Asianet Suvarna News Asianet Suvarna News

ಫೇಸ್‌ಬುಕ್‌, ಇನ್ಸ್ಟಾ ಬ್ಲೂ ಬ್ಯಾಡ್ಜ್‌ಗೂ ಶುಲ್ಕ: ಚಂದಾ ಪಾವತಿಸಿದವರಿಗೆ ಖಾತೆ ನಕಲು ತಡೆ ಸೇರಿ ಹಲವು ಸವಲತ್ತು..!

ಮೆಟಾ ವೆರಿಫೈಡ್‌ ಎಂಬ ಚಂದಾ ಆಧರಿತ ಸೇವೆಯನ್ನು ಇದೇ ವಾರದಿಂದ ಆರಂಭಿಸಲಾಗುತ್ತಿದೆ. ಈ ಸೇವೆ ಪಡೆದವರಿಗೆ ಬ್ಲೂ ಬ್ಯಾಡ್ಜ್‌, ಖಾತೆ ನಕಲು ಪ್ರಕರಣಗಳಿಂದ ಹೆಚ್ಚಿನ ಸುರಕ್ಷತೆ, ಗ್ರಾಹಕ ಸೇವಾ ಸಿಬ್ಬಂದಿ ಜೊತೆಗೆ ನೇರ ಸಂಪರ್ಕ ಮತ್ತು ಸರ್ಕಾರಿ ಐಡಿ ಸಿಗಲಿದೆ ಎಂದು ಮಾರ್ಕ್ ಜುಕರ್‌ಬರ್ಗ್‌ ಮಾಹಿತಿ ನೀಡಿದ್ದಾರೆ. 

instagram facebook paid blue tick verification details here ash
Author
First Published Feb 20, 2023, 1:47 PM IST

ನವದೆಹಲಿ (ಫೆಬ್ರವರಿ 20, 2023): ಟ್ವಿಟ್ಟರ್‌ ತನ್ನ ಬಳಕೆದಾರರಿಗೆ ಮಾಸಿಕ ಚಂದಾ ಆಧರಿತ ಸೇವೆ ಆರಂಭಿಸಿದ ಮಾದರಿಯಲ್ಲೇ ಫೇಸ್‌ಬುಕ್‌, ಇನ್‌ಸ್ಟಾಗ್ರಾಂನ ಮಾತೃಸಂಸ್ಥೆಯಾದ ಮೆಟಾ ಕೂಡಾ ಇದೇ ರೀತಿಯ ಸೇವೆಯನ್ನು ಇದೇ ವಾರದಿಂದ ಆರಂಭಿಸುವುದಾಗಿ ಪ್ರಕಟಿಸಿದೆ. ಈ ಕುರಿತು ಮಾಹಿತಿ ನೀಡಿರುವ ಮೆಟಾ ಅಧ್ಯಕ್ಷ ಮಾರ್ಕ್ ಜುಕರ್‌ಬರ್ಗ್‌, ‘ಮೆಟಾ ವೆರಿಫೈಡ್‌ ಎಂಬ ಚಂದಾ ಆಧರಿತ ಸೇವೆಯನ್ನು ಇದೇ ವಾರದಿಂದ ಆರಂಭಿಸಲಾಗುತ್ತಿದೆ. ಈ ಸೇವೆ ಪಡೆದವರಿಗೆ ಬ್ಲೂ ಬ್ಯಾಡ್ಜ್‌, ಖಾತೆ ನಕಲು ಪ್ರಕರಣಗಳಿಂದ ಹೆಚ್ಚಿನ ಸುರಕ್ಷತೆ, ಗ್ರಾಹಕ ಸೇವಾ ಸಿಬ್ಬಂದಿ ಜೊತೆಗೆ ನೇರ ಸಂಪರ್ಕ ಮತ್ತು ಸರ್ಕಾರಿ ಐಡಿ ಸಿಗಲಿದೆ’ ಎಂದು ಮಾಹಿತಿ ನೀಡಿದ್ದಾರೆ.

ಜೊತೆಗೆ ‘ಈ ಹೊಸ ಸೇವೆಯು ನಮ್ಮೆಲ್ಲಾ ಸೇವೆಗಳಲ್ಲಿ ಹೆಚ್ಚಿನ ಸುರಕ್ಷತೆ ಮತ್ತು ಖಚಿತತೆಯನ್ನು ಒದಗಿಸಲಿದೆ. ಮೆಟಾ (Meta) ವೆರಿಫೈಡ್‌ (Verified) ಸೇವೆಯು ವೆಬ್‌ನಲ್ಲಿ (Web) ಮಾಸಿಕ 11.99 ಡಾಲರ್‌ನಿಂದ (850 ರು.) ಮತ್ತು ಐಫೋನ್‌ ಆಪರೇಟಿಂಗ್‌ ಸಿಸ್ಟಮ್‌ಗೆ (iPhone Operating System) ಮಾಸಿಕ 14.99 ಡಾಲರ್‌ನಿಂದ (1250 ರು.) ಆರಂಭವಾಗಲಿದೆ. ಮೊದಲ ಹಂತದಲ್ಲಿ ನಾವು ಈ ವಾರ ಆಸ್ಪ್ರೇಲಿಯಾ (Australia) ಮತ್ತು ನ್ಯೂಜಿಲೆಂಡ್‌ನಲ್ಲಿ (New Zealand) ಸೇವೆ ಆರಂಭಿಸಲಿದ್ದೇವೆ. ಶೀಘ್ರವೇ ಇದು ಇತರೆ ದೇಶಗಳಿಗೂ ವಿಸ್ತರಣೆಯಾಗಲಿದೆ’ ಎಂದು ಮಾರ್ಕ್ ಜುಕರ್‌ಬರ್ಗ್‌ (Mark Zuckerberg) ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಭಾರತದಲ್ಲಿ ಟ್ವಿಟರ್ ಬ್ಲೂ ಟಿಕ್ ಲಾಂಚ್, ಇನ್ಮುಂದೆ ಬಳಕೆದಾರರು ತಿಂಗಳಿಗೆ ಪಾವತಿಸಬೇಕು ಇಂತಿಷ್ಟು!

ಆದರೆ ಆ್ಯಂಡ್ರಾಯ್ಡ್‌ (Android) ಬಳಕೆದಾರರ ಕುರಿತು ಕಂಪನಿ ಯಾವುದೇ ಮಾಹಿತಿ ನೀಡಿಲ್ಲ. ಮೆಟಾ ಸಂಸ್ಥೆಯಡಿ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಕಂಪನಿಗಳು ಬರುವ ಕಾರಣ ಎರಡೂ ಸೇವೆಗಳಿಗೆ ಹೊಸ ಚಂದಾ ಪಾವತಿ ವ್ಯಾಪ್ತಿಗೆ ಬರಲಿವೆ.

ಎಲ್ಲಾ ಬಳಕೆದಾರರಿಗೂ ಶುಲ್ಕ ಇಲ್ಲ
ಮೆಟಾ ಪ್ರಕಟಿಸಿರುವ ಈ ಸೇವೆ ಅನ್ವಯ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಖಾತೆ ಹೊಂದಿರುವ ಪ್ರತಿಯೊಬ್ಬರೂ ಶುಲ್ಕ ಕಟ್ಟಬೇಕಿಲ್ಲ. ಯಾರಿಗೆ ವಿಶೇಷ ಸವಲತ್ತು ಬೇಕೋ ಅವರು ಮಾತ್ರವೇ ಶುಲ್ಕ ಪಾವತಿಸಿದರೆ ಸಾಕು. ಉಳಿದವರಿಗೆ ಎಲ್ಲಾ ಸೇವೆಗಳು ಹಿಂದಿನಂತೆಯೇ ಮುಂದುವರೆಯಲಿದೆ.

ಇದನ್ನೂ ಓದಿ: ಫೇಸ್‌ಬುಕ್‌ ಉದ್ಯೋಗಿಗಳ ವಜಾ ಬೆನ್ನಲ್ಲೇ ಜುಕರ್‌ಬರ್ಗ್‌ ಭದ್ರತಾ ವೆಚ್ಚದಲ್ಲಿ 82 ಕೋಟಿ ಏರಿಕೆ!

Follow Us:
Download App:
  • android
  • ios