ಒಂದ್ಕಾಲದಲ್ಲಿ ಪರ್ಸ್ ಮಾರ್ತಿದ್ದವನೀಗ 400 ಕೋಟಿ ಕಂಪನಿ ಒಡೆಯ!

ಬಡತನ ಶಾಪ ಎನ್ನುತ್ತ ಶ್ರಮವಿಲ್ಲದೆ ಕುಳಿತ್ರೆ ಸಾಧಿಸಲು ಸಾಧ್ಯವಿಲ್ಲ. ಬಡತನವನ್ನು ಮೆಟ್ಟಿ ನಿಂತು, ತಮ್ಮ ಜೊತೆ ಇನ್ನೊಂದಿಷ್ಟು ಮಂದಿಗೆ ನೆರವಾಗುವ ಕೆಲಸ ಮಾಡಿದ್ರೆ ಹಣ ತಾನಾಗಿಯೇ ಬರುತ್ತೆ.  
 

JK Shah Who Helped CA Students Through Hard Work roo

ಈಗ ಕೋಟ್ಯಾಂತರ ರೂಪಾಯಿ ಆಸ್ತಿ ಹೊಂದಿರುವವರೆಲ್ಲ ಏಕಾಏಕಿ ಈ ಹಂತಕ್ಕೆ ಬಂದಿಲ್ಲ. ಇದ್ರ ಹಿಂದೆ ಸಾಕಷ್ಟು ಪರಿಶ್ರಮ, ಛಲ, ಗುರಿ, ಬುದ್ಧಿವಂತಿಕೆ, ತ್ಯಾಗವಿದೆ. ಆರಾಮವಾಗಿ ಕೆಲಸ ಆಗ್ಬೇಕು, ಯಾವುದೇ ಸಮಸ್ಯೆ ಮೈಮೇಲೆ ಬರಬಾರದು, ಸಂಬಳ ಮಾತ್ರ ಕೈತುಂಬ ಸಿಗಬೇಕು ಎನ್ನುವ ಮನಸ್ಥಿತಿ ಈಗಿನ ಬಹುತೇಕ ಯುವಜನತೆಗಿದೆ. ರಾತ್ರೋರಾತ್ರಿ ಶ್ರೀಮಂತರಾಗುವ ಶಾರ್ಟ್ ಕಟ್ ಹುಡುಕುವವರೇ ಹೆಚ್ಚು. ಆದ್ರೆ ಈ ಶಾರ್ಟ್ ಕಟ್ ನಿಂದ ಬಂದ ಹಣ ಅನೇಕ ದಿನ ಉಳಿಯೋದಿಲ್ಲ ಎನ್ನುವ ಸತ್ಯ ಅನೇಕರಿಗೆ ತಿಳಿದಿಲ್ಲ. ಕಷ್ಟಪಟ್ಟು ಮೇಲೆ ಬಂದವರು ನಿಧಾನವಾಗಿಯಾದ್ರೂ ಗಟ್ಟಿಯಾಗಿ ನೆಲೆ ನಿಲ್ಲುತ್ತಾರೆ ಎನ್ನುವುದಕ್ಕೆ ಜೆ.ಕೆ. ಷಾ ಉತ್ತಮ ನಿದರ್ಶನ. ಸ್ಥಿತಿಸ್ಥಾಪಕತ್ವ ಮತ್ತು ನಿರ್ಣಯದ ಕ್ಷೇತ್ರದಲ್ಲಿ, ಜೆ.ಕೆ. ಷಾ ಅವರ ಅಸಾಧಾರಣ ಪ್ರಯಾಣವು ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಪರಿವರ್ತಕ ಶಕ್ತಿಗೆ ಸಾಕ್ಷಿಯಾಗಿದೆ. 

ಜೆ.ಕೆ. ಷಾ (Jk shah) ಕೂಡ ಬಾಲ್ಯದಲ್ಲಿಯೇ ಶ್ರೀಮಂತ (Rich) ಮನೆತನದಲ್ಲಿ ಹುಟ್ಟಿದವರಲ್ಲ. ಬಡತನ ಎಂದರೇನು ಎಂಬುದು ಅವರಿಗೆ ಗೊತ್ತಿದೆ. ಬಡವರ ಸವಾಲುಗಳನ್ನು ಅವರು ಎದುರಿಸಿದ್ದಾರೆ. ಒಂದೊಂದು ರೂಪಾಯಿಗೂ ಎಷ್ಟು ಮಹತ್ವವಿದೆ ಎಂಬ ಅರಿವು ಅವರಿಗಿದೆ. ಓದಲು ಹಣವಿಲ್ಲದೆ ಚಾರಿಟಿ ಟ್ರಸ್ಟ್ (Trust) ಬೆಂಬಲ ಪಡೆದು ಓದು ಮುಗಿಸಿದ ಜೆ.ಕೆ. ಷಾ, ಬಡತನವನ್ನು ದೂರುತ್ತ ಕುಳಿತುಕೊಳ್ಳದೆ ಕಂಪನಿಯೊಂದನ್ನು ಕಟ್ಟಿ ಬೆಳೆಸಿದ್ದಾರೆ. ಆ ಕಂಪನಿ ಈಗ 444 ಕೋಟಿ ರೂಪಾಯಿ ಬೆಲೆ ಬಾಳುತ್ತದೆ.

ಷೇರುಪೇಟೆಯಲ್ಲಿ ಹೂಡಿಕೆಗೆ ಹೆಚ್ಚಿದ ಆಕರ್ಷಣೆ: ಭಾರತೀಯರ ಉಳಿತಾಯ ಬ್ಯಾಂಕಿಂದ ಷೇರು ಪೇಟೆಯತ್ತ

ಜೆ.ಕೆ. ಷಾ ಯಾರು? : ಗುಜರಾತಿ (Gujarat ) ನ ಒಂದು ಸಣ್ಣ ಹಳ್ಳಿಯಲ್ಲಿ ಹುಟ್ಟಿದವರು ಜೆ.ಕೆ. ಷಾ. ಬಡತನದಿಂದಾಗಿ ಅವರಿಗೆ ಓದು ಸುಲಭವಾಗಿರಲಿಲ್ಲ. ಸಮುದಾಯದ ಚಾರಿಟಿ ಟ್ರಸ್ಟ್ ನಿಂದ ಹಣದ ಸಹಾಯ ಪಡೆದು ಓದು ಮುಂದುವರೆಸಿದ್ದರು. ಸಿಎಗಾಗಿ ಗುಜರಾತಿನಿಂದ ಮುಂಬೈಗೆ ಬಂದ ಷಾ, ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಮುಂದೇನು ಎಂಬುದು ಗೊತ್ತಿಲ್ಲದ ಅವರು, ಹೊಟ್ಟೆ ಪಾಡಿದಾಗಿ ಮಹಿಳೆಯರ ಪರ್ಸ್ ಮಾರಾಟ ಶುರು ಮಾಡಿದ್ದರು. ಆದ್ರೆ ಎಂದಿಗೂ ಅವರು ಹೋರಾಟವನ್ನು ಬಿಡಲಿಲ್ಲ.

ಸಿಎ ಓದುವ ಸಂದರ್ಭದಲ್ಲಿ ಷಾ, ಹಣಕಾಸಿನ ನಿರ್ಬಂಧಗಳು, ಭಾಷೆಯ ಅಡೆತಡೆಗಳು, ಸ್ವಯಂ ಅನುಮಾನ ಮತ್ತು ಗುಣಮಟ್ಟದ ತರಬೇತಿಯ ಅನುಪಸ್ಥಿತಿ ಸೇರಿದಂತೆ ಕೆಲ ಸವಾಲನ್ನು ಎದುರಿಸಿದರು. ಅದು ಮುಂದಿನ ಮಕ್ಕಳಿಗೆ ಕಾಡಬಾರದು ಎನ್ನುವ ಕಾರಣಕ್ಕೆ ಸಿಎ ಕೋಚಿಂಗ್ ಸೆಂಟರ್ ಶುರು ಮಾಡಿದ್ರು ಷಾ. ವಿದ್ಯಾರ್ಥಿಗಳ ಸಮಸ್ಯೆಗೆ ಸರಳ ಸೂತ್ರವನ್ನು ಷಾ ಕಂಡು ಹಿಡಿದಿದ್ದಾರೆ. 

ಏಳು ವಿದ್ಯಾರ್ಥಿಗಳ ಸಾಧಾರಣ ಬ್ಯಾಚ್‌ನೊಂದಿಗೆ ಅವರ ಕಂಪನಿ ಶುರುವಾಗಿದ್ದು, ಈಗ ದೊಡ್ಡ ಪ್ರಮಾಣದಲ್ಲಿ ತಲೆ ಎತ್ತಿ ನಿಂತಿದೆ. 90,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅವರ ಪರಿಣತಿಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಅನುಭವಿ ಶಿಕ್ಷಕರೊಂದಿಗೆ ಪರಿಕಲ್ಪನೆ ಆಧಾರಿತ ಬೋಧನಾ ತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ. ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಯಶಸ್ವಿ ವೃತ್ತಿಜೀವನವನ್ನು ಸಾಧಿಸಲು ಸಹಾಯ ಮಾಡುತ್ತದೆ. ಷಾ ತರಗತಿಗಳು ಅನುಭವಿ ಮತ್ತು ಅರ್ಹ ಶಿಕ್ಷಕರನ್ನು ಹೊಂದಿದೆ. ವಿದ್ಯಾರ್ಥಿಗಳ ಅನುಮಾನಗಳು ಮತ್ತು ಪ್ರಶ್ನೆಗಳಿಗೆ ಸದಾ ಉತ್ತರ ನೀಡಲು ಸಿದ್ಧರಿರುತ್ತಾರೆ. 

ಅತಿಥಿಗಳಿಗಾಗಿ ವಿಮಾನಗಳು, ಹೆಲಿಕಾಪ್ಟರ್ ಗಿಫ್ಟ್, ಕೋಟಿ ಮೌಲ್ಯದ ಆಭರಣ, ಅತ್ಯಂತ ದುಬಾರಿ ಭಾರತೀಯ ವಿವಾಹ

ಸಿಎ ಪರೀಕ್ಷೆಗಳಲ್ಲಿ ಟಾಪರ್‌ಗಳನ್ನು ನೀಡುವ ಶ್ರೀಮಂತ ಪರಂಪರೆಯನ್ನು ಜೆ.ಕೆ. ಷಾ ಶಿಕ್ಷಣ ಸಂಸ್ಥೆ ಮುಂದುವರೆಸಿದೆ. ಸಿಎ ಪರೀಕ್ಷೆಯಲ್ಲಿ ಒಂದನೇ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಜೆ.ಕೆ.ಷಾ ಶಿಕ್ಷಣ ಸಂಸ್ಥೆಯಿಂದ ಬಂದವರಾಗಿದ್ದಾರೆ. ಹಿಂದಿ ವರ್ಷ ಜೆ.ಕೆ. ಷಾ ಶಿಕ್ಷಣ ಸಂಸ್ಥೆ ನಲವತ್ತನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದು, ನಿರಂತರ ಸೇವೆಗೆ ಸಿದ್ಧವಾಗಿದೆ. 

Latest Videos
Follow Us:
Download App:
  • android
  • ios