ಇಂದಿನ ದಿನದಲ್ಲಿ 25 ಲಕ್ಷದ ಸಂಬಳ ಏನೂ ಅಲ್ಲವಂತೆ... ಟೆಕ್ಕಿಗಳ ಸಂಬಳ ಇದಕ್ಕಿಂತ ಹೆಚ್ಚು!
10 ವರ್ಷ ಕೆಲಸ ಮಾಡಿದರೂ 10 ಲಕ್ಷದ ಪ್ಯಾಕೇಜ್ ಸಿಗುತ್ತಿಲ್ಲ. 10 ಲಕ್ಷದ ಪ್ಯಾಕೇಜ್ ಅನ್ನೋದು ಗಗನಕುಸುಮ. ಆದ್ರೆ ಬೆರಳಣಿಕೆಯ ಜನರಿಗೆ ಇಷ್ಟು ದೊಡ್ಡಮೊತ್ತದ ವೇತನ ಸಿಗುತ್ತಿರಬಹುದು ಎಂದು ಹೇಳಿದ್ದಾರೆ.
ಬೆಂಗಳೂರು: ಇಂದಿನ ದುಬಾರಿ ದುನಿಯಾದಲ್ಲಿ ವಾರ್ಷಿಕ 25 ಲಕ್ಷ ರೂಪಾಯಿ ಸಂಬಳ ಏನೂ ಅಲ್ಲ ಎಂದ ಹೂಡಿಕೆದಾರ ಸೌರವ್ ದತ್ತಾ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಹಲ್-ಚಲ್ ಸೃಷ್ಟಿಸಿದೆ. ಸಾಫ್ಟವರೇಟ್ ಇಂಜಿಜನೀಯರ್‌ಗಳು ಇದಕ್ಕಿಂತ ಹೆಚ್ಚು ಸಂಬಳ ಪಡೆದುಕೊಳ್ಳುತ್ತಾರೆ ಎಂದು ಬರೆದುಕೊಂಡಿರುವ ಸೌರವ್ ದತ್ತಾ, ಟೆಕ್ಕಿಗಳ ಸಂಬಳ ಮಾರುಕಟ್ಟೆಯ ನಾಶಕ್ಕೆ ಕಾರಣವಾಗಿದೆಯಾ ಎಂಬ ಪ್ರಶ್ನೆಯನ್ನು ಮಾಡಿದ್ದಾರೆ. ಆಗಸ್ಟ್ 2ರಂದು ಎಕ್ಸ್ ಖಾತೆಯಲ್ಲಿ ಸೌರವ್ ದತ್ತಾ ಬರೆದುಕೊಂಡಿರುವ ಈ ಸಾಲು ಬಹುಚರ್ಚೆಗೆ ಗ್ರಾಸವಾಗಿದೆ. ಈ ಟ್ವೀಟ್‌ಗೆ ಜನರು ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.
ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು, ಯಾವುದೇ ಉದ್ಯಮ ಇರಲಿ, ಅಲ್ಲಿ 10 ವರ್ಷ ಕೆಲಸ ಮಾಡಿದರೂ 10 ಲಕ್ಷದ ಪ್ಯಾಕೇಜ್ ಸಿಗುತ್ತಿಲ್ಲ. 10 ಲಕ್ಷದ ಪ್ಯಾಕೇಜ್ ಅನ್ನೋದು ಗಗನಕುಸುಮ. ಆದ್ರೆ ಬೆರಳಣಿಕೆಯ ಜನರಿಗೆ ಇಷ್ಟು ದೊಡ್ಡಮೊತ್ತದ ವೇತನ ಸಿಗುತ್ತಿರಬಹುದು ಎಂದು ಹೇಳಿದ್ದಾರೆ.
3-5 ವರ್ಷ ಅನುಭವದ ಟೆಕ್ಕಿಗಳು ಅಲ್ಲಾ? ನನಗೆ ಐಟಿಯಲ್ಲಿ ಕೆಲಸ ಮಾಡುವ ಯುವಕ/ತಿಯರು ಪರಿಚಯ. 10 ವರ್ಷ ಅನುಭವದ ಬಳಿಕ 20 ರಿಂದ 25 ಲಕ್ಷದ ವಾರ್ಷಿಕ ಪ್ಯಾಕೇಜ್ ಪಡೆದುಕೊಳ್ಳುತ್ತಾರೆ. ಆದ್ರೆ ಕೆಲ ಸ್ಟಾರ್ಟ್‌ಅಪ್‌ಗಳು ಹೊಸಬರಿಗೆ ದೊಡ್ಡ ಮೊತ್ತದ ಸಂಭಾವನೆ ನೀಡಬಹುದು. ಆದ್ರೆ ಬೃಹತ್ ಕಂಪನಿಗಳು ಇಷ್ಟ ಸಂಬಳ ನೀಡಲ್ಲ ಅಂತ ಟ್ವೀಟ್‌ಗೆ ಕಮೆಂಟ್ ಮಾಡಿದ್ದಾರೆ. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಸೌರವ್ ದತ್ತಾ, ಸಾಮಾನ್ಯವಾಗಿ ಕೆಲಸದಲ್ಲಿ 5 ವರ್ಷದ ಅನುಭವ ಹೊಂದಿರುವವರು 30 ಲಕ್ಷ ರೂಪಾಯಿಯ ಪ್ಯಾಕೇಜ್ ಪಡೆದುಕೊಳ್ಳುತ್ತಾರೆ ಎಂದಿದ್ದಾರೆ.
ಆಗಸ್ಟ್ ಶುರುವಾಗ್ತಿದ್ದಂತೆ ಬದಲಾಗಲಿವೆ ಈ ಹಣಕಾಸಿನ ನಿಯಮಗಳು; ನೇರವಾಗಿ ನಿಮ್ಮ ಜೇಬಿನ ಮೇಲೆಯೇ ಎಫೆಕ್ಟ್!
25 ಲಕ್ಷ ಪ್ಯಾಕೇಜ್ ಅನ್ನೋದು ಕಾಮನ್ ಅಲ್ಲ. ಕೆಲವೇ ಕೆಲವರು ಈ ಸಂಭಾವನೆ ಪಡೆದುಕೊಳ್ಳುತ್ತಿರುತ್ತಾರೆ. ಅದು ಕಂಪನಿಗಳನ್ನು ಪದೇ ಪದೇ ಬದಲಿಸುವ ಉದ್ಯೋಗಿಗಳ ಸಂಬಳ ಏರಿಕೆಯಾಗಿರುತ್ತೆ ಎಂಬ ಅಂಶವನ್ನು ಓರ್ವ ಬಳಕೆದಾರ ಉಲ್ಲೇಖಿಸಿದ್ದಾರೆ. ಈ ಟ್ವೀಟ್‌ಗೆ ಉತ್ತರಿಸಿರುವ ಮತ್ತೋರ್ವ ನೆಟ್ಟಿಗ, ಬದಲಾವಣೆಯಿಂದ ಕೆಲಸದಲ್ಲಿ ಭದ್ರತೆ ಇರಲ್ಲ ಎಂದಿದ್ದಾರೆ. ಕೋವಿಡ್ ಕಾಲಘಟ್ಟದ ಬಳಿಕ ಮಾರುಕಟ್ಟೆಯಲ್ಲಿ ಹಲವು ಬದಲಾಣೆಗಳು ಉಂಟಾಗಿದ್ದು, ಸಂಬಳದ ಮೇಲೆ ನಕಾರಾತ್ಮಕ ಹೊಡೆತ ಬಿದ್ದಿದೆ. ಕೋವಿಡ್‌ನಿಂದ ಆರ್ಥಿಕ ನಷ್ಟಕ್ಕೆ ಉಂಟಾಗಿರುವ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿವೆ. ಈ ಕಾರಣದಿಂದ ಕೆಲವರು ಕಡಿಮೆ ಸಂಬಳಕ್ಕೆ ಕೆಲಸಕ್ಕೆ ಹೋದ ಪ್ರಸಂಗಗಳಿವೆ ಎಂದು ಹೇಳಿದ್ದಾರೆ.
ಸೌರವ್ ದತ್ತಾ ಈ ಹಿಂದೆ ಮಾಡಿದ ಆದಾಯದ ವರ್ಗೀಕರಣದ ಟ್ವೀಟ್ ಚರ್ಚೆಗೆ ಗ್ರಾಸವಾಗಿತ್ತು. ಸೌರವ್ ದತ್ತಾ ಪ್ರಕಾರ, 10 ಲಕ್ಷ ವಾರ್ಷಿಕ ಆದಾಯ ಹೊಂದಿರುವ ಜನರು ಬಡವರು, 50 ಲಕ್ಷ ಹೊಂದಿರುವ ಕೆಳ ಮಧ್ಯಮ ವರ್ಗದವರು ಎಂದು ಟ್ವೀಟ್ ಮಾಡಿದ್ದರು. 1 ಕೋಟಿಗಿಂತ ಹೆಚ್ಚು ಆದಾಯ ಹೊಂದಿರುವ ಜನರು ಶ್ರೀಮಂತರು ಎಂದು ಹೇಳಿದ್ದರು.