ಸ್ವಂತ ಉದ್ಯಮ ಮಾಡಲು ಪ್ಲಾನ್ ಮಾಡಿದ್ದಾನೆ. ಕೆಲ ಆಲೋಚನೆಗಳಿಗೆ ಬಂಡವಾಳದ ಕೊರತೆಯಾಗಿತ್ತು. ಕೊನೆಗೆ ಸಾಲ ಮಾಡಿ 4 ಲಕ್ಷ ರೂ ಬಂಡವಾಳ ಹಾಕಿ ಬಿಸಿನೆಸ್ ಆರಂಭಿಸಿದ್ದಾನೆ. ಇದೀಗ ತಿಂಗಳಿಗೆ 2.10 ಲಕ್ಷ ರೂಪಾಯಿ ಆದಾಯ ಪಡೆಯುತ್ತಿದ್ದಾನೆ.
ಹಲವರು ತಮ್ಮ ಸ್ಯಾಲರಿ ಉದ್ಯೋಗಕ್ಕೆ ರಾಜೀನಾಮೆ ನೀಡಿ ಬಿಸಿನೆಸ್ ಶುರು ಮಾಡಿ ಯಶಸ್ವಿಯಾಗಿದ್ದಾರೆ. ಮತ್ತೆ ಕೆಲವರು ಸ್ವಂತ ಉದ್ಯಮ ಮಾಡಬೆಕೆಂಬ ಛಲದಲ್ಲಿ ಸತತ ಪ್ರಯತ್ನದ ಬಳಿಕ ಗೆಲುವು ಕಂಡಿದ್ದಾರೆ. ಇದೀಗ ಯುವಕನೊಬ್ಬ 4 ಲಕ್ಷ ರೂಪಾಯಿ ಬಂಡವಾಳ ಹೂಡಿಕೆ ಮಾಡಿ ಉದ್ಯಮ ಆರಂಭಿಸಿದ್ದಾನೆ. ಸಣ್ಣದಾಗಿ ಆರಂಭಿಸಿದ ಉದ್ಯಮ ಇದೀಗ ಭರ್ಜರಿ ಆದಾಯ ಎಣಿಸುತ್ತಿದ್ದಾರೆ. ಕೆಲ ಉದ್ಯಮ ಆರಂಭಿಸಿ ಕೈಸುಟ್ಟುಕೊಂಡಿದ್ದಾನೆ. ಕೊನೆಗೆ ತನ್ನ ಪ್ಯಾಶನ್, ತನ್ನ ಆಸಕ್ತಿಯ ಬಿರಿಯಾನಿ ಉದ್ಯಮ ಆರಂಭಿಸಲು ಮುಂದಾಗಿದ್ದಾನೆ. ಇದಕ್ಕಾಗಿ 4 ಲಕ್ಷ ರೂಪಾಯಿ ಬಂಡವಾಳ ಹಾಕಿದ್ದಾನೆ. ಇದೀಗ ತಿಂಗಳಿಗೆ 2.10 ಲಕ್ಷ ರೂಪಾಯಿ ಆದಾಯಗಳಿಸುತ್ತಿದ್ದಾನೆ.
ಇನ್ಸ್ಟಾಗ್ರಾಂ ವ್ಲಾಗರ್ ಈ ಬಿರಿಯಾನಿ ಶಾಪ್ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾನೆ. ಈ ವಿಡಿಯೋದಲ್ಲಿ ಬಿರಿಯಾನಿ ಶಾಪ್ ಮಾಲೀಕನ ಹಿಂದಿನ ಕತೆ ಬಿಚ್ಚಿಟ್ಟಿದ್ದಾನೆ. ಇದೇ ವೇಳೆ ಉತ್ತಮ ರುಚಿಕರ ಬಿರಿಯಾನಿ ಮಾಡುತ್ತಿದ್ದರೆ, ಖಂಡಿತವಾಗಿ ಆದಾಯಗಳಿಸಲು ಸಾಧ್ಯ ಎಂದು ಕಿವಿ ಮಾತು ಹೇಳಿದ್ದಾನೆ. ಆರಂಭದಲ್ಲಿ ಸಣ್ಣ ಹೊಟೆಲ್ ಕೊಠಡಿ ಬಾಡಿಗೆ ಪಡೆದು ಬಿರಿಯಾನಿ ಶಾಪ್ ಆರಂಭಿಸಿದ್ದಾನೆ. ಸಲಕರಣೆಗಳು, ಬಿರಿಯಾನಿ ತಯಾರಿಸುವ ಸಾಮಾಗ್ರಿ ಸೇರಿದಂತೆ ಹಲವು ವಸ್ತುಗಳು ಸೇರಿದಂತೆ 4 ಲಕ್ಷ ರೂಪಾಯಿ ಬಂಡವಾಳ ಹಾಕಿದ್ದಾನೆ.
ಪ್ರತಿ ದಿನ 5000 ಸಾವಿರ ರೂ ಉಳಿತಾಯ
ಬಿರಿಯಾನಿ ಉದ್ಯಮ ಆರಂಭಿಸಿ ಆರಂಬಿಕ ದಿನಗಳಲ್ಲಿ ಗ್ರಾಹಕರ ಸಂಖ್ಯೆ ಕಡಿಮೆ ಇತ್ತ. ಎಲ್ಲೂ ಕೂಡ ಪ್ರಚಾರ ಮಾಡಿರಲಿಲ್ಲ. ಆದರೆ ಬಿರಿಯಾನಿ ರುಚಿ, ಸ್ವಾದ ಉತ್ತಮವಾಗಿದ್ದ ಕಾರಣ ಗ್ರಾಹಕರು ಮತ್ತೆ ಮತ್ತೆ ಬರಲು ಆರಂಭಿಸಿದರು. ಎರಡೇ ತಿಂಗಳಲ್ಲಿ ಬಿರಿಯಾನಿ ಹೆಚ್ಚು ಮಾರಾಟವಾಗತೊಡಗಿದೆ. ಬಿರಿಯಾನಿ ಹೆಚ್ಚು ಲಾಭದಾಯಕ ಎಂದಿದ್ದಾರೆ. ತನ್ನ ಒಂದು ಪಾತ್ರೆಯಲ್ಲಿ 8 ಕೆಜಿ ಬಿರಿಯಾನಿ ತಯಾರಿಸಲು ಸಾಧ್ಯ. ಇಧಕ್ಕೆ 1000 ರೂಪಾಯಿ ಖರ್ಚಾಗುತ್ತದೆ. ಇದರ ಆದಾಯ 2000 ರೂಪಾಯಿ. ಹೀಗೆ ಪ್ರತಿ ದಿನ 6000 ರಿಂದ 1000 ಸಾವಿರ ರೂಪಾಯಿ ಒಟ್ಟು ಗಳಿಕೆ. ಇದರಲ್ಲಿ ಖರ್ಚು ವೆಚ್ಚ ಕಳೆದರೆ 4 ರಿಂದ 5000 ರೂಪಾಯಿ ಉಳಿತಾಯ ಮಾಡಬಹುದು ಎಂದು ಬಿರಿಯಾನಿ ಶಾಪ್ ಯುವಕ ಹೇಳಿದ್ದಾನೆ.
ಬಿರಿಯಾನಿ ಬಿಸಿನೆಸ್ ಆರಂಭಿಸುವ ಯುವಕರಿಗೆ ಸಲಹೆ
ತಿಂಗಳಿಗೆ ಕನಿಷ್ಠ 2.10 ಲಕ್ಷ ರೂಪಾಯಿ ಆದಾಯಗಳಿಸಲು ಸಾಧ್ಯ. ಇದರಲ್ಲಿ 1.05 ಲಕ್ಷ ರೂಪಾಯಿ ಉಳಿತಾಯ ಮಾಡಬಹುದು. ಖರ್ಚು ವೆಚ್ಚಗಳು, ವಿದ್ಯುತ್ ಬಿಲ್ ಎಲ್ಲಾ ಸೇರಿದರೆ 1 ಲಕ್ಷ ರೂಪಾಯಿ ಖರ್ಚು ಬರುತ್ತದೆ ಎಂದಿದ್ದಾನೆ. ಇದೇ ರೀತಿಯ ಬಿರಿಯಾನಿ ಶಾಪ್ 1.5 ರಿಂದ 2 ಲಕ್ಷ ರೂಪಾಯಿ ಬಂಡವಾಳದಲ್ಲೂ ಆರಂಭಿಸಬಹುದು. ಪ್ರಮುಖವಾಗಿ ಬಿರಿಯಾನಿ ಉತ್ತಮವಾಗಿರಬೇಕು. ಗ್ರಾಹಕರಿಗೆ ಇಷ್ಟವಾಗಬೇಕು ಎಂದು ಸಲಹೆ ನೀಡಿದ್ದಾನೆ.














