ಜಿಯೋ 153 ರೂ ಪ್ಲಾನ್, ಉಚಿತ ಡೇಟಾ, 28 ವ್ಯಾಲಿಟಿಡಿ ಜೊತೆಗೆ ಜಿಯೋ ಟಿವಿ-ಸಿನಿಮಾ ಸಬ್‌ಸ್ಕ್ರಿಪ್ಶನ್!

ರಿಲಯನ್ಸ್ ಜಿಯೋ ಮತ್ತೊಂದು ಬಂಪರ್ ಆಫರ್ ಘೋಷಣೆ ಮಾಡಿದೆ. ಕೇವಲ 153 ರೂಪಾಯಿ ಪ್ಲಾನ್. ಉಚಿತ ಡೇಟಾ, ಜಿಯೋ ಸಿನಿಮಾ, ಜಿಯೋ ಟಿವಿ ಸಬ್‌ಸ್ಕೃಪ್ಶನ್, 28 ದಿನ ವ್ಯಾಲಿಟಿಡಿ, ಅನ್‌ಲಿಮಿಟೆಡ್ ಕಾಲ್ ಸೇರಿದಂತೆ ಕೆಲ ಉಚಿತ ಆಫರ್ ನೀಡಲಾಗಿದೆ.

jio introduce just rs 153 recharge plan with unlimited call free data many more ckm

ಮುಂಬೈ(ಅ.25) ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಇದೀಗ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಬಂಪರ್ ಆಫರ್ ಘೋಷಣೆ ಮಾಡಲಾಗಿದೆ. ರೀಚಾರ್ಜ್ ಬೆಲೆ ದುಬಾರಿ ಅನ್ನೋ ಮಾತುಗಳು, ಅಸಮಾಧಾನಗಳು ಕೇಳಿಬರುತ್ತಿದ್ದಂತೆ ಜಿಯೋ ಅತೀ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಘೋಷಿಸಿದೆ. ಕೇವಲ 153 ರೂಪಾಯಿ ರೀಚಾರ್ಜ್ ಮಾಡಿದರೆ 28 ದಿನ ವ್ಯಾಲಿಟಿಡಿ ಸಿಗಲಿದೆ. 14 ಜಿಬಿ ಉಚಿತ ಡೇಟಾ, 300 ಉಚಿತ ಎಸ್‌ಎಂಎಸ್, ಅನ್‌ಲಿಮಿಟೆಡ್ ಕಾಲ್ ಸೇರಿದಂತೆ ಹಲವು ಸೌಲಭ್ಯಗಳು ಈ ರಿಚಾರ್ಜ್ ಪ್ಲಾನ್ ಮೂಲಕ ಸಿಗಲಿದೆ.

ಸಿನಿಮಾ ಹಾಗೂ ಕ್ರಿಕೆಟ್ ಪ್ರಿಯರಾಗಿದ್ದರೆ ನಿಮಗೆ ಈ ರಿಚಾರ್ಜ್ ಪ್ಲಾನ್ ಮತ್ತಷ್ಟು ಸೂಕ್ತವಾಗಲಿದೆ. ಜಿಯೋ ಸಿನಿಮಾ, ಜಿಯೋ ಟಿವಿ ಸಬ್‌ಸ್ಕೃಪ್ಶನ್ ಉಚಿತವಾಗಿ ಸಿಗಲಿದೆ.  ಅತೀ ಕಡಿಮೆ ಬೆಲೆಯಲ್ಲಿ ಜಿಯೋ ಇದೀಗ ಜನರಿಗೆ ಆಫರ್ ನೀಡಿದೆ. ಆದರೆ ವಿಶೇಷ ಸೂಚನೆ, ಈ ಪ್ಲಾನ್ ರಿಲಯನ್ಸ್ ಜಿಯೋ ಫೋನ್ ಗ್ರಾಹಕರಿಗೆ ಸಿಗಲಿದೆ. 

ಶೀಘ್ರದಲ್ಲೇ ಜಿಯೋ ಸಿನಿಮಾ ಸ್ಥಗಿತ? ಮುಕೇಶ್ ಅಂಬಾನಿ ಕಂಪನಿಯಲ್ಲಿ ಮಹತ್ವದ ಬೆಳವಣಿಗೆ!

ಒಟ್ಟು 14 ಜಿಬಿ ಡೇಟಾ ಪ್ರತಿ ದಿನ 0.5ಜಿಬಿ ಡೇಟಾ ಬಳಕೆ ಮಾಡಲು ಸಾಧ್ಯವಿದೆ.ಇಷ್ಟೇ ಅಲ್ಲ ರಿಲಯನ್ಸ್ ಜಿಯೋ ಇದೇ ರೀತಿ ಅತೀ ಕಡಿಮೆ ಬೆಲೆಯಲ್ಲಿ ಹಲವು ರೀಚಾರ್ಜ್ ಪ್ಲಾನ್ ಘೋಷಣೆ ಮಾಡಿದೆ. 75 ರೂಪಾಯಿ, 91 ರೂಪಾಯಿ, 125 ರೂಪಾಯಿ, 186 ರೂಪಾಯಿ, 223 ರೂಪಾಯಿ ಹಾಗೂ 895 ರೂಪಾಯಿ ರೀಚಾರ್ಜ್ ಪ್ಲಾನ್ ಘೋಷಿಸಿದೆ. ಎಲ್ಲಾ ರೀಚಾರ್ಜ್ ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್ ಕಾಲ್, ಉಚಿತ ಡೇಟಾ ಸೇರಿದಂತೆ ಹಲವು ಸೌಲಭ್ಯಗಳು ಸಿಗಲಿದೆ. ಜಿಯೋ ಸಿನಿಮಾ ಹಾಗೂ ಜಿಯೋ ಟಿವಿ ಸಬ್‌ಸ್ಕ್ರಪ್ಶನ್‌ನಿಂದ ಗ್ರಾಹಕರು ಉಚಿತವಾಗಿ ಐಪಿಎಲ್ ಸೇರಿದಂತೆ ಇತರ ಕ್ರೀಡೆಗಳನ್ನು ವೀಕ್ಷಿಸಲು ಸಾಧ್ಯವಿದೆ. ಜೊತೆಗೆ ಸಿನಿಮಾ ಸೇರಿದಂತೆ ಹಲವು ಮನೋರಂಜನಾ ಕಾರ್ಯಕ್ರಮಗಳು ಉಚಿತವಾಗಿ ಲಭ್ಯವಾಗಲಿದೆ.

ಒಂದೆಡೆ ಜಿಯೋ ಕಡಿಮೆ ರಿಚಾರ್ಜ್ ಪ್ಲಾನ್ ಮೂಲಕ ಆಫರ್ ನೀಡುತ್ತಿದ್ದರೆ, ಇತ್ತ ರಿಲಯನ್ಸ್ ಡಿಜಿಟಲ್ ತಂತ್ರಜ್ಞಾನದ ಮೂಲಕ ಗ್ರಾಹಕರ ಹಿಡಿದಿಟ್ಟುಕೊಳ್ಳುತ್ತಿದೆ. ಇತ್ತೀಗೆ ಜಿಯೋ ಕ್ಲೌಡ್ ಪಿಸಿ ತಂತ್ರಜ್ಞಾನ ಪರಿಚಯಿಸಿದೆ. ಇದು ಮನೆಯ ಟಿವಿಯನ್ನು ಕಂಪ್ಯೂಟರ್ ಆಗಿ ಪರಿವರ್ತಿಸಲು ಸಾಧ್ಯವಾಗಲಿದೆ. ಇಂಟರ್ನೆಟ್ ಸಂಪರ್ಕವಿದ್ದರೆ ಸಾಕು. ಜಿಯೋ ಕ್ಲೌಡ್ ಪಿಸಿ ಬಳಸಿ ಮನೆಯಲ್ಲಿ ಟಿವಿಯನ್ನು ಕಂಪ್ಯೂಟರ್ ರೀತಿ ಬಳಸಲು ಸಾಧ್ಯವಿದೆ. ವಿಶೇಷ ಅಂದರೆ ಕೇವಲ 100 ರೂಪಾಯಿಗೆ ಮನೆ ಟಿವಿಯನ್ನು ಕಂಪ್ಯೂಟರ್ ಆಗಿ ಪರಿವರ್ತಿಸಿ ಬಳಕೆ ಮಾಡಬಹುದು. ನೆಟ್ ಸಂಪರ್ಕ, ಸ್ಮಾರ್ಟ್ ಟಿವಿ, ಟೈಪಿಂಗ್ ಕೀಬೋರ್ಡ್, ಮೌಸ್ ಮತ್ತು ಜಿಯೋ ಕ್ಲೌಡ್ ಪಿಸಿ ಅಪ್ಲಿಕೇಷನ್ ಇದ್ದರೆ ಸಾಕು. ಮನೆಯಲ್ಲಿ ಮ್ಯಾಜಿಕ್ ಸೃಷ್ಟಿಯಾಗಲಿದೆ.

ಮನೆಯಲ್ಲಿ ಸ್ಮಾರ್ಟ್ ಟಿವಿ ಇಲ್ಲದಿದ್ದರೆ ಚಿಂತಿಸಬೇಕಿಲ್ಲ, ಅದಕ್ಕೂ ಒಂದು ಆಯ್ಕೆ ಇದೆ. ಜಿಯೋಫೈಬರ್, ಅಥವಾ ಜಿಯೋ ಏರ್ ಫೈಬರ್ ಜೊತೆ ಬರು ಸೆಟ್ ಅಪ್ ಬಾಕ್ಸ್ ಇದ್ದರೆ ಸಾಕು, ಯಾವುದೇ ಟಿವಿಯನ್ನು ಕಂಪ್ಯೂಟರ್ ಆಗಿ ಪರಿವರ್ತಿಸಲು ಸಾಧ್ಯವಿದೆ.  

ಜಿಯೋದಿಂದ ಅತೀ ಕಡಿಮೆ ಬೆಲೆಯ 4ಜಿ ಫೀಚರ್ ಫೋನ್‌ ಜಿಯೋಭಾರತ್ V3, V4 ಲಾಂಚ್!

ಗ್ರಾಹಕರು ಆ್ಯಪ್ಲಿಕೇಶನ್ ಲಾಗಿನ್ ಮಾಡಿದರೆ ಸಾಕು. ಕ್ಲೌಡ್‌ನಲ್ಲಿ ಸಂಗ್ರವಾಗುವ ಎಲ್ಲಾ ಡೇಟಾಗಳು ಟಿವಿಯಲ್ಲಿ ಕಾಣಿಸಲಿದೆ. ಇಮೇಲ್, ಸಂದೇಶ ಕಳುಹಿಸವುದು, ನೆಟ್‌ವರ್ಕಿಂಗ್, ನೆಟ್ ಸರ್ಫಿಂಗ್, ಶಾಲಾ ಪ್ರಾಜೆಕ್ಟ್, ಪ್ರಸೆಂಟೇಷನ್ ವರ್ಕ್ ಸೇರಿದಂತೆ ಬೇಸಿಕ್ ವರ್ಕ್ ಎಲ್ಲವನ್ನೂ ಮನೆಯ ಟಿವಿಯಲ್ಲೇ ಮಾಡಲು ಸಾಧ್ಯವಿದೆ.  ತಂತ್ರಜ್ಞಾನ, ಟೆಲಿಕಾಂ ಸೇರಿದಂತೆ ಎಲ್ಲಾ ಡಿಜಿಟಲ್ ಕ್ಷೇತ್ರದಲ್ಲಿ ರಿಲಯನ್ಸ್ ಭಾರಿ ಮೋಡಿ ಮಾಡುತ್ತಿದೆ. ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಹಲವು ಆಫರ್ ಹಾಗೂ ಅತೀ ಕಡಿಮೆ ಬೆಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ನೀಡುತ್ತಿದೆ. 
 

Latest Videos
Follow Us:
Download App:
  • android
  • ios