ಜುಲೈ 2025 ರಲ್ಲಿ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ. ಖರ್ಚಿ ಪೂಜೆ, ಗುರು ಹರಗೋಬಿಂದ್ ಜಯಂತಿ ಸೇರಿದಂತೆ ಹಲವು ಹಬ್ಬಗಳಿಂದಾಗಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುತ್ತವೆ.

ನವದೆಹಲಿ: ಈ ವರ್ಷದ ಏಳನೇ ತಿಂಗಳು ಜುಲೈ ಆರಂಭವಾಗಲಿದ್ದು, ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಹಲವು ವಿಷಯಗಳು ಬದಲಾಗುತ್ತಿರುತ್ತವೆ. ಅದೇ ರೀತಿ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು ಭಾನುವಾರ-ಶನಿವಾರ ಹೊರತಾಗಿಯೂ ಕೆಲ ದಿನಗಳು ಮುಚ್ಚಲ್ಪಟ್ಟಿರುತ್ತವೆ. ಇಂದು ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯವಿದ್ದರೂ, ಗ್ರಾಹಕರು ಬ್ಯಾಂಕ್‌ಗಳಿಗೆ ತೆರಳುತ್ತಿರುತ್ತಾರೆ. ಆದ್ದರಿಂದ ಯಾವ ದಿನ ಬ್ಯಾಂಕ್‌ಗಳು ಮುಚ್ಚಲ್ಪಟ್ಟಿರುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಸೂಕ್ತವಾಗಿದೆ. ರಜೆ ದಿನ ಬ್ಯಾಂಕ್‌ಗೆ ಹೋಗಿ ಕೆಲಸವಾಗದೇ ಹಿಂದಿರುಗಿದಂತಾಗುತ್ತದೆ.

ಇಂದು ನಿಮ್ಮ ಮೊಬೈಲ್‌ನಲ್ಲಿಯೇ ಹಣ ವರ್ಗಾವಣೆ, ಬ್ಯಾಲೆನ್ಸ್ ಪರಿಶೀಲನೆ, ವಿವಿಧ ಬಿಲ್ ಪಾವತಿ, ಸಾಲಕ್ಕೆ ಅರ್ಜಿ ಸಲ್ಲಿಕೆ ಸೇರಿದಂತೆ ಹೆಚ್ಚಿನ ಬ್ಯಾಂಕಿಂಗ್ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಆದ್ರೂ ನೇರವಾಗಿ ಶಾಖೆಗೆ ತೆರಳಿ ಕೆಲ ದಾಖಲೆ ಸಂಗ್ರಹ ಮತ್ತು ಸಲ್ಲಿಕೆಯಂತಹ ಕಾರ್ಯಗಳು ಇರುತ್ತವೆ. ದಾಖಲಾತಿ ಸಲ್ಲಿಕೆ, ದೊಡ್ಡಮೊತ್ತದ ಹಣ ಡೆಪಾಸಿಟ್ ಮತ್ತು ಹಿಂಪಡೆಯಲು ಶಾಖೆಗೆ ಭೇಟಿ ನೀಡಬೇಕಾಗುತ್ತದೆ. ಇನ್ನು KYC ಮಾಹಿತಿಯ ನವೀಕರಣಗಳು, ನಗದು ಹಿಂಪಡೆಯುವಿಕೆ ಅಥವಾ ಠೇವಣಿಗಳು, ಲಾಕರ್ ಪ್ರವೇಶ, ವಿಫಲ ವಹಿವಾಟುಗಳಿಗೆ ವಿವಾದ ಪರಿಹಾರ ಮತ್ತು ಜಂಟಿ ಖಾತೆ ಮತ್ತು ಖಾತೆ ಮುಚ್ಚುವಿಕೆ ಕಾರ್ಯಗಳಿಗೆ ಬ್ಯಾಂಕ್‌ಗೆ ಭೇಟಿ ನೀಡಬೇಕಾಗುತ್ತದೆ.

ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಕೆಲವು ದಿನಗಳು ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್‌ಗಳು ಮುಚ್ಚಲ್ಪಟ್ಟಿರುತ್ತವೆ. ಕೆಲ ಸ್ಥಳೀಯ ಹಬ್ಬಗಳು ಕೆಲವು ರಾಜ್ಯಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಖಾರ್ಚಿ ಪೂಜೆ , ಗುರು ಹರಗೋಬಿಂದ್ ಜಿ ಅವರ ಜನ್ಮದಿನ , ಬೆಹ್ ದೀಂಕ್ಲಾಮ್ , ಹರೇಲಾ, ಯು ತಿರೋಟ್ ಸಿಂಗ್ ಅವರ ಪುಣ್ಯತಿಥಿ, ಕೆರ್ ಪೂಜಾ, ಡ್ರುಕ್ಪಾ ತ್ಶೆ-ಜಿ ಮುಂತಾದ ಸಂದರ್ಭಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ . ಜುಲೈ ತಿಂಗಳಲ್ಲಿನ ಬ್ಯಾಂಕ್ ರಜಾದಿನಗಳ ಮಾಹಿತಿ ಇಲ್ಲಿದೆ.

ಜುಲೈ 2025 ರಲ್ಲಿ ಬ್ಯಾಂಕ್ ರಜಾದಿನಗಳು

ಜುಲೈ 3, 2025: ಖರ್ಚಿ ಪೂಜೆಯ ಸಂದರ್ಭದಲ್ಲಿ ತ್ರಿಪುರಾದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಜುಲೈ 5, 2025: ಗುರು ಹರಗೋವಿಂದ ಜಿ ಅವರ ಜನ್ಮದಿನವನ್ನು ಆಚರಿಸಲು ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಜುಲೈ 14, 2025: ಜುಲೈ 14, 2025 ರಂದು ಬೆಹ್ ದೇಂಖ್ಲಾಮ್ ಸಂದರ್ಭದಲ್ಲಿ ಮೇಘಾಲಯದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಜುಲೈ 16, 2025: ಹರೇಲಾ ಸಂದರ್ಭದಲ್ಲಿ ಉತ್ತರಾಖಂಡದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಜುಲೈ 17, 2025: ಯು ತಿರೋಟ್ ಅವರ ಪುಣ್ಯತಿಥಿಯ ಸ್ಮರಣಾರ್ಥ ಮೇಘಾಲಯದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಜುಲೈ 19, 2025: ಕೇರ್ ಪೂಜೆಯ ಸಂದರ್ಭದಲ್ಲಿ ತ್ರಿಪುರಾದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಜುಲೈ 28, 2025: ಡ್ರುಕ್ಪಾ ತ್ಶೆ-ಜಿ ಸಂದರ್ಭದಲ್ಲಿ ಸಿಕ್ಕಿಂನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ನಾಲ್ಕು ಭಾನುವಾರ ಮತ್ತು ಎರಡು ಶನಿವಾರ

ಜುಲೈ 6, ಜುಲೈ 13, ಜುಲೈ 20 ಮತ್ತು ಜುಲೈ 27 ಭಾನುವಾರದ ರಜಾದಿನವಾಗಿದೆ. ಜುಲೈ 12 ಮತ್ತು ಜುಲೈ 26ರಂದು ಎರಡು, ನಾಲ್ಕನೇ ಶನಿವಾರ ರಜಾದಿನವಾಗಿದೆ.

ದಿನದ 24 ಗಂಟೆಯೂ ಆನ್‌ಲೈನ್‌ ಸೇವೆ

ರಜಾದಿನಗಳಲ್ಲಿ ಆನ್‌ಲೈನ್‌ನಲ್ಲಿ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುತ್ತದೆ. ನೆಟ್ ಬ್ಯಾಂಕಿಂಗ್, UPI, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ATM ಸೇವೆಗಳು ಗ್ರಾಹಕರಿಗಾಗಿ ಲಭ್ಯವಿರಲಿವೆ. ಹಣ ವರ್ಗಾವಣೆ, ಬಿಲ್ ಚೆಕಿಂಗ್ ಸೇರಿದಂತೆ ಬಹುತೇಕ ಸೇವೆಗಳನ್ನು ಆನ್‌ಲೈನ್ ಮೂಲಕ ಮಾಡಿಕೊಳ್ಳಬಹುದಾಗಿದೆ. ಇಂದು ಬಹುತೇಕರು UPI ಮೂಲಕವೇ ಹಣಕಾಸಿನ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ. ಜುಲೈನಲ್ಲಿ ಒಟ್ಟು 13 ದಿನ ಬ್ಯಾಂಕ್‌ಗಳು ಮುಚ್ಚಲ್ಪಟ್ಟಿರುತ್ತವೆ. ಈ ರಜಾದಿನಗಳನ್ನು ನೋಡಿಕೊಂಡು ಬ್ಯಾಂಕ್‌ಗೆ ತೆರಳಿದ್ರೆ ಯಾವುದೇ ಸಮಸ್ಯೆಗಳು ಆಗಲ್ಲ.