Asianet Suvarna News Asianet Suvarna News

Personal Finance : ಕೆಲಸ ಖಾಲಿ ಇದೆ, ಉದ್ಯೋಗಿಗಳೇ ಸಿಗ್ತಿಲ್ಲ, ಏನ್ ಪ್ರಾಬ್ಲಂ?

ಭಾರತದಲ್ಲೂ ಬೇಕಷ್ಟು ಕೆಲಸ ಖಾಲಿ ಇದೆ. ಆದ್ರೆ ಕೆಲಸಕ್ಕೆ ತಕ್ಕಂತೆ ಉದ್ಯೋಗಿಗಳು ಸಿಗ್ತಿಲ್ಲ. ಒಂದ್ಕಡೆ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗ್ತಿದ್ದರೆ ಇನ್ನೊಂದು ಕಡೆ ಯೋಗ್ಯ ಕೆಲಸಗಾರರು ಸಿಗದ ಕಂಪನಿಗಳು ಬೆಳವಣಿಗೆಯಲ್ಲಿ ಹಿನ್ನಡೆ ಅನುಭವಿಸ್ತಿವೆ. 
 

Lack Of Skill There Crore Youth Unemployed Digital Skilling Can Change The Situation roo
Author
First Published Jun 28, 2023, 3:15 PM IST

ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ, ಜನರಿಗೆ ಕೆಲಸ ಸಿಗ್ತಿಲ್ಲ, ಸರ್ಕಾರ ಉದ್ಯೋಗ ಒದಗಿಸುವು ವ್ಯವಸ್ಥೆ ಮಾಡ್ತಿಲ್ಲ ಅಂತಾ ನಾವೆಲ್ಲ ಗೊಣಗ್ತೇವೆ. ವಾಸ್ತವ ಬೇರೆಯೇ ಆಗಿದೆ. ದೇಶದಲ್ಲಿ ಸಾಕಷ್ಟು ಉದ್ಯೋಗವಕಾಶವಿದೆ. ಆದ್ರೆ ಜನರ ಸ್ಕಿಲ್ ಕೊರತೆ ಅವರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ. ಅದ್ರ ಬಗ್ಗೆ ವಿವರ ಇಲ್ಲಿದೆ.

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಈ ಬಗ್ಗೆ  ವರದಿ (Report) ಯೊಂದನ್ನು ಬಿಡುಗಡೆ ಮಾಡಿದೆ. ಅದ್ರ ಪ್ರಕಾರ, ದೇಶದಲ್ಲಿ 3 ಕೋಟಿಗೂ ಹೆಚ್ಚು ಯುವಕರು ನಿರುದ್ಯೋಗಿಗಳಾಗಿದ್ದಾರೆ. ಅವರಲ್ಲಿ ಹೆಚ್ಚಿನವರು 15 ರಿಂದ 24 ವರ್ಷ ವಯಸ್ಸಿನವರು. ಈ ವಯಸ್ಸಿನಲ್ಲಿ ನಿರುದ್ಯೋಗ (Unemployment) ದ ಈ ಅನುಪಾತವು ಇಂಡೋನೇಷ್ಯಾ, ಬಾಂಗ್ಲಾದೇಶ ಮತ್ತು ಭೂತಾನ್‌ಗಿಂತ ಕೆಟ್ಟದಾಗಿದೆ. ಕೌಶಲ್ಯ ಆಧಾರಿತ ಶಿಕ್ಷಣ (Education) ದ ಕೊರತೆಯೇ ಇದಕ್ಕೆ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ.

