ಷೇರುಪೇಟೆಯಲ್ಲಿ ಹೂಡಿಕೆಗೆ ಹೆಚ್ಚಿದ ಆಕರ್ಷಣೆ: ಭಾರತೀಯರ ಉಳಿತಾಯ ಬ್ಯಾಂಕಿಂದ ಷೇರು ಪೇಟೆಯತ್ತ
ಭಾರತೀಯ ಕುಟುಂಬಗಳ ಹಣಕಾಸಿನ ಉಳಿತಾಯವು ಸಾಂಪ್ರದಾಯಿಕವಾದ ಬ್ಯಾಂಕ್ ಖಾತೆಗಳಿಂದ ಬಂಡವಾಳ ಪೇಟೆಯತ್ತ ಬದಲಾವಣೆಯಾಗುತ್ತಿದೆ ಎಂದು ಬೋಫಾ ಸೆಕ್ಯುರಿಟೀಸ್ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.
ನವದೆಹಲಿ: ಭಾರತೀಯ ಕುಟುಂಬಗಳ ಹಣಕಾಸಿನ ಉಳಿತಾಯವು ಸಾಂಪ್ರದಾಯಿಕವಾದ ಬ್ಯಾಂಕ್ ಖಾತೆಗಳಿಂದ ಬಂಡವಾಳ ಪೇಟೆಯತ್ತ ಬದಲಾವಣೆಯಾಗುತ್ತಿದೆ ಎಂದು ಬೋಫಾ ಸೆಕ್ಯುರಿಟೀಸ್ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.
ಈ ವರದಿಯ ಪ್ರಕಾರ 2001ರಲ್ಲಿ ಬ್ಯಾಂಕ್ ಉಳಿತಾಯ ಶೇ.39ರಷ್ಟಿದ್ದರೆ, ಷೇರು ಮಾರುಕಟ್ಟೆ, ಬಾಂಡ್ ಸೇರಿದಂತೆ ವಿವಿಧ ಬಂಡವಾಳ ಹೂಡಿಕೆಯ ವಲಯದಲ್ಲಿನ ಹೂಡಿಕೆ ಶೇ.4 ರಷ್ಟಿತ್ತು. ಆದರೆ 2023ರ ವೇಳೆಗೆ ಬ್ಯಾಂಕ್ ಉಳಿತಾಯ ಶೇ.37 ಮತ್ತು ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಶೇ.7ಕ್ಕೆ ಬದಲಾವಣೆ ಆಗಿದೆ ಎಂದು ಈ ವರದಿ ಹೇಳಿದೆ.
ಆರ್ಥಿಕ ಸಾಕ್ಷರತೆಯ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಜನ ಉಳಿತಾಯದಲ್ಲೂ ಬದಲಾವಣೆಗಳನ್ನು ಕಂಡುಕೊಂಡಿದ್ದಾರೆ. 2023ರಲ್ಲಿ ಜೀವವಿಮೆ, ಪ್ರಾವಿಡೆಂಟ್ ಮತ್ತು ಪಿಂಚಣಿ ಫಂಡ್‌ಗಳಲ್ಲಿನ ಹೂಡಿಕೆ ಶೇ.34ರಿಂದ ಶೇ.40ಕ್ಕೆ ಏರಿಕೆಯಾಗಿದೆ. ಭಾರತೀಯರು ಆಸ್ತಿಯಲ್ಲಿ ಶೇ.77ರಷ್ಟು ರಿಯಲ್ ಎಸ್ಟೇಟ್, ಶೇ.7 ರಷ್ಟು ವಾಹನ, ಲೈವ್ ಸ್ಟಾಕ್‌ನಂತಹ ವಸ್ತುಗಳು ಹಾಗೂ ಶೇ.11ರಷ್ಟು ಚಿನ್ನ ಸೇರಿದೆ ಎಂದು ವರದಿ ತಿಳಿಸಿದೆ.
ಷೇರುಪೇಟೆಗೆ ಎಚ್ ಡಿಎಫ್ ಸಿ ಪೆಟ್ಟು,ಕುಸಿದ ಸೆನ್ಸೆಕ್ಸ್, ನಿಫ್ಟಿ; 3.4ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು!