Asianet Suvarna News Asianet Suvarna News

2 ಬಾಳೆಹಣ್ಣಿಗೆ 442 ರು. ಚಾರ್ಜ್ ಹಾಕಿದ ಸ್ಟಾರ್‌ ಹೋಟೆಲ್‌ಗೆ 25 ಸಾವಿರ ದಂಡ!

2 ಬಾಳೆಹಣ್ಣಿಗೆ 442 ರು. ಚಾರ್ಜ್‌ ಮಾಡಿದ್ದಕ್ಕೆ 25 ಸಾವಿರ ದಂಡ!| ಬಿಸಿ ಮುಟ್ಟಿಸಿದ ತೆರಿಗೆ ಇಲಾಖೆ ಅಧಿಕಾರಿಗಳು

JW Marriott Chandigarh slapped with Rs 25000 fine after Rahul Bose viral video on banana bill
Author
Bangalore, First Published Jul 28, 2019, 2:12 PM IST

ಚಂಡೀಗಢ[ಜು.28]: ಕೇವಲ 2 ಬಾಳೆಹಣ್ಣಿಗೆ ಬರೋಬ್ಬರಿ 442 ರುಪಾಯಿ ದರ ವಿಧಿಸಿ ಸುದ್ದಿಯಾಗಿದ್ದ ಇಲ್ಲಿನ ಐಶಾರಾಮಿ ಹೋಟೆಲ್‌ಗೆ ತೆರಿಗೆ ಇಲಾಖೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದು, 25 ಸಾವಿರ ರು. ದಂಡ ವಿಧಿಸಿದ್ದಾರೆ.

ಬಾಳೆಹಣ್ಣಿಗಲ್ಲ, ಪ್ಲೇಟಿಗೆ ತೆರಿಗೆ: ರಾಹುಲ್ ಬನಾನಾ ಸ್ಟೋರಿಗೆ ಟ್ವಿಸ್ಟ್!

ನಟ ರಾಹುಲ್‌ ಬೋಸ್‌ ಅವರು ಹೋಟೆಲ್‌ನಲ್ಲಿ 2 ಬಾಳೆಹಣ್ಣಿಗೆ 442 ರು. ದರ ವಿಧಿಸಿದ್ದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿ, ಬಾಳೆಹಣ್ಣು ಮತ್ತು ಬಿಲ್‌ ಸಮೇತ ವಿಡಿಯೋ ಮಾಡಿ ಟ್ವಿಟ್ಟರಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಭಾರೀ ವೈರಲ್‌ ಆಗಿತ್ತು.

ಇದರಿಂದ ತೆರಿಗೆ ಇಲಾಖೆ ಅಧಿಕಾರಿಗಳು ಹೋಟೆಲ್‌ಗೆ ತೆರಳಿ ದಾಖಲೆಗಳನ್ನು ಪರಿಶೀಲಿಸಿದ ನಂತರ ನಿಯಮ ಉಲ್ಲಂಘನೆ ಆರೋಪದ ಮೇಲೆ ಹೋಟೆಲ್‌ ಆಡಳಿತಕ್ಕೆ 25 ಸಾವಿರ ರು. ದಂಡ ವಿಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

Follow Us:
Download App:
  • android
  • ios