ಅನೇಕ ಯುವಕರಿಗೆ ಕೌಶಲ್ಯ ಕೊರತೆಯಿರುವ ಕಾರಣ, ಡಿಜಿಟಲ್ ದುನಿಯಾದಲ್ಲಿನ ಕೆಲಸ ಸಿಗ್ತಿಲ್ಲ. ಅವರು ಸಣ್ಣ ಪಟ್ಟಣದಲ್ಲಿ ಸಣ್ಣ ಕೆಲಸ ಮಾಡಿಕೊಂಡು ಜೀವನ ನಡೆಸ್ತಿದ್ದಾರೆ. ಮತ್ತೆ ಕೆಲವರು ನಿರುದ್ಯೋಗಿಗಳಾಗಿ ಓಡಾಡ್ತಿದ್ದಾರೆ. ನಿಮ್ಮ ಬಳಿ ಡಿಜಿಟಲ್ ಕೌಶಲ್ಯವಿದ್ರೆ ನೀವು ಒಂದೇ ಕೆಲಸದಲ್ಲಿ ಮೂರ್ನಾಲ್ಕು ವರ್ಷ ಸಿಲುಕಬೇಕಾಗಿಲ್ಲ. ಇಂದಿನ ಕಾಲದಲ್ಲಿ 16 ಲಕ್ಷ ಕೋಟಿ ಮೌಲ್ಯದ ಡಿಜಿಟಲ್ ಕ್ಷೇತ್ರ  ಯುವಜನತೆಯನ್ನು ಕೈಬೀಸಿ ಕರೆಯುತ್ತಿದೆ. ಲಕ್ಷಗಟ್ಟಲೆ ಪ್ಯಾಕೇಜ್‌ಗಳನ್ನು ನೀಡುತ್ತಿದೆ. ಟೈರ್-2 ಮತ್ತು ಟೈರ್-3 ನಗರಗಳಿಂದ ಬಿಎ, ಬಿಎಸ್ಸಿ, ಬಿಕಾಂ ಪದವೀಧ ಪಡೆದಿದ್ದು, ಉದ್ಯೋಗವನ್ನು ಹುಡುಕುತ್ತಿದ್ದರೆ ಡಿಜಿಟಲ್ ಕೌಶಲ್ಯಗಳನ್ನು ಮೊದಲು ಕಲಿಯಬೇಕು. ನೀವಿದರಲ್ಲಿ ಪರಿಣಿತಿ ಹೊಂದಿದ್ರೆ ಸಾವಿರಾರು ಕೋಟಿ ಮೌಲ್ಯದ ಡಿಜಿಟಲ್ ವಲಯದಲ್ಲಿ ಉತ್ತಮ ವೃತ್ತಿಜೀವನವನ್ನು ನೀವು ನಡೆಸಬಹುದು. 

SAVING TIPS : ಸಂಬಳ ಎಷ್ಟೇ ಇರಲಿ ಇಎಂಐನಲ್ಲೇ ಜೀವನ ಕಳೀಬೇಡಿ, ಸೇವಿಂಗ್ಸ್ ಕಡೆಯೂ ಇರಲಿ ಗಮನ

ಮಾಸ್ಟರ್ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ (Master Digital Marketing Course) : ಪದವಿ ಪಡೆದಿದ್ದು, ಡಿಜಿಟಲ್ ದುನಿಯಾ ಬಗ್ಗೆ ಹೆಚ್ಚು ಜ್ಞಾನವಿಲ್ಲ ಎನ್ನುವವರು ಮೊದಲು ಅದ್ರಲ್ಲಿ ಜ್ಞಾನ ಗಳಿಕೆ ಮಾಡಿ. ಮಾಸ್ಟರ್ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಮುಗಿಸಬೇಕು. ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್, ಸಬ್ಜೆಕ್ಟ್ ಮಾರ್ಕೆಟಿಂಗ್,  Google AdSense, ಎಸ್ ಇಒ, ಎಸ್ ಇಎಂ ಸೇರಿದಂತೆ ಅನೇಕ ಕೋರ್ಸ್ ಇಲ್ಲಿ ಲಭ್ಯವಿದೆ. ಮೂರರಿಂದ ಒಂದು ವರ್ಷದ ಅವಧಿಯ ಕೋರ್ಸ್ ಗಳು ಲಭ್ಯವಿರುತ್ತವೆ. ಯಾವುದೇ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಈ ಕೋರ್ಸ್ ಮಾಡಬಹುದು. ಡಿಪ್ಲೊಮಾ ಹೊಂದಿರುವವರು ಹಾಗೂ ಕೆಲಸದ ಅನುಭವವಿರುವವರು ಕೂಡ ಕೋರ್ಸ್ ಮುಗಿಸಬಹುದು.

ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ (Digital Marketing Course) ನಿಂದಾಗುವ ಲಾಭ : ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಮಾಡಿದ ನಂತ್ರ ನಿಮಗೆ ಶೇಕಡಾ 100ರಷ್ಟು ಉದ್ಯೋಗ ಖಾತರಿಯಿರುತ್ತದೆ. ನೀವು ಮಾರ್ಕೆಟಿಂಗ್ ಮ್ಯಾನೇಜರ್, ಕಂಟೆಂಟ್ ಮಾರ್ಕೆಟಿಂಗ್ ಮ್ಯಾನೇಜರ್, ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ ಸ್ಪೆಷಲಿಸ್ಟ್, ವೆಬ್ ಡಿಸೈನರ್, ಆಪ್ ಡೆವಲಪರ್, ಕಂಟೆಂಟ್ ರೈಟರ್, ಸರ್ಚ್ ಇಂಜಿನ್ ಮಾರ್ಕೆಟರ್, ಇನ್‌ಬೌಂಡ್ ಮಾರ್ಕೆಟಿಂಗ್ ಮ್ಯಾನೇಜರ್, ಎಸ್‌ಇಒ ಎಕ್ಸಿಕ್ಯೂಟಿವ್, ಕನ್ವರ್ಶನ್ ರೇಟ್, ಆಪ್ಟಿಮೈಜರ್ ಇತ್ಯಾದಿಗಳಲ್ಲಿ ವೃತ್ತಿಯನ್ನು ಮಾಡಬಹುದು.

HDFC Bank ಜೊತೆ ಎಚ್‌ಡಿಎಫ್ ಸಿ ವಿಲೀನವಾದ್ರೆ ಗ್ರಾಹಕರಿಗೇನು ಲಾಭ?

ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದ ಉದ್ಯೋಗಿಗಳಿಗೆ ವರ್ಷದ ಸಂಬಳ :
• ಡಿಜಿಟಲ್ ಮಾರ್ಕೆಟಿಂಗ್ ಮ್ಯಾನೇಜರ್  - 7.2 ಲಕ್ಷ
• ಸರ್ಚ್ ಇಂಜಿನ್ ಆಪ್ಟಿಮೈಜರ್  - 4 ಲಕ್ಷ
• ಸಾಮಾಜಿಕ ಮಾಧ್ಯಮ ಮಾರ್ಕೆಟರ್ - 4.82 ಲಕ್ಷ
• ವಿಷಯ ಮಾರ್ಕೆಟಿಂಗ್ - 5.46 ಲಕ್ಷ
• ಇಮೇಲ್ ಮಾರ್ಕೆಟಿಂಗ್ - 4.3 ಲಕ್ಷ
• SEM ಸ್ಪೆಷಲಿಸ್ಟ್ - 7.3 ಲಕ್ಷ
• AR-VR ಡೆವಲಪರ್ - 2.8 ಲಕ್ಷ
• ಎಸ್‌ಇಒ ತಜ್ಞರು -4 ಲಕ್ಷ
• ವಿಡಿಯೋ ಮೇಕರ್ - 6 ಲಕ್ಷ
• ಡೇಟಾ ವಿಶ್ಲೇಷಕ - 6.9 ಲಕ್ಷ
• ವೆಬ್ ಡೆವಲಪರ್ - 3 ಲಕ್ಷ 

Follow Us:
Download App:
  • android
  • ios