ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾದರೂ ಕಳೆದ ಐದು ತಿಂಗಳ ಕಾಲ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆ ಮಾಡದೆ ಇದ್ದುದರಿಂದ ದೇಶದ ಮೂರು ಪ್ರಮುಖ ಚಿಲ್ಲರೆ ತೈಲ ಮಾರಾಟ ಕಂಪನಿಗಳಾದ ಐಒಸಿ, ಬಿಪಿಸಿಎಲ್‌ ಮತ್ತು ಎಚ್‌ಪಿಸಿಎಲ್‌ಗೆ ಒಟ್ಟು 19000 ಕೋಟಿ ರು. (2.25 ಬಿಲಿಯನ್‌ ಡಾಲರ್‌) ಆದಾಯ ನಷ್ಟವಾಗಿದೆ. 

ನವದೆಹಲಿ (ಮಾ.25): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾದರೂ ಕಳೆದ ಐದು ತಿಂಗಳ ಕಾಲ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆ ಮಾಡದೆ ಇದ್ದುದರಿಂದ ದೇಶದ ಮೂರು ಪ್ರಮುಖ ಚಿಲ್ಲರೆ ತೈಲ ಮಾರಾಟ ಕಂಪನಿಗಳಾದ ಐಒಸಿ, ಬಿಪಿಸಿಎಲ್‌ ಮತ್ತು ಎಚ್‌ಪಿಸಿಎಲ್‌ಗೆ ಒಟ್ಟು 19000 ಕೋಟಿ ರು. (2.25 ಬಿಲಿಯನ್‌ ಡಾಲರ್‌) ಆದಾಯ ನಷ್ಟವಾಗಿದೆ. 

ಅಂತಾರಾಷ್ಟ್ರೀಯ ರೇಟಿಂಗ್‌ ಏಜೆನ್ಸಿ ಮೂಡೀಸ್‌ ಈ ನಷ್ಟವನ್ನು ಅಂದಾಜಿಸಿದೆ. 2021ರ ನ.4ರಿಂದ ಈ ವರ್ಷದ ಮಾ.21ರವರೆಗೆ ದೇಶದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಗಳನ್ನು ಏರಿಸಿಲ್ಲ. ತೈಲ ಬೆಲೆಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಲಾಗಿದ್ದರೂ ಪಂಚರಾಜ್ಯ ಚುನಾವಣೆಗಳ ಕಾರಣಕ್ಕೆ ಬೆಲೆ ಏರಿಸದಂತೆ ಸರ್ಕಾರ ತಡೆದಿತ್ತು ಎನ್ನಲಾಗಿದೆ. 

ಈ ಅವಧಿಯಲ್ಲಿ ಮೂರು ತೈಲ ಕಂಪನಿಗಳು ಪ್ರತಿ ಬ್ಯಾರಲ್‌ ಪೆಟ್ರೋಲನ್ನು 25 ಡಾಲರ್‌ ಹಾಗೂ ಪ್ರತಿ ಬ್ಯಾರಲ್‌ ಡೀಸೆಲ್‌ ಅನ್ನು 24 ಡಾಲರ್‌ನಷ್ಟುಆದಾಯ ನಷ್ಟಮಾಡಿಕೊಂಡು ಮಾರಾಟ ಮಾಡಿವೆ. ಅದರಿಂದಾಗಿ ಐಒಸಿಗೆ ಸುಮಾರು 9000 ಕೋಟಿ ರು. ಹಾಗೂ ಬಿಪಿಸಿಎಲ್‌ ಮತ್ತು ಎಚ್‌ಪಿಸಿಎಲ್‌ಗೆ ತಲಾ 5000 ಕೋಟಿ ರು. ಆದಾಯ ನಷ್ಟವಾಗಿದೆ ಎಂದು ಮೂಡೀಸ್‌ ವರದಿ ಹೇಳಿದೆ.ಕಳೆದ ಐದು ತಿಂಗಳಿನಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 80 ಡಾಲರ್‌ನಿಂದ 140 ಡಾಲರ್‌ವರೆಗೂ ಏರಿತ್ತು.

LPG Price Hike: ಅಕ್ಟೋಬರ್ 2021ರ ಬಳಿಕ ಮೊದಲ ಬಾರಿಗೆ ಗ್ಯಾಸ್‌ ಸಿಲಿಂಡರ್‌ ಬೆಲೆ ₹50 ಹೆಚ್ಚಳ!

ನಿನ್ನೆ 3ನೇ ದಿನ ಬೆಲೆ ಏರಿಕೆ ಇಲ್ಲ: ಕಚ್ಚಾತೈಲದ ಬೆಲೆಯೇರಿಕೆ ಹಿನ್ನೆಲೆಯಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಸತತ ಎರಡು ದಿನ ತಲಾ 80 ಪೈಸೆಯಂತೆ ಏರಿಕೆ ಮಾಡಿದ್ದ ತೈಲ ಕಂಪನಿಗಳು ಗುರುವಾರ ಯಾವುದೇ ಏರಿಕೆ ಮಾಡಿಲ್ಲ. ಹೀಗಾಗಿ ಗ್ರಾಹಕರು ತಕ್ಷಣಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ. ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಮುಂದಿನ ದಿನಗಳಲ್ಲಿ ಲೀಟರ್‌ಗೆ ತಲಾ 15 ರು.ವರೆಗೂ ಏರಿಸುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ.

ಪೆಟ್ರೋಲ್‌, ಡೀಸೆಲ್‌,ಎಲ್‌ಪಿಜಿ ಬೆಲೆ ಏರಿಕೆ, 4 ತಿಂಗಳ ಬಳಿಕ ದರ ಪರಿಷ್ಕರಣೆ: ಪಂಚ ರಾಜ್ಯ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಸರ್ಕಾರ ರಚನೆ ಪ್ರಕ್ರಿಯೆ ಶುರುವಾದ ಬೆನ್ನಲ್ಲೇ, ಇತ್ತ ಕೇಂದ್ರ ಸರ್ಕಾರ ಜನ ಸಾಮಾನ್ಯರಿಗೆ ಭರ್ಜರಿ ಶಾಕ್‌ ನೀಡಿದೆ. ಮಂಗಳವಾರದಿಂದಲೇ ಜಾರಿಯಾಗುವಂತೆ ಅಡುಗೆ ಅನಿಲದ ಸಿಲಿಂಡರ್‌ ಬೆಲೆಯನ್ನು ಭರ್ಜರಿ 50 ರು. ಏರಿಸಲಾಗಿದ್ದರೆ, ಪೆಟ್ರೋಲ್‌ ಮತ್ತು ಡೀಸೆಲ್‌ ದರ ಕೂಡ ತಲಾ 80 ಪೈಸೆ ಏರಿಕೆ ಮಾಡಲಾಗಿದೆ. ತನ್ಮೂಲಕ ಕಳೆದ ನಾಲ್ಕು ತಿಂಗಳ ನಂತರ ತೈಲ ಮತ್ತು ಇಂಧನ ದರದ ಪರಿಷ್ಕರಣೆಯಾದಂತಾಗಿದೆ..

ಇದರೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಬ್ಸಿಡಿ ಇಲ್ಲದ 14.2 ಕೇಜಿ ತೂಕದ ಎಲ್‌ಪಿಜಿ ಸಿಲಿಂಡರ್‌ ಬೆಲೆ 949.50 ರು.ಗೆ ತಲುಪಿದೆ. ಇನ್ನು ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಕ್ರಮವಾಗಿ 96.21ರು. ಮತ್ತು 87.47 ರು. ಗೆ ಹೆಚ್ಚಿದೆ. ಇನ್ನು ಬೆಂಗಳೂರಿನಲ್ಲಿ ಎಲ್‌ಪಿಜಿ ದರ 952.50. ಮತ್ತು ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಕ್ರಮವಾಗಿ 101.42 ರು. ಮತ್ತು 85.80 ರು. ತಲುಪಿದೆ. ಇನ್ನು 5 ಕೇಜಿ ಸಿಲಿಂಡರ್‌ ಬೆಲೆ 349 ರು. ಆಗಿದ್ದರೆ, 10 ಕೇಜಿ ಸಿಲಿಂಡರ್‌ ಬೆಲೆ 669 ರು. ಆಗಿದೆ. 

ಗ್ರಾಹಕರಿಗೆ ಬಿಗ್ ಶಾಕ್, ಡೀಸೆಲ್ ಬೆಲೆ ಲೀಟರ್‌ಗೆ 25 ರೂಪಾಯಿ ಹೆಚ್ಚಳ!

19 ಕೇಜಿ ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆ 2003.50 ರು. ನಷ್ಟಾಗಿದೆ. ಏತನ್ಮಧ್ಯೆ ಎಲ್‌ಪಿಜಿ ಅನಿಲ ಮತ್ತು ತೈಲ ದರ ಏರಿಕೆ ಖಂಡಿಸಿ ಲೋಕಸಭೆಯಲ್ಲಿ ಕಾಂಗ್ರೆಸ್‌, ಟಿಎಂಸಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಸಭಾತ್ಯಾಗ ಮಾಡಿದರು. ಕಳೆದ ಅಕ್ಟೋಬರ್‌ನಲ್ಲಿ ಎಲ್‌ಪಿಜಿವನ್ನು ಮತ್ತು ಕಳೆದ ನವೆಂಬರ್‌ನಲ್ಲಿ ತೈಲ ದರವನ್ನು ಕೊನೆಯದಾಗಿ ಪರಿಷ್ಕರಿಸಲಾಗಿತ್ತು. ಅದಾದ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗುತ್ತಿದ್ದರೂ ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಅನಿಲ ಮತ್ತು ತೈಲ ದರ ಸ್ಥಿರವಾಗಿತ್ತು.