IRCTCಯನ್ನೂ ಅದಾನಿ ಸ್ವಾಧೀನಪಡಿಸಿಕೊಳ್ತಾರೆ ಎಂದ ಕಾಂಗ್ರೆಸ್‌: ರೈಲ್ವೆ ಬುಕಿಂಗ್ ಪ್ಲಾಟ್‌ಫಾರ್ಮ್‌ ತಿರುಗೇಟು

ಈ ಆರೋಪಗಳನ್ನು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ತಳ್ಳಿಹಾಕಿದ್ದು, ಇದು ಸಾರ್ವಜನಿಕ ವಲಯಕ್ಕೆ ಬೆದರಿಕೆ ಅಥವಾ ಸವಾಲಾಗಿರುವುದಿಲ್ಲ ಎಂದು IRCTC ಹೇಳಿದೆ. 

irctc dismisses jairam ramesh s adani takeover remark says misleading on trainman ash

ನವದೆಹಲಿ (ಜೂನ್ 19, 2023): ಆನ್‌ಲೈನ್ ರೈಲು ಟಿಕೆಟ್ ಬುಕಿಂಗ್ ಪ್ಲಾಟ್‌ಫಾರ್ಮ್ ಆದ ಸ್ಟಾರ್ಕ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಒಡೆತನದ 'ಟ್ರೈನ್‌ಮ್ಯಾನ್‌’ ನಲ್ಲಿ 100 ಪ್ರತಿಶತ ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಷೇರು-ಖರೀದಿ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಅದಾನಿ ಎಂಟರ್‌ಪ್ರೈಸಸ್ ಘೋಷಿಸಿದೆ. ಈ ಹಿನ್ನೆಲೆ, ಅದಾನಿ ಐಆರ್‌ಸಿಟಿಸಿ ಜತೆ ಸ್ಪರ್ಧೆ ಮಾಡಿ ಅದನ್ನೂ ಖರೀದಿಸುತ್ತಾರೆ ಎಂದು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಆರೋಪ ಮಾಡಿದ್ದಾರೆ. ಆದರೆ, ಈ ಆರೋಪಗಳನ್ನು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ತಳ್ಳಿಹಾಕಿದ್ದು, ಇದು ಸಾರ್ವಜನಿಕ ವಲಯಕ್ಕೆ ಬೆದರಿಕೆ ಅಥವಾ ಸವಾಲಾಗಿರುವುದಿಲ್ಲ ಎಂದು ಹೇಳಿದೆ. 

ಈ ಸ್ವಾಧೀನ ಪ್ರಕ್ರಿಯೆ ಬಗ್ಗೆ ಹಾಗೂ ಒಪ್ಪಂದದ ಕುರಿತು ಅದಾನಿ ಎಂಟರ್‌ಪ್ರೈಸಸ್ ಭಾರತೀಯ ಷೇರುದಾರರಿಗೆ ಮಾಹಿತಿ ನೀಡಿದ್ದು, ಅದಾನಿ ಡಿಜಿಟಲ್ ಲ್ಯಾಬ್ಸ್ ಕಂಪನಿಯ ("ADL") ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯು, ಸ್ಟಾರ್ಕ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ("SEPL") ನಲ್ಲಿ 100% ಪಾಲನ್ನು ತನ್ನ ಪ್ರಸ್ತಾವಿತ ಸ್ವಾಧೀನಕ್ಕೆ ಸಂಬಂಧಿಸಿದಂತೆ ಷೇರು ಖರೀದಿ ಒಪ್ಪಂದಕ್ಕೆ ("SPA") ಸಹಿ ಮಾಡಿದೆ. ಇದನ್ನು ಆನ್‌ಲೈನ್ ರೈಲು ಬುಕಿಂಗ್ ಮತ್ತು ಮಾಹಿತಿ ವೇದಿಕೆ ಟ್ರೈನ್‌ಮ್ಯಾನ್‌ ಎಂದೂ ಕರೆಯಲಾಗುತ್ತದೆ ಎಂದು ಹೇಳಿದ್ದಾರೆ. 

ಇದನ್ನು ಓದಿ: ರೈಲಿನಲ್ಲಿ ಪ್ರಯಾಣಿಸುವಾಗ ವಾಟ್ಸಾಪ್‌ನಲ್ಲೇ ಆಹಾರ ಆರ್ಡರ್‌ ಮಾಡಿ: ಐಆರ್‌ಸಿಟಿಸಿ ಹೊಸ ಸೇವೆ

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್, "ಮೊದಲು IRCTC ಯೊಂದಿಗೆ ಸ್ಪರ್ಧೆ ಮಾಡುವುದು, ನಂತರ ಸ್ವಾಧೀನಪಡಿಸಿಕೊಳ್ಳುವುದು’’ ಎಂದು ಆರೋಪ ಮಾಡಿದ್ದಾರೆ. ಆದರೆ, ಜೈರಾಮ್‌ ರಮೇಶ್‌ ಹೇಳಿಕೆಗೆ ಐಆರ್‌ಸಿಟಿಸಿ ಸ್ಪಷ್ಟನೆ ನೀಡಿದ್ದು, ಇದು ದಾರಿ ತಪ್ಪಿಸುವ ಹೇಳಿಕೆ ಎಂದಿದ್ದಾರೆ. 

ಈ ಬಗ್ಗೆ ಟ್ವೀಟ್‌ ಮಾಡಿರುವ ಐಆರ್‌ಸಿಟಿಸಿ, “ಇದು ತಪ್ಪುದಾರಿಗೆಳೆಯುವ ಹೇಳಿಕೆಯಾಗಿದೆ. IRCTC ಯ 32 ಅಧಿಕೃತ B2C (ಬ್ಯುಸಿನೆಸ್ ಟು ಗ್ರಾಹಕ) ಪಾಲುದಾರರಲ್ಲಿ ಟ್ರೈನ್‌ಮ್ಯಾನ್ ಒಂದು. ಪಾಲನ್ನು ಬದಲಾಯಿಸುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಎಲ್ಲಾ ಏಕೀಕರಣ ಮತ್ತು ಕಾರ್ಯಾಚರಣೆಗಳನ್ನು IRCTC ಮೂಲಕ ಮಾಡಲಾಗುವುದು. ಇದು IRCTC ಗೆ ಪೂರಕವಾಗಿರುತ್ತದೆಯೇ ಹೊರತು ಬೆದರಿಕೆ ಅಥವಾ ಸವಾಲಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಂದೇ ಭಾರತ್‌ ರೈಲಿನಲ್ಲಿ ಕಳಪೆ ಆಹಾರ ಪೂರೈಕೆ ಬಗ್ಗೆ ದೂರು: ನೆಟ್ಟಿಗರ ಆಕ್ರೋಶ; IRCTC ಪ್ರತಿಕ್ರಿಯೆ

ಟ್ರೈನ್‌ಮ್ಯಾನ್ IRCTC-ಅಧಿಕೃತ ರೈಲು ಟಿಕೆಟ್ ಬುಕಿಂಗ್ ಏಜೆಂಟ್ ಆಗಿದೆ. ಗ್ರಾಹಕರಿಗೆ ಈ ಅಪ್ಲಿಕೇಶನ್‌ನೊಂದಿಗೆ ಟಿಕೆಟ್‌ಗಳನ್ನು ಬುಕ್ ಮಾಡುವ ಅವಕಾಶವನ್ನು ನೀಡುವುದರ ಹೊರತಾಗಿ ಕ್ಯಾನ್ಸೆಲ್‌ ಮಾಡಿದರೆ ತ್ವರಿತ ಮರುಪಾವತಿ, PNR ಸ್ಟೇಟಸ್‌ ಮತ್ತು ರೈಲು ಲೈವ್ ರನ್ನಿಂಗ್ ಸ್ಥಿತಿಯಂತಹ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ. ಅಲ್ಲದೆ, ಈ ಅಪ್ಲಿಕೇಶನ್ ಸೀಟ್ / ಬರ್ತ್‌ನಂತಹ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ. ಹಾಗೂ, ಮುನ್ಸೂಚನೆಗಳೊಂದಿಗೆ ಲಭ್ಯತೆ, ಜೊತೆಗೆ PNR ಸ್ಟೇಟಸ್‌, ದೃಢೀಕರಣ ಮುನ್ಸೂಚನೆಗಳು, ಟೈಮ್ ಟೇಬಲ್/ವೇಳಾಪಟ್ಟಿ, ಮತ್ತು ಪರ್ಯಾಯ ಆಯ್ಕೆಗಳನ್ನು ಒದಗಿಸುತ್ತದೆ ಎಮದೂ ಹೇಳಿದ್ದಾರೆ. 

ಈ ಮಧ್ಯೆ, ಒಪ್ಪಂದದ ಉದ್ದೇಶದ ಬಗ್ಗೆ ಸ್ಪಷ್ಟನೆ ನೀಡಿದ ಅದಾನಿ ಎಂಟರ್‌ಪ್ರೈಸಸ್, "(ಷೇರು ಖರೀದಿ ಒಪ್ಪಂದ) ಎಸ್‌ಪಿಎ "SEPL" ನ 100% ಈಕ್ವಿಟಿ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಇಂಟರ್ ಸೆ ಹಕ್ಕುಗಳು, ಬಾಧ್ಯತೆಗಳು ಹಾಗೂ ಅದಕ್ಕೆ ಸಂಬಂಧಿಸಿದ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಒಪ್ಪಂದದ ನಿಯಮಗಳನ್ನು ದಾಖಲಿಸುತ್ತದೆ’’ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ರೈಲು ತಡವಾದರೆ IRCTC ಯಿಂದ ನೀವು ಈ ಸೌಲಭ್ಯ ಪಡೆದುಕೊಳ್ಳಬಹುದು..!

Latest Videos
Follow Us:
Download App:
  • android
  • ios