ಅಪರಿಚಿತರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗೋ ಈಕೆಗೆ ಸ್ಮಶಾನವೇ ಮನೆ!

ದಿನಕ್ಕೆ ಅದೆಷ್ಟೋ ಅನಾಥ ಶವಗಳ ಸಂಸ್ಕಾರ ನಡೆಯುತ್ತದೆ. ಅವರ ಸಾವಿಗೆ ಕಣ್ಣೀರು ಹಾಕುವವರು ಇರಲಿ, ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲೂ ಜನರಿರೋದಿಲ್ಲ. ಸ್ಮಶಾನದಲ್ಲಿ ಸದ್ದಿಲ್ಲದೆ ಮಣ್ಣಾಗುವ ಜನರಿಗೆ ಈಕೆ ಸಾಕ್ಷ್ಯವಾಗಿದ್ದಾಳೆ.  

London Woman Loves Visiting Strangers Funerals resides in cremation ground roo

ಹುಟ್ಟಿನ ಸಂತೋಷದಲ್ಲಿ ಭಾಗಿಯಾಗಿಲ್ಲವೆಂದ್ರೂ ಸಾವಿನ ದುಃಖದಲ್ಲಿ ಹೆಗಲು ನೀಡಬೇಕು ಎನ್ನುವ ಮಾತಿದೆ. ಕುಟುಂಬಸ್ಥರು ಸತ್ತಾಗ, ಸಂಬಂಧಿಕರು, ಆಪ್ತರಿಗೆ ಸಾಂತ್ವಾನದ ಅವಶ್ಯಕತೆ ಇರುತ್ತದೆ. ನಾಲ್ಕು ಸಮಾಧಾನದ ಮಾತನಾಡಲು ಸಾಧ್ಯವಿಲ್ಲ ಎಂದರೂ ನಿಮ್ಮ ಉಪಸ್ಥಿತಿ ಅವರಿಗೆ ಧೈರ್ಯ ನೀಡುತ್ತದೆ. ಮುಂದಿನ ಕೆಲಸಗಳನ್ನು ಮಾಡಲು ಅವರಿಗೆ ನೆರವಾಗುತ್ತದೆ. ಒಬ್ಬ ವ್ಯಕ್ತಿ ರಾತ್ರಿ ಸಾವನ್ನಪ್ಪಿದ್ರೆ  ಬಳಗಿನವರೆಗೆ ಶವಸಂಸ್ಕಾರ ನಡೆಯೋದಿಲ್ಲ. ಮನೆಯಲ್ಲಿ ಶವವಿಟ್ಟು ಜನರು ಕಾದು ಕುಳಿತುಕೊಳ್ತಾರೆ. ಒಂದು ಕಡೆಯಿಂದ ಇನ್ನೊಂದು ಕಡೆ ಹೆಣ ಸಾಗಿಸುವ ವೇಳೆ ಕೂಡ ಜನರ ಅಗತ್ಯವಿರುತ್ತದೆ. ನಮ್ಮಲ್ಲಿ ಕೆಲವರನ್ನು ನೀವು ಗಮನಿಸಿರಬಹುದು, ಬೀದಿಯಲ್ಲಿ ಯಾರೇ ಸಾವನ್ನಪ್ಪಿದ್ರೂ ಅಲ್ಲಿಗೆ ಹೋಗಿ ಅಂತಿಮ ದರ್ಶನ ಪಡೆದು ಬರ್ತಾರೆ. ದಾರಿಯಲ್ಲಿ ಶವದ ಮೆರವಣಿಗೆ ಹೋಗ್ತಿದ್ದರೆ ಕೈಮುಗಿದು ನಿಲ್ಲುತ್ತಾರೆ. ಈಗ ಎಲ್ಲವೂ ವ್ಯಾಪಾರವಾಗಿದೆ. ಸತ್ತಾಗ ಜನ ಎಷ್ಟು ಸೇರುತ್ತಾರೆ ಎಂಬುದರ ಮೇಲೆ ಜನರ ಪ್ರಸಿದ್ಧಿ ಅಳೆಯುವ ಜನರಿದ್ದಾರೆ. ಹಾಗೆಯೇ ಸಾವಿನ ಮನೆಯಲ್ಲಿ ಅಳಲು ಹಣ ನೀಡಿ ಜನರನ್ನು ಕರೆಯಿಸುವ ಬ್ಯುಸಿನೆಸ್ ಕೂಡ ಇದೆ.

ಅದೇನೇ ಇರಲಿ, ಈಗ ನಾವು ಹೇಳ್ತಿರುವ ಮಹಿಳೆಗೆ ವಿಚಿತ್ರ ಹವ್ಯಾಸ (Hobby) ವೊಂದಿದೆ. ಯಾರೇ ಸಾವನ್ನಪ್ಪಿದ್ರೂ ಅವರ ಅಂತ್ಯ ಸಂಸ್ಕಾರ (Funeral) ದಲ್ಲಿ ಈಕೆ ಭಾಗಿಯಾಗ್ತಾಳೆ. ಸತ್ತವರು ಆಪ್ತರಾಗಿರಬೇಕು, ಸಂಬಂಧಿಕರಾಗಿರಬೇಕು ಎಂದೇನಿಲ್ಲ. ಆಕೆ 200ಕ್ಕೂ ಹೆಚ್ಚು ಅಪರಿಚಿತರ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದಾಳೆ.  ಲಂಡನ್ (London) ನ ಇಸ್ಲಿಂಗ್ಟನ್ ನಲ್ಲಿ ವಾಸವಾಗಿರುವ ಈ ಮಹಿಳೆ ಹೆಸರು ಜಿನ್ ಟ್ರಿಂಡ್ ಹೆಲ್. ಆಕೆಗೆ ಐವತ್ತೈದು ವರ್ಷ. ಜಿನ್ ನಟಿ ಹಾಗೂ ಕಲಾವಿದೆ. 

ಸಿಧು ಮೂಸೆವಾಲಾ ಅಮ್ಮ ಗರ್ಭಿಣಿ ಅಲ್ವಾ? 58ರ ಹರೆಯದ ಪತ್ನಿ ಬಗ್ಗೆ ಗಾಯಕನ ತಂದೆ ಹೇಳಿದ್ದೇನು?

ಜಿನ್ ಗೆ ವಿಚಿತ್ರ ಹವ್ಯಾಸವಿದೆ. ಆಕೆ ಅಪರಿಚಿತರ ಅಂತಿಮ ಸಂಸ್ಕಾರದಲ್ಲಿ (Last Rites) ಭಾಗಿಯಾಗ್ತಾಳೆ. ಒಂದೇ ತಿಂಗಳಲ್ಲಿ ಮೂರ್ನಾಲ್ಕು ಜನರ ಅಂತಿಮ ಸಂಸ್ಕಾರಕ್ಕೆ ಹೋದ ಉದಾಹರಣೆ ಇದೆ. ಜಿನ್ 14 ವರ್ಷದಲ್ಲಿದ್ದಾಗ ಆಕೆಯ ತಂದೆ 56ನೇ ವರ್ಷದಲ್ಲಿ ಶ್ವಾಸಕೋಶ ಸೋಂಕಿನಿಂದ ಸಾವನ್ನಪ್ಪಿದ್ದರು. ಇದ್ರಿಂದ ಸುಧಾರಿಸಿಕೊಳ್ಳೋದು ಕಷ್ಟವಾಗಿತ್ತು. ಘಟನೆ ನಡೆದು ಆರೇ ವರ್ಷಕ್ಕೆ ಜಿನ್ ಗೆ ಮತ್ತೊಂದು ಶಾಕ್ ಕಾದಿತ್ತು. ಆಕೆಯ ತಾಯಿ ಸಾನ್ನಪ್ಪಿದ್ದಳು. ತಂದೆಯ ಅಂತಿಮ ಸಂಸ್ಕಾರಕ್ಕೆ ಚಿಕ್ಕ ವಯಸ್ಸಿನಲ್ಲೇ ತಯಾರಿ ನಡೆಸಿದ್ದ ಜಿನ್, ತಾಯಿಯ ಅಂತಿಮ ಸಂಸ್ಕಾರದ ಜವಾಬ್ದಾರಿಯನ್ನೂ ಹೊತ್ತಿದ್ದಳು. 

ಅಂತ್ಯಸಂಸ್ಕಾರಕ್ಕೆ ಏನೆಲ್ಲ ಅಗತ್ಯವಿದೆ ಎಂಬ ಅರಿವು ಜಿನ್ ಗೆ ಆಗ್ಲೇ ಬಂದಿತ್ತು. ಈ ಘಟನೆ ನಡೆದ ನಂತ್ರ ಜಿನ್ ಸಂಬಂಧಿಕರು (Relatives) ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆಸಲು ಕರೆಯುತ್ತಿದ್ದರು. ಆ ನಂತ್ರ ಜಿನ್ ಜೀವನ ಬದಲಾಯ್ತು. ಸ್ಮಶಾನದಲ್ಲಿಯೇ ಹೆಚ್ಚು ಸಮಯ ಕಳೆಯುವ ಸ್ಥಿತಿ ನಿರ್ಮಾಣವಾಯ್ತು. 

ಜಿನ್ ಗೆ ಅಪರಿಚಿತರ (Strangers) ಕರೆ ಬರ್ತಿರುತ್ತದೆ. ಯಾರೂ ಕುಟುಂಬಸ್ಥರಿಲ್ಲದವರು ಸಾವನ್ನಪ್ಪಿದಾಗ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವಂತೆ ಜಿನ್ ಳನ್ನು ಕೇಳಲಾಗುತ್ತದೆ. ಬೇರೆ ಯಾರೂ ಇಲ್ಲದಿದ್ದಾಗ ಅಪರಿಚಿತರ ಅಂತ್ಯಸಂಸ್ಕಾರಕ್ಕೆ ಹೋಗುವ ವ್ಯಕ್ತಿಯಾಗಲು ನನಗೆ ಹೆಮ್ಮೆ ಇದೆ ಎನ್ನುತ್ತಾಳೆ ಜಿನ್. 

ಅಬ್ಬಬ್ಬಾ..ಮಕ್ಕಳನ್ನು ಸ್ಕೂಲಿಗೆ ಬಿಡೋಕೆ ಇಶಾ ಅಂಬಾನಿ ಹಾಕ್ಕೊಂಡು ಬಂದ ಕುರ್ತಾ ಬೆಲೆ ಇಷ್ಟೊಂದಾ?

ಆಗಾಗ ಸ್ಮಶಾನಕ್ಕೆ ಹೋಗುವ ಜಿನ್ ಲಂಡನ್‌ನ ವಿಸ್ತಾರವಾದ ವಿಕ್ಟೋರಿಯನ್ ಸ್ಮಶಾನದ ಫೋಟೋ ತೆಗೆಯುತ್ತಾರೆ. ಅದಕ್ಕಾಗಿ ಗಂಟೆಗಟ್ಟಲೆ ಅಲ್ಲಿ ಕಳೆಯುತ್ತಾರೆ. ಅಪ್ಪ – ಅಮ್ಮ ಸತ್ತ ನಂತ್ರ ಸ್ಮಶಾನ ನನ್ನ ಮನೆಯಾಗಿದೆ ಎನ್ನುತ್ತಾಳೆ ಜಿನ್. ಸಮಾಧಿಗಳನ್ನು ಸ್ವಚ್ಛಗೊಳಿಸಲು ಮತ್ತು ಅಚ್ಚುಕಟ್ಟಾಗಿಡುವ ಕೆಲಸವನ್ನು ಆಕೆ ಮಾಡ್ತಾಳೆ. 

ಪ್ಯಾರಿಸ್ ಮತ್ತು ವೆನಿಸ್‌ ಸೇರಿದಂತೆ ಪ್ರಪಂಚದ ಅನೇಕ ಸಮಾಧಿಗಳಿಗೆ ಭೇಟಿ ನೀಡಿರುವ ಜಿನ್, ಸ್ಮಶಾನದ ಇತಿಹಾಸಕಾರರಾಗಲು ಶವಾಗಾರ ವಿಜ್ಞಾನದಲ್ಲಿ (Cremetory Science) ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ. ಸ್ಮಶಾನಕ್ಕೆ ಹೋಗಲು ಎಂದೂ ಹೆದರದ ಜಿನ್, ಸಾವಿಗೆ ನಾನು ಹೆದರುವುದಿಲ್ಲ. ಸಮಾಜಕ್ಕೆ ಈ ಮೂಲಕ ನನ್ನ ಕೊಡುಗೆ ನೀಡುತ್ತಿದ್ದೇನೆ ಎನ್ನುತ್ತಾಳೆ ಜಿನ್. 

Latest Videos
Follow Us:
Download App:
  • android
  • ios