ಹೈಕೋರ್ಟ್ ವಿಡಿಯೋ ಕಾನ್ಫರೆನ್ಸ್ ಆ್ಯಪ್ ಹ್ಯಾಕ್: ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡಿದ ಸೈಬರ್ ಕಳ್ಳರು

ಕರ್ನಾಟಕ ರಾಜ್ಯ ಹೈಕೋರ್ಟ್ ಕಲಾಪದ ವೇಳೆ ವಿಡಿಯೋ ಕಾನ್ಫೆರೆನ್ಸ್ ಆ್ಯಪ್ ಅನ್ನು ಹ್ಯಾಕ್‌ ಮಾಡಿ ಅಶ್ಲೀಲ ದೃಶ್ಯಾವಳಿಗಳನ್ನು ಅಪ್ಲೋಡ್ ಮಾಡಲಾಗಿದೆ.

Karnataka High Court Video Conference App Hack Cyber Thieves Upload Obscene Video sat

ಬೆಂಗಳೂರು (ಡಿ.05): ಕರ್ನಾಟಕ ರಾಜ್ಯದ ಉಚ್ಛ ನ್ಯಾಯಾಲಯದ ಕಲಾಪಕ್ಕೂ ಸೈಬರ್ ಕಳ್ಳರ ಹಾವಳಿ ಉಂಟಾಗಿದೆ. ಹೈಕೋರ್ಟ್ ಕಲಾಪದ ವೇಳೆ ವಿಡಿಯೋ ಕಾನ್ಫೆರೆನ್ಸ್ ಆ್ಯಪ್ ಅನ್ನು ಹ್ಯಾಕ್‌ ಮಾಡಿ ಅಶ್ಲೀಲ ದೃಶ್ಯಾವಳಿಗಳನ್ನು ಅಪ್ಲೋಡ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಸ್ಥಗಿತಗೊಳಿಸಲಾಗಿದೆ.

ಹೌದು, ಇಷ್ಟು ದಿನ ಜನಸಾಮಾನ್ಯರ ಹಾಗೂ ಸಣ್ಣಪುಟ್ಟ ಖಾಸಗಿ ಸಂಘ- ಸಂಸ್ಥೆಗಳ ಸೈಬರ್ ಹ್ಯಾಕ್ ಮಾಡುತ್ತಿದ್ದ ಸೈಬರ್ ಕಳ್ಳರು ಇಂದು ನೇರವಾಗಿ ಕರ್ನಾಟಕದ ಹೈಕೋರ್ಟ್ನ ವಿಡಿಯೋ ಕಾನ್ಫರೆನ್ಸ್ ಅಪ್ಲಿಕೇಶನ್ ಅನ್ನೇ ಹ್ಯಾಕ್‌ ಮಾಡಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಸೈಬರ್ ಹ್ಯಾಕ್ ಖದೀಮರು, ವಿಡಿಯೋ ಕಾನ್ಪರೆನ್ಸ್ ಆ್ಯಪ್ ನಲ್ಲಿ ಅಶ್ಲೀಲ್ ದೃಶ್ಯಾವಳಿ ಅಪ್ ಲೋಡ್ ಮಾಡಿದ್ದಾರೆ. ಈ ಬಗ್ಗೆ ಹೈಕೋರ್ಟ್ ಕಲಾದ ವಿಡಿಯೋನಲ್ಲಿ ಅಶ್ಲೀಲ ವಿಡಿಯೋ ಬರುತ್ತಿದ್ದಂತೆ ಅದನ್ನು ನಿರ್ವಹಣೆ ಮಾಡುತ್ತಿದ್ದ ಸಿಬ್ಬಂದಿಯನ್ನು ಕರೆದು ಕೇಳಿದಾಗ ಸೈಬರ್ ಹ್ಯಾಕ್ ಆಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.

ಕ್ಯಾಪ್ಟನ್‌ ಅರ್ಜುನನ ಸಾವಿಗೆ ಅರಣ್ಯ ಅಧಿಕಾರಿಗಳ ಪ್ರಮಾದವೇ ಕಾರಣವಾಯ್ತಾ? ಅರ್ಜುನನಿಗೆ ಗುಂಡೇಟು ಆಗಿದ್ದೇಗೆ?

ಹೈಕೋರ್ಟ್ ವಿಡಿಯೋ ಕಲಾಪದಲ್ಲಿ ಇಂತಹ ಕೃತ್ಯ ನಡೆದ ಕೂಡಲೇಬ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುತ್ತಿದ್ದ ವಿಚಾರಣೆಯನ್ನು ಕೂಡಲೇ ಸ್ಥಗಿತ ಮಾಡಲಾಗಿದೆ. ಸೈಬರ್ ಸೆಕ್ಯುರಿಟ್ ಸಮಸ್ಯೆ ಹಿನ್ನೆಲೆ ಸದ್ಯಕ್ಕೆ ವಿಡಿಯೋ ಕಾನ್ಫರೆನ್ಸ್ ಸ್ಥಗಿತ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ದುರಸ್ತಿಪಡಿಸುವಂತೆ ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದ್ದಾರೆ. ಆದರೂ ಸರಿಹೋಗದ ಅದನ್ನು ಸ್ಥಗಿತ ಮಾಡಲಾಗಿದೆ. ಆದರೆ, ಅಷ್ಟೊತ್ತಿಗಾಗಲೇ ಕೆಲ ನಿಮಿಷಗಳ ಕಾಲ ಕೋರ್ಟ್ ಹಾಲ್ ಗಳ ವಿಡಿಯೋ ಕಾನ್ಫರೆನ್ಸ್ ಹ್ಯಾಕ್ ಆಗಿ ಅಶ್ಲೀಲ ವಿಡಿಯೋ ಪ್ರಸಾರ ಆಗಿತ್ತು. ಆದ್ದರಿಂದ ವಿಡಿಯೋ ಕಾನ್ಫರೆನ್ಸ್ ಸೌಲಭ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು  ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ .ಬಿ. ವರಾಳೆ ತಿಳಿಸಿದ್ದಾರೆ.

ಕೋವಿಡ್ ಅವಧಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಆರಂಭ: ಜಾಗತಿಕ ಮಟ್ಟದಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಕಂಡುಬಂದ ಕೋವಿಡ್‌-19 ವೈರಸ್ ಹಾವಳಿಯಿಂದಾಗಿ ಲಾಕ್‌ಡೌನ್ ಅವಧಿ ಸೇರಿದಂತೆ ವಿವಿಧ ಹಂತಗಳಲ್ಲಿ ಕೋರ್ಟ್ ಕಲಾಪವನ್ನು ನಡೆಸಲು ಅನುಕೂಲ ಆಗುವಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕಲಾಪ ನಡೆಸುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಇದು ನ್ಯಾಯಾಲಯ, ವಕೀಲರು ಹಾಗೂ ಅರ್ಜಿದಾರರಿಗೂ ಜೆಚ್ಚು ಅನುಕೂಲ ಆಗಿದ್ದರಿಂದ ನ್ಯಾಯಾಲಯಗಳಿಂದ ಭೌತಿಕ ಕಾರ್ಯ ಕಲಾಪವನ್ನು ಆರಂಭಿಸಿದಾಗ್ಯೂ, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಮಾಡುವುದನ್ನು ಮುಂದುವರೆಸಲಾಗಿತ್ತು. ಈಗ ಇಂತಹ ಸೈಬರ್‌ ಹ್ಯಾಕ್‌ ದುರ್ಘಟನೆ ಸಂಭವಿಸಿದೆ. 

ಒಂದೇ ದಿನದಲ್ಲಿ 5 ಲಕ್ಷ ಕೋಟಿ ಹೆಚ್ಚಾದ ಷೇರುಪೇಟೆ ಹೂಡಿಕೆದಾರರ ಸಂಪತ್ತು: ಅದೃಷ್ಟ ಅಂದ್ರೆ ಇದಪ್ಪಾ!

Latest Videos
Follow Us:
Download App:
  • android
  • ios