Asianet Suvarna News Asianet Suvarna News

ರಿಯಾಯ್ತಿಯಲ್ಲಿ ಆಸ್ತಿ ತೆರಿಗೆ ಪಾವತಿ ಗಡುವು ವಿಸ್ತರಣೆ

ಸಾರ್ವಜನಿಕರು ಆರೋಗ್ಯ ಮತ್ತು ಆರ್ಥಿಕ ಹಿತದೃಷ್ಟಿಯಿಂದ ಆಸ್ತಿ ತೆರಿಗೆಯ ಪಾವತಿಗೆ ನೀಡಲಾಗುತ್ತಿರುವ ಶೇ.5 ರಷ್ಟುರಿಯಾಯಿತಿ ಸೌಲಭ್ಯವನ್ನು ಕರ್ನಾಟಕ ಸರ್ಕಾರ ವಿಸ್ತರಿಸಿದೆ. 

Karnataka  Govt Extends 5 percent concession on Property Tax  till june end snr
Author
Bengaluru, First Published May 6, 2021, 8:59 AM IST

 ಬೆಂಗಳೂರು (ಮೇ.06):  ನಗರ ಸ್ಥಳೀಯ ಸಂಸ್ಥೆಗಳಲ್ಲಿ (ಬಿಬಿಎಂಪಿ ಹೊರತುಪಡಿಸಿ) 2021-22 ಸಾಲಿನ ಆರ್ಥಿಕ ವರ್ಷದ ಆಸ್ತಿ ತೆರಿಗೆ ಪಾವತಿಸುವವರಿಗೆ ಶೇ.5ರ ರಿಯಾಯಿತಿ ನೀಡುವ ಕಾಲಾವಧಿಯನ್ನು 2021ರ ಜೂನ್‌ ಅಂತ್ಯದವರೆಗೂ ವಿಸ್ತರಿಸಿ ಸರ್ಕಾರ ಆದೇಶಿಸಿದೆ.

ಕೊರೋನಾ ಸೋಂಕು ಹರಡುವಿಕೆ ತಡೆಗಟ್ಟಲು ಸರ್ಕಾರ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿದೆ. ಆದ್ದರಿಂದ ಸಾರ್ವಜನಿಕರು ಆರೋಗ್ಯ ಮತ್ತು ಆರ್ಥಿಕ ಹಿತದೃಷ್ಟಿಯಿಂದ ಆಸ್ತಿ ತೆರಿಗೆಯ ಪಾವತಿಗೆ ನೀಡಲಾಗುತ್ತಿರುವ ಶೇ.5 ರಷ್ಟುರಿಯಾಯಿತಿ ಸೌಲಭ್ಯವನ್ನು ವಿಸ್ತರಿಸಲು ಕೋರಿ ಜನ ಪ್ರತಿನಿಧಿಗಳು ಮತ್ತು ಸ್ಥಳೀಯ ಸಂಸ್ಥೆಗಳಿಂದ ಮನವಿಗಳು ಬಂದಿದ್ದವು.

ಕೊರೋನಾ 2ನೇ ಅಲೆ; ಎಪ್ರಿಲ್ ತಿಂಗಳಲ್ಲಿ 72 ಲಕ್ಷ ಮಂದಿ ಉದ್ಯೋಗಕ್ಕೆ ಕತ್ತರಿ! ..

ಈ ಹಿನ್ನೆಲೆಯಲ್ಲಿ ಏಪ್ರಿಲ್‌ ತಿಂಗಳವರೆಗೂ ಮಾತ್ರ ನೀಡುತ್ತಿದ್ದ ಶೇ.5ರ ರಿಯಾಯಿತಿಯನ್ನು ಜೂನ್‌ ಅಂತ್ಯದವರೆಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಕೆ.ಲತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios