ಭಾರತದಲ್ಲಿ ಟ್ವಿಟರ್ ಬ್ಲೂ ಟಿಕ್ ಲಾಂಚ್, ಇನ್ಮುಂದೆ ಬಳಕೆದಾರರು ತಿಂಗಳಿಗೆ ಪಾವತಿಸಬೇಕು ಇಂತಿಷ್ಟು!

ಉದ್ಯಮಿ ಎಲಾನ್ ಮಸ್ಕ್ ಮಾಲೀಕತ್ವದಲ್ಲಿ ಟ್ವಿಟರ್ ಹಲವು ಬದಲಾವಣೆ ಕಂಡಿದೆ. ಇದೀಗ ಭಾರತದಲ್ಲಿ ಟ್ವಿಟರ್ ಬ್ಲೂ ಟಿಕ್ ಚಂದಾದಾರಿಕೆ ಲಾಂಚ್ ಮಾಡಲಾಗಿದೆ. ಟ್ವಿಟರ್ ಬಳಕೆದಾರರ ಅಧಿಕೃತ ಖಾತೆ ಸೂಚಿಸುವ ಬ್ಲೂ ಟಿಕ್ ಸಬ್‌ಸ್ಕ್ರಿಪ್ಶನ್‌ಗೆ ಪಾವತಿಸಬೇಕು. ಮೊಬೈಲ್ ಬಳಕೆದಾರರಿಗೆ 900 ರೂಪಾಯಿ ಚಾರ್ಜ್ ಮಾಡಲಾಗಿದ್ದರೆ, ವೆಬ್‍‌ಸೈಟ್ ಬಳಕೆದಾರರಿಗೆ 650 ರೂಪಾಯಿ ಚಾರ್ಜ್ ಮಾಡಲಾಗಿದೆ. ಈ ಕುರಿತ ವಿವರ ಇಲ್ಲಿದೆ.

Twitter launch blue premium subscription service in India with rs 900 fee for mobile users and rs 650 per month for the web ckm

ನವದೆಹಲಿ(ಫೆ.09): ಟ್ವಿಟರ್ ಈಗಾಗಲೇ ಸಾಕಷ್ಟು ಬದಲಾವಣೆ ಕಂಡಿದೆ. ನೀತಿ ನಿಯಮಗಳಲ್ಲಿ ಬದಲಾವಣೆ ಮಾಡಿಕೊಂಡಿದೆ. ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಖರೀದಿ ಬಳಿಕ ಪ್ರತಿ ದಿನ ಹೊಸ ಹೊಸ ನಿಯಮ ಜಾರಿಗೊಳಿಸಲಾಗಿದೆ. ಇದೀಗ ನೂತನ ನಿಯಮದಡಿ ಭಾರತದಲ್ಲಿ ಟ್ವಿಟರ್ ಬ್ಲೂಟಿಕ್ ಲಾಂಚ್ ಮಾಡಲಾಗಿದೆ. ಟ್ವಿಟರ್ ಬಳಕೆದಾರರ ಅಧಿಕೃತ ಖಾತೆ ಸೂಚಿಸುವ ಬ್ಲೂ ಟಿಕ್ ಇದೀಗ ಭಾರತದಲ್ಲಿ ಚಂದಾದಾರಿಕೆ ಮೂಲಕ ಲಭ್ಯವಿದೆ. iOS ಹಾಗೂ ಆ್ಯಂಡ್ರಾಯ್ಡ್ ಮೊಬೈಲ್ ಬಳಕೆದಾರರಿಗೆ ತಿಂಗಳು 900 ರೂಪಾಯಿ ಫಿಕ್ಸ್ ಮಾಡಿದ್ದರೆ, ವೆಬ್‌ಸೈಟ್ ಮೂಲಕ ಟ್ವಿಟರ್ ಬಳಕೆದಾರರಿಗೆ ತಿಂಗಳಿಗೆ 650 ರೂಪಾಯಿ ಚಾರ್ಜ್ ಮಾಡಲಾಗಿದೆ.

ಟ್ವಿಟರ್ ರೋಲ್ಔಟ್ ಭಾಗವಾಗಿ ಚಂದಾದಾರಿಕೆ ಆರಂಭಗೊಂಡಿದೆ. ಈಗಾಗಲೇ ಅಮೆರಿಕ, ಕೆನಡಾ ಸೇರಿದಂತೆ 6 ದೇಶಗಳಲ್ಲಿ ಟ್ವಿಟರ್ ಬ್ಲೂ ಲಾಂಚ್ ಮಾಡಲಾಗಿದೆ. ಇದೀಗ ಭಾರತದಲ್ಲೂ ಲಾಂಚ್ ಆಗಿದೆ. ಎಲಾನ್ ಮಸ್ಕ್ ಮಾಲೀಕತ್ವದಲ್ಲಿ ಟ್ವಿಟರ್ ಈಗಾಗಲೇ ಬ್ಲೂ ಟಿಕ್ ಚಂದಾದಾರಿಕೆ ಘೋಷಿಸಿತ್ತು. ಆದರೆ ಭಾರತದಲ್ಲಿ ಇದರ ನಿಖರ ಬೆಲೆ ಮಾತ್ರ ಖಚಿತವಾಗಿರಲಿಲ್ಲ. ಹಲವು ಊಹಾಪೋಹಗಳು ವರದಿಯಾಗಿತ್ತು. ಇದೀಗ ಟ್ವಿಟರ್ ಅಧಿಕೃತವಾಗಿ ಬ್ಲೂಟಿಕ್ ಲಾಂಚ್ ಮಾಡಿದೆ. ಮೊಬೈಲ್ ಬಳಕೆದಾರರಿಗೆ ತಿಂಗಳಿಗೆ 900 ರೂಪಾಯಿ ಪಾವತಿಸಬೇಕು. ವೆಬ್‌ಸೈಟ್ ಬಳಕೆದಾರರಿಗೆ ವಾರ್ಷಿಕ ಚಂದಾದಾರಿಕೆ ಅವಕಾಶವನ್ನೂ ನೀಡಲಾಗಿದೆ. ವೆಬ್‌ಸೈಟ್ ಬಳಕೆದಾರರಿಗೆ ತಿಂಗಳಿಗೆ 650 ರೂಪಾಯಿ ಹಾಗೂ ವಾರ್ಷಿಕ ಚಂದಾದಾರಿಕೆಗೆ 6,800 ರೂಪಾಯಿ ಫಿಕ್ಸ್ ಮಾಡಲಾಗಿದೆ.

ಟ್ವಿಟ್ಟರ್‌ ಬ್ಲೂಟಿಕ್‌ ಸೇವೆ ಜಾರಿ: ಟ್ವೀಟ್‌ ಪದಗಳ ಮಿತಿ 4000ಕ್ಕೆ ಹೆಚ್ಚಳ..!

ಬ್ಲೂಟಿಕ್ ಸಬ್‌ಸ್ಕ್ರಿಪ್ಶನ್ ಪಡೆಯುವ ಬಳಕೆದಾರರಿಗೆ ಹಲವು ಫೀಚರ್ಸ್ ಲಭ್ಯವಿದೆ. ಪ್ರಮುಖವಾಗಿ ಬಳಕೆದಾರರ ಖಾತೆ ಅಧಿಕೃತವಾಗಿ ಟ್ವಿಟರ್ ವೆರಿಫೈ ಮಾಡಲಿದೆ. ಇಷ್ಟೇ ಅಲ್ಲ ಹಲವು ದಿನಗ ಬೇಡಿಕೆಯಾಗಿರುವ ಟ್ವಿಟರ್ ಎಡಿಟ್ ಆಯ್ಕೆಯನ್ನೂ ಪಡೆಯಲಿದ್ದಾರೆ. NFT ಪ್ರೊಫೈಲ್ ಪಿಕ್ಟರ್ಸ್, ಕಸ್ಟಮ್ ಆ್ಯಪ್ ಐಕಾನ್ಸ್, ಬುಕ್‌ಮಾರ್ಕ್ ಫೋಲ್ಡರ್ಸ್, ಥೀಮ್ ಕಲರ್ಸ್ ಸೇರಿದಂತೆ ಕೆಲ ವಿಶೇಷ ಫೀಚರ್ಸ್ ಕೂಡ ಬ್ಲೂಟಿಕ್ ಚಂದಾದಾರಿಕೆ ಬಳಕೆದಾರರು ಪಡೆಯಲಿದ್ದಾರೆ.

ಬ್ಲೂಟಿಕ್ ಚಂದಾದಾರಿಕೆ ಪಡೆಯುವ ಬಳಕದಾರರು ಟ್ವೀಟ್ ಮಿತಿಯನ್ನು 4000 ಕ್ಯಾರೆಕ್ಟರ್‌ಗೆ ಹೆಚ್ಚಿಸಲಾಗಿದೆ. ಇದು ಸಾಮಾನ್ಯ ಬಳಕೆದಾರರಿ ಮಿತಿ 280 ಕ್ಯಾರೆಕ್ಟರ್ ಆಗಿದೆ. ಇದರ ಜೊತೆಗೆ ಬ್ಲೂಟಿಕ್ ಚಂದಾದಾರಿಕೆ ಪಡೆಯುವ ಬಳಕೆದಾರರು 60 ನಿಮಿಷದ ಅಥವಾ 2ಜಿಬಿ ಗಾತ್ರದ ವಿಡಿಯೋಗಳನ್ನು ಪೋಸ್ಟ್ ಮಾಡಲು ಸಾಧ್ಯವಿದೆ. 

 

Twitter Blue Tick: ಬ್ಲೂ ಟಿಕ್‌ಗೆ ಭಾರತೀಯರು ಹಣ ನೀಡ್ತಾರಾ? ತಜ್ಞರ ಅಭಿಪ್ರಾಯ ಹೀಗಿದೆ ನೋಡಿ

ಆರಂಭದಲ್ಲಿ ಟ್ವಿಟರ್ ಬ್ಲೂಟಿಕ್ ಸೆಲೆಬ್ರೆಟಿಗಳು, ರಾಜಕಾರಣಿಗಳು, ಕ್ರೀಡಾಪಟಗಳು, ಸಮಾಜದಲ್ಲಿ ಗುರುತಿಸಿಕೊಂಡ ಗಣ್ಯರಿಗೆ ನೀಡಲಾಗಿತ್ತು. ಆದರೆ ಇನ್ನು ಮುಂದೆ ಹಣ ಪಾವತಿಸಿ ಯಾರು ಬೇಕಾದರೂ ಬ್ಲೂಟಿಕ್ ಪಡೆಯಬಹುದು.  ಬಳಕೆದಾರರು ತಮ್ಮ ಪ್ರೋಫೈಲ್ ಐಕಾನ್ ಟ್ಯಾಪ್ ಮಾಡಿದರೆ ಬ್ಲೂಟಿಕ್ ಚಂದಾದಾರಿಕೆ ಸುಲಭವಾಗಿ ಪಡೆಯಬಹುದು. ಹಣ ಪಾವತಿಸಿ ಚಂದಾದಾರಿಕೆ ಪಡೆದ ಗ್ರಾಹಕರ ಖಾತೆ ತಕ್ಷಣವೇ ಬ್ಲೂಟಿಕ್‌ ಸೇರಿಕೊಳ್ಳಲಿದೆ. ಆದರೆ ಈಗಷ್ಟೇ ಖಾತೆ ತೆರೆದು ಬ್ಲೂಟಿಕ್ ಖಾತೆ ಪಡೆಯಲು ಸಾಧ್ಯವಿಲ್ಲ. ಕನಿಷ್ಠ 90 ದಿನ ಆಗಿರುವ ಟ್ವಿಟರ್ ಬಳಕೆದಾರರು ಬ್ಲೂಟಿಕ್ ಚಂದಾದಾರಿಕೆ ಪಡೆಯಲು ಅರ್ಹರಾಗಿದ್ದಾರೆ
 

Latest Videos
Follow Us:
Download App:
  • android
  • ios