ಮೊಬೈಲ್, ಸ್ಮಾರ್ಟ್‌ವಾಚ್, ಇಯರ್‌ಬಡ್ಸ್‌ ಮೇಲೆ ಭಾರೀ ರಿಯಾಯ್ತಿ: ಶುರುವಾಗ್ತಿದೆ ಫ್ಲಿಪ್‌ಕಾರ್ಟ್ ಫ್ಲ್ಯಾಗ್‌ಶಿಪ್‌ ಬಂಪರ್ ಸೇಲ್

ರಕ್ಷಾ ಬಂಧನಕ್ಕೂ ಇಲ್ಲಿ ಒಳ್ಳೆಯ ಕಾಣಿಕೆಗಳನ್ನು ಖರೀದಿಸಬಹುದಾಗಿದೆ. ಫ್ಲಿಪ್‌ಕಾರ್ಟ್ ನೀಡಿರುವ ರಿಯಾಯ್ತಿ ಜೊತೆ ಸೂಚಿಸಿದ ಬ್ಯಾಂಕ್ ಕಾರ್ಡ್ ಬಳಕೆ ಮಾಡಿದ್ದಲ್ಲಿ ಡಬಲ್ ಡಿಸ್ಕೌಂಟ್‌ನಲ್ಲಿ ನಿಮ್ಮ ನೆಚ್ಚಿನ ವಸ್ತುಗಳನ್ನು ಖರೀದಿಸಬಹುದಾಗಿದೆ.

flagship-sale-starting-on-flipkart-from-6-august-get-great-offers on electronics home appliances mrq

ಬೆಂಗಳೂರು: ಇಡೀ ದೇಶ ಸ್ವತಂತ್ರ ದಿನವನ್ನು ಆಚರಿಸಲು ಕಾಯುತ್ತಿದೆ. ಇ-ಕಾಮರ್ಸ್‌ನ ದೈತ್ಯ ಮಾರುಕಟ್ಟೆಗಳಲ್ಲಿ ಒಂದಾಗಿರುವ ಫ್ಲಿಪ್‌ಕಾರ್ಟ್ ನಲ್ಲಿ ಫ್ಲ್ಯಾಗ್‌ಶಿಪ್ ಸೇಲ್ ಆರಂಭವಾಗಲಿದೆ. ಈ ವಿಶೇಷ ಸೇಲ್ ಆಗಸ್ಟ್ 6ರ ಮಧ್ಯಾಹ್ನ 12 ಗಂಟೆಯಿಂದ ಲೈವ್ ಆಗಲಿದೆ. ಈ ಸೇಲ್‌ನಲ್ಲಿ ಗ್ರಾಹಕರು ಕಡಿಮೆ ದರದಲ್ಲಿ ತಮ್ಮ ನೆಚ್ಚಿನ ವಸ್ತುಗಳನ್ನು ಖರೀದಿಸಬಹುದಾಗಿದೆ. ಎಲೆಕ್ಟ್ರಾನಿಕ್ಸ್, ಗೃಹಪಯೋಗಿ ವಸ್ತುಗಳು, ಲೇಟೇಸ್ಟ್ ಸ್ಮಾರ್ಟ್‌ಫೋನ್ ಮತ್ತು ಇಯರ್‌ಬಡ್ಸ್ ಸೇರಿದಂತೆ ಹಲವು ವಸ್ತುಗಳ ಮೇಲೆ ಭಾರೀ ರಿಯಾಯ್ತಿ ಲಭ್ಯವಾಗಲಿದೆ. ಇದರ ಜೊತೆಗೆ ಫ್ಲಿಪ್‌ಕಾರ್ಟ್ ಸೂಚಿಸಿರುವ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದ್ರೆ ಗ್ರಾಹಕರಿಗೆ ಮತ್ತಷ್ಟು ಡಿಸ್ಕೌಂಟ್ ಲಭ್ಯವಾಗಲಿದೆ. 

ಫ್ಲ್ಯಾಗ್ ಸೇಲ್ ಅನೌನ್ಸ್ ಮಾಡಿರುವ ಫ್ಲಿಪ್‌ಕಾರ್ಟ್ ಟ್ಯಾಗ್ ಲೈನ್ ಮೂಲಕ ಪರೋಕ್ಷವಾಗಿ ಬ್ರಿಟಿಷರ ಕಾಲೆಳೆದಿದೆ. ಈ ಡೀಲ್ ಸೇಲ್‌ ಹೇಗಿದ್ರೆ ಅಂದ್ರೆ ಶಾಪಿಂಗ್ ಮಾಡಲು ಬ್ರಿಟಿಷರು ಸಹ ಇಷ್ಟಪಡ್ತಾರೆ ಎಂದು ಬರೆದಿದೆ. ಈ ಸೇಲ್‌ನಲ್ಲಿ ಗ್ರಾಹಕರು ಐಸಿಐಸಿಐ ಬ್ಯಾಂಕ್, ಯೆಸ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಕಾರ್ಡ್ ಬಳಸಿದ್ರೆ ಶೇ.10ರಷ್ಟು ರಿಯಾಯ್ತಿ ಸಿಗಲಿದೆ. ಒಂದು ವೇಳೆ ಶಾಪಿಂಗ್‌ನಲ್ಲಿ ಫ್ಲಿಪ್‌ಕಾರ್ಟ್ ಮತ್ತು ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಕೆಗೆ ಶೇ.5ರಷ್ಟು ರಿಯಾಯ್ತಿ ಸಿಗಲಿದೆ.

 Union Budget 2024: ಸ್ವಂತ ವ್ಯವಹಾರ ಆರಂಭಿಸೋರಿಗೆ ಸಿಗಲಿದೆ 20 ಲಕ್ಷ; ಬಜೆಟ್‌ನಲ್ಲಿ ಮಹತ್ವದ ಘೋಷಣೆ

ಸ್ಮಾರ್ಟ್‌ಫೋನ್ ಮೊಟೊರೋಲಾ ಎಡ್ಜ್ 50ರ ಸೇಲ್ ಆಗಸ್ಟ್ 8ರಿಂದ ಆರಂಭಗೊಳ್ಳಲಿದೆ. ಈ ಮೊಬೈಲ್‌ನ್ನು ಬ್ಯಾಂಕ್‌ ಆಫರ್‌ಗಳನ್ನ ಬಳಸಿ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ. ಈ ರೀತಿ ಮಾಡೋದರಿಂದ ಮೊಬೈಲ್ ದರ ಕಡಿಮೆಯಾಗಲಿದೆ. ಒಪ್ಪೋ K12 5G ಸಹ ಅಗ್ಗದ ದರದಲ್ಲಿ ಗ್ರಾಹಕರ ಕೈ ಸೇರಲಿದೆ. iPhone 15, Nothing Phone 2a ಮತ್ತು ಗ್ಯಾಲೆಕ್ಸಿ  S23 ಅಂತಹ ಹಲವು ಸ್ಮಾರ್ಟ್‌ಫೋನ್‌ಗಳು  ರಿಯಾಯ್ತಿ ದರದಲ್ಲಿ ಸಿಗಲಿವೆ. CMF Watch Pro 2 ಸ್ಮಾರ್ಟ್‌ವಾಚ್, ಇಯರ್‌ಬಡ್ಸ್‌, ರಿಯಲ್‌ ಮಿ ಇಯರ್‌ಬಡ್ಸ್‌ ಸೇರಿದಂತೆ ಹಲವು ಎಲೆಕ್ಟ್ರಾನಿಕ್ಸ್ ವಸ್ತುಗಳ ರಿಯಾಯ್ತಿ ದರದಲ್ಲಿ ಮಾರಾಟಕ್ಕಿವೆ. 

ಇದೇ ತಿಂಗಳ ಆಗಸ್ಟ್ 19ರಂದು ರಕ್ಷಾ ಬಂಧನ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ರಕ್ಷಾ ಬಂಧನದಲ್ಲಿ ಸೋದರರು ತಮ್ಮ ಸೋದರಿಯರಿಗೆ ನೀಡುವಂತೆ ಗಿಫ್ಟ್‌ಗಳ ಮೇಲೆಯೂ ಫ್ಲಿಪ್‌ಕಾರ್ಡ್ ಹಲವು ಆಫರ್ ಘೋಷಣೆ ಮಾಡಿದೆ. ರಕ್ಷಾ ಬಂಧನಕ್ಕೂ ಇಲ್ಲಿ ಒಳ್ಳೆಯ ಕಾಣಿಕೆಗಳನ್ನು ಖರೀದಿಸಬಹುದಾಗಿದೆ. ಫ್ಲಿಪ್‌ಕಾರ್ಟ್ ನೀಡಿರುವ ರಿಯಾಯ್ತಿ ಜೊತೆ ಸೂಚಿಸಿದ ಬ್ಯಾಂಕ್ ಕಾರ್ಡ್ ಬಳಕೆ ಮಾಡಿದ್ದಲ್ಲಿ ಡಬಲ್ ಡಿಸ್ಕೌಂಟ್‌ನಲ್ಲಿ ನಿಮ್ಮ ನೆಚ್ಚಿನ ವಸ್ತುಗಳನ್ನು ಖರೀದಿಸಬಹುದಾಗಿದೆ.

ಬಜೆಟ್‌ನಲ್ಲಿ ತೆರಿಗೆ ಏರಿಕೆನಾ? ಇಳಿಕೆನಾ? ಇಲ್ಲಿದೆ ಸಂಪೂರ್ಣ ಸ್ಪಷ್ಟ ಉತ್ತರ

Latest Videos
Follow Us:
Download App:
  • android
  • ios