ದುಡ್ಡು ಮಾಡೋದು ಹೇಗೆ? ಮಹಿಳೆಯರಿಗೆ ಇಲ್ಲಿವೆ ದುಡಿಯೋ ಟಿಪ್ಸ್
ಮೊಬೈಲ್ ಯುಗದಲ್ಲಿ ಪುಸ್ತಕ ಕೈನಲ್ಲಿ ಹಿಡಿದು ಓದ್ಬೇಕಾಗಿಲ್ಲ. ಮೊಬೈಲ್ ನಲ್ಲಿಯೇ ಎಲ್ಲವೂ ಲಭ್ಯವಿದೆ. ನಿಮ್ಮ ಆಲೋಚನೆ, ಭಾವನೆ, ಕಲ್ಪನೆಗಳನ್ನು ಕೂಡ ನೀವು ಅಕ್ಷರ ರೂಪದಲ್ಲಿ ಜನರಿಗೆ ಸುಲಭವಾಗಿ ತಲುಪಿಸಬಹುದು. ಬ್ಲಾಗರ್ ಆಗಿ ಹಣ ಸಂಪಾದನೆ ಮಾಡ್ಬಹುದು.
ಓದು ಹಾಗೂ ಬರವಣಿಗೆ ಪ್ರತಿಯೊಬ್ಬರ ಹಕ್ಕು. ಪ್ರತಿಯೊಬ್ಬರ ಮನಸ್ಸಿನಲ್ಲೂ ನೂರಾರು ಭಾವನೆಗಳಿರುತ್ತವೆ. ನಾನಾ ವಿಷ್ಯಗಳ ಬಗ್ಗೆ ಜ್ಞಾನವಿರುತ್ತದೆ. ಮನಸ್ಸಿನಲ್ಲಿರುವ ಸಂಗತಿಯನ್ನು ಬರವಣಿಗೆ ರೂಪದಲ್ಲಿ ಹೊರತರಲು ಅನೇಕರಿಗೆ ಆಸಕ್ತಿಯಿರುತ್ತದೆ. ಕಥೆ, ಕವನ, ಲೇಖನ, ಆರೋಗ್ಯ ಮಾಹಿತಿ ಹೀಗೆ ನಾನಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಎಲ್ಲರಿಗೂ ಅವಕಾಶ ಸಿಗೋದಿಲ್ಲ. ಕೆಲವೊಮ್ಮೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗೋದಿಲ್ಲ. ಮನೆ, ಮಕ್ಕಳ ಜವಾಬ್ದಾರಿ ಮಧ್ಯೆ ಅನೇಕ ಮಹಿಳೆಯರ ಆಸಕ್ತಿ, ಬರವಣಿಗೆಯ ತುಡಿತ ಕಡಿಮೆಯಾಗಿರುತ್ತದೆ. ಅವರು ಪೆನ್ ಹಿಡಿದು ಅದೆಷ್ಟೋ ದಿನವಾಗಿರುತ್ತದೆ. ತಲೆಯಲ್ಲಿ ಒಂದಿಷ್ಟು ವಿಷ್ಯಗಳಿವೆ. ಅವುಗಳನ್ನು ಬರವಣಿಗೆ ರೂಪದಲ್ಲಿ ಬೇರೆಯವರ ಮುಂದಿಡುವ ಮನಸ್ಸಿದೆ. ಆದ್ರೆ ಎಲ್ಲಿ ಎಂಬುದು ತಿಳಿಯುತ್ತಿಲ್ಲ ಎನ್ನುವ ಮಹಿಳೆಯರಿಗೆ ಮನೆಯಲ್ಲಿಯೇ ನಿಮ್ಮ ಆಲೋಚನೆಗಳಿಗೆ ಅಕ್ಷರ ರೂಪ ನೀಡಿ, ಹಣ ಗಳಿಸಲು ನಾನಾ ಅವಕಾಶವಿದೆ. ಅದ್ರಲ್ಲಿ ಬ್ಲಾಗ್ ಕೂಡ ಒಂದು.
ನಿಮ್ಮ ಬರವಣಿಗೆಯನ್ನು ಪ್ರಪಂಚದ ಮುಂದಿರಲು ಬ್ಲಾಗ್ ಒಳ್ಳೆಯ ವೇದಿಕೆ. ವೈಯಕ್ತಿಕ ಬ್ಲಾಗ್ ಮೂಲಕ ನೀವು ಪ್ರಸಿದ್ಧಿ, ಹಣ ಎರಡನ್ನೂ ಗಳಿಸಬಹುದು. ವೈಯಕ್ತಿಕ ಬ್ಲಾಗ್ ಅನ್ನು ಪ್ರಾರಂಭಿಸುವ ಮೊದಲು ಅದ್ರ ಬಗ್ಗೆ ಸ್ವಲ್ಪ ಜ್ಞಾನ ಪಡೆಯುವ ಅವಶ್ಯಕತೆಯಿದೆ. ನಾವಿಂದು ವೈಯಕ್ತಿಕ ಬ್ಲಾಗ್ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಉದ್ಯೋಗ ತೊರೆದು ಬರ್ಗರ್ ಕಂಪನಿ ಪ್ರಾರಂಭಿಸಿದ ಎಂಬಿಎ ಪದವೀಧರೆ;ಐದೇ ವರ್ಷದಲ್ಲಿ 40 ಕೋಟಿ ರೂ. ವಹಿವಾಟು
ವೈಯಕ್ತಿಕ ಬ್ಲಾಗ್ (Blog) ಶುರು ಮಾಡೋದು ಹೇಗೆ? : ಈಗ ಯಾವುದೇ ಲೇಖನ ಬರೆಯಲು ಲ್ಯಾಪ್ ಟಾಪ್ ಅವಶ್ಯಕವಾಗಿ ಬೇಕೆಂದೇನಿಲ್ಲ. ಕೆಲ ಅಪ್ಲಿಕೇಷನ್ ಗಳ ಸಹಾಯದಿಂದ ನೀವು ಮೊಬೈಲ್ ನಲ್ಲಿಯೇ ಟೈಪ್ ಮಾಡಬಹುದು. ಆದ್ರೆ ಇಂಟರ್ನೆಟ್ ಸೌಲಭ್ಯ ಅಗತ್ಯವಿರುತ್ತದೆ. ಇಂಟರ್ನೆಟ್ ನಲ್ಲಿ ನೀವು ಬ್ಲಾಗ್ ಖಾತೆಯನ್ನು ತೆರೆಯಲು ಹಲವಾರು ಸೈಟ್‌ಗಳಿವೆ. ಬ್ಲಾಗ್ ಅನ್ನು ಉಚಿತವಾಗಿ ಪ್ರಾರಂಭಿಸಲು ಬಯಸಿದ್ರೆ, blogger.com ನಲ್ಲಿ ಖಾತೆ ತೆರೆಯಬಹುದು. ನಿಮ್ಮ ಆಲೋಚನೆಗಳಿಗೆ ಅಕ್ಷರ ರೂಪ ನೀಡಿ, ಆನ್‌ಲೈನ್ (Online) ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಳ್ಳಬಹುದು. ಆದ್ರೆ ಇದಕ್ಕಿಂತ ಪೇಯ್ಡ್ ಬ್ಲಾಗ್ ಹೆಚ್ಚು ಉತ್ತಮವೆಂದು ಪರಿಗಣಿಸಲಾಗುತ್ತದೆ.
ಈ ವಿಷ್ಯವನ್ನು ನೆನಪಿನಲ್ಲಿಡಿ : ಮೊದಲ ಬಾರಿಗೆ ಬ್ಲಾಗಿಂಗ್ ಶುರು ಮಾಡುವ ಮುನ್ನ ಅದ್ರ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ತಿಳಿದುಕೊಳ್ಳಿ. ನೀವು ಬ್ಲಾಗ್ ಪ್ರಾರಂಭಿಸುವ ಮೊದಲು ಯಾವ ವಿಷಯದ ಮೇಲೆ ಬರೆಯುತ್ತೀರಿ ಎಂಬುದನ್ನು ಮೊದಲೇ ನಿರ್ಧರಿಸಿ. ನೀವು ಬರೆಯುವ ವಿಷ್ಯದ ಬಗ್ಗೆ ನಿಮಗೆ ಸ್ಪಷ್ಟತೆಯಿರಲಿ. ಹಾಗೆ ಯಾವ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ (Platform) ಸರಿಯಾಗಿದೆ ಎಂಬುದನ್ನು ನಿರ್ಧರಿಸಿ. WordPress, Blogger, Blogspot.com ಸೇರಿದಂತೆ ಅನೇಕ ಬ್ಲಾಗಿಂಗ್ ಪ್ಲಾಟ್ಫಾರ್ಮ್ ಲಭ್ಯವಿದೆ. ಇದರಲ್ಲಿ ಯಾವುದು ಸುರಕ್ಷಿತ ಎಂಬುದನ್ನು ಅರಿಯಬೇಕು. ಜೊತೆಗೆ ನೀವು ಬ್ಲಾಗ್ ಗೆ ಇಡುವು ಹೆಸರು ಮತ್ತು ಪಾಸ್ವರ್ಡ್ ಕೂಡ ಇಲ್ಲಿ ಮಹತ್ವಪಡೆಯುತ್ತದೆ. ನಿಮ್ಮ ಬ್ಲಾಗ್ ಹೆಸರು ಆಕರ್ಷಕವಾಗಿದ್ದರೆ ಜನರನ್ನು ಸೆಳೆಯಬಹುದು.
ಯೂಟ್ಯೂಬ್ ಮೂಲಕವೇ ಕೋಟ್ಯಧೀಶೆಯಾದ ಪ್ರಾಜಕ್ತಾ ಕೋಲಿ; ಈಕೆ ತಿಂಗಳ ಆದಾಯ ಕೇಳಿದ್ರೆ ಶಾಕ್ ಆಗ್ತೀರಾ!
ಬ್ಲಾಗ್ ಪ್ರಚಾರ ಹಾಗೂ ಗಳಿಕೆ : ಬ್ಲಾಗ್ ಎಷ್ಟು ಟ್ರಾಫಿಕ್ ಹೊಂದಿದೆ ಎನ್ನುವ ಆಧಾರದ ಮೇಲೆ ಪೇಮೆಂಟ್ ಸಿಗುತ್ತದೆ. ಹಾಗಾಗಿ ನೀವು ಒಂದು ಲೇಖನ ಅಥವಾ ಕಥೆ, ಕವನ ಬರೆದ ಮೇಲೆ ಅದನ್ನು ಪ್ರಮೋಟ್ ಮಾಡ್ಬೇಕು. ಸಾಮಾಜಿಕ ಜಾಲತಾಣ ಫೇಸ್ಬುಕ್, ವಾಟ್ಸ್ ಅಪ್, ಇನ್ಸ್ಟಾಗ್ರಾಮ್ ನಲ್ಲಿ ನೀವು ನಿಮ್ಮ ಬ್ಲಾಗ್ ಬಗ್ಗೆ ಪ್ರಚಾರ ಮಾಡ್ಬೇಕು. ಹೊಸ ಲೇಖನ ಪೋಸ್ಟ್ ಆಗ್ತಿದ್ದಂತೆ ಅದರ ಲಿಂಕ್ ಹಂಚಿಕೊಳ್ಳಬೇಕು. ನಿಮ್ಮ ಓದುಗರ ಸಂಖ್ಯೆ ಹೆಚ್ಚಾದಂತೆ ಖಾತೆಯಲ್ಲಿ ಟ್ರಾಫಿಕ್ ಹೆಚ್ಚಾಗುತ್ತದೆ. ಇದ್ರಿಂದ ನಿಮಗೆ ಹೆಚ್ಚಿನ ಪ್ರಮಾಣದಲ್ಲಿ ಹಣಬರಲು ಶುರುವಾಗುತ್ತದೆ. ಇದಲ್ಲದೆ ನೀವು ಬ್ಲಾಗ್‌ನಲ್ಲಿ ಆಡ್ಸೆನ್ಸ್ ಅನ್ನು ಅನುಮತಿಸುವ ಮೂಲಕ ಹಣವನ್ನು ಗಳಿಸಬಹುದು.