ಪಿಂಕ್ ಟ್ಯಾಕ್ಸ್ ವಿರುದ್ಧ ಜೋರಾಯ್ತು ದನಿ; ಇದು ಮಹಿಳೆಯರಿಗೆ ಕಂಪನಿಗಳು ಮಾಡ್ತಿರೋ ಅನ್ಯಾಯವಲ್ವಾ?
ಮಹಿಳೆಯರು ಬಳಸುವ ಹಲವಾರು ದೈನಂದಿನ ವಸ್ತುಗಳು ಗ್ರಾಹಕರನ್ನು ತಲುಪುವಂತೆ ಮಾಡುವುದು ಹಾಗೂ ಅವುಗಳ ಜಾಹೀರಾತು ಸಿಕ್ಕಾಪಟ್ಟೆ ದುಬಾರಿಯಂತೆ. ಹೀಗಾಗಿ, ಅವುಗಳ ಮೇಲೆ ಹೆಚ್ಚು ದರ ವಿಧಿಸಲಾಗುತ್ತಿದೆಯಂತೆ. ಇದೇ ಪಿಂಕ್ ಟ್ಯಾಕ್ಸ್.
ಪಿಂಕ್ ಟ್ಯಾಕ್ಸ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಬಹುದೊಡ್ಡ ದನಿ ಕೇಳಿಬರುತ್ತಿದೆ. ಸಾಮಾನ್ಯವಾಗಿ ಎಲ್ಲ ಸರ್ಕಾರಗಳು ಮಹಿಳೆಯರಿಗೆ ಹಲವು ರೀತಿಯ ಸೌಲಭ್ಯಗಳನ್ನು ಕಲ್ಪಿಸುತ್ತವೆ. ರಿಯಾಯಿತಿ ನೀಡುತ್ತವೆ. ತೆರಿಗೆ ಪದ್ಧತಿಯಲ್ಲೂ ಮಹಿಳೆಯರಿಗೆ ವಿಶೇಷ ಸವಲತ್ತು ನೀಡುತ್ತವೆ. ನಮ್ಮ ದೇಶ ಮಾತ್ರವಲ್ಲ, ಪ್ರಪಂಚದ ಹಲವು ದೇಶಗಳಲ್ಲಿ ಈ ಪದ್ಧತಿ ಇದೆ. ಆದರೆ, ಇದೇ ಸಮಯದಲ್ಲಿ ಮಹಿಳೆಯರು ಬಳಸುವ ಅನೇಕ ವಸ್ತುಗಳ ಮೇಲೆ ಪಿಂಕ್ ಟ್ಯಾಕ್ಸ್ ಹೇರಲಾಗುತ್ತಿದೆ. ವಿಶ್ವ ಆರ್ಥಿಕ ಫೋರಮ್ ಪ್ರಕಾರ, ಮಹಿಳೆಯರು ಮತ್ತು ಪುರುಷರು ಬಳಸುವ ದೈನಂದಿನ ವಸ್ತುಗಳ ದರದಲ್ಲಿ ವ್ಯತ್ಯಾಸವಿದೆ. ಮಹಿಳೆಯರು ಕೆಲವು ವಸ್ತುಗಳನ್ನು ಹೆಚ್ಚು ದರ ನೀಡಿ ಕೊಂಡುಕೊಳ್ಳಬೇಕಾಗುತ್ತದೆ. ಇದೇ ಪಿಂಕ್ ಟ್ಯಾಕ್ಸ್. ಹಲವರಿಗೆ ಗೊತ್ತಿರಲಿಕ್ಕಿಲ್ಲ. ಪುರುಷರು ಬಳಸುವಂಥದ್ದೇ ಸೇಮ್ ಸೈಜ್ ಮತ್ತು ಸೇಮ್ ಪ್ರಮಾಣದ ಮಹಿಳೆಯರ ವಸ್ತುಗಳಿಗೆ ಪಿಂಕ್ ತೆರಿಗೆ ಹಾಕಲಾಗುತ್ತದೆ. ಅಂದರೆ, ಇದೊಂದು ರೀತಿಯ ಹಗಲುದರೋಡೆ. ಮಹಿಳೆಯರು ಬಳಸುವ ವಸ್ತುಗಳ ಮೇಲೆ ಮಾತ್ರ ಈ ತೆರಿಗೆ ಹಾಕುತ್ತಿರುವುದರಿಂದ ಇದಕ್ಕೆ ಪಿಂಕ್ ಟ್ಯಾಕ್ಸ್ ಎಂದು ಹೆಸರಿಸಲಾಗಿದೆ. ಇದೀಗ, ಈ ತೆರಿಗೆ ವಿರುದ್ಧ ಸಮಾಜದ ಪ್ರಮುಖ ವ್ಯಕ್ತಿಗಳು ದನಿ ಎತ್ತಿದ್ದಾರೆ.
ನಮ್ಮ ದೇಶದ ಖ್ಯಾತ ಮಹಿಳಾ ಉದ್ಯಮಿ ಕಿರಣ್ ಮಜುಂದಾರ್ ಶಾ (Kiran Mazumdar Shah) ಸೋಷಿಯಲ್ ಮೀಡಿಯಾ (Social Media) ಎಕ್ಸ್ ಖಾತೆಯಲ್ಲಿ ವೀಡಿಯೋವೊಂದನ್ನು ಶೇರ್ (Share) ಮಾಡಿದ್ದಾರೆ. ಅದು ಪಿಂಕ್ ಟ್ಯಾಕ್ಸ್ (Pink Tax) ಕುರಿತಾಗಿದೆ.
ಅಬ್ಬಬ್ಬಾ ರಿಹರ್ಸಲ್ನಲ್ಲೇ ಈ ಪರಿ ಟ್ಯಾಲೆಂಟ್! ಇನ್ನೇನಾದ್ರೂ ನಟಿಯಾದ್ರೆ? 'ಮಹಾನಟಿ'ಗೆ ನೆಟ್ಟಿಗರು ಫಿದಾ
ಡಾ.ಸಂಜಯ್ ಅರೋರಾ ಎನ್ನುವವರ ವೀಡಿಯೋವನ್ನು ಅವರು ರಿಟ್ವೀಟ್ ಮಾಡಿದ್ದು, ಅದರಲ್ಲಿ ಮಹಿಳೆಯರಿಗೆ ಹೆಚ್ಚುವರಿ ತೆರಿಗೆ ವಿಧಿಸುತ್ತಿರುವ ಕುರಿತು ಮಾಹಿತಿ ನೀಡಲಾಗಿದೆ. ಕೆಲವು ಬ್ರ್ಯಾಂಡ್ ಗಳು ಮಹಿಳೆಯರು ಬಳಕೆ ಮಾಡುವ ವಸ್ತುಗಳ ಮೇಲೆ ಹೆಚ್ಚುವರಿ ಟ್ಯಾಕ್ಸ್ ವಿಧಿಸುತ್ತಿವೆ ಎಂದು ತಿಳಿಸಿದ್ದಾರೆ.
ಮಹಿಳೆಯರ ಸ್ಕಿನ್ ಕೇರ್ ಉತ್ಪನ್ನಗಳ ದರ ಹೆಚ್ಚು
ಈ ವೀಡಿಯೋದಲ್ಲಿ ಡಾ.ಅರೋರಾ, “ನಿಮಗೆ ಗೊತ್ತೇ? ಮಹಿಳಾ ಉತ್ಪನ್ನಗಳು, ಪುರುಷರಷ್ಟೇ ಸೇಮ್ ಗಾತ್ರ ಮತ್ತು ಪ್ರಮಾಣದ ಹಲವು ವಸ್ತುಗಳ ಮೇಲೆ ಪಿಂಕ್ ಟ್ಯಾಕ್ಸ್ ಹಾಕಲಾಗುತ್ತಿದೆ. ಸೇಮ್ ಉತ್ಪನ್ನಕ್ಕೆ (Product) ಮಹಿಳೆಯರು ಹೆಚ್ಚುವರಿ ದರ (Price) ನೀಡುತ್ತಿದ್ದಾರೆ’ ಎಂದು ತಿಳಿಸಿದ್ದಾರೆ. ಬಳಿಕ, ಅವರು ಅದಕ್ಕೆ ಕೆಲವು ಉದಾಹರಣೆಗಳನ್ನು ನೀಡಿದ್ದಾರೆ. ಮಹಿಳೆಯರ ಸ್ಕಿನ್ ಕೇರ್ (Skincare) ಉತ್ಪನ್ನಗಳು ಹಾಗೂ ಕೆಲವು ಬ್ರ್ಯಾಂಡ್ (Brand)ನ ಬಟ್ಟೆಗಳಿಗೆ ಹೆಚ್ಚು ದರವಿರುವುದನ್ನು ತಿಳಿಸಿದ್ದಾರೆ.
ಅಪರಿಚಿತರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗೋ ಈಕೆಗೆ ಸ್ಮಶಾನವೇ ಮನೆ!
ಮಹಿಳೆಯರು ತಿರಸ್ಕರಿಸಿ ಎಂದ ಶಾ
ಉದ್ಯಮಿ ಕಿರಣ್ ಮಜುಂದಾರ್ ಶಾ ಈ ಟ್ವೀಟ್ ಅನ್ನು ಶೇರ್ ಮಾಡಿದ್ದು, “ಪಿಂಕ್ ಟ್ಯಾಕ್ಸ್. ಇದು ನಾಚಿಕೆಗೇಡಿನ (Shame) ಸಂಗತಿ. ಲಿಂಗಾಧಾರಿತ (Gender) ಪದ್ಧತಿ. ಇಂತಹ ಉತ್ಪನ್ನಗಳನ್ನು ತಿರಸ್ಕರಿಸುವ ಮೂಲಕ ಮಹಿಳೆಯರು ಪ್ರತಿಕ್ರಿಯೆ ನೀಡಬೇಕಾಗಿದೆ’ ಎಂದು ಹೇಳಿದ್ದಾರೆ.
ಅಷ್ಟಕ್ಕೂ ಈ ಭಿನ್ನತೆಗೆ ಕಾರಣವೂ ಉಚಿತವಾಗಿಲ್ಲ. ವಿಶ್ವ ಆರ್ಥಿಕ ವೇದಿಕೆ ಪ್ರಕಾರ, “ಮಹಿಳೆಯರ ಉತ್ಪನ್ನಗಳ ಜಾಹೀರಾತು ಮತ್ತು ಗ್ರಾಹಕರನ್ನು ತಲುಪುವಲ್ಲಿ ಹೆಚ್ಚಿನ ಸ್ಪರ್ಧಾತ್ಮಕತೆಯಿದೆ. ಇದು ಹೆಚ್ಚು ದುಬಾರಿಯಾಗಿದೆ. ಹೀಗಾಗಿ, ಮಹಿಳೆಯರ ಉತ್ಪನ್ನಗಳಿಗೆ ಹೆಚ್ಚು ದರ ವಿಧಿಸಲಾಗುತ್ತಿದೆ’.