ಮುಂಬೈ(ಮೇ.05): ಕೊರೋನಾ ವೈರಸ್ 2ನೇ ಅಲೆಗೆ ಹಲವು ರಾಜ್ಯಗಳು ಲಾಕ್‌‌ಡೌನ್ ಆಗಿವೆ. ಕಠಿಣ ನಿರ್ಬಂಧಗಳು ಜಾರಿಯಲ್ಲಿದೆ. ಪರಿಣಾಮ ದೇಶದಲ್ಲಿ ನಿರುದ್ಯೋಗದ ಸಮಸ್ಯೆಕೂಡ ಹೆಚ್ಚಾಗಿದೆ. ಮೊದಲ ಅಲೆಯಲ್ಲಿ ದೇಶದ ನಿರುದ್ಯೋಗ ಸಮಸ್ಯೆ ಹೆಚ್ಚಾಗಿತ್ತು. ಇದೀಗ 2ನೇ ಅಲೆಯ ಒಂದೇ ತಿಂಗಳಿಗೆ ನಿರುದ್ಯೋಗದ ಪ್ರಮಾಣ 7.97% ಏರಿಕೆಯಾಗಿದೆ.

3ನೇ ಅಲೆ ಘನಘೋರ, ಸಂಪೂರ್ಣ ಲಾಕ್‌ಡೌನ್ ಕುರಿತು ಗಂಭೀರ ಚರ್ಚೆ!

ಇದು ಕೇವಲ ಏಪ್ರಿಲ್ ತಿಂಗಳ ನಿರುದ್ಯೋಗ ಸಮಸ್ಯೆ ವರದಿ. ಕೊರೋನಾ ವೈರಸ್ 2ನೇ ಅಲೆಯಿಂದ ಎಪ್ರಿಲ್ ತಿಂಗಳಲ್ಲಿ ದೇಶದಲ್ಲಿ ಬರೋಬ್ಬರಿ 72 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಹೀಗೆ ಉದ್ಯೋಗ ಕಳೆದುಕೊಂಡವರ ಪೈಕಿ ಕೃಷಿ ಚಟುವಟಿಕೆ ಹಾಗೂ ಅದರ ಸಂಬಂಧಿತ ಕಡಿತವೇ ಹೆಚ್ಚು.

ಕೊರೋನಾ ವೈರಸ್ ಕಾರಣ ಏಪ್ರಿಲ್ ತಿಂಗಳಲ್ಲಿ ಉದ್ಯೋಗ ಕಳೆದುಕೊಂಡವರಲ್ಲಿ ವೇತನ ಉದ್ಯೋಗಿಗಳ ಪಾಲು ಹೆಚ್ಚಿದೆ. ಬರೋಬ್ಬರಿ 28 ಲಕ್ಷ ಮಂದಿ ವೇತನ ಉದ್ಯೋಗಿಗಳು ತಮ್ಮ ಕೆಲಸ ಕಳೆದುಕೊಂಡಿದ್ದಾರೆ. 

ಹಲವು ರಾಜ್ಯಗಳು ಲಾಕ್‌ಡೌನ್, ಕರ್ಫ್ಯೂ ಸೇರಿದಂತೆ ಹಲವುು ನಿರ್ಬಂಧಗಳನ್ನು ಜಾರಿ ಮಾಡಿದೆ. ಇದು ಆರ್ಥಿಕತೆಯ ಮೇಲೆ ಗಂಭೀರ ಪರಿಣಾಣ ಬೀರುತ್ತದೆ. ಕಳೆದ ವರ್ಷದ ಹೇರಿದ್ದ ಲಾಕ್‌ಡೌನ್ ಹಾಗೂ ಕೊರೋನಾ ಮಾರಿಗೆ ಭಾರತ ಇನ್ನೂ ಚೇತರಿಸಿಕೊಂಡಿಲ್ಲ. ಇದೀಗ ಬೀಸುತ್ತಿರುವ 2ನೇ ಅಲೆ ಸ್ಪಷ್ಟ ಪರಿಣಾಮ ಇನ್ನಷ್ಟೇ ಗೋಚರವಾಗಲಿದೆ ಅನ್ನೋದು ತಜ್ಞರ ಅಭಿಪ್ರಾಯ.