ರಾಜ್ಯದಲ್ಲಿ ತಯಾರಾಗುವ ಬೆಲ್ಲದ ರಮ್‌ 'ಹುಲಿ' ತಯಾರಕರು ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಅಬಕಾರಿ ಸನ್ನದುದಾರರ ವಾರ್ಷಿಕ ಪರವಾನಿಗೆ ಶುಲ್ಕ ಹೆಚ್ಚಳದಿಂದ ತತ್ತರಿಸಿರುವ ತಯಾರಕರು, ಶುಲ್ಕ ಕಡಿತಕ್ಕೆ ಒತ್ತಾಯಿಸಿದ್ದಾರೆ.  

ಬೆಂಗಳೂರು (ಜೂ.25): ರಾಜ್ಯದಲ್ಲಿ ತಯಾರಾಗುವ ದೇಶದ ಮೊಟ್ಟಮೊದಲ ಬೆಲ್ಲದ ರಮ್‌ ಹುಲಿ ತಯಾರಕರು ಈಗ ರಾಜ್ಯ ಸರ್ಕಾರದ ವಿರುದ್ಧ ಅಕ್ರೋಶ ಹೊರಹಾಕಿದ್ದಾರೆ. ರಾಜ್ಯದಲ್ಲಿ ತಯಾರಾಗುವ ಹುಲಿ ಬಲಿಗೆ ರಾಜ್ಯ ಸರ್ಕಾರ ಮುಂದಾಗಿರುವಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ. ಅಬಕಾರಿ ಸನ್ನದುದಾರರ ವಾರ್ಷಿಕ ಪರವಾನಿಗೆ ಶುಲ್ಕ ಹೆಚ್ಚಳ ಹಿನ್ನಲೆಯಲ್ಲಿ. ಅಧಿಕ ಶುಲ್ಕದ ಹೊರೆಗೆ ಹುಲಿ ರಮ್‌ನ ಮಾಲೀಕರು ತತ್ತರಿಸಿದ್ದಾರೆ.

ಹುಲಿ ಸ್ಪಿರಿಟ್ ಪ್ರೈವೇಟ್ ಲಿಮಿಟೆಡ್ ಮಾಲೀಕ ಅರುಣ್ ಅರಸ್ ಈ ಬಗ್ಗೆ ಸರ್ಕಾರಕ್ಕೆ ಟ್ವೀಟ್‌ ಮಾಡಿದ್ದಾರೆ. ರಾಜ್ಯ ಸರ್ಕಾರ ಅಬಕಾರಿ ವಾರ್ಷಿಕ ಪರವಾನಿಗೆ ಶುಲ್ಕವನ್ನು ಶೇ.100ರಷ್ಟು ಹೆಚ್ಚು ಮಾಡಿತ್ತು ಅದನ್ನೀಗ ಶೇ.50ಕ್ಕೆ ಇಳಿಸಿದೆ. ಹಾಗಿದ್ದರೂ ಇದು ದೊಡ್ಡ ಮೊತ್ತದ ಶುಲ್ಕ ಎಂದು ಹೇಳಿದ್ದಾರೆ. ಈ ಬೆಳವಣಿಗೆ ರಾಜ್ಯದ ಉದ್ದಿಮೆದಾರರನ್ನು ಸರ್ಕಾರವೇ ನಿಜಕ್ಕೂ ಗೋವಾ, ಮಹಾರಾಷ್ಟ್ರಕ್ಕೆ ದೂಡುತ್ತಿದ್ದಿಯಾ ಎಂದು ಅನಿಸುತ್ತಿದೆ ಎಂದು ಟ್ವೀಟ್‌ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ವಿಪಕ್ಷ ನಾಯಕ ರಾಹುಲ್‌ ಗಾಂಧಿಗೆ ಟ್ಯಾಗ್‌ ಮಾಡಿ ಅವರು ಟ್ವೀಟ್‌ ಮಾಡಿದ್ದಾರೆ.

Scroll to load tweet…

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹುಲಿ ಸ್ಪಿರಿಟ್ ಪ್ರೈವೇಟ್ ಲಿಮಿಟೆಡ್ ಡಿಸ್ಟಲರಿಯನ್ನು ಆರಂಭ ಮಾಡಲಾಗಿದೆ. ಬೆಲ್ಲದ ಮೂಲಕ ಹುಲಿ ಬ್ರ್ಯಾಂಡ್‌ ಹೆಸರಿನ ರಮ್‌ಅನ್ನು ಮೈಸೂರು ಮೂಲದ ಕಂಪನಿ ತಯಾರಿಸುತ್ತಿದೆ.

ಶುಲ್ಕವನ್ನು ಇನ್ನಷ್ಟು ಕಡಿತಗೊಳಿಸುವಂತೆ ಸಿಎಂಗೆ ಸ್ವತಃ ಮಾಲೀಕರೇ ಮನವಿ ಮಾಡಿದ್ದಾರೆ. ಸನ್ನದುದಾರ ವಾರ್ಷಿಕ ಶುಲ್ಕ ಶೇ.50 % ಹೆಚ್ಚಳ ಹಿನ್ನಲೆ‌ಯಲ್ಲಿ. ಸ್ಥಳೀಯ ಸನ್ನದ್ದುದಾರರ ಶುಲ್ಕ ಕಡಿತಗೊಳಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

ಮಹಾರಾಷ್ಟ್ರ, ಗೋವಾ ಸೇರಿ ಇತರೆ ರಾಜ್ಯದಲ್ಲಿ ಶುಲ್ಕ ಕಡಿಮೆ ಇದೆ. ಸಣ್ಣ ಸನ್ನದುದಾರರಿಗೆ ಹೊರ ರಾಜ್ಯಗಳ ರೀತಿ ಸವಲತ್ತು ಕೊಡುವುದಿಲ್ಲ. ವಾರ್ಷಿಕ 60 ಲಕ್ಷ ಇದ್ದ ಶುಲ್ಕ 90 ಲಕ್ಷಕ್ಕೆ ಏರಿಕೆ ಹಿನ್ನಲೆ ಕಡಿತಕ್ಕೆ ಮನವಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ , ರಾಹುಲ್ ಗಾಂಧಿಗೆ ಮಾಲೀಕ ಅರುಣ್‌ ಅರಸ್‌ ಟ್ಯಾಗ್‌ ಮಾಡಿದ್ದಾರೆ.