸೆಸ್ ವಿಧಿಸುತ್ತದೆ. ಆದರೆ ಅದನ್ನು ಬಳಕೆ ಮಾಡದಿದ್ದರೆ ಏನು ಪ್ರಯೋಜನ ಎಂದು ಆರ್ಥಿಕ ತಜ್ಷರು ಪ್ರಶ್ನಿಸಿದ್ದಾರೆ